Posts

Showing posts from November, 2019

ಮೂಲಸೌಕರ್ಯ ಬೆಳವಣಿಗೆಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಭಾರತ ನಿರ್ಧಾರ

ಆರ್ಥಿಕ ಹಿಂಜರಿತವನ್ನು ತೆಹಬದಿಗೆ ತರುವ ಮತ್ತು ಉದ್ಯಮ-ಬೆಂಬಲ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಮುಂದುವರಿಯುವ ಮಹತ್ವದ ಪ್ರಯತ್ನವಾಗಿ ಕೇಂದ್ರ ಸರ್ಕಾರವು ಬುಧವಾರ ಜಂಬೋ ಯೋಜನೆಗೆ ಚಾಲನೆ ನೀಡಿರುವುದು ಮುಂದಿನ ಐದು ವರ್ಷಗಳಲ್ಲಿ ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ನೂರು ಲಕ್ಷ ಕೋಟಿ ರೂಪಾಯಿಗಳ ಬಂಡವಾಳ‌ ಹೂಡಿಕೆಯಾಗುವ ನಿರೀಕ್ಷೆಯನ್ನು ಹುಟ್ಟುಹಾಕಿದೆ‌. ಈ ಅಪಾರ ಪ್ರಮಾಣದ ಬಂಡವಾಳ ಹೂಡಿಕೆಯಿಂದಾಗಿ ಮೂಲಸೌಕರ್ಯಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಸುಧಾರಿಸುವಲ್ಲಿ ಗಣನೀಯ ಮತ್ತು ಪರಿಣಾಮಕಾರಿ ಕೆಲಸ ಆಗಲಿದೆ ಎಂದು ಹೇಳಿದ ಕೇಂದ್ರ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ಬಂಡವಾಳ‌ ಹೂಡಿಕೆಯು ವಿಮಾನಯಾನ, ಹಡಗು ಸಾಗಣೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿರಲಿದೆ. ಈ ಬೆಳವಣಿಗೆಯು ರಸ್ತೆಗಳು, ಹೆದ್ದಾರಿಗಳು, ರೈಲ್ವೆಗಳು ಮತ್ತು ಬಂದರುಗಳು, ವಿದ್ಯುತ್, ತೈಲ ಮತ್ತು ಅನಿಲದ ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ದೇಶೀಯ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಲು ಹೊಸ ಸಾಮರ್ಥ್ಯವನ್ನು ನೀಡುತ್ತದೆ ಎಂದು ಪ್ರತಿಪಾದಿಸಿದರು. ವಿಶಾಲವಾದ ರೈಲು ಜಾಲಗಳ ಮುಖ್ಯಸ್ಥರಾಗಿರುವ ಗೋಯಲ್, ಭಾರತೀಯ ರೈಲ್ವೆ 50 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ಒಳಗೊಂಡ 12 ವರ್ಷಗಳ ಯೋಜನೆಯೊಂದನ್ನು ರೂಪಿಸಿದೆ, ಇದು ಮಧ್ಯಮ ಅವಧಿಗೆ ಸಂಬಂಧಿಸಿದಂತಹ ಮೊತ್ತದ ಅಭೂತಪೂರ್ವ ಯೋಜನೆಯಾಗಿದೆ. ಸರ್...

ಜನರಲ್ ಬಾಜ್ವಾ ಅವಧಿ ವಿಸ್ತರಣೆಗೆ ಸಂಬಂಧಿಸಿದ ವಿವಾದ

ಇದೇ ಆಗಸ್ಟ್ 19ರಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಅಲ್ಲಿನ‌ ಸೇನೆಯ ಚೀಫ್ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಸೇವಾ ಅವಧಿಯನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಿ ಹೊರಡಿಸಿದ ಆದೇಶವನ್ನು ಮಂಗಳವಾರ ವಿಶೇಷ ಪ್ರಕರಣವೊಂದರಲ್ಲಿ ಪಾಕ್ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 59 ವರ್ಷದ ಜನರಲ್ ಬಾಜ್ವಾ ಅವರು ತಮ್ಮ ಮೊದಲ ಹಂತದ ಸೇನಾ ಮುಖ್ಯಸ್ಥರಾಗಿ ಇದೇ 28ರ ಮಧ್ಯರಾತ್ರಿ ನಿವೃತ್ತರಾಗಬೇಕಿತ್ತು ಆದರೆ ಈ ವಿಷಯದಲ್ಲಿ ಸಂಸತ್ತು ಶಾಸನವನ್ನು ಅಂಗೀಕರಿಸಲಿದೆ ಎಂಬ ಭರವಸೆಯ ಮೇರೆಗೆ ಸುಪ್ರೀಂ ಕೋರ್ಟ್‌ನಿಂದ 6 ತಿಂಗಳ ಷರತ್ತುಬದ್ಧ ಅನುಮತಿ ಪಡೆಯಿತು. ಈ ವಿಷಯವು ದೇಶದಲ್ಲಿ ವ್ಯಾಪಕ ಚರ್ಚೆಗೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುವುದಕ್ಕೆ ಕಾರಣವಾಯಿತು. ಮುಖ್ಯ ನ್ಯಾಯಮೂರ್ತಿ ಆಸಿಫ್ ಸಯೀದ್ ಖೋಸಾ ನೇತೃತ್ವದ ಸುಪ್ರೀಂ ಕೋರ್ಟ್‌ನ 3 ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಕಾನೂನು ಮತ್ತು ಆಡಳಿತಾತ್ಮಕ ಅಂಶಗಳ ಬಗ್ಗೆ ಈ ನಿರ್ಧಾರವನ್ನು ತೆಗೆದುಕೊಂಡಿತು. ಸರ್ಕಾರದ ಆದೇಶವನ್ನು ವಜಾಗೊಳಿಸಿ ಇಡೀ ಪ್ರಕ್ರಿಯೆಯನ್ನು "ತಲೆಕೆಳಗಾಗಿಸುವ ಮೂಲಕ" ನ್ಯಾಯಪೀಠವು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಆರಿಫ್ ಅಲ್ವಿ ಇಬ್ಬರಿಗೂ ಭಾರಿ ಮುಜುಗರವನ್ನು ಉಟುಮಾಡಿತು. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ಮೊದಲಿಗೆ ಸಚಿವ ಸಂಪುಟ ಸಭೆಯ ಮುಂದಿಟ್ಟು ಅಂಗೀಕಾರ ಪಡೆಯಬೇಕಾಗಿತ್ತು ಎ...

ಆಕಾಶದಲ್ಲಿ ಭಾರತದ ‘ತೀಕ್ಷ್ಣ ಕಣ್ಣು’

Image
ಭಾತವು ಪೂರ್ವ ಕರಾವಳಿಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ತನ್ನ ತೀಕ್ಷ್ಣವಾದ ‘ಆಕಾಶದಲ್ಲಿ ಕಣ್ಣು’ ಅನ್ನು ಉಡಾಯಿಸಿತು. ಇಸ್ರೋದ ಧ್ರುವ ಉಪಗ್ರಹ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ 47 ತನ್ನ 49ನೇ ಹಾರಾಟ ಮಾಡಿದ್ದು ಭಾರತದ 3ನೇ ತಲೆಮಾರಿನ ಸುಧಾರಿತ ಅರ್ಥ್ ಇಮೇಜಿಂಗ್ ಮತ್ತು ಮ್ಯಾಪಿಂಗ್ ಉಪಗ್ರಹ ಕಾರ್ಟೊಸ್ಯಾಟ್ -3 ಅನ್ನು ಉಡಾವಣೆಯಾದ ಕೇವಲ 17 ನಿಮಿಷಗಳಲ್ಲಿ ಸೂರ್ಯ-ಸಿಂಕ್ರೊನಸ್ ಧ್ರುವೀಯ ಕಕ್ಷೆಗೆ ಏರಿಸಲಾಯಿತು. ಕಾರ್ಟೊಸ್ಯಾಟ್ -3 ಇಸ್ರೋ ಕಕ್ಷೆಗೆ ಸೇರಿರುವ ಅತ್ಯುನ್ನತ ರೆಸಲ್ಯೂಶನ್ ಹೊಂದಿರುವ ನಾಗರೀಕ ಉಪಗ್ರಹ ಇದಾಗಿದೆ. ಈ ಉಡಾವಣೆಗೆ ಬಳಸಲಾದ ಪಿಎಸ್‌ಎಲ್‌ವಿ-ಸಿ 47 ಉಡಾವಣಾ ವಾಹನವು ಪಿಎಸ್‌ಎಲ್‌ವಿಯ ಅತ್ಯಂತ ಶಕ್ತಿಯುತ ಆವೃತ್ತಿಯಾಗಿತ್ತು. ಇದಕ್ಕೆ ಆರು ಸ್ಟ್ರಾಪ್-ಆನ್ ಬೂಸ್ಟರ್‌ಗಳನ್ನು ಬಳಸಲಾಗಿತ್ತು. ಈ ರಾಕೆಟ್ ಭಾರತದ ಬಾಹ್ಯಾಕಾಶ ಇಲಾಖೆಯ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಜೊತೆ ವಾಣಿಜ್ಯ ವ್ಯವಸ್ಥೆಯ ಭಾಗವಾಗಿರುವ ಇಬ್ಬರು ಯುಎಸ್ ಗ್ರಾಹಕರ 13 ನ್ಯಾನೊ ಸ್ಯಾಟ್ ಲೈಟ್‌ಗಳನ್ನು ಕೂಡ ಸಾಗಿಸಿತು. ಕಾರ್ಟೊಸ್ಯಾಟ್ -3 ಅನ್ನು ಅದರ ಯೋಜಿತ ಕಕ್ಷೆಗೆ 509 ಕಿಲೋ ಮೀಟರ್ ಸೇರಿಸಿದ ನಂತರ ನ್ಯಾನೊ ಸ್ಯಾಟ್ ಲೈಟ್‌ಗಳನ್ನು ಅನುಕ್ರಮವಾಗಿ ಬಿಡುಗಡೆ ಮಾಡಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ 2005ರ ಮೇ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು ಎಂಟು ಕಾರ್ಟೊಸ್ಯಾಟ್‌ಗಳನ್ನು ಉಡಾಯಿಸಿ...

ಬ್ರಿಟೈನ್‌ನಲ್ಲಿ ಸ್ನ್ಯಾಪ್ ಚುನಾವಣೆ: ಒಂದು ಅವಲೋಕನ

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಬ್ರೆಕ್ಸಿಟ್ ಯೋಜನೆಯನ್ನು ಜಾರಿಗೆ ತರಲು ಸಂಸತ್ತಿನಲ್ಲಿ ಬಹುಮತ ಪಡೆಯುವ ಪ್ರಯತ್ನವಾಗಿ ಅವಧಿಗೂ ಮುನ್ನವೇ ಡಿಸೆಂಬರ್ 12 ರಂದು ಚುನಾವಣೆ ಘೋಷಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಡೆಯುತ್ತಿರುವ ನಾಲ್ಕು ಬಾರಿ ಚುನಾವಣೆಗಳು ನಡೆದಿವೆ‌. ಇದು 2016ರಲ್ಲಿ ಬ್ರೆಕ್ಸಿಟ್ ಯೋಜನೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಬ್ರಿಟನ್ ಎದುರಿಸುತ್ತಿರುವ ರಾಜಕೀಯ ನಿಲುವಿನ ಒಂದು ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ. 2017 ರಲ್ಲಿ ಅಂದಿನ ಪ್ರಧಾನಿ ಥೆರೆಸಾ ಮೇ ಅವರು ಬರಮಾಡಿಕೊಂಡಿದ್ದ ಕೊನೆಯ ಕ್ಷಿಪ್ರ ಚುನಾವಣೆಯಲ್ಲಿ ಅವರ ಕನ್ಸರ್ವೇಟೀವ್ ಪಕ್ಷ ಬಹುಮತವನ್ನು ಕಳೆದುಕೊಂಡಿತ್ತು. ಡೆಮಾಕ್ರಟಿಕ್ ಯೂನಿಯನಿಸ್ಟ್ ಪಕ್ಷ (ಡಿಯುಪಿ)ವು ಬ್ರಿಟಿಷ್ ಸಂಸತ್ತಿನಲ್ಲಿ ಅಧಿಕಾರಹೊಂದಲು ಬೇಕಾದ ಬೆಂಬಲವನ್ನು ಗಳಿಸಿಕೊಂಡಿತ್ತು. ಸಾರ್ವತ್ರಿಕ ಚುನಾವಣಾ ಪ್ರಚಾರವು ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಸಮೀಕ್ಷೆಗಳು ಹೊರಬರುತ್ತಿದ್ದು ಕನ್ಸರ್ವೇಟೀವ್‌ ಪಕ್ಷವು ಲೇಬರ್ ಪಕ್ಷಕ್ಕಿಂತ 19 ಅಂಕಗಳ ಮುನ್ನಡೆ ಸಾಧಿಸುತ್ತಿದೆ ಎಂದು ಹೇಳುತ್ತಿವೆ. ಒಟ್ಟು ಮತಗಳ ಪ್ರಮಾಣದಲ್ಲಿ ಕನ್ಸರ್ವೇಟೀವ್ ಪಕ್ಷವು ಪ್ರಸ್ತುತ ಶೇಕಡಾ 47 ರಷ್ಟನ್ನು ಗಳಿಸಲಿದೆ. ಲೇಬರ್ ಪಕ್ಷವು ಶೇಕಡಾ 28ರಷ್ಟು, ಲಿಬರಲ್ ಡೆಮೋಕ್ರಾಟ್ ಪಕ್ಷವು ಶೇಕಡಾ 12 ರಷ್ಟು ಹಾಗೂ ಬ್ರೆಕ್ಸಿಟ್ ಪಕ್ಷವು ಕೇವಲ ಶೇಕಡಾ 3ರಷ್ಟು ಗಳಿಸಲಿದೆ ಎಂದು ಹೇಳಲಾ...

ಸಿಪಿಇಸಿ ಬಗ್ಗೆ ಯುಎಸ್ ಎಚ್ಚರಿಕೆ

2013ರಲ್ಲಿ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ ಐ) ವಿಶೇಷವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಆರಂಭ ಆದಾಗಿನಿಂದಲೂ ಭಾರತದಲ್ಲಿ ಆತಂಕಗಳನ್ನು ಸೃಷ್ಟಿ ಮಾಡಿದೆ. ಏಕೆಂದರೆ ಸಿಪಿಇಸಿಯ ನಿಯಮಗಳೇ ಆತಂಕಕಾರಿಯಾಗಿವೆ, ಮೇಲಾಗಿ ಇದು ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುವಂತಹುದಾಗಿದೆ. ಇದೇ ಹಿನ್ನೆಲೆಯಲ್ಲಿ ಭಾರತವು ತತ್ವಬದ್ಧವಾದ ಮತ್ತು ದೃಢವಾದ ನಿಲುವಿನೊಂದಿಗೆ ಸಿಪಿಇಸಿಗೆ ವಿರೋಧ ವ್ಯಕ್ತಪಡಿಸಿದೆ. ವಾಸ್ತವವಾಗಿ ಭಾರತವು ಬಿಆರ್‌ಐ ಅನ್ನು ವಿರೋಧಿಸಿದ ಮೊದಲ ರಾಷ್ಟ್ರವಾಗಿದೆ. ಮತ್ತು ಈ ಹಿಂದೆ ಚೀನಾದಲ್ಲಿ ನಡೆದ ಎರಡು ಬೆಲ್ಟ್ ಮತ್ತು ರಸ್ತೆ ವೇದಿಕೆಗಳಿಗೆ ತನ್ನ ಯಾವುದೇ ಪ್ರಾತಿನಿಧಿಗಳನ್ನು ಕಳಿಸದ ಏಕೈಕ ದೇಶವಾಗಿದೆ. ಭಾರತವು 2013ರಲ್ಲಿ ಇಂಥದೊಂದು ನಿಲುವು ತೆಳೆದಿದ್ದು ಇಂದಿಗೂ ಅದೇ ನಿಲುವಿಗೆ ಕಟಿಬದ್ದವಾಗಿದೆ. ಈ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮೂಲಕ ಹಾದುಹೋಗುವ ಬಿಆರ್ ಐನ ಪ್ರಮುಖ ಕಾರಿಡಾರ್ ಸಿಪಿಇಸಿಗೆ ತನ್ನ ವಿರೋಧವಿದೆ ಎಂಬ ಭಾವನೆಯನ್ನು ಖಚಿತವಾಗಿ ವ್ಯಕ್ತಪಡಿಸುತ್ತಿದೆ. “ಸಿಪಿಇಸಿ ಎಂದು ಕರೆಯಲ್ಪಡುವ ಸೇರ್ಪಡೆಯು ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ವಿಷಯಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುತ್ತದೆ ಎನ್ನುವ ಸಂಗತಿಯನ್ನು ಪ್ರತಿಬಿಂಬಿಸುತ್ತದೆ" ಎಂಬುದು ಭಾರತದ ಅಧಿಕೃತವಾದ ನಿಲುವು. ಭಾರತ ಮಾತ್ರವಲ್ಲದೆ ಹಲವು ರಾಷ್ಟ್ರಗಳು ಚೀನಾದ ಬಿಆರ್‌ಐ...

ಜಪಾನ್‌ನಲ್ಲಿ ನಡೆದ ಜಿ -20 ವಿದೇಶಾಂಗ ಸಚಿವರ ಸಭೆ

ಜಿ -20 ಎಂಬುದು ಜಗತ್ತಿನ ಮುಖ್ಯವಾದ 20 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯುಳ್ಳ‌ ದೇಶಗಳ ವೇದಿಕೆಯಾಗಿದೆ; ಇದು 19 ಸದಸ್ಯ ರಾಷ್ಟ್ರಗಳನ್ನು ಹಾಗೂ ಯುರೋಪಿಯನ್ ಒಕ್ಕೂಟವೊಂದನ್ನು ಒಳಗೊಂಡಿದೆ. ಈ ವರ್ಷದ ಜೂನ್ ಕೊನೆಯಲ್ಲಿ ಒಸಾಕಾದಲ್ಲಿ 14ನೇ ಶೃಂಗಸಭೆ ನಡೆದ ಬಳಿಕ ಜಪಾನ್ ದೇಶವು ಇದರ ಮುಂದುವರೆದ ಭಾಗವಾಗಿ ನಾಗೋಯಾ ನಗರದಲ್ಲಿ ವಿದೇಶಾಂಗ ಮಂತ್ರಿಗಳ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಭಾರತವನ್ನು ಪ್ರತಿನಿಧಿಸಿದ್ದರು. ವಿದೇಶಾಂಗ ಮಂತ್ರಿಗಳ ಈ ಸಭೆಯು ಮುಚ್ಚಿದ ಬಾಗಿಲಲ್ಲಿ ನಡೆದ ಅಧಿವೇಶನವಾಗಿತ್ತು; ಅಲ್ಲಿ ಸದ್ಯದ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಜಾಗತಿಕ ಆರ್ಥಿಕತೆ ಹಿಂಜರಿತದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿದೇಶಾಂಗ ಸಚಿವರು ಸಮಾಲೋಚನೆ ನಡೆಸಿದರು. ಸಭೆಯ ಬಳಿಕ‌ ಮಾತನಾಡಿದ ಜಿ -20 ವಿದೇಶಾಂಗ ಸಚಿವರ ಸಭೆಯ ಅಧ್ಯಕ್ಷರೂ ಆಗಿದ್ದ ಜಪಾನ್ ವಿದೇಶಾಂಗ ಸಚಿವ ತೋಶೆಮಿಟ್ಸು ಮೊಟೆಗಿ, ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ)ಯಲ್ಲಿ ಸುಧಾರಣೆ ತರಬೇಕಾಗಿರುವ ತುರ್ತು ಅಗತ್ಯದ ಬಗ್ಗೆ ಜಿ -20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು. ಈ ರೀತಿಯ ಸುಧಾರಣೆ ತರುವುದರಿಂದ ವಿಶ್ವ ಸಂಸ್ಥೆಯು ಹಲವು ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಸದಸ್ಯ ರಾಷ್ಟ್ರಗಳು ವಿಶ್ವ ವಾಣಿಜ್ಯ ಸಂಸ್ಥೆಯ...

ಸಂಸತ್ತಿನಲ್ಲಿ ಈ ವಾರ

ರಾಜ್ಯಸಭೆಯ (ಸಂಸತ್ತಿನ ಮೇಲ್ಮನೆ) 250ನೇ ಅಧಿವೇಶನದ ಆಚರಣೆಯೊಂದಿಗೆ ಭಾರತೀಯ ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಶುರುವಾಗಿದೆ. ಇದು 3 ವಾರ ನಡೆಯುವ ಸುದೀರ್ಘ ಅಧಿವೇಶನದ ಪ್ರಮುಖ ಸಂಗತಿಗಳಲ್ಲೊಂದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ದೃಷ್ಟಿಕೋನ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಸಂಸತ್ ಸದಸ್ಯರನ್ನು ವಿನಂತಿಸಿಕೊಂಡರು. ಜನರಿಗೆ ಅಗತ್ಯ ಇರುವ ವಿಷಯಗಳನ್ನು ಎತ್ತಿ ಹಿಡಿಯಲು ಸಂಸತ್ತನ್ನು ಬಳಸಿಕೊಳ್ಳಬೇಕು. ಸಂವಾದದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಕಂಡುಬರುವ ಏಳುಬೀಳುಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಮೇಲ್ಮನೆ ಅಸ್ತಿತ್ವದಲ್ಲಿರುವ ಅಗತ್ಯ ಇದೆ. ಇದೇ ಸಮಯದಲ್ಲಿ ಬಂದೊದಗುವ ಆಗುಹೋಗುಗಳನ್ನು ಪರಿಶೀಲಿಸಬೇಕಾದ ಮತ್ತು ಅವುಗಳಲ್ಲಿನ ವ್ಯತ್ಯಾಸಗಳನ್ನು ಕಂಡುಕೊಳ್ಳಬೇಕಾದ ಅವಶ್ಯಕತೆ ಕೂಡ ಇದೆ. ಭಾರತದ ದ್ಯೇಹವಾಕ್ಯ ವಿವಿಧತೆಯಲ್ಲಿ ಏಕತೆ ಎಂಬುದು ಈ ಹಿರಿಯರ ಸದನದಲ್ಲಿ ಬಹಳ ಚೆನ್ನಾಗಿ ಪ್ರತಿಬಿಂಬಿತವಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು. ಭಾರತೀಯ ರಾಜಕಾರಣದಲ್ಲಿ ಮೇಲ್ಮನೆಯ ಪಾತ್ರ ಮತ್ತು ಸುಧಾರಣೆಗಳ ಅಗತ್ಯತೆಯ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ಮೋದಿ, ಸಂವಿಧಾನದ ಸ್ಥಾಪಕ ಪಿತಾಮಹರು ದ್ವಿಪಕ್ಷೀಯ ಶಾಸಕಾಂಗದ ಚೌಕಟ್ಟನ್ನು ರೂಪಿಸಿದ್ದಾರೆ ಮತ್ತು ಈ ದೃಷ್ಟಿಕೋನವು ದೇಶದ ಪ್ರಜ...

ವಿಚಾರ ರಹಿತ ಪಾಕಿಸ್ತಾನ

ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನವು ಕಳೆದ ಒಂದು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಿಟ್ಟಾಕಿ ರಾಜಕೀಯವನ್ನೇ ಆಸಕ್ತಿದಾಯಕ ವಿಚಾರವೆಂದು ಬಿಂಬಿಸುತ್ತಿರುವ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಈ ತಿಂಗಳು ಪೂರ್ತಿ ಪಾಕಿಸ್ತಾನದ ರಾಜಕೀಯ ಮೇಲಾಟವು ಮೌಲಾನಾ ಫಜ್ಲೂರ್ ರಹಮಾನ್ ಅವರ “ಆಜಾದಿ ಮಾರ್ಚ್” ಸುತ್ತಲೇ ಗಿರಕಿ ಹೊಡೆದಿದೆ. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಮೂರು ಬಾರಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ್ದ ನವಾಜ್ ಷರೀಫ್ ಅವರಿಗೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಲಾಗಿದೆ! ಪಾಕಿಸ್ತಾನ ದೂರದರ್ಶನ ವಾಹಿನಿಗಳ ಪ್ರೈಂ ಟೈಂಗಳು ಮತ್ತು ಮುದ್ರಣ ಮಾಧ್ಯಮಗಳಲ್ಲಿನ ಪ್ರಮುಖ ಪುಟಗಳು ಆ ದೇಶದ ಭವಿಷ್ಯವನ್ನು ರೂಪಿಸಲು ಪ್ರೇರಕವಾಗುವಂತ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲಿಗೆ ಇಂತಹ ವಿಷಯಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿವೆ. ಅಕ್ಟೋಬರ್ 27ರಂದು ಸುಕ್ಕೂರ್‌ನಿಂದ ಪ್ರಾರಂಭವಾಗಿ ಕೆಲ ದಿನಗಳ ನಂತರ ಇಸ್ಲಾಮಾಬಾದ್ ತಲುಪಿದ ಫಜ್ಲೂರ್ ಅವರ ಮೆರವಣಿಗೆ ಬಹಳ ದೊಡ್ಡ ಮಟ್ಟದಲ್ಲಿ ಮಾಧ್ಯಮಗಳ ಗಮನ ಸೆಳೆಯಿತು. ಮೆರವಣಿಗೆಯ ಮುಖ್ಯ ಉದ್ದೇಶ ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವುದು ಎಂದು ಮೌಲಾನಾ ಫಜ್ಲೂರ್ ಹೇಳಿದರು. 'ಸರ್ಕಾರ ಉರಳದೆ ನಮ್ಮ ಜನರು ಇಸ್ಲಾಮಾಬಾದ್ ಅನ್ನು ತೊರೆಯುವುದಿಲ್ಲ’ ಎಂದು ಕೂಡ ತಿಳಿಸಿದರು. ಅವರ ಪಕ್ಷದ ಕಾರ್ಯಕರ್ತರು ಕೋಲುಗಳನ್ನು ಝಳಪಿಸುತ್...

ಕಾಮೆಂಟರಿ

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರವನ್ನು ಬೇರ್ಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿರುವ ಪರಿಷ್ಕೃತ ನಕ್ಷೆಯನ್ನು ನವದೆಹಲಿಯು ಬಿಡುಗಡೆ ಮಾಡಿದ ನಂತರ ಉತ್ತರಾಖಂಡ ರಾಜ್ಯದ ಪಿಥೋರಘಢ ಜಿಲ್ಲೆಯ ಹಿಮಾಲಯ ಪರ್ವತ ಪ್ರದೇಶದಲ್ಲಿ ಭಾರತ, ನೇಪಾಳ ಮತ್ತು ಚೀನಾ ಗಡಿಗಳು ಸೇರು ತ್ರಿವೇಣಿ ಸಂಗಮದಂತಹ ಕಲಾಪಾನಿ ಪ್ರದೇಶದ ನಿಯಂತ್ರಣದ ವಿಚಾರವಾಗಿ ಇದ್ದ ಹಳೆಯ ವಿವಾದ ಮತ್ತೊಮ್ಮೆ ಸದ್ದುಮಾಡಿದೆ. ಕಲಾಪಾನಿ ಮತ್ತು ಅದರ ಪಕ್ಕದ ಪ್ರದೇಶಗಳನ್ನು ತನ್ನದೆಂದು ಭಾರತವು ನಕ್ಷೆಯಲ್ಲಿ ಪ್ರತಿಬಿಂಬಿಸಿದೆ. ಇನ್ನೊಂದೆಡೆ ನೇಪಾಳ ಇದು ತನ್ನ ಜಾಗವೆಂದು ಹೇಳಿಕೊಂಡಿದೆ. 1816ರಲ್ಲಿ ಅಂದಿನ ಭಾರತದ ಬ್ರಿಟಿಷ್ ಸರ್ಕಾರ ಮತ್ತು ನೇಪಾಳದ ರಾಜನ ನಡುವೆ ಐತಿಹಾಸಿಕ ಸಾಗಾಲಿ ಒಪ್ಪಂದ ಆದಾಗಿನಿಂದಲೂ ಕಲಾಪಾನಿ ವಿವಾದ ಊರ್ಜಿತದಲ್ಲಿದೆ. ಈ ಒಪ್ಪಂದವು ಮಹಾಕಾಳಿ ನದಿಯನ್ನೇ ಉಭಯ ದೇಶಗಳ ಗಡಿ ಎಂಬುದಾಗಿ ವ್ಯಾಖ್ಯಾನಿಸುತ್ತದೆ. ಆದರೆ ಮಹಾಕಾಳಿ ನದಿಯ ಮೂಲ ಸ್ಥಳದ ಬಗ್ಗೆ ಈ ಒಪ್ಪಂದದಲ್ಲಿ ಯಾವುದೇ ಉಲ್ಲೇಖವಿಲ್ಲ. ಜೊತೆಗೆ ಯಾವ ಉಪನದಿ ಮುಂದೆ ಮುಖ್ಯ ಮಹಾಕಳಿ ನದಿಯಾಗಿ ಮಾರ್ಪಡಲಿದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿಲ್ಲ. ಇನ್ನೊಂದೆಡೆ ಅಂದಿನ ಭಾರತದ ಬ್ರಿಟಿಷ್ ಸರ್ಕಾರ ಸರ್ವೇಯರ್ ಜನರಲ್ ಹೊರಡಿಸಿ ಕಲಾಪಾನಿ, ಲಿಪು ಲೆಖ್ ಮತ್ತು ಲಿಂಪಿಯಾಡುರಾ ಪ್ರದೇಶಗಳನ್ನು ಭಾರತೀಯ ಪ್ರದೇಶವೆಂದು ಸ್ಪಷ್ಟವಾಗಿ ಹೇಳಿಕೊಂಡಿದೆ. ಆದರೂ ನೇಪಾಳವು ಈ ಪ್ರದೇಶಗಳ ಮೇಲೆ ಸಾರ್ವಭೌಮತ...

ಸಂಬಂಧ ಬಲವರ್ಧನೆಗಾಗಿ ಭಾರತೀಯ ವಿದೇಶಾಂಗ ಸಚಿವರ ಶ್ರೀಲಂಕಾ ಭೇಟಿ

ದ್ವೀಪ ರಾಷ್ಟ್ರ ಶ್ರೀಲಂಕಾದ ಏಳನೇ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಆಯ್ಕೆಯಾದ ಗೋತಬಯಾ ರಾಜಪಕ್ಸೆ ಅವರನ್ನು ಭೇಟಿ ಮಾಡಲು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಕೊಲಂಬೊ ಪ್ರವಾಸ ಕೈಗೊಂಡಿದ್ದರು. ರಾಜಪಕ್ಸೆ ಅವರನ್ನು ಭೇಟಿ ಮಾಡಿದ ಅವರು ಭಾರತಕ್ಕೆ ಭೇಟಿ ಕೊಡುವಂತೆ ಪ್ರಧಾನ ಮಂತ್ರಿ ಆಹ್ವಾನ ನೀಡಿರುವ ವಿಚಾರವನ್ನು ತಿಳಿಸಿದರು. ಜೈ ಶಂಕರ್ ಅವರ ಆಹ್ವಾನವನ್ನು ಮನ್ನಿಸಿರುವ ಹೊಸದಾಗಿ ಚುನಾಯಿತರಾದ ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೋತಬಯಾ ರಾಜಪಕ್ಸೆ 2019ರ ನವೆಂಬರ 29ರಂದು ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇದು ಗೋತಬಯಾ ರಾಜಪಕ್ಸೆ ಅವರ ಮೊದಲ ಅಧಿಕೃತ ವಿದೇಶ ಪ್ರವಾಸವಾಗಿದೆ. ರಾಜಪಕ್ಸೆ ಅವರು ಆಯ್ಕೆಯಾದ ಕೂಡಲೇ ವಿದೇಶಾಂಗ ಸಚಿವರನ್ನು ಕಳುಹಿಸಿ ಆಮಂತ್ರಣ ನೀಡುವ ಮೂಲಕ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ಪರಸ್ಪರ ಲಾಭಕ್ಕಾಗಿ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಪಡಿಸಿಕೊಳ್ಳಲು ನವದೆಹಲಿ ಸಿದ್ಧವಾಗಿದೆ ಎಂಬ ಸಂದೇಶವನ್ನು ಭಾರತ ರವಾನಿಸಿದೆ. ಭಾರತ ಮಾತ್ರವಲ್ಲದೆ ಯುಎಸ್, ಪಾಕಿಸ್ತಾನ, ಇರಾನ್ ಮತ್ತು ಚೀನಾ ಕೂಡ ಗೋತಬಯ ರಾಜಪಕ್ಸೆ ಅವರಿಗೆ ಅಭಿನಂದನೆ ತಿಳಿಸಿವೆ. ಶ್ರೀಲಂಕಾ ಫಲಿತಾಂಶದ ಬಗ್ಗೆ ಜಾಗರೂಕವಾಗಿದ್ದ ಇಯು ದ್ವೀಪ-ರಾಷ್ಟ್ರದ ಮಾನವ ಹಕ್ಕುಗಳ ಬದ್ಧತೆಗಳನ್ನು ಕಾಪಾಡಿಕೊಳ್ಳುವಂತೆ ನೂತನ ಅಧ್ಯಕ್ಷರನ್ನು ಆಗ್ರಹ ಪಡಿಸಿದೆ. ಗೋತಬಯ ರಾಜಪಕ್ಸೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಧಿಸಿರುವ ಈ ನಿರ್ಣಾಯಕ...

250 ಅಧಿವೇಶನ ಕಂಡ‌ ರಾಜ್ಯಸಭೆ

ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ 250 ದಿನಗಳ ಅಧಿವೇಶನ ದಾಖಲಾಗಿದೆ. ಇದು ಭಾರತದ ರಾಜಕೀಯ ಪ್ರಜಾಪ್ರಭುತ್ವದ ಪ್ರಗತಿಯಲ್ಲಿ ರಾಜ್ಯಸಭೆಯ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಸಾರಿ ಹೇಳುತ್ತದೆ. 1952ರಲ್ಲಿ ಪ್ರಾರಂಭವಾದ ರಾಜ್ಯಸಭೆ ಅಂದಿನಿಂದಲೂ ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾ ಬಂದಿದೆ. ಯಾವ ಸಂದರ್ಭದಲ್ಲೂ ನಿರಾಕರಿಸಲಾಗದಂತಹ ಎತ್ತರಕ್ಕೆ ಏರಿದೆ. 1952ರಲ್ಲಿ ಹಿಂದೂ ಮದುವೆ ಮತ್ತು ವಿಚ್ಛೇದನ ಮಸೂದೆಯನ್ನು ಅಂಗೀಕರಿಸುವುದರಿಂದ ಹಿಡಿದು 2019ರಲ್ಲಿ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಗೆ ಮತ್ತು ಜಮ್ಮು- ಕಾಶ್ಮೀರ ಮರುಸಂಘಟನೆ ಮಸೂದೆ ಅಂಗೀಕರಿಸುವವರೆಗೆ ರಾಜ್ಯಸಭೆಯು ಭಾರತದ ಸುದೀರ್ಘವಾದ ಮತ್ತು ಆಕರ್ಷಕವಾದ ರಾಜಕೀಯ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ರಾಜ್ಯಸಭೆಯಲ್ಲಿ 250ನೇ ಅಧಿವೇಶನ‌ ಕಂಡ ಹಿನ್ನೆಲೆಯಲ್ಲಿ ಮಾತನಾಡಿದ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಉಪಾಧ್ಯಕ್ಷ ಎಂ. ವೆಂಕಯ್ಯನಾಯ್ಡು ಅವರು, 'ಕಾಲಕಾಲಕ್ಕೆ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಮೇಲ್ಮನೆ ಬಹಳ ದೂರ ಸಾಗಿದೆ. ಆದರೆ ದೇಶವು ತನ್ನ ಸಂಪೂರ್ಣ ಸಾಮರ್ಥ್ಯವನ್ನು, ಕಳೆದುಹೋಗಿರುವ ಸಮಯ ಮತ್ತು ಅವಕಾಶವನ್ನು ಹಾಗೂ ಸದನದ ಕಾರ್ಯವೈಖರಿಯನ್ನು ಅರಿತುಕೊಳ್ಳುವುದು ಇನ್ನೂ ಮೈಲುಗಳಷ್ಟು ದೂರವಿದೆ" ಎಂದು ಅಭಿಪ್ರಾಯಪಟ್ಟರು. 1952ರ ಮೇ 13ರಂದು ನಡೆದ...

ಮುಂದಿನ ಬೆಳವಣಿಗಾಗಿ ಭಾರತ-ಭೂತಾನ್ ಒಪ್ಪಂದ

ಭೂತಾನ್ ವಿದೇಶಾಂಗ ಸಚಿವ ಲಿಯಾನ್ಪೋ (ಡಾ.) ತಾಂಡಿ ಡೋರ್ಜಿ ಅವರು ಕೈಗೊಂಡಿದ್ದ ಒಂದು ವಾರದ ಭಾರತ ಪ್ರವಾಸ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಮೈಲಿಗಲ್ಲನ್ನು ರೂಪಿಸಿದೆ. ಈ ಭೇಟಿಯ ಸಮಯದಲ್ಲಿ ಡಾ. ಡೋರ್ಜಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಜೊತೆಗೆ ಇಂಡೋ-ಭೂತಾನ್ ಸಂಬಂಧಗಳ ಸಂಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಿದರು. ಎರಡು ದೇಶದ ಪ್ರತನಿಧಿಗಳು ಆರ್ಥಿಕ ಸಹಕಾರ, ಅಭಿವೃದ್ಧಿ ಸಹಭಾಗಿತ್ವ, ಮತ್ತು ಜಲಶಕ್ತಿ ಸಹಕಾರ ಸೇರಿದಂತೆ ವಿವಿದ ದ್ವಿಪಕ್ಷೀಯ ಸಂಬಂಧದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಇದಕ್ಕೂ ಮೊದಲು ಡಾ. ಡೋರ್ಜಿ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನೂ ಭೇಟಿ ಮಾಡಿದ್ದರು. ದೆಹಲಿಗೆ ಭೇಟಿ ನೀಡಿದ್ದ ಡೋರ್ಜಿ ಅವರು ಇದೇ ವೇಳೆ ಬಿಹಾರದ ಬೋಧಗಯಾ ಮತ್ತು ರಾಜಿಗಿರ್ ಗೆ ಭೇಟಿ ನೀಡಿ ಅಲ್ಲಿಂದ ಕೋಲ್ಕತ್ತಾಗೆ ಪ್ರಯಾಣ ಮಾಡುವ ಕಾರ್ಯಕ್ರಮ ಹೊಂದಿದ್ದರು. ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳದ ಅಲ್ಲಿನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಇಬ್ಬರನ್ನೂ ಭೇಟಿಮಾಡುವ ನಿರೀಕ್ಷೆಯಲ್ಲಿದ್ದರು. ಲಿಯಾನ್ಪೊ ತಾಂಡಿ ಡೋರ್ಜಿ ಅವರ ಪ್ರವಾಸವು ನಿಯಮಿತ ಭೇಟಿಗಳ ಮೂಲಕ ಉಭಯ ದೇಶಗಳ ನಡುವೆ ಉನ್ನತ ಮಟ್ಟದಲ್ಲಿ ಅಭಿಪ್ರಾಯಗಳ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯಕ್ಕೆ ಅನುಗುಣವಾಗಿತ್ತು. ಭೂತಾನ್ ಪ್ರಧಾನ ಮಂತ್ರಿ ಲೋಟೇ ತ್ಶೆರಿಂಗ್ ನೇತೃತ್ವದ ಡ...

ಶ್ರೀಲಂಕಾದ ಏಳನೇ ಅಧ್ಯಕ್ಷರಾಗಿ ಆಯ್ಕೆಯಾದ ಗೋತಬಯ ರಾಜಪಕ್ಸೆ

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಶನಿವಾರ ಅಧ್ಯಕ್ಷೀಯ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಶೇಕಡ 52.25% ಮತಗಳನ್ನು ಪಡೆದ ಶ್ರೀಲಂಕಾದ ಪೊಡುಜಾನ ಪೆರಮುನಾ (ಎಸ್‌ಎಲ್‌ಪಿಪಿ) ಪಕ್ಷದ ಗೋತಬಯ ರಾಜಪಕ್ಸೆ ಶ್ರೀಲಂಕಾದ 7ನೇ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಗೆಲುವಿನ ಬಳಿಕ ಮಾತನಾಡಿರುವ ಅವರು, ತಾವು ಇಲ್ಲಿನ ಅನುರಾಧಪುರದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಘೋಷಿಸಿದರು. ಗೋತಬಯ ರಾಜಪಕ್ಸೆ ಅವರ ಗೆಲುವಿಗೆ ಭಾರತೀಯ ಪ್ರಧಾನಿ ಸೇರಿದಂತೆ ವಿಶ್ವದ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾದ ಗೋತಬಯ ರಾಜಪಕ್ಸೆ ಅವರಿಗೆ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯವನ್ನು ವೃದ್ದಿಗೊಳಿಸಲು ಹೊಸದಾಗಿ ಚುನಾಯಿತರಾದ ಶ್ರೀಲಂಕಾದ ಅಧ್ಯಕ್ಷರೊಂದಿಗೆ ನಿಕಟವಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಭಾರತದ ದೇಶವಾಸಿಗಳ ಪರವಾಗಿ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದಿರುವ ಪ್ರಧಾನಿ ಮೋದಿ, ಗೋತಬಯ ರಾಜಪಕ್ಸೆ ಅವರ ಸಮರ್ಥ ನಾಯಕತ್ವದಲ್ಲಿ ಶ್ರೀಲಂಕಾದ ಜನರು ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಮತ್ತಷ್ಟು ಪ್ರಗತಿ ಹೊಂದುತ್ತಾರೆ. ಭ್ರಾತೃತ್ವದ ವಿಷಯದಲ್ಲಿ ಹಾಗೂ ಸಾಂಸ್ಕೃತಿಕ ವಿಚಾರವಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಾಗುವುದು. ಇದೇ ಉದ್ದೇಶಗಳೊಂದಿಗೆ ಶ್ರೀಲಂಕಾದ ...

ಸಂಸತ್ತಿನ ಚಳಿಗಾಲದ ಅಧಿವೇಶನದ ವಿಷಯಗಳು

ಭಾರತೀಯ ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 18ರಿಂದ ಡಿಸೆಂಬರ್ 13ರವರೆಗೆ ನಡೆಯಲಿದೆ. ಈ ಚಳಿಗಾಲದ ಅಧಿವೇಶನದಲ್ಲಿ ಹಲವು ಮಸೂದೆಗಳ ಮಂಡನೆಯಾಗುವ ಸಾಧ್ಯತೆಯಿದೆ. ಈ ಅಧಿವೇಶನದಲ್ಲಿ ಎರಡು ನಿರ್ಣಾಯಕ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು. ನೀತಿ, ಉತ್ಪಾದಕತೆ ಮತ್ತು ರಾಜಕೀಯ ಸಹಮತ ಎಂಬ ಮೂರು ರಾಷ್ಟ್ರೀಯ ಹಿತಾಸಕ್ತಿಯ ಅಂಶಗಳನ್ನೊಳಗೊಂಡ ವಿಷಯಗಳ ಚರ್ಚೆಯಾಗುವುದರಿಂದ ಅಧಿವೇಶನವು ಬಹಳ ನಿರ್ಣಾಯಕ ಕೂಡ ಆಗಿದೆ. ಇದೇ ಹಿನ್ನೆಲೆಯಲ್ಲಿ ಆಳುವ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಗದ್ದಲವಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಏಕೆಂದರೆ ಪ್ರತಿಪಕ್ಷಗಳು ವಿವಿಧ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಷಯಗಳನ್ನು ಚರ್ಚೆ ಮಾಡುವ ಮೂಲಕ ಕೇಂದ್ರ ರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಿಂದ ಚಳಿಗಾಲದ ಅಧಿವೇಶನಗಳನ್ನು ನವೆಂಬರ್ 21ರವರೆಗೆ ಕರೆಯಲಾಗುತ್ತಿತ್ತು. ಇದಕ್ಕೂ ಮೊದಲು ಚಳಿಗಾಲದ ಅಧಿವೇಶನ ಜನವರಿ ಮೊದಲ ವಾರದಲ್ಲಿ ಕೊನೆಗೊಳ್ಳುತ್ತಿತ್ತು. ಹಿಂದೆ ನಡೆದ ಈ ವರ್ಷದ ಮಳೆಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್, ಮೋಟಾರು ವಾಹನ ಕಾಯ್ದೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಗೆ ತಿದ್ದುಪಡಿಗಳನ್ನು ತರುವಂತಹ ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ಸಿಕ್ಕಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರೀಯ ಮುಖ...

ಬ್ರಿಕ್ಸ್ ಸದಸ್ಯ ರಾಷ್ಟ್ರಗಳೊಂದಿಗೆ ಬಲಿಷ್ಟಗೊಂಡ ಭಾರತದ ಒಪ್ಪಂದ

ಭಾರತವು ಮಾಡಿಕೊಂಡ ಬಹುಪಕ್ಷೀಯ ಒಪ್ಪಂದಗಳ ರೀತಿಯಲ್ಲಿಯೇ ನಾಲ್ಕು ರಾಷ್ಟ್ರಗಳ ಗುಂಪು ಅಸ್ತಿತ್ವಕ್ಕೆ ಬಂದ ಬಳಿಕ ಬ್ರಿಕ್ಸ್ ವಿದೇಶಾಂಗ ನೀತಿಯಲ್ಲಿ ಬಹಳ ಮುಖ್ಯವಾದ ಕಾರ್ಯತಂತ್ರದ ಜಾಗವನ್ನು ತನ್ನದಾಗಿಸಿಕೊಂಡಿದೆ. ಬ್ರಿಕ್ಸ್‌ ದೇಶಗಳ ಉದಯೋನ್ಮುಖ ಆರ್ಥಿಕತೆಗಳು ಭೌಗೋಳಿಕ-ರಾಜಕೀಯ ಮತ್ತು ಭೌಗೋಳಿಕ-ಅರ್ಥಶಾಸ್ತ್ರದ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಜಗತ್ತು ದೊಡ್ಡ ಮಟ್ಟದಲ್ಲಿ ಪರಿಗಣಿಸಲೇಬೇಕಾದ ಪ್ರಮುಖ ಘಟಕಗಳಾಗಿವೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾದಲ್ಲಿ ನಡೆದ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು ಪ್ರಮುಖವಾದುದು ಎಂದುಕೊಳ್ಳಬಹುದು. ಬ್ರಿಕ್ಸ್ ಶೃಂಗಸಭೆಯ ಪ್ರಾಮುಖ್ಯತೆ ಬಗ್ಗೆ ಸಾರಿ ಹೇಳಿದ ಪ್ರಧಾನಿ ಮೋದಿ ಅವರು ಭಾರತ ಮತ್ತು ಉಳಿದ ಬ್ರಿಕ್ಸ್ ರಾಷ್ಟ್ರಗಳು ಬ್ರಿಕ್ಸ್ ಚೌಕಟ್ಟಿನೊಳಗೆ ಭಯೋತ್ಪಾದನೆ ನಿರ್ಮೂಲನೆಗೆ ಕಾರ್ಯವಿಧಾನಗಳನ್ನು ರೂಪಿಸಲು ನೋಡುತ್ತಿವೆ ಎಂದು ಅಭಿಪ್ರಾಯಪಟ್ಟರು. ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಸಭೆ ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿ ಮೋದಿ, ‘ಬ್ರಿಕ್ಸ್ ದೇಶಗಳ ಆರ್ಥಿಕ ಬೆಳವಣಿಗೆಯು ವಿಶ್ವದ ಆರ್ಥಿಕ ಬೆಳವಣಿಗೆಯ ಶೇಖಡ 50ರಷ್ಟಿದೆ ಎಂಬುದನ್ನು ಒತ್ತಿ ಹೇಳಿದರು. ಅಲ್ಲದೆ "ಇಡೀ ವಿಶ್ವವೇ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿದ್ದರೂ ಬ್ರಿಕ್ಸ್ ದೇಶಗಳು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಗತಿ ಕಂಡಿವೆ. ಈ ದೇಶಗಳಲ್ಲಿ ಲ...

ಬ್ರೆಸಿಲಿಯಾದಲ್ಲಿ ನಡೆದ 11ನೇ ಬ್ರಿಕ್ಸ್ ಶೃಂಗಸಭೆ

ಬ್ರೆಸಿಲಿಯಾದಲ್ಲಿ ನಡೆದ 11ನೇ ಬ್ರಿಕ್ಸ್ ಶೃಂಗಸಭೆಯ ಯಶಸ್ವಿ ಸಮಾರೋಪವು ತಂಡವಾಗಿರುವುದರ ಪ್ರಖರತೆ ಮತ್ತು ನಿರಂತರವಾಗಿ ಬೆಳೆಯುತ್ತಿರುವ ವಾಸ್ತವದ ಮಾನದಂಡವಾಗಿದೆ. ಶೃಂಗಸಭೆ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಪ್ರಕಾರ ಬ್ರಿಕ್ಸ್ ದೇಶಗಳು "ಕಳೆದ ಒಂದು ದಶಕದಲ್ಲಿ ಜಾಗತಿಕ ಬೆಳವಣಿಗೆಯ ಪ್ರಮುಖ ಭಾಗಿದಾರಿ ದೇಶಗಳು" ಎಂಬುದು‌ ಗಮನಾರ್ಹ ಅಂಶವಾಗಿದೆ. ಬ್ರಿಕ್ಸ್ ದೇಶಗಳ ಆಗಮನ ಹೊಸ ಉದಯೋನ್ಮುಖ ಜಾಗತಿಕ ಆರ್ಥಿಕ ಕ್ರಮದ ಬದಲಾವಣೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಬ್ರಿಕ್ಸ್‌ ತಂಡವೆಂಬುದು ಕೇವಲ ಪಶ್ಚಿಮದ ಜಾಗತಿಕ ಪ್ರಾಬಲ್ಯವನ್ನು ಪ್ರಶ್ನೆ ಮಾಡಿಲ್ಲ. ಅದು ಹೊಸ ಆಲೋಚನಾ ಕ್ರಮ ಮತ್ತು ಹೊಸ ವಿಶ್ವದ ದೃಷ್ಟಿಕೋನವನ್ನು ರೂಪಿಸಲು ಪ್ರಯತ್ನಿಸುತ್ತಿದೆ. 11ನೇ ಬ್ರಿಕ್ಸ್ ಶೃಂಗಸಭೆಯ ದೇಹವಾಕ್ಯವೇ ಅಥವಾ ಅಜೆಂಡಾವೇ "ನವೀನ ಭವಿಷ್ಯಕ್ಕಾಗಿ ಆರ್ಥಿಕ ಬೆಳವಣಿಗೆ" ಎಂಬುದಾಗಿದೆ. ಈ ಅನ್ವೇಷಣೆ ಎಂಬುದು ನಿಜಕ್ಕೂ ಭವಿಷ್ಯಕ್ಕೆ ಬರೆದ ಮುನ್ನುಡಿಯಾಗಿದೆ. ಅನ್ವೇಷಣೆಯ ಇತಿಹಾಸ ಹೊಸ ಯೋಜನೆಗಳ ವಿಚಾರವಾಗಿದೆ. ನಾವು ಹೊಸತನವನ್ನು ಅನ್ವೇಷಣೆ ಮಾಡದಿದ್ದರೆ ಅಪ್ರಸ್ತುತವಾಗುವ ಅಪಾಯವಿದೆ. ನಿರೀಕ್ಷೆಯಂತೆ ಬ್ರಿಕ್ಸ್ ನಾಯಕರು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯು ಪಯುಎನ್ ಹಾಗೂ ಡಬ್ಲ್ಯುಟಿಒ ಮತ್ತು ಐಎಂಎಫ್ ಸೇರಿದಂತೆ ಇತರೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಸುಧಾರಿಸುವ ತುರ್ತು ಅಗತ್ಯ ಹೆಚ್ಚಾಗಿದೆ ಎಂಬುದನ್ನ...

ಭಾರತ-ಯುಎಸ್ 2019ರ ತ್ರಿಸೇವಾ ಕಾರ್ಯಾಚರಣೆ

ಯುನೈಟೆಡ್ ಸ್ಟೇಟ್ಸ್ (ಯುಎಸ್) ಜೊತೆಗೆ 'ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ'ವನ್ನು ನಿರ್ಮಿಸುವುದು ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ಪರಿವರ್ತನೆಯಲ್ಲಿ ಅನಿವಾರ್ಯ ಪಾಲುದಾರನಾಗಿ ಹೊರಹೊಮ್ಮಿರುವ ರಾಷ್ಟ್ರ. ಮತ್ತು ಜಾಗತಿಕ ವೇದಿಕೆಯಲ್ಲಿ ದೊಡ್ಡದನ್ನು ಮಾಡುವ ಭಾರತದ ಮಹಾತ್ವಾಕಾಂಕ್ಷೆಯನ್ನು ಯುನೈಟೆಡ್ ಸ್ಟೇಟ್ಸ್ ಸಾಕಾರಗೊಳಿಸಿದೆ. ರಕ್ಷಣಾ ಸಹಭಾಗಿತ್ವ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ದ್ವಿಪಕ್ಷೀಯ ಸಂಬಂಧದ ಪ್ರಮುಖ ಆಧಾರಸ್ತಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ದ್ವಿಪಕ್ಷೀಯ ಸಂಬಂಧ ವೃದ್ಧಿಸುತ್ತಿದೆ.   ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ತನ್ನ ಚೊಚ್ಚಲ ತ್ರಿ-ಸೇವೆಗಳ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಕಾರ್ಯಾಚರಣೆಗಳನ್ನು ಇದೇ ನವೆಂಬರ್ 13ರಿಂದ 21ರವರೆಗೆ 'ಟೈಗರ್ ಟ್ರೈಂಫ್' ಎಂಬ ಹೆಸರಿನಲ್ಲಿ ಆಂಧ್ರಪ್ರದೇಶದ ಕರಾವಳಿಯಲ್ಲಿ ನಡೆಸಲಾಗುತ್ತಿದೆ. ಯುಎಸ್ ನ ಮೆರೈನ್ ಕಾರ್ಪ್ಸ್ ಮತ್ತು ವಿಶೇಷ ಪಡೆಗಳ ವಿಚಕ್ಷಣ ತಂಡ, ಭಾರತೀಯ ನೌಕಾಪಡೆಯ ಪಿ 8 ಐ ದೀರ್ಘಶ್ರೇಣಿಯ ಕಡಲ ವಿಚಕ್ಷಣ ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನಗಳು, ಟೈಗರ್ ಟ್ರೈಂಫ್ ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ. ಮೊದಲ ಹಂತದಲ್ಲಿ ನವೆಂಬರ್ 13 ರಿಂದ 16 ರವರೆಗೆ ವಿಶಾಖಪಟ್ಟಣಂನಲ್ಲಿ ಹಾಗೂ ಎರಡನೇ ಹಂತದಲ್ಲಿ ನವ...

ಪಾಕಿಸ್ತಾನದ ಹೊಸ ವರಸೆ

ಪಾಕಿಸ್ತಾನದ ಅಧ್ಯಕ್ಷರಿಂದ ಹಿಡಿದು ವಿದೇಶಾಂಗ ಇಲಾಖೆ ಸಚಿವರವರೆಗೆ ಎಲ್ಲರೂ ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ವಿಶಿಷ್ಟ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಆಳುವ ವರ್ಗ 2019ರ ನವೆಂಬರ್ 9 ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ನೀಡಿದ ಅಯೋಧ್ಯ ವಿವಾದದ ಬಗೆಗಿನ ತೀರ್ಪಿನ ಕುರಿತಾಗಿಯೂ ಪ್ರತಿಕ್ರಿಯಿಸಿದೆ. ವಾಸ್ತವವಾಗಿ ಶತಮಾನಗಳ ಹಳೆಯ ವಿವಾದವಾಗಿದ್ದ ಉತ್ತರ ಪ್ರದೇಶದ ಅಯೋಧ್ಯಯಲ್ಲಿ ರಾಮನ ಮಂದಿರ ನಿರ್ಮಿಸುವುದಕ್ಕೆ ಸಂಬಂಧಿಸಿದ ಭೂಮಿಯ ಹಕ್ಕಿನ ವಿಷಯವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದೆ. ಈ ತೀರ್ಪನ್ನು ಸಮಾಜದ ಎಲ್ಲಾ ವರ್ಗದ ಜನ ವ್ಯಾಪಕವಾಗಿ ಸ್ವಾಗತಿಸಿದ್ದಾರೆ. ಅಷ್ಟೇಯಲ್ಲ, ಮಸೀದಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರವು ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಐದು ಎಕರೆ ಭೂಮಿಯನ್ನು ನೀಡಬೇಕೆಂದು ನ್ಯಾಯಪೀಠ ಆದೇಶ ಮಾಡಿದೆ. ಮಸೀದಿಗೆ ಜಮೀನು ನೀಡಲು ಮತ್ತು ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚಿಸಲು ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳ ಸಮಯವಕಾಶ ನೀಡಿದೆ. ಭಾಗಿದಾರರಾಗಿದ್ದ ಎಲ್ಲರೂ ಅಯೋಧ್ಯೆಯ ಭೂಮಿ ಹಕ್ಕು ವಿವಾದವನ್ನು ಇತ್ಯರ್ಥ ಪಡಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಅದೇ ರೀತಿ ತೀರ್ಪಿನ ಬಗ್ಗೆ ಅಪಾರ ತೃಪ್ತಿ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅದೇ ದಿನ ಸಂಜೆ ರಾಷ್...

ಸೆರ್ಬಿಯಾ ಜೊತೆ ಭಾರತ ಮರುಹೊಂದಾಣಿಕೆ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ಸರ್ಬಿಯಾಕ್ಕೆ ನೀಡಿದ್ದ ಭೇಟಿ ಯಶಸ್ವಿಯಾಗಿದೆ. ಡಾ. ಜೈಶಂಕರ್ ಅವರು ಸರ್ಬಿಯಾದ ಐವಿಕಾ ಡಾಸಿಕ್ ನಿಯೋಗವನ್ನು ಮಾತ್ರವಲ್ಲದೆ ಸರ್ಬಿಯಾದ ಅಧ್ಯಕ್ಷ ಅಲೆಕ್ಸಂಡರ್ ವುಸಿಕ್ ಮತ್ತು ಬೆಲ್ಗ್ರೇಡ್ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅವರನ್ನು ಭೇಟಿಯಾದರು. ಜೈಶಂಕರ್ ಮತ್ತು ಸೆರ್ಬಿಯನ್ ಪ್ರತಿನಿಧಿಗಳ ನಡುವೆ ನಡೆದ ಪರಸ್ಪರ ಕ್ರಿಯೆಗಳು ದ್ವಿಪಕ್ಷೀಯ ಪಾಲುದಾರಿಕೆಯನ್ನು 21ನೇ ಶತಮಾನದ ಅಗತ್ಯತೆಗಳೊಂದಿಗೆ ಸೇರಿಸಿ ಪರಿವರ್ತಿಸುವುದರ ಮೇಲೆ ಕೇಂದ್ರೀಕರಿಸಿದೆ. ಈ ಭೇಟಿಯ ಪ್ರಮುಖ ಉದ್ದೇಶ ಭವಿಷ್ಯದಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬೆಸೆಯುವ ಸಾಧ್ಯತೆಯಿರುವ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಮಾಡುವುದಾಗಿದೆ. ಇಂಡೋ-ಸರ್ಬಿಯನ್ ನಡುವಿನ ಸಂಬಂಧಗಳಿಗೆ ಆಳವಾದ ಇತಿಹಾಸವಿದೆ. ಸೆರ್ಬಿಯಾ ದೇಶವು ಹಿಂದಿನ ಯುಗೊಸ್ಲಾವಿಯಾದ ಭಾಗವಾಗಿದ್ದರಿಂದ ಭಾರತ ಮತ್ತು ಸೆರ್ಬಿಯಾ ದೇಶಗಳು ಅಲಿಪ್ತ ಚಳವಳಿಯ (ಎನ್‌ಎಎಂ) ಸ್ಥಾಪಕ ಸದಸ್ಯರಾಗಿದ್ದವು. ಅಲಿಪ್ತ ಚಳವಳಿಗೆ ಭಾರತದಿಂದ ಪಂಡಿತ್ ನೆಹರೂ ಮತ್ತು ಸೆರ್ಬಿಯಾದಿಂದ ಜೋಸೆಫ್ ಟಿಟೊ ಅವರ ಹೆಸರುಗಳನ್ನು ಪರಸ್ಪರರ ರಾಷ್ಟ್ರೀಯ ಪ್ರಜ್ಞೆ ಹೆಸರಿನಲ್ಲಿ ಪ್ರಸ್ತುತಪಡಿಸಲಾಗಿತ್ತು. ಇದಲ್ಲದೆ ಸರ್ಬಿಯಾ ದೇಶದ ಬುದ್ಧಿಜೀವಿಗಳೊಂದಿಗೆ ಭಾರತದ ಸ್ವಾಮಿವಿವೇಕಾನಂದ ಮತ್ತು ರವೀಂದ್ರನಾಥ ಟ್ಯಾಗೋರ್ ಅವರು ನಡೆಸಿದ ಸಂವಾದದಲ್ಲೂ ಪರಸ್ಪರ ಹಂಚಿಕೆಯ ವಿಷ...

ಕರ್ತಾರ್ ಪುರದ ಮಹತ್ವ

ಭಾರತದ ವಿಭಜನೆಯಿಂದಾಗಿ ತಮ್ಮ ಸಮುದಾಯದ ವ್ಯಾಪ್ತಿಯಿಂದ ಹೊರಗುಳಿದ ಪವಿತ್ರ ದೇವಾಲಯಗಳಿಗೆ ಉಚಿತ ಪ್ರವೇಶಕ್ಕಾಗಿ ಪ್ರತಿದಿನವೂ ಸಿಖ್ಖರು ಪ್ರಾರ್ಥಿಸುತ್ತಾರೆ. ಕರ್ತಾರ್ಪುರ್ ಸಾಹಿಬ್ ಅಂತಹ ದೇವಾಲಯಗಳಲ್ಲಿ ಅತ್ಯಂತ ಪವಿತ್ರವಾದದ್ದು. ಗುರುನಾನಕ್ ಗುರೂಜಿ ಅವರು ತಮ್ಮ ಕೊನೆಯ ಹದಿನೆಂಟು ವರ್ಷಗಳನ್ನು ಕಳೆದ ಮತ್ತು ನಿಧನರಾದ ರಾವಿ ನದಿಯ ದಡದಲ್ಲಿ ನಿರ್ಮಿಸಲಾಗಿರುವ ಕರ್ತಾರ್ಪುರ ಗುರುದ್ವಾರ ಅಂತರರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಮತ್ತು ಇದು ಭಾರತದಿಂದಲೇ ಗೋಚರಿಸುತ್ತದೆ. ಕಾರಿಡಾರ್ ತೆರೆಯುವುದರಿಂದ ಪ್ರತಿದಿನ ಸಾವಿರಾರು ಯಾತ್ರಾರ್ಥಿಗಳಿಗೆ ಪ್ರವೇಶ ಸಿಗುತ್ತದೆ. ಇದು ಲಕ್ಷಾಂತರ ಜನರಿಗೆ ಅಪಾರ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ನೆಮ್ಮದಿಯನ್ನು ನೀಡುತ್ತದೆ. ಭಾರತದ ಕಡೆಯ ಗುರುದಾಸ್‌ಪುರದ ಡೇರಾ ಬಾಬಾ ನಾನಕ್‌ನಲ್ಲಿ ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ನ ಸಮಗ್ರ ಚೆಕ್-ಪೋಸ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ದರ್ಬಾರ್ ಸಾಹಿಬ್ ಗುರುದ್ವಾರದಲ್ಲಿ ಯಾತ್ರಾರ್ಥಿಗಳಿಗೆ ನಮಸ್ಕರಿಸುವುದು ಈಗ ಸುಲಭವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕೇಂದ್ರ ಸಚಿವರಾದ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗ ದರ್ಬಾರ್ ಸಾಹೀಬಿಗೆ ಬಂದ ಮೊದಲ ಭಾರತೀಯ ‘ಜಾಥಾ’ ಯಾತ್ರಾರ್ಥಿಗಳ ಭಾಗವಾಗಿತ್ತು. ಗುರುನಾನಕ್ ಅವರ 550 ...