ಬಿಕ್ಕಟ್ಟಿನ ಮಧ್ಯೆ ಅಫ್ಘಾನಿಸ್ತಾನ-ಪಾಕ್ ಮಾತುಕತೆ
ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ ತಮ್ಮ ಭೌಗೋಳಿಕ ಸ್ಥಳಗಳನ್ನು ಬಳಸಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲು ನಿರ್ಧರಿಸಿದೆ. ಇದರಿಂದ ಬಡತನ ಮತ್ತು ಜನರ ಕಲ್ಯಾಣವನ್ನು ಮಾಡುವುದು ಈ ಯೋಜನೆಯ ಹಿಂದಿರುವ ಉದ್ದೇಶವಾಗಿದೆ.
ಅಫಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಅಪರೂಪ ಎಂಬಂತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇಬ್ಬರು ನಾಯಕರು ಅಫ್ಘಾನಿಸ್ತಾನ ಮತ್ತು ಪ್ರದೇಶದ ಶಾಂತಿ, ಭದ್ರತೆ ಮತ್ತು ಸಮೃದ್ಧಿಗೆ ಸಂಬಂಧಿಸಿದ ವಿಷಯಗಳನ್ನೂ ದ್ವಿಪಕ್ಷೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಎರಡೂ ನಾಯಕರು ಪರಸ್ಪರ ಮಾತುಕತೆ ನಡೆಸಿದರು. ಅಲ್ಲದೆ. ಅಫ್ಘಾನಿಸ್ತಾನ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಬಗ್ಗೆಯೂ ಚರ್ಚಿಸಲಾಯಿತು. ಇಸ್ಲಾಮಾಬಾದ್ ಮತ್ತು ಕಾಬೂಲ್ ಕಳೆದ ಹಲವು ವರ್ಷಗಳಿಂದ ಉಗ್ರವಾದಿ ದಾಳಿಗಳಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುವುದು ಗೊತ್ತೇ ಇದೆ.
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು, ಎರಡೂ ದೇಶಗಳ ಜನರ ಹಿತಕ್ಕಾಗಿ ಎರಡೂ ದೇಶಗಳ ನಾಯಕರು ಶಾಂತಿ ನಿರ್ಮಾಣ, ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಪ್ರಾದೇಶಿಕ ಸಮಗ್ರ ಅಭಿವೃದ್ಧಿಗಾಗಿ ಸಂಪರ್ಕ ಹೆಚ್ಚಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಆದಾಗ್ಯೂ, ಶಾಂತಿ ಬೆಳೆಸಲು, ಪಾಕಿಸ್ತಾನ ಸ್ವಲ್ಪಮಟ್ಟಿಗೆ ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕು. ಕಾಬೂಲ್ ಸರ್ಕಾರವು ಪಾಕಿಸ್ತಾನದ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ ನಿಂದ ಹಠಾತ್ತನೆ ಬೆದರಿಕೆಯನ್ನು ಎದುರಿಸಿತು. ಪಾಕಿಸ್ತಾನದಿಂದ ಪೋಷಿಸಲ್ಪಟ್ಟ ಹಕ್ಕಾನಿ ಗುಂಪು ಕೂಡಾ ಪಾಕಿಸ್ತಾನದಲ್ಲಿ ಇದೆ. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಮೂಲದ ಮತ್ತು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳು ನಡೆಸಿದ ಅನೇಕ ಹಿಂಸಾತ್ಮಕ ದಾಳಿಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಭಾರತವು ಅಫಘಾನ್ ಜನರಿಗೆ ಉತ್ತಮ ಕೊಡುಗೆಗಳನ್ನು ನೀಡಿದೆ. ಭಾರತ 2 ಬಿಲಿಯನ್ ಡಾಲರ್ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಭಾರತವು ಆಫ್ಘಾನಿಸ್ತಾನದಲ್ಲಿ ಆಸ್ಪತ್ರೆಗಳು, ಶಾಲೆಗಳು, ತರಬೇತಿ ಕೇಂದ್ರಗಳು, ಹೆದ್ದಾರಿಗಳು ಮತ್ತು ಅಣೆಕಟ್ಟುಗಳನ್ನು ನಿರ್ಮಿಸಿದೆ. ಈ ಯೋಜನೆಯಲ್ಲಿ ಕೆಲಸ ಮಾಡುವಾಗ ಭಾರತೀಯ ಕಾರ್ಯಕರ್ತರು ಅಫ್ಘಾನಿಸ್ಥಾನದಲ್ಲಿ ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದುಂಟು. ಭಾರತವು ತನ್ನ ವಿಶ್ವವಿದ್ಯಾನಿಲಯಗಳಲ್ಲಿ ಅಫಘಾನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತಿದೆ.
ಅಫ್ಘಾನಿಸ್ಥಾನದಲ್ಲಿ ಶಾಂತಿ ನಿರ್ಮಾಣ ಆಗಬೇಕು ಎನ್ನುವುದು ಭಾರತದ ನಿಲುವು. 2001ರಲ್ಲಿ ತಾಲಿಬಾನ್ ಪತನದ ನಂತರ, ಅಫ್ಘಾನಿಸ್ತಾನವು ಬಿಕ್ಕಟ್ಟಿನ ಪ್ರಜಾಪ್ರಭುತ್ವವನ್ನು ಹೊಂದಿದೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಫ್ಘಾನಿಸ್ತಾನಕ್ಕೆ ನೆರೆಯವರ ನೆರವಿನ ಅಗತ್ಯವಿದೆ.
ಪಾಕಿಸ್ತಾನ ಬೆಂಬಲಿತ ಪಡೆಗಳು ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಹಾಳುಗೆಡವಲು ಮತ್ತೆ ಪ್ರಯತ್ನಿಸಿದವು. ಕಾಬೂಲ್ ಸರ್ಕಾರವು ಅದರ ಪ್ರಾಂತ್ಯದೊಳಗೆ ಉಗ್ರಗಾಮಿಗಳ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿ ಹೊಂದಿಲ್ಲ. ತಾಲಿಬಾನ್ ಮತ್ತು ಅಮೆರಿಕದ ನಡುವಿನ ಇತ್ತೀಚಿನ ಮಾತುಕತೆಗಳಿಗೆ ಪಾಕಿಸ್ತಾನ ಮಧ್ಯವರ್ತಿಯಾಗಿ ಕೆಲಸ ಮಾಡಿತ್ತು.
ಪರಸ್ಪರ ಆಸಕ್ತಿಯ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ಮಾತುಕತೆಗಾಗಿ ಅಧ್ಯಕ್ಷ ಘಾನಿಯವರಿಗೆ ಆಹ್ವಾನವನ್ನು ಪಾಕಿಸ್ತಾನ ಪ್ರಧಾನಿ ಪುನರುಚ್ಚರಿಸಿದ್ದಾರೆ. ಎರಡು ದೇಶಗಳ ನಡುವಿನ ಗಡಿಯನ್ನು ಬೇರ್ಪಡಿಸುವ ಮೂರು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಅಫ್ಗಾನಿಸ್ತಾನ ಮತ್ತು ಪಾಕ್ ಪ್ರಧಾನಿ ಖಾನ್ ನಡುವೆ ಮಾತುಕತೆ ನಡೆಯಿತು.
ಅಫಘಾನ್ ಮತ್ತು ಪಾಕಿಸ್ತಾನಿ ಪಡೆಗಳ ನಡುವಿನ ಘರ್ಷಣೆಗಳು ಮುಂದುವರಿಯುತ್ತಿವೆ. ಅಫ್ಘಾನಿಸ್ತಾನದ ನೆಲೆಗಳ ಮೇಲೆ ಪಾಕ್ ಸೈನಿಕರ ಗುಂಪು ದಾಳಿ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೈನ್ಯ ಪಡೆಗಳನ್ನು ಉತ್ತರ ವಝೀರಿಸ್ತಾನ್ ಬುಡಕಟ್ಟು ಜಿಲ್ಲೆಯ ಅಲ್ವಾರಾ ಪ್ರದೇಶದಲ್ಲಿ ಅಫ್ಘನ್ ಯೋಧರು ಹತ್ಯೆ ಮಾಡಿದ್ದಾರೆ.
ಈ ಮಧ್ಯೆ ಅಮೆರಿಕ ಮತ್ತು ತಾಲೀಬಾನ್ ದೋಹಾ, ಕತಾರ್ ನಲ್ಲಿ ಸಂಧಾನ ಮಾತುಕತೆ ನಡೆಸಿವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಹಾಗೂ ಇಂಟ್ರಾ ಅಫ್ಘಾನ್ ಸಂವಾದದಲ್ಲಿ ಬಂಡುಕೋರ ತಂಡ ಪಾಲ್ಗೊಳ್ಳುವುದನ್ನು ಉತ್ತೇಜಿಸಲೂ ಪ್ರಯತ್ನಗಳನ್ನು ಮುಂದುವರಿಸಲಾಗಿದೆ.
ಯುಎಸ್ ವಿಶೇಷ ಪ್ರತಿನಿಧಿ, ಝಲ್ಮೇ ಖಲೀಲ್ಜಾದ್, ಕತಾರ್ ರಾಜಧಾನಿಯಲ್ಲಿ ದಂಗೆಕೋರ ನಾಯಕರೊಂದಿಗೆ ಮಾತುಕತೆ ನಡೆಸಿದ ಯುಎಸ್ ತಂಡವನ್ನು ಮುನ್ನಡೆಸಿದರು. ಮಾರ್ಚ್ ತಿಂಗಳಿನ ಕೊನೆಯ ಭಾಗದಲ್ಲಿ ಎರಡು ಪಕ್ಷಗಳು ತಲುಪಿದ್ದ ಪ್ರಾಥಮಿಕ ಒಪ್ಪಂದದ ಕುರಿತು "ಉಳಿದಿರುವ ಕೆಲವು ವಿವರಗಳನ್ನು" ಮಾತುಕತೆ ನಡೆಸುವ ಮೂಲಕ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ. ದಂಗೆಕೋರ ಗುಂಪು ಯು.ಎಸ್. ನೇತೃತ್ವದ ವಿದೇಶಿ ಪಡೆಗಳನ್ನು ಹಿಂದೆಗೆದುಕೊಳ್ಳುವ ಬಗ್ಗೆ ಒಪ್ಪಂದವನ್ನು ಅಂತಿಮಗೊಳಿಸುವ ಅಗತ್ಯವನ್ನು ಒತ್ತಿಹೇಳಿದೆ. ಔಪಚಾರಿಕ ಮಾತುಕತೆಗಳಿಗೆ ಮುಂಚಿತವಾಗಿ, ಖಲೀಲ್ಜಾದ್ ಅವರು ಮುಹಬ್ ಅಬ್ದುಲ್ ಘನಿ ಬರಾದರ್ ಅವರನ್ನು ಭೇಟಿಯಾದರು. ಅವರು ದೋಹಾದಲ್ಲಿನ ರಾಜಕೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉಪ ತಾಲಿಬಾನ್ ಮುಖಂಡರು ಮತ್ತು ಗುಂಪಿನ ಕಚೇರಿಯ ಮುಖ್ಯಸ್ಥರಾಗಿದ್ದರು.
ತಾಲಿಬಾನ್ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು ಈ ಗುಂಪಿನೊಂದಿಗಿನ ಯಾವುದೇ ಮಾತುಕತೆಗಳು ಭಯೋತ್ಪಾದಕ ಸಂಘಟನೆಯನ್ನು ನ್ಯಾಯಸಮ್ಮತಗೊಳಿಸಲಿದೆ ಎಂದು ಭಾರತ ಅಭಿಪ್ರಾಯಿಸಿದೆ.
ಲೇಖನ : ಪದಮ್ ಸಿಂಗ್, ಆಕಾಶವಾಣಿ ಸುದ್ದಿ ವಿಶ್ಲೇಷಕರು
Comments
Post a Comment