Posts

Showing posts from March, 2020

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಅಮೆರಿಕಾದ 46ನೇ ಅಧ್ಯಕ್ಷರನ್ನು ಆಯ್ಕೆ ಮಾಡಲೆಂದು 2020ರ ನವೆಂಬರ್ ತಿಂಗಳಲ್ಲಿ ನಡೆಯುವ ಯುಎಸ್ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ರಿಪಬ್ಲಿಕನ್ ಪಕ್ಷದ ವತಿಯಿಂದ (ಗ್ರ್ಯಾಂಡ್ ಓಲ್ಡ್ ಪಾರ್ಟಿ ಅಥವಾ ಗೋಪಿ) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ವಿವಿಧ ರಾಜ್ಯದ ಪ್ರಾಥಮಿಕ ಮತ್ತು ಕಾಕಸ್‌ಗಳಲ್ಲಿ 1,099 ಪ್ರತಿನಿಧಿಗಳನ್ನು ಗೆದ್ದಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ನಾಮನಿರ್ದೇಶನವನ್ನು ಗೆಲ್ಲಲು ಅವರಿಗೆ ಒಟ್ಟು 1,276 ಪ್ರತಿನಿಧಿಗಳು ಬೇಕಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಮತ್ತು ವರ್ಮೊಂಟ್ ಸೆನೆಟರ್ ಬರ್ನಿ ಸ್ಯಾಂಡರ್ಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. "ಸೂಪರ್ ಟೂಸ್ಡೆ” ಕೆಲವು ಪ್ರಮುಖ ರಾಜ್ಯಗಳಲ್ಲಿ ನಡೆದ ಪ್ರಾಥಮಿಕ ಚುನಾವಣೆಯನ್ನು ಗೆದ್ದಿರುವ ಬಿಡೆನ್ ಮುನ್ನಡೆ ಸಾಧಿಸಿದ್ದಾರೆ. ಹದಿನಾಲ್ಕು ರಾಜ್ಯಗಳು ಮತ್ತು ಅಮೇರಿಕನ್ ಸಮೋವಾಗಳಲ್ಲಿ ಕಳೆದ ಮಂಗಳವಾರ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆ ನಡೆಯಿತು. ಸ್ಪರ್ಧೆಗಳು 1,344 ರಾಷ್ಟ್ರೀಯ ವಾಗ್ದಾನ ಮಾಡಿದ ಪ್ರತಿನಿಧಿಗಳಿಗೆ ಪೂರಕವಾಗಿವೆ. 2020ರ ಡೆಮಾಕ್ರಟಿಕ್ ಪಕ್ಷದ ಸ್ಪರ್ಧೆಯಲ್ಲಿ ಲಭ್ಯವಿರುವ ಒಟ್ಟು ಮೊತ್ತದ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದಾಗಿದೆ. ಬಹುಪಾಲು ಪ್ರತಿನಿಧಿಗಳನ್ನು ಗೆಲ್ಲುವ ಅಭ್ಯರ್ಥಿಯನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ...

ತೈಲ ಬೆಲೆ ಸಮರ

ಸೌದಿ ಅರೇಬಿಯಾವು ‘ಬ್ರೆಂಟ್’ ಕಚ್ಚಾ ತೈಲ ಬೆಲೆಗಳನ್ನು ಶೇಕಡಾ 30ಕ್ಕಿಂತಲೂ ಕಡಿಮೆಗೊಳಿಸುವುದರೊಂದಿಗೆ ತೈಲ ಬೆಲೆ ಸಮರ ಪ್ರಾರಂಭವಾಗಿದೆ. 1991ರ ಕೊಲ್ಲಿ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ಈ ಮಟ್ಟಿಗೆ ಬೆಲೆಗಳ ಕಡಿತವಾಗಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಿನ ಒಡಕನಿಂದ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ನಿರ್ಧಾರ ಮಾಡಲಾಗಿದೆ. ಕರೋನಾ ವೈರಸ್ ಹೊಡೆತಕ್ಕೆ ಏಕಾಏಕಿ ಬೆಲೆ ಕುಸಿತವಾಗಿದ್ದು ಸೌದಿ ಅರೇಬಿಯಾ ನೇತೃತ್ವದ ತೈಲ ಕಾರ್ಟೆಲ್ ಒಪೆಕ್ (ಆರ್ಗನೈಸೇಶನ್ ಆಫ್ ಪೆಟ್ರೋಲಿಯಂ ರಫ್ತು ದೇಶಗಳ ರಾಷ್ಟ್ರ) ದಿನಕ್ಕೆ 1.5 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಮೊಟಕುಗೊಳಿಸಲು ಬಯಸಿದೆ. ಆದಾಗ್ಯೂ, ರಷ್ಯಾ ತನ್ನ ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ಒಪ್ಪದೇ ಇರುವ ಕಾರಣದಿಂದ ಸೌದಿ ಅರೇಬಿಯಾದ ತೈಲ ಕಂಪನಿ ಬ್ರೆಂಟ್ ಈ ಶತಮಾನದಲ್ಲಿ ಅತ್ಯಂತ ಕಡಿಮೆ ಬೆಲೆಯನ್ನು ಘೋಷಿಸುವ ಮೂಲಕ ಬೆಲೆ ಸಮರವನ್ನು ಸಾರಿದೆ. ಹಣಕಾಸು ಮಾರುಕಟ್ಟೆಗಳು ಮತ್ತು ನೈಜ ವಲಯವು ಏಕಾಏಕಿ‌ ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿದೆ, ವಿಶೇಷವಾಗಿ ಇಂಧನ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ. ಯಾವುದೇ ದೇಶವು ಸೌದಿ ಅರೇಬಿಯಾದಷ್ಟು ಅಗ್ಗವಾಗಿ ತೈಲವನ್ನು ಉತ್ಪಾದಿಸಲು ಸಾಧ್ಯವಿಲ್ಲ. "ಹಣಕಾಸಿನ ವಿರಾಮ-ಸಹ" ತೈಲ ಬೆಲೆಗಳು ಎಲ್ಲಾ ಆಟಗಾರರಿಗೆ ಒಂದೇ ರೀತಿ‌ ಇರುವುದಿಲ್ಲ. ತೈಲ ಉತ್ಪಾದಕರು ತಮ್ಮ ತೈಲ ಉತ್ಪಾದನೆಯನ್ನು ಯಾವ ಮಟ್ಟದಲ್ಲಿ ಇಳಿಸುತ್ತಾರೆ ಮತ್ತು ರ...

ಕೊರಿಯನ್ ಪೆನಿನ್ಸುಲಾದಲ್ಲಿ ಹೆಚ್ಚುತ್ತಿರುವ ಒತ್ತಡ

ಉತ್ತರ ಕೊರಿಯಾ ಈ ವಾರದ ಆರಂಭದಲ್ಲಿ ಕನಿಷ್ಠ ಮೂರು ಗುರುತಿಸಲಾಗದ ಸ್ಪೋಟಕಗಳನ್ನು ಹಾರಿಸಿದೆ. ಇದು ಕಳೆದೆರಡು ವಾರದಲ್ಲಿ ಕಿಮ್ ಜೊಂಗ್-ಉನ್ ಆಡಳಿತದ ಎರಡನೇ ಕ್ರಮ. ಪಿಯೋಂಗ್ಯಾಂಗ್ ತನ್ನ ಹಿಂದಿನ ಲೈವ್-ಫೈರ್ ವ್ಯಾಯಾಮಗಳನ್ನು ಖಂಡಿಸಿ "ಮಹತ್ವದ" ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ ಎರಡು ದಿನಗಳ ನಂತರ ಇದು ಘಟಿಸಿದೆ. ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯವು ಉತ್ತರ ಕೊರಿಯಾದ ಪೂರ್ವ ಕರಾವಳಿಯಿಂದ ಕೊರಿಯಾದ ಪರ್ಯಾಯ ದ್ವೀಪ ಮತ್ತು ಜಪಾನ್ ನಡುವಿನ ನೀರಿನಲ್ಲಿ ಹಾರಿಸಿದ ವಿವಿಧ ರೀತಿಯ ಅಲ್ಪ-ಶ್ರೇಣಿಯ ಸ್ಪೋಟಕಗಳನ್ನು ಪತ್ತೆ ಮಾಡಿದೆ ಎಂದು ಹೇಳಲಾಗುತ್ತಿದೆ‌. ಸ್ಪೋಟಕದ ತೀವ್ರತೆ ಗರಿಷ್ಠ 200 ಕಿ.ಮೀ. ಇತ್ತು ಮತ್ತು ಉಡಾವಣೆ ತೀವ್ರತೆ ಗರಿಷ್ಠ 50 ಕಿ.ಮೀ. ಇತ್ತು. ಮಿಲಿಟರಿ ಸಂಬಂಧಿತ ಚಲನೆಯನ್ನು ಮೇಲ್ವಿಚಾರಣೆ ನಡೆಸಿ ಸಂಪೂರ್ಣವಾಗಿ ಉಡಾವಣೆ ಮಾಡುವ ಸಂದರ್ಭದಲ್ಲಿ ಇದು ಘಟಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮಿಲಿಟರಿ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ 2018ರಲ್ಲಿ ಉತ್ತರ ಕೊರಿಯಾದೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಈ ಉಡಾವಣೆಗಳು ಉಲ್ಲಂಘಿಸಿವೆ ಎಂದು ಅದು ಹೇಳಿದೆ. ಫೆಬ್ರವರಿ 28ರಂದು ಹನೋಯಿಯಲ್ಲಿ ನಡೆದ ಕಿಮ್ಸ್ ಶೃಂಗಸಭೆಯ ಒಂದನೇ ವಾರ್ಷಿಕೋತ್ಸವದಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸೇನೆಗೆ ಸಂಬಂಧಿಸಿದ ಚರ್ಚೆ ನಡೆಸಲಾಯಿತು ಎಂದು ಉತ್ತ...

ಭಯೋತ್ಪಾದನೆ ಬಗೆಗಿನ ಪಾಕಿಸ್ತಾನದ ದ್ವಿಮುಖ ನೀತಿ ಬಹಿರಂಗ

Image
ತನ್ನ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳ ಜೊತೆ ವ್ಯವಹರ ನಡೆಸುತ್ತಿರುವ ಪಾಕಿಸ್ತಾನ ಸರ್ಕಾರದ ದ್ವಂದ್ವ ನಿಲುವು ಎಲ್ಲರಿಗೂ ಗೊತ್ತಿರುವ ವಿಷಯ‌. ಪ್ಯಾರಿಸ್ ನ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಸಮಾವೇಶಕ್ಕೂ‌ ಮೊದಲು ಪಾಕಿಸ್ತಾನವು ಜಾಗತಿಕ ಭಯೋತ್ಪಾದಕ ಮಸೂದ್ ಅಜರ್ ಬಗ್ಗೆ ಸಂಪೂರ್ಣವಾಗಿ ಸುಳ್ಳು ಹೇಳಿರುವುದರಿಂದ ಅದರ ನಿಲುವು ಮತ್ತೊಮ್ಮೆ ಬಹಿರಂಗವಾಗಿದೆ‌. ಭಯೋತ್ಪಾದನಾ‌ ಕೃತ್ಯದ ಮಾಸ್ಟರ್-ಮೈಂಡ್ ಪಾಕಿಸ್ತಾನದಲ್ಲಿ ಅಧಿಕೃತವಾಗಿ ರಕ್ಷಣೆ ಪಡೆದುಕೊಂಡಿದ್ದಾನೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ಜಗತ್ತಿಗೆ ತೋರಿಸಲು ಇಸ್ಲಾಮಾಬಾದ್ ಪ್ರಯತ್ನಿಸುತ್ತಿದೆ; ಆದರೆ ವಾಸ್ತವದಲ್ಲಿ ಇದು ಮಸೂದ್ ಅಜರ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹಮಾನ್ ಲಖ್ವಿ ಮತ್ತು ಜಾಗತಿಕವಾಗಿ ಭಯೋತ್ಪಾದಕ ದಾಳಿಗೆ ಕಾರಣರಾದ ಅನೇಕ ಭಯೋತ್ಪಾದಕರನ್ನು ವಿಚಾರಣೆ ಮಾಡಿ ಸೂಕ್ತ ದಂಡ ವಿಧಿಸುತ್ತಿಲ್ಲ‌. ಮಸೂದ್ ಅಜರ್ ಜೈಶ್-ಎ-ಮೊಹಮ್ಮದ್ (ಜೆಎಎಂ) ಮುಖ್ಯಸ್ಥನಾಗಿದ್ದು 2019ರ ಫೆಬ್ರವರಿ 14ರಂದು ನಡೆದ ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪದನಾ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ. ಈ ದಾಳಿಯಲ್ಲಿ ಭಾರತದ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಸೈನಿಕರು ಕೊಲ್ಲಲ್ಪಟ್ಟಿದ್ದರು. 2019ರ ಫೆಬ್ರವರಿ 26ರಂದು ಭಾರತವು ಬಾಲಕೋಟ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನದ ಜೈಶ್-ಎ-ಮೊಹಮ...

ಕಾಬೂಲ್ ವಿಷಯಗಳಲ್ಲಿ ಅನಿಶ್ಚಿತತೆ

Image
ಅಫ್ಘಾನಿ‌ಸ್ತಾನದಲ್ಲಿ ಮಾರ್ಚ್ ಆರಂಭ ಆಗುತ್ತಿದ್ದಂತೆ ಮಹತ್ವದ ಬೆಳವಣಿಗೆಗಳಾಗಿವೆ. ಫೆಬ್ರವರಿ 29ರಂದು ಯುಎಸ್-ತಾಲಿಬಾನ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಯುದ್ಧದಿಂದ ಹಾನಿಯಾದ ದೇಶಕ್ಕೆ ಬಹಳ ಅಗತ್ಯವಾಗಿ ಬೇಕಾಗಿರುವ ಶಾಂತಿಯ ಪುನರ್ ಸ್ಥಾಪನೆಗಾಗಿ ಇಂಟ್ರಾ ಅಫ್ಘಾನ್ ಸಂವಾದವನ್ನು ನಡೆಸಲು; ಉಗ್ರಗಾಮಿ ನಿಲುವನ್ನು ಪ್ರತಿನಿಧಿಸುವ ತಾಲಿಬಾನ್ ಮತ್ತು ಶಾಂತಿಪ್ರಿಯ‌ ಜನರ ನಡುವೆ ಸಂವಾದ ಏರ್ಪಾಟಾಗುವಂತೆ ಮಾಡಲು ಅಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರ ಮುಂದಡಿ ಇಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಈ ನಡುವೆ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ ಫಲಿತಾಂಶಗಳು ಪ್ರಕಟವಾದ ಬಳಿಕ ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಇದು ಅಫ್ಘಾನಿಸ್ತಾನದ ಜನರಲ್ಲಿ ಮಾತ್ರವಲ್ಲದೆ ಪ್ರಸ್ತುತ ಕಾಬೂಲ್‌ನಲ್ಲಿ ಆಳ್ವಿಕೆ ನಡೆಸುತ್ತಿರುವವರ ರಾಜಕೀಯ ಕಿತ್ತಾಟವನ್ನು ಶಾಂತಯುತವಾಗಿ ಇತ್ಯರ್ಥ ಮಾಡಲು ಪರಿಹಾರ ಹುಡುಕುತ್ತಿರುವ ಬಾಹ್ಯ ಶಕ್ತಿಗಳಿಗೂ ನಿರಾಶೆ ಮೂಡಿಸಿದೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಶ್ರಫ್ ಘನಿ ಮತ್ತೆ ಜಯಗಳಿಸಿದ್ದಾರೆ ಎಂದು ಅಫ್ಘಾನಿಸ್ತಾನದ ಚುನಾವಣಾ ಆಯೋಗ ಘೋಷಿಸಿದೆ. ಆದರೂ ಅಶ್ರಫ್ ಘಾನಿ ಅವರನ್ನು ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು ಡಿ. ಅಬ್ದುಲ್ಲಾ ಅಬ್ದುಲ್ಲಾ ನೇತೃತ್ವದ ಮತ್ತೊಂದು ಪ್ರಬಲ ಬಣದ ವಿರುದ್ಧ ಸ್ಪರ್ಧಿಸಿ ಗೆದ್ದ ಬಳಕವೇ. ಅಶ್ರಫ್ ಘಾನಿ...

ವಿದೇಶಿ ನೀತಿಯೊಂದಿಗೆ ಭಾರತೀಯ ಸಿನರ್ಜೀಸ್ ವ್ಯವಹಾರ

ನರೇಂದ್ರ ಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಸರ್ಕಾರದ ವಿದೇಶಾಂಗ ನೀತಿಯಲ್ಲಿ ಬಿ 2 ಬಿ (ಬಿಸಿನೆಸ್ ಟು ಬ್ಯುಸಿನೆಸ್) ಸಹಭಾಗಿತ್ವದ ಕೇಂದ್ರೀಕೃತವಾಗಿದೆ. ಅವುಗಳಲ್ಲಿ ಗಮನಾರ್ಹವಾದ ಸಂಗತಿ ಎಂದರೆ ಮೃದುವಾದ ಬಡ್ಡಿದರಗಳನ್ನು ಹೊಂದಿರುವ ಪಾಲುದಾರ ರಾಷ್ಟ್ರಗಳಿಗೆ ಭಾರತವು ಲೈನ್ಸ್ ಆಫ್ ಕ್ರೆಡಿಟ್ (ಎಲ್‌ಓಸಿ) ಅನ್ನು ವಿಸ್ತರಿಸಿದೆ. ಇವುಗಳ ಪ್ರಮಾಣ ಮತ್ತು ಸಂಕೀರ್ಣತೆಯ ವ್ಯಾಪ್ತಿ ಕಳೆದ‌ ಕೆಲ ವರ್ಷಗಳಿಂದ ನೂರಾರು ಸಂಖ್ಯೆಯಲ್ಲಿ ಬೆಳೆದಿವೆ. ಅವುಗಳ ಉದ್ದೇಶವು ವಿದೇಶದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವುದರಿಂದ ಹಿಡಿದು ಸೇವೆಗಳನ್ನು ವಿಸ್ತರಿಸುವ ಮತ್ತು ಉತ್ಪನ್ನಗಳನ್ನು ಪೂರೈಸುವವರೆಗೆ ಇರುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ವ್ಯವಹಾರ ಶೃಂಗಸಭೆಯಲ್ಲಿ ಈ ತೆರನಾದ ಭಾರತದ ವ್ಯವಹಾರ-ರೀತಿಯ ರಾಜತಾಂತ್ರಿಕ ವಿಧಾನಗಳ ಬಗ್ಗೆ ತಿಳಿಸಿದರು‌. ಯಾವುದೇ ಸಾಲದ ಸಾಲಿನಲ್ಲಿ 65% ರಿಂದ 75% ರಷ್ಟು ಭಾರತದ ಪಾಲಾಗಿರುತ್ತದೆ ಎಂಬುದು ಎಲ್‌ಒಸಿಗಳಲ್ಲಿ ಕಂಡುಬರುವ ಸಾಮಾನ್ಯ ಸಂಗತಿ. ಪ್ರತಿಯೊಂದು ಕೂಡ ತಮ್ಮದೇ ಆದ ರೀತಿಯಲ್ಲಿ ನಮ್ಮ ಕಂಪನಿಗಳಿಗೆ ವಿದೇಶೀ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತವೆ. ಕ್ರೆಡಿಟ್ ಲೈನ್ಸ್ ಪೂರ್ಣ ಪ್ರಮಾಣದ ಗ್ಯಾರಂಟಿ ಹೊಂದಿರುವುದರಿಂದ ಇದು ಭಾರತೀಯ ಕಂಪನಿಗಳಿಗೆ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ, ಸಾಮಾನ್ಯವಾಗಿ ಅವುಗಳಿಂದ...

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ

ಬೀಜಿಂಗ್‌ ಪಾಲಿಗೆ ನಿರ್ಣಾಯಕವಾಗಿರುವ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಒಪ್ಪಂದ ಯಾವಾಗ ಪೂರ್ಣಗೊಳ್ಳಬಹುದು ಎಂಬ ಬಗ್ಗೆ ಸ್ವಲ್ಪ ಸಂದೇಹವಿದೆ. ಏಕೆಂದರೆ ಸಿಪಿಇಸಿಯಿಂದ ಚೀನಾಕ್ಕೆ ಬಹಳ ಮುಖ್ಯವಾಗಿ ಗಲ್ಫ್ ಮತ್ತು ಹಿಂದೂ ಮಹಾಸಾಗರದ ಮುಖಾಂತರ 62 ಬಿಲಿಯನ್ ಡಾಲರ್ ಯೋಜನೆ ಸುಲಭವಾಗಿ ಬರಲಿದೆ. ಅಲ್ಲದೆ ಇದು ಚೀನಾದ ಭೂಭಾಗದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರಾಂತ್ಯವನ್ನು ಬಲೂಚಿಸ್ತಾನದ ಗ್ವಾಡರ್ ಬಂದರಿನೊಂದಿಗೆ ಸಂಪರ್ಕಿಸುತ್ತದೆ. ಆದರೆ ನಿಖರವಾಗಿ ಪಾಕಿಸ್ತಾನ ಎಲ್ಲಿ ನಿಂತಿದೆ? ಎಂಬುದು ಅನೇಕ ರಾಜಕೀಯ ವಿಶ್ಲೇಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಪಾಕಿಸ್ತಾನದ ವಿಮರ್ಶಕರು ಕೂಡ ಕೆಲ ಸಂದರ್ಭಗಳಲ್ಲಿ ಈ ಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಿಪಿಇಸಿ ಮಾತ್ರವಲ್ಲದೆ ಇದಕ್ಕೆ ಪೂರಕವಾಗಿರುವ ಇನ್ನೂ ಕೆಲ ಯೋಜನೆಗಳ ವೆಚ್ಚವು ಹೆಚ್ಚಾಗುತ್ತಿದ್ದು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಇವುಗಳ ಪೈಕಿ ಮೆಗಾ ಹೈಡಲ್ ವಿದ್ಯುತ್ ಯೋಜನೆ ಮತ್ತು ಪೇಶಾವರವನ್ನು ಕರಾಚಿಯೊಂದಿಗೆ ಸಂಪರ್ಕಿಸುವ ಬಹಳ ಮಹತ್ವಾಕಾಂಕ್ಷೆಯ ರೈಲ್ವೆ ಮಾರ್ಗ ಕೂಡ ಸೇರಿದೆ. ಈ ರೈಲ್ವೆ ಮಾರ್ಗದ ಯೋಜನೆಗೆ ಆರಂಭದಲ್ಲಿ 8.2 ಬಿಲಿಯನ್ ಡಾಲರ್ ಖರ್ಚಾಗಬಹುದೆಂದು ಎಂದು ಅಂದಾಜು ಮಾಡಲಾಗಿತ್ತು. ಬಳಿಕ ಇದನ್ನು 6.2 ಬಿಲಿಯನ್ ಡಾಲರ್ ಗೆ ಇಳಿಸಲಾಯಿತು. ಕೆಲವು ಅಡಚಣೆಗಳಿಂದಾಗಿ ಯೋಜನಾ ವೆಚ್ಚದಲ್ಲಿ ಎರಡು ಬಿಲಿಯನ್ ಡಾಲರ್ ಗಳನ್ನು ಕಡಿಮೆ‌ ಮಾಡಬೇಕಾಯಿತು. ಆ...

ಸಂಸತ್ತಿನಲ್ಲಿ ಈ ವಾರ

ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 2ರಂದು ಪ್ರಾರಂಭವಾಗಿದ್ದು, ಏಪ್ರಿಲ್ 3ರವರೆಗೆ ಮುಂದುವರಿಯುತ್ತದೆ. ವಿರೋಧ ಪಕ್ಷಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರವನ್ನು ಆರ್ಥಿಕ ಸ್ಥಿತಿ ಮತ್ತು ಕೃಷಿ ಸಮಸ್ಯೆಗಳ ವಿಷಯದಲ್ಲಿ ತರಾಟೆ ತೆಗೆದುಕೊಳ್ಳಲು ಪ್ರಯತ್ನಿಸುತ್ತ್ತಿವೆ; ಆಡಳಿತ ಪಕ್ಷವು ಉಭಯ ಸದನಗಳ ಮುಂದೆ ಸತ್ಯ ಮತ್ತು ಅಂಕಿ ಅಂಶಗಳನ್ನು ಇರಿಸಲು ನಿರ್ಧರಿಸಿದೆ. ಕಾರ್ಮಿಕ ಸುಧಾರಣೆಗಳು ಮತ್ತು ಸರೊಗಸಿ (Surrogacy) ನಿಯಂತ್ರಣ ಸೇರಿದಂತೆ ಸುಮಾರು 25 ಮಸೂದೆಗಳ ಪಟ್ಟಿಯನ್ನು ಅಂಗೀಕಾರಕ್ಕಾಗಿ ಸರ್ಕಾರ ಸಿದ್ಧಪಡಿಸಿದೆ. ಅಧಿವೇಶನದಲ್ಲಿ ಹಣಕಾಸು ಮಸೂದೆಯನ್ನು ಸಹ ಅಂಗೀಕರಿಸಲಾಗುವುದು. ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು, ಇನ್ನು ಮುಂದೆ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕರೋನಾ ವೈರಸ್ಸಿಗಾಗಿ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗುವುದೆಂದು ರಾಜ್ಯಸಭೆಗೆ (ಮೇಲ್ಮನೆ) ಮಾಹಿತಿ ನೀಡಿದರು.  ಪ್ರಸ್ತುತ ಅಧಿವೇಶನದಲ್ಲಿ, "ರೈಲ್ವೆ ಸಚಿವಾಲಯದ ಅನುದಾನಕ್ಕಾಗಿ ಬೇಡಿಕೆಗಳು (2020-21)" ಕುರಿತು ರಾಧಾ ಮೋಹನ್ ಸಿಂಗ್ ಮತ್ತು ಸುನಿಲ್ ಕುಮಾರ್ ಮೊಂಡಲ್ ಅವರು ರೈಲ್ವೆ ಸ್ಥಾಯಿ ಸಮಿತಿಯ ವರದಿಯನ್ನು ಮಂಡಿಸಲಿದ್ದಾರೆ. ವಿಮಾನ (ತಿದ್ದುಪಡಿ) ಮಸೂದೆ, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳ ಮಸೂದೆ, ರಾಷ್ಟ್ರೀಯ ಹೋಮಿಯೋಪತಿ ಮಸೂದೆ ಮತ್ತು ಖನಿಜ ಕಾನೂನುಗಳ (ತಿದ್ದುಪಡಿ) ಮ...

ಇಸ್ರೇಲಿ ಸ್ಥಗಿತವನ್ನು ಪರಿಹರಿಸಲು KNESSET ಚುನಾವಣೆಗಳ ವಿಫಲತೆ

ಮಾರ್ಚ್ 2ರಂದು 23ನೇ ನೆಸ್ಸೆಟ್ಗೆ ಇಸ್ರೇಲ್ ಚುನಾವಣೆ ನಡೆಸಿತು. ಒಂದು ವರ್ಷದೊಳಗಿನ ಮೂರನೇ ಸಂಸತ್ತಿನ ಚುನಾವಣೆಗಳಿಂದ ಅನೇಕ ಇಸ್ರೇಲಿಗಳು ಆಶಿಸುತ್ತಿದ್ದ ಫಲ ದೊರಕಿಲ್ಲ (Manna from heaven ಎಂದು ಸಾಬೀತಾಗಲಿಲ್ಲ). ಮತದಾನ ಮುಗಿದ ಕೆಲವೇ ಗಂಟೆಗಳ ಒಳಗೆ ಜಯ ತನಗೆ ಎಂದು ಹೇಳಿಕೊಂಡಿದ್ದರೂ, ಇಸ್ರೇಲ್‌ನ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪ್ರಧಾನ ಮಂತ್ರಿ ಲಿಕುಡ್ ನಾಯಕ ಬೆಂಜಮಿನ್ ನೆತನ್ಯಾಹು 120 ಸದಸ್ಯರ ಸಂಸತ್ತಿನಲ್ಲಿ (ನೆಸ್ಸೆಟ್), 61ರ ಮ್ಯಾಜಿಕ್ ಸಂಖ್ಯೆಯಿಂದ ದೂರವೇ ಉಳಿದರು. ಆರು ದಶಲಕ್ಷಕ್ಕೂ ಹೆಚ್ಚಿನ ಮತಗಳಲ್ಲಿ ಸುಮಾರು ಶೇಕಡಾ 99 ಎಣಿಕೆಯೊಂದಿಗೆ, ಲಿಕುಡ್ 36 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಶಾಸ್ ಮತ್ತು ಯುನೈಟೆಡ್ ಟೋರಾ ಜುದಾಯಿಸಂ ಒಳಗೊಂಡ ಧಾರ್ಮಿಕ ಗುಂಪು ಕ್ರಮವಾಗಿ ಒಂಬತ್ತು ಮತ್ತು ಏಳು ಸ್ಥಾನಗಳನ್ನು ಪಡೆದುಕೊಂಡಿವೆ. ಬಲಪಂಥೀಯ ಯಮಿನಾಗೆ ಆರು ಸ್ಥಾನಗಳು ಸಿಕ್ಕಿವೆ. ನೇತನ್ಯಾಹು ನೇತೃತ್ವದ ಬಲ-ಧಾರ್ಮಿಕ ಬಣವು 58 ಸ್ಥಾನಗಳನ್ನುಗಳಿಸಿ, ಸರಳ ಬಹುಮತಕ್ಕೆ ಮೂರು ಸ್ಥಾನಗಳ ಕೊರತೆ ಎದುರಿಸಿದೆ. ಎಲ್ಲಾ ಮತಗಳನ್ನು ಎಣಿಸಿದ ನಂತರ ಅಂತಿಮ ಸಂಖ್ಯೆ ಬದಲಾಗಬಹುದಾದರೂ, ನೆತನ್ಯಾಹು ಅವರು ಸರಳ ಬಹುಮತ ಪಡೆಯುವುದು ಅಸಂಭವವಾಗಿದೆ. ಲಿಕುಡ್ ನಿರೀಕ್ಷಿಸಿದ್ದ ಭರ್ಜರಿ ಗೆಲುವು ಸಾಧಿಸಲು ಆರ್ಥಿಕ ಬೆಳವಣಿಗೆ ಮತ್ತು ಅಮೆರಿಕ ಜೊತೆಗಿನ ನಿಕಟ ಸಂಬಂಧಗಳು ಸಾಲದಾಯಿತೆಂದು ಸಾಬೀತಾಗಿದೆ . ...

ಯುರೋಪಿನ ಗಡಿಗಳನ್ನು ಟರ್ಕಿ ತೆರೆಯುವಿಕೆ - ಸಿರಿಯ ನಿರಾಶ್ರಿತರ ಬಿಕ್ಕಟ್ಟಿನ ಉಲ್ಬಣ

ಅನೇಕ ಜೀವಹಾನಿಯಾದ ಮತ್ತು ಯೂರೋಪ್ ಒಕ್ಕೂಟ (EU) ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದ 2015ರ ವಲಸೆ ಬಿಕ್ಕಟ್ಟಿನ ನೆನಪುಗಳು ಟರ್ಕಿಯ ಇತ್ತೀಚಿನ ಕ್ರಮಗಳೊಂದಿಗೆ ಪುನರಾವರ್ತನೆಯಾಗುವಂತೆ ಕಾಣುತ್ತದೆ. ಕಳೆದ ವಾರ, ನಿರಾಶ್ರಿತರಿಗಾಗಿ ಯುರೋಪಿನತ್ತ ತನ್ನ ಗಡಿಯನ್ನು ಅಂಕಾರಾ ತೆರೆಯಿತು. ಟರ್ಕಿಯ ಕ್ರಮವನ್ನು, EU ಜೊತೆಗಿನ 2015-2016ರ ವಲಸೆ ಬಿಕ್ಕಟ್ಟನ್ನು ತಡೆಹಿಡಿದ ಟರ್ಕಿಯ ನಿರಾಶ್ರಿತರ ಒಪ್ಪಂದದ ಉಲ್ಲಂಘನೆ ಎಂದು ಯುರೋಪಿನ ರಾಷ್ಟ್ರಗಳು ಪರಿಗಣಿಸುತ್ತವೆ. ಆದಾಗ್ಯೂ, ನೀಡಿದ್ದ ಭರವಸೆಗಳಿಗೆ EU ಬದ್ಧವಾಗಿಲ್ಲವಾದ್ದರಿಂದ ಹಾಗೂ ತನ್ನ ನಿರಾಶ್ರಿತರ ಪ್ರಮಾಣವನ್ನು ಟರ್ಕಿ ತಲುಪಿರುವುದರಿಂದ, ಯುರೋಪಿನ ದ್ವಾರವನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಟರ್ಕಿಯು ಹೇಳಿದೆ. ಆರು ಬಿಲಿಯನ್ ಡಾಲರ್ ಭರವಸೆಯ ಸಹಾಯವನ್ನು EU ಬಿಡುಗಡೆ ಮಾಡಿಲ್ಲದಿರುವುದು, ಟರ್ಕಿಯೊಂದಿಗೆ ವ್ಯಾಪಾರವನ್ನು ಹೆಚ್ಚಿಸಿಲ್ಲದಿರುವುದು, EUಗೆ ಟರ್ಕಿಯ ಪ್ರವೇಶ ಅಥವಾ ಟರ್ಕಿಯ ನಾಗರಿಕರಿಗಾಗಿ EU ಸದಸ್ಯ ರಾಷ್ಟ್ರಗಳಿಗೆ ವೀಸಾ ರಹಿತ ಪ್ರಯಾಣದ ಕುರಿತು ತ್ವರಿತ ಮಾತುಕತೆ ಮಾಡಿಲ್ಲದಿರುವುದು - ಈ ವಿಷಯಗಳ ಬಗ್ಗೆ ಅಂಕಾರಾ ಆರೋಪಿಸಿದೆ. ಈ ಆರೋಪಗಳನ್ನು EU ನಿರಾಕರಿಸಿದೆ. ವಾಸ್ತವವಾಗಿ, ಟರ್ಕಿಗೆ ನೀಡಬೇಕಿದ್ದ ಸಹಾಯವನ್ನು ಪೂರ್ಣವಾಗಿ ಪಾವತಿಸಲಾಗಿದೆ ಎಂದು ಯುರೋಪಿಯನ್ ಕಮಿಷನ್ ಹೇಳುತ್ತದೆಯಾದರೂ, ಅದನ್ನು ನೇರವಾಗಿ ಟರ್ಕಿ ಸರ್ಕಾರಕ್ಕೆ ನೀಡದೆ, ನಿರಾಶ್ರಿತರ ನೆರವು ಸಂ...

ಬ್ಲೂ ಡಾಟ್ ಉಪಕ್ರಮ - ಇಂಡೋ-ಪೆಸಿಫಿಕ್‌ಗೆ ಹೊಸ ಸಾಧ್ಯತೆಗಳಿಗೆ ಅವಕಾಶ

ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಅವರ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಚರ್ಚೆಗಳಲ್ಲಿ “ಬ್ಲೂ ಡಾಟ್” ನೆಟ್‌ವರ್ಕ್ ಪ್ರಮುಖವಾದ ವಿಷಯವಾಗಿತ್ತು. ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಸಮಾಲೋಚನೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ “ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಸಾಲ ನೀಡುವವರು ಮತ್ತು ಸಾಲ ತೆಗೆದುಕೊಳ್ಳುವವರಿಗಾಗಿ ಸರ್ಕಾರೀ ಸಾಲ ಬೆಳೆಯುವುದನ್ನು ತಡೆಹಿಡಿಯಲು, ಜವಾಬ್ದಾರಿಯುತ, ಪಾರದರ್ಶಕ ಮತ್ತು ಸುಸ್ಥಿರ ಹಣಕಾಸು ಅಭ್ಯಾಸಗಳನ್ನು ಖಾತ್ರಿಪಡಿಸುವುದು ಮುಖ್ಯ ಎಂದು ಅಮೆರಿಕ ಮತ್ತು ಭಾರತ ಗುರುತಿಸಿವೆ. ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಗೆ ಉನ್ನತ-ಗುಣಮಟ್ಟದ ವಿಶ್ವಾಸಾರ್ಹ ಮಾನದಂಡಗಳನ್ನು ಉತ್ತೇಜಿಸಲು, ಸರ್ಕಾರ, ಖಾಸಗಿ ವಲಯ ಮತ್ತು ನಾಗರಿಕ ಸಮಾಜವನ್ನು ಒಟ್ಟಿಗೆ ತರುವ ಬಹು-ಪಾಲುದಾರರ ಉಪಕ್ರಮವಾದ ಬ್ಲೂ ಡಾಟ್ ನೆಟ್‌ವರ್ಕ್ ಪರಿಕಲ್ಪನೆಯಲ್ಲಿ ಶ್ರೀಟ್ರಂಪ್ ಮತ್ತು ಭಾರತೀಯ ಪ್ರಧಾನಿ ಆಸಕ್ತಿ ವ್ಯಕ್ತಪಡಿಸಿದರು” ವ್ಯಕ್ತವಾಗಿದೆ. ಭಾರತವು ಬ್ಲೂ ಡಾಟ್ ನೆಟ್‌ವರ್ಕ್‌ಗೆ ಸೇರುವ ಸಾಧ್ಯತೆಯನ್ನೂ ಪರಿಗಣಿಸುತ್ತಿದೆ. ಸ್ಪಷ್ಟವಾಗಿ ಹೇಳುವುದಾದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ, ವಿದೇಶಿ-ಅನುದಾನಿತ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್...

ಅಮೆರಿಕ-ಅಫ್ಘಾನಿಸ್ತಾನ ಶಾಂತಿ-ಒಪ್ಪಂದ: ಭರವಸೆ ಅಥವಾ ಭಯ?

ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಅಮೆರಿಕಾ ಮತ್ತು ತಾಲಿಬಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಎರಡು ದಿನಗಳ ನಂತರ, ಅಫ್ಘಾನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಪಡೆಗಳ (ANDSF) ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ತಾಲಿಬಾನ್ ಘೋಷಿಸಿತು. ಒಂಬತ್ತು ಸುತ್ತಿನ ಚರ್ಚೆಗಳ ನಂತರ, ಕತಾರ್‌ನ ದೋಹಾದಲ್ಲಿ ಅಮೆರಿಕಾ ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್ಜಾದ್ ಮತ್ತು ತಾಲಿಬಾನ್ ಉಪನಾಯಕ ಮುಲ್ಲಾ ಅಬ್ದುಲ್ ಘನಿ ಬಿರಾದಾರ್ ನಡುವೆ ಬಹುನಿರೀಕ್ಷಿತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಶಾಂತಿ ಒಪ್ಪಂದವು ನಾಲ್ಕು ಪ್ರಮುಖ ಅಂಶಗಳನ್ನು ಹೊಂದಿದೆ: ಕದನ ವಿರಾಮ, ವಿದೇಶಿ ಪಡೆಗಳನ್ನು ಹಿಂತೆಗೆದುಕೊಳ್ಳುವುದು, ಒಳ-ಅಫಘಾನ್ ಮಾತುಕತೆಗಳು ಮತ್ತು ಭಯೋತ್ಪಾದನೆ ನಿಗ್ರಹದ ಭರವಸೆಗಳು. ಒಪ್ಪಂದದ ಪ್ರಕಾರ, 135 ದಿನಗಳಲ್ಲಿ ಅಮೆರಿಕಾ ಹೆಜ್ಜೆಗುರುತನ್ನು 8,600ಕ್ಕೆ ಇಳಿಸುವ ಗುರಿಯೊಂದಿಗೆ 10 ದಿನಗಳೊಳಗೆ ತನ್ನ ಪಡೆಗಳು ಹಿಂದೆ ಸರಿಯಲು ಪ್ರಾರಂಭಿಸುತ್ತವೆ ಎಂದು ಒಪ್ಪಿಕೊಂಡಿದೆ. ಅಫ್ಘಾನಿಸ್ತಾನದಿಂದ ಅಮೆರಿಕಾ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು 14 ತಿಂಗಳ ಕಾಲಮಿತಿಯನ್ನು ಈ ಒಪ್ಪಂದವು ನೀಡುತ್ತದೆ. ಅದೇ ಸಮಯದಲ್ಲಿ, ಮಾರ್ಚ್ 20ರೊಳಗೆ 5,000 ತಾಲಿಬಾನ್ ಕೈದಿಗಳ ಬಿಡುಗಡೆ ಕೋರಿ ತಾಲಿಬಾನನ್ನು ತಕ್ಷಣ ಮತ್ತು ಗಣನೀಯವಾಗಿ ಬಲಪಡಿಸಲು ಅಮೆರಿಕ ಸಹ ಒಪ್ಪಿದೆ. ಇದಲ್ಲದೆ, ನಂತರದ ಮೂರು ತಿಂಗಳ ...

ಭಾರತ ಮತ್ತು ಬಾಂಗ್ಲಾದೇಶ: ದ್ವಿಪಕ್ಷೀಯ ಸಂಬಂಧಗಳ ವರ್ಧನೆ

ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರ ಡಾಕಾ ಭೇಟಿಯು, ಭಾರತವು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿರುವ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶದ ಪ್ರಸ್ತುತ ಅವಾಮಿ ಲೀಗ್ ಸರ್ಕಾರದ ಅಡಿಯಲ್ಲಿ, ದ್ವಿಪಕ್ಷೀಯ ಸಂಬಂಧವು ವಿಶೇಷವಾದ ಉತ್ತೇಜನವನ್ನು ಪಡೆದಿದೆ. ಶ್ರೀ ಶ್ರಿಂಗ್ಲಾ ಅವರ ಭೇಟಿ ಮಹತ್ವದ್ದಾಗಿದೆ. ಏಕೆಂದರೆ 2019ರ ಜನವರಿವರೆಗೂ ಡಾಕಾದಲ್ಲಿ ಬಾಂಗ್ಲಾದೇಶದ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಮುಂದೆ ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿನ ಆಂತರೀಕಾ ಬೆಳವಣಿಗೆಗಳ ಬಗ್ಗೆ ಡಾಕಾ ಕಳವಳಗೊಂಡು, ಅದು ತನ್ನ ನೆಲದ ಮೇಲೆ ಪ್ರಭಾವ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಆದರೆ, ಭಾರತದ ಬೆಳವಣಿಗೆಗಳು ಬಾಂಗ್ಲಾದೇಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಡಾಕಗೆ ಭರವಸೆ ನೀಡಿದ್ದು, ಡಾಕಾಗೆ ಅಧಿಕೃತ ಮಟ್ಟದಲ್ಲಿ ಇದನ್ನು ವಿವರಿಸಲಾಗಿದೆ. ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಲು ಈ ತಿಂಗಳ ಮಧ್ಯದಲ್ಲಿ ಪ್ರಧಾನಿ ಮೋದಿಯವರು ನೀಡುತ್ತಿರುವ ಭೇಟಿಗೆ ವೇದಿಕೆ ಸಿದ್ಧಪಡಿಸುವುದು ವಿದೇಶಾಂಗ ಕಾರ್ಯದರ್ಶಿಯ ಭೇಟಿಯ ಮುಖ್ಯ ಕಾರಣವಾಗಿದೆ. ಶೇಖ್ ಮುಜಿಬುರ್ ರಹಮಾನ್ ಕೂಡ ನಮ್ಮ ರಾಷ್ಟ್ರೀಯ ನಾಯಕ ಎಂ...

ಮ್ಯಾನ್ಮಾರ್‌ ಜೊತೆಗಿನ ಭಾರತದ ಒಪ್ಪಂದಗಳಲ್ಲಿ ಪ್ರಗತಿ

ಮ್ಯಾನ್ಮಾರ್ ಗಣರಾಜ್ಯದ ಅಧ್ಯಕ್ಷರಾದ ಯು ವಿನ್ ಮೈಂಟ್ ಭಾರತಕ್ಕೆ ಭೇಟಿ ನೀಡಿದ್ದರು. ಮ್ಯಾನ್ಮಾರ್ ಭಾರತದ “ಆಕ್ಟ್ ಈಸ್ಟ್” ಮತ್ತು ‘ನೆರೆಹೊರೆಯವರಿಗೆ ಮೊದಲು’ ಎಂಬ ನೀತಿಗಳಲ್ಲಿ ನಿರ್ಣಾಯಕವಾದ ದೇಶ‌. ಆಗ್ನೇಯ ಏಷ್ಯಾದೊಂದಿಗೆ ವ್ಯಾಪಕವಾದ ಆರ್ಥಿಕ ಮತ್ತು ಕಾರ್ಯತಂತ್ರದ ಸಂಪರ್ಕಗಳನ್ನು ಅಭಿವೃದ್ಧಿಪಡಿಸುವುದು ಪ್ರಾಥಮಿಕ ಗುರಿಯಾಗಿರುವುದರಿಂದ ಭಾರತಕ್ಕೆ ಸಿಎಲ್‌ಎಂವಿ (ಕಾಂಬೋಡಿಯಾ, ಲಾವೊ ಪಿಡಿಆರ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂ) ದೇಶಗಳೊಂದಿಗೆ ವ್ಯವಹರಿಸಲು ಈ ಭೇಟಿ ಬಹಳ ಮಹತ್ವದ್ದಾಗಿದೆ. ಅಧ್ಯಕ್ಷ ಯು ವಿನ್ ಮೈಂಟ್ ಅವರನ್ನು ವಿಧ್ಯುಕ್ತವಾಗಿ ಸ್ವಾಗತಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬಳಿಕ ವಿನ್ ಮೈಂಟ್ ಜೊತೆ ಚರ್ಚಿಸಿದರು. ಪ್ರಧಾನಿ ನರೇಂದ್ರ ಮೋದಿ ಮ್ಯಾನ್ಮಾರ್ ಅಧ್ಯಕ್ಷರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಉಭಯ ನಾಯಕರು ಪರಸ್ಪರ ಕಾಳಜಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಉನ್ನತ ಮಟ್ಟದ ಭೇಟಿ ವೇಳೆ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ದೃಷ್ಟಿಯಿಂದ ಹತ್ತು ಎಂಓಯು ಮತ್ತು ಇತರೆ ಕೆಲ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಮ್ಯಾನ್ಮಾರ್ ದೇಶದ ರಾಖೈನ್ ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ. ರಾಖೈನ್ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಎರಡೂ ದೇಶಗಳು ಮ್ರೌಕ್ ಓ ಟೌನ್‌ಶಿಪ್ ಆಸ್ಪತ್ರೆಯಲ್ಲಿ ಇನ್ಸಿರೇಟರ್ ನಿರ್ಮಾಣ ಮಾಡಲು, ಬೀಜ ಸಂಗ್ರಹ...

ಕೊರೋನವೈರಸ್ ಸಾಂಕ್ರಾಮಿಕದಿಂದ ಬಳಲುತ್ತಿರುವ ಪ್ರಪಂಚ

ಮನುಷ್ಯರಲ್ಲಿ ಈ ಹಿಂದೆ ಗುರುತಿಸಲ್ಪಡದೇ ಇದ್ದ ಹೊಸ ಕೊರೊನಾವೈರಸ್ ಜಗತ್ತನ್ನು ವ್ಯಾಪಿಸಿದೆ. ಕೋವಿಡ್ -19 ಎಂಬ ಉಸಿರಾಟದ ಸಮಸ್ಯೆ ಉಂಟುಮಾಡುವ ವೈರಸ್‌ 81,000ಕ್ಕೂ ಹೆಚ್ಚು ಜನರನ್ನು ಬಾಧಿಸುತ್ತಿದೆ. ಸರಿ ಸುಮಾರು 3,000 ಜನ ಈಗಾಗಲೇ ಮೃತಪಟ್ಟಿದ್ದಾರೆ. ಈ ಪೈಕಿ ಅಪಾಯಕಾರಿ ವೈರಲ್ ದಿಢೀರನೇ ಕಾಣಿಸಿಕೊಂಡ ಚೀನಾದಲ್ಲಿ ಪ್ರತಿಶತ 96.5ರಷ್ಟು ಅಂದರೆ 2,800 ಸಾವುಗಳು ಸಂಭವಿಸಿವೆ. ಕೊರೊನಾವೈರಸ್ ಸೋಂಕು ಚೀನಾದ ಹೊರಗಡೆ ಹರಡಿರುವುದಕ್ಕಿಂತ ಹೆಚ್ಚಾಗಿ ದೇಶದೊಳಗಡೆ ವ್ಯಾಪಿಸಿದೆ. ಇದಲ್ಲದೆ ಯುರೋಪ್, ಮಧ್ಯಪ್ರಾಚ್ಯ, ಯುಎಸ್ ಮತ್ತು ಏಷ್ಯಾದಲ್ಲಿ ಉಲ್ಬಣಗೊಂಡಿದೆ. ಈ ಪೈಕಿ 51 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿ ಚೀನಾಕ್ಕೆ ಪ್ರಯಾಣ ಮಾಡಿದ್ದ ಇತಿಹಾಸ ಕಂಡುಬಂದಿಲ್ಲದಿರುವುದು ಅಧ್ಯಯನಗಳಿಂದ ಸ್ಪಷ್ಟವಾಗಿ ದೃಢಪಟ್ಟಿದೆ. ಲ್ಯಾಟಿನ್ ಅಮೆರಿಕದಲ್ಲೂ ಈ ರೀತಿಯಾಗಿದ್ದು ಬ್ರೆಜಿಲ್ ಮೊದಲ ಪ್ರಕರಣವನ್ನು ದೃಢಪಡಿಸಿದೆ. ಚೀನಾದ ಹೊರಗೆ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿರುವ ಮೂರು ಪ್ರಮುಖ ಸ್ಥಳಗಳ ಪೈಕಿ ಇರಾನ್‌ನಲ್ಲಿ 245 ಜನರಿಗೆ ಸೋಂಕು ತಗುಲಿದ್ದು 26 ಜನ ಸಾವಿಗೀಡಾಗಿದ್ದಾರೆ. ಇರಾನ್‌ ಉಪಾಧ್ಯಕ್ಷ ಮಸೌಮೆಹ್ ಎಬ್ಟೆಕರ್ ಮತ್ತು ಉಪ ಆರೋಗ್ಯ ಸಚಿವ ಇರಾಜ್ ಹರಿರ್ಚಿ ಕೂಡ ಸೋಂಕಿಗೆ ಒಳಗಾಗಿದ್ದು, ಅವರೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇಟಲಿಯಾದ್ಯಂತ ಸುಮಾರು 400 ಜನರು ಈ ಸೋಂಕಿಗೆ ತುತ್ತಾಗಿದ್ದಾರೆಂದು ವರದಿಯಾಗಿದೆ, ಅದರಲ್ಲಿ 12 ಜನರು...