Posts

Showing posts from December, 2019

ಭಾರತದ ವಿದೇಶಿ ವಿನಿಮಯದಲ್ಲಿ ಹೆಚ್ಚಳ

ಭಾರತದ ವಿದೇಶಿ ವಿನಿಮಯ (ಫೋರೆಕ್ಸ್) ನಿಕ್ಷೇಪಗಳು ಈಗ ಪ್ರವರ್ಧಮಾನಕ್ಕೆ ಬಂದಿವೆ ಹಾಗೂ 2019ರ ಡಿಸೆಂಬರ್ 20ರ ವೇಳೆಗೆ ಅವು ಸಾರ್ವಕಾಲಿಕ ಗರಿಷ್ಠ ಮಟ್ಟ 455 ಯುಎಸ್ ಬಿಲಿಯನ್ ಡಾಲರ್ ತಲುಪಿವೆ. ಇದು 2019ರ ಮಾರ್ಚ್ ತಿಂಗಳು ದಾಖಲಾಗಿದ್ದ 412 ಯುಎಸ್ ಬಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ. ನಿಕ್ಷೇಪಗಳು ಬೆಳವಣಿಗೆ ಕಾಣಲು ಮುಖ್ಯ ಕಾರಣವೆಂದರೆ “ವಿದೇಶಿ ಕರೆನ್ಸಿ ಸ್ವತ್ತುಗಳು(ಎಫ್ ಸಿ ಎ)” ಎಂಬ ಅಂಶ. 2019ರ ಮಾರ್ಚ್‌ಗೆ ಹೋಲಿಸಿದರೆ ಇದು ಶೇಕಡಾ 10ರಷ್ಟು ಹೆಚ್ಚಾಗಿದೆ. ವಿದೇಶಿ ಕರೆನ್ಸಿ ಸ್ವತ್ತುಗಳು ಬಹಳ ಮುಖ್ಯವಾಗಿ ಯುಎಸ್ ಡಾಲರ್, ಯುರೋ, ಪೌಂಡ್ ಸ್ಟರ್ಲಿಂಗ್, ಜಪಾನೀಸ್ ಯೆನ್ ಮತ್ತಿತರ ಕರೆನ್ಸಿಗಳ ರೀತಿ ಬಹು-ಕರೆನ್ಸಿ ಬಂಡವಾಳವಾಗಿ ಮಾರ್ಪಟ್ಟಿರುತ್ತವೆ.‌ ಇವು ಯುಎಸ್ ಡಾಲರ್ ಮೂಲಕ ಅಳೆಯಲ್ಪಡುತ್ತವೆ. ಆರ್‌ಬಿಐ ವರದಿಯ ಪ್ರಕಾರ, "ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಿನ ವ್ಯತ್ಯಾಸಗಳು (ಎಫ್‌ಸಿಎ) ಮುಖ್ಯವಾಗಿ ಆರ್‌ಬಿಐ ಆದಾಯದಿಂದ ಖರೀದಿ ಮಾಡಿದ ಮತ್ತು ಮಾರಾಟ ಮಾಡಿದ ವಿದೇಶಿ ವಿನಿಮಯದ ಮೂಲಕ ಸಂಭವಿಸುತ್ತವೆ. ವಿದೇಶಿ ವಿನಿಮಯ ನಿಕ್ಷೇಪಗಳ ಮೂಲಕ ಹೊರಗಿನಿಂದ ಬರುವ ಸಹಾಯಗಳು ಕೇಂದ್ರ ಸರ್ಕಾರದ ರಶೀದಿಗಳಲ್ಲಿ ಮತ್ತು ಸ್ವತ್ತುಗಳ ಮರುಮೌಲ್ಯಮಾಪನದಲ್ಲಿ ಬದಲಾವಣೆಗಳನ್ನು ತರುತ್ತವೆ". ಎಫ್‌ಸಿಎ ಹೊರತುಪಡಿಸಿ, ವಿದೇಶಿ ವಿನಿಮಯದ ಇತರ ಮೂರು ಘಟಕಗಳೆಂದರೆ ಚಿನ್ನ, ಎಸ್‌ಡಿಆರ್ (ಸ್ಪೆಷಲ್ ಡ್ರಾಯಿಂಗ್ ರೈಟ್ಸ್) ಹ...

ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ

ರಾಷ್ಟ್ರಪತಿ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಯುದ್ಧದಿಂದ ಹಾನಿಗೊಳಗಾಗಿರುವ ಅಫ್ಘಾನಿಸ್ತಾನ ದೇಶವು ಮತ್ತೊಂದು ಮೈಲಿಗಲ್ಲನ್ನು ದಾಟಿದಂತಾಗಿದೆ. ದೇಶದಲ್ಲಿ ಈಗ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಫ್ಘಾನಿಸ್ತಾನ ಹಾಲಿ ಅಧ್ಯಕ್ಷ ಅಶ್ರಫ್ ಘನಿ ಅವರು ಮರು ಆಯ್ಕೆ ಆಗಿರುವುದನ್ನು ಅಲ್ಲಿನ ಸ್ವತಂತ್ರ ಚುನಾವಣಾ ಆಯೋಗ ಪ್ರಕಟಿಸಿದೆ.‌ ಅಶ್ರಫ್ ಘನಿ ಅವರು ಶೇಕಡಾ 50.46ರಷ್ಟು ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಅಶ್ರಫ್ ಘನಿ ಅವರ ಪ್ರತಿಸ್ಪರ್ಧಿ ಮಾಜಿ ವಿದೇಶಾಂಗ ಸಚಿವ ಡಾ. ಅಬ್ದುಲ್ಲಾ ಅಬ್ದುಲ್ಲಾ 2,00,000ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ನಾಗರಿಕ ಆಡಳಿತದ ಪ್ರಾಬಲ್ಯವನ್ನು ಸ್ಥಾಪಿಸಲು ಪಡಿಪಾಟಲು ಪಡುತ್ತಿರುವ ದೇಶದಲ್ಲಿ ತಾಲಿಬಾನಿನ ಬುದ್ದಿಹೀನ ಅಫ್ಘಾನಿಸ್ತಾನಿಯರು ಹಿಂಸಾಚಾರ ನಡೆಸುತ್ತಿರುವುದರ ನಡುವೆಯೂ ಚುನಾವಣಾ ವಂಚನೆಯ ಸಾಧ್ಯತೆಗಳನ್ನು ನಿವಾರಿಸುವಲ್ಲಿ ಅಫ್ಘಾನಿಸ್ತಾನದ ಸ್ವತಂತ್ರ ಚುನಾವಣಾ ಆಯೋಗವು ಸಾಕಷ್ಟು ಸೂಕ್ಷ್ಮವಾಗಿ ವರ್ತಿಸಿದೆ. ಇದರ ಪರಿಣಾಮವಾಗಿ ಬಯೋಮೆಟ್ರಿಕ್ ಪರೀಕ್ಷೆಗಳಲ್ಲಿ ವಿಫಲವಾದ ಹಲವು ಸಾವಿರ ಮತದಾರರನ್ನು ಅನರ್ಹಗೊಳಿಸಲಾಯಿತು. ಇದಲ್ಲದೆ ಇನ್ನೂ ಹಲವಾರು ದೂರುಗಳು ಬಂದಿದ್ದು ಅವೆಲ್ಲವುಗಳನ್ನು ಪರಿಶೀಲನೆ ನಡೆಸುವುದಾಗಿ ಸ್ವತಂತ್ರ ಚುನಾವಣಾ ಆಯೋಗವು ಭರವಸೆ ನೀಡಿದೆ. ಈ ಚುನಾವಣಾ ಪ್ರಕ್ರಿಯೆಯು ಇನ್ನೂ ಹಲವು ವಾರಗಳು ಅಥವಾ ಕೆಲವು ತಿಂ...

ಪರ್ವತಾರೋಹಣದ ನಿಯಮ ಬಿಗಿಗೊಳಿಸಿದ ನೇಪಾಳ್

ವಿಶ್ವದ ಅತಿ ಎತ್ತರದ ಶಿಖರವನ್ನು ಹೊಂದಿರುವ ನೇಪಾಳವು ತನ್ನ ದೇಶದ 8,848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತಾರೋಹಣದಿಂದ ಪ್ರತಿವರ್ಷ ಉತ್ತಮ ಆದಾಯವನ್ನು ಗಳಿಸುತ್ತಿದೆ. ಈ ನಡುವೆ ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ಪರ್ವತಾರೋಹಣ ನಡೆಯುತ್ತಿದ್ದ ಸಂದರ್ಭದಲ್ಲಿ ಅತಿ ಹೆಚ್ಚು, ಅಂದರೆ 11 ಸಾವುಗಳು ಘಟಿಸಿವೆ. ಇಲ್ಲಿ 2015ರಲ್ಲಿ ಹೆಚ್ಚಿನ ತೀವ್ರತೆಯ ಭೂಕಂಪನ ಇಡೀ ಹಿಮಾಲಯನ್ ಪ್ರದೇಶವನ್ನು ಅಪ್ಪಳಿಸಿದಾಗ 22 ಸಾವುಗಳು ಸಂಭವಿಸಿದ್ದವು. ಏಪ್ರಿಲ್ 25ರಂದು ಹಿಮಪಾತವಾಗಿ ಹೆಚ್ಚಿನ ಸಂಖ್ಯೆಯ ಪರ್ವತಾರೋಹಿಗಳು ಸಾವನ್ನಪ್ಪಬೇಕಾಯಿತು. ಈ ವರ್ಷ 800ಕ್ಕೂ ಹೆಚ್ಚು ಪರ್ವತಾರೋಹಿಗಳು ಶಿಖರವನ್ನು ಏರಲು ಪ್ರಯತ್ನಿಸಿದರು, ಆ ಪೈಕಿ ಹೆಚ್ಚಿನ ಸಂಖ್ಯೆಯ ಜನರು 8,000 ಮೀಟರ್‌ಗಿಂತಲೂ ಮೇಲೇರಿ “ಸಾವಿನ ವಲಯ” ಎಂದು ಕರೆಯಲ್ಪಡುವ ಸರತಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು. ಪ್ರತಿಯೊಬ್ಬರೂ ಅಲ್ಪಾವಧಿಯ ಸೂಕ್ತ ಹವಾಮಾನ ವಿಂಡೋ ಮೂಲಕ ಶಿಖರವನ್ನು ತಲುಪಿಬಿಡುವ ಅಭಿಲಾಷೆ ಹೊಂದಿದ್ದರು. ಆದರೆ ಅಲ್ಲಿ ಎತ್ತರ ತಲುಪಿದ ಬಳಿಕ ಆಗುವ ಸಹಜ ಸಮಸ್ಯೆಗಳಿಂದಾಗಿ ಸಾವು ಕಾಣಬೇಕಾಗಯತ್ತಿತ್ತು. ನೇಪಾಳ ಸರ್ಕಾರದ ಪ್ರಕಾರ ಈ ವರ್ಷದ ಮೇ 22ರಂದು ಒಂದೇ ದಿನದಲ್ಲಿ 223 ಪರ್ವತಾರೋಹಿಗಳು ಶಿಖಿರವನ್ನು ತಲುಪಿದ್ದು, ಹಿಂದೆ 2016ರಲ್ಲಿ 204 ಮಂದಿ ಯಶಸ್ವಿಯಾಗಿ ಪರ್ವತಾರೋಹಣ ಮಾಡಿದ್ದ ದಾಖಲೆಯನ್ನು ಮುರಿದ್ದಾರೆ. ಪ್ರತಿವರ್ಷ ಪರ್ವತಾರೋಹಣದ ಸಮಯದಲ್ಲಿ ಉಂಟಾಗುವ ಜನದಟ್ಟಣೆಯ ಬ...

ನೀರು ನಿರ್ವಹಣೆಯಲ್ಲಿ ಭಾರತದ ಪವಿತ್ರವಾದ ನಡೆ

ಲಕ್ಷಾಂತರ ಜನರಿಗೆ ನೀರಿನ ಬವಣೆಯಿಂದ ಮುಕ್ತಿ ನೀಡಲು ಭಾರತ ಸರ್ಕಾರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಮಹತ್ವಾಕಾಂಕ್ಷೆಯ ನೀರು ನಿರ್ವಹಣಾ ಯೋಜನೆಯಾದ ‘ಅಟಲ್ ಭುಜಲ್ ಯೋಜನೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ದೃಢ ನಿರ್ಧಾರವನ್ನು ಕೈಗೊಂಡಿದೆ‌. ವಾಸ್ತವವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು "ಜಲ ಶಕ್ತಿ" ಸಚಿವಾಲಯವನ್ನು ರಚಿಸಿದಾಗ ನೀರಿನ ಬಿಕ್ಕಟ್ಟನ್ನು‌ ಭಾರತವು ಹೇಗೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಪ್ರಪಂಚವೇ ಕುತೂಹಲದಿಂದ ನೋಡಿತ್ತು. ನೀರಿನ ವಿಷಯವನ್ನು ಇತರೆ ವಿಭಾಗೀಕರಿಸಲಾದ ವಿಷಯಗಳಿಂದ ಬೇರ್ಪಡಿಸಿ ಸಮಗ್ರಗೊಳಿಸಿರುವುದು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಿದೆ. ಜನರ ನಿರೀಕ್ಷೆಗಳು ಹಾಗೂ ಆಕಾಂಕ್ಷೆಗಳಿಗೆ ಅನುಗುಣವಾಗಿ ದೇಶದ ಸಮಸ್ಯೆಗಳನ್ನು ಪರಿಹರಿಸದೇ ಇದ್ದರೆ ಹೊಸ ಭಾರತದ ದೃಷ್ಟಿ ಫಲಪ್ರದವಾಗಿ ಪರಿಣಮಿಸುವುದಿಲ್ಲ. ಅಟಲ್ ಭುಜಲ್ ಯೋಜನೆ ಗುಜರಾತ್, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ 78 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಸಮಸ್ಯೆಯನ್ನು ಪರಿಹರಿಸಲಿದೆ. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಪರ್ಯಾಯ ಬೆಳೆಗಳ ಅಗತ್ಯತೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕೂಡ ಸಹಾಯ ಮಾಡುತ್ತದೆ. ಭಾರತದ ಕೃಷಿ ಕ್ಷೇತ್ರವು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಕೆಯ ಮೂಲಕ ನಡೆಸುವ ನ...

ಬಲವಾದ ಭಾರತ ಮತ್ತು ಓಮನ್ ಕಾರ್ಯತಂತ್ರದ ಒಪ್ಪಂದಗಳು

ಓಮನ್ ದೇಶವು ತನ್ನ ದೊಡ್ಡ ಹಾಗೂ ಹೆಚ್ಚು ಶ್ರೀಮಂತ ನೆರೆಹೊರೆಯ ದೇಶಗಳಿಗೆ ಹೋಲಿಸಿಕೊಂಡರೆ ಕಡಿಮೆ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ಗಮನವನ್ನು ಸೆಳೆಯುತ್ತದೆ; ಆದರೆ ಇದು ಭಾರತದ ನೆರೆಹೊರೆಯಲ್ಲಿ ಪರ್ಷಿಯನ್ ಕೊಲ್ಲಿಗೆ ಹೊಂದಿಕೊಂಡಂತಿರುವ ತನ್ನ ಕಾರ್ಯತಂತ್ರದ ಸ್ಥಳವನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಬಹಳ ವರ್ಷಗಳವರೆಗೆ ಆಂತರಿಕ ಅಡಚಣೆಗಳು ಹಾಗೂ ಆರ್ಥಿಕ ಅಭಿವೃದ್ಧಿಯ ಕೊರತೆಯಿಂದಾಗಿ ಬಳಲುತ್ತಿದ್ದ ಈ ದೇಶವು ಸುಲ್ತಾನ್ ಕಬೂಸ್ ಅವರ ನಾಯಕತ್ವದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡಿದೆ. ಸುಲ್ತಾನ್ ಅವರು 1970ರಿಂದ ಓಮನ್ ದೇಶವನ್ನು ಮುನ್ನಡೆಸುತ್ತಿದ್ದಾರೆ. ಜನರ ಕಲ್ಯಾಣಕ್ಕಾಗಿ ತೈಲ ಸಂಪತ್ತನ್ನು ಆದಾಯ ಮೂಲವಾಗಿಸಿದ ಪರಿಣಾಮ ಆರ್ಥಿಕ ಪ್ರಗತಿಯಾಗಿದೆ ಮತ್ತು ದೇಶ ಸಮೃದ್ಧ ಗೊಂಡಿದೆ. ಸುಲ್ತಾನ್ ಕಬೂಸ್ ಅವರ ನಾಯಕತ್ವದಲ್ಲಿ ಒಮಾನ್ ತನ್ನ ನೆರೆಹೊರೆಯ ದೇಶಗಳೊಂದಿಗೆ ಸಮತೋಲಿತ ಸಂಬಂಧವನ್ನು ಉಳಿಸಿಕೊಂಡಿದೆ. ಹಾಗೂ ಸಮಸ್ಯೆ ಇದ್ದ ಕೊಲ್ಲಿ ಪ್ರದೇಶದಲ್ಲಿ ಪ್ರಮುಖ ಪ್ರಾದೇಶಿಕ ಪಾತ್ರವನ್ನು ವಹಿಸುತ್ತಿದೆ‌‌. ಪ್ರಾದೇಶಿಕ ಉದ್ವಿಗ್ನತೆಯನ್ನು ಹರಡುವುದನ್ನು ತಡೆಯಲು ಹಾಗೂ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗವನ್ನು ಒದಗಿಸುವಲ್ಲಿಯೂ ಕೂಡ ಒಮಾನ್‌ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂಬುದು ಗಮನಾರ್ಹವಾದ ವಿಷಯವಾಗಿದೆ. ಒಮಾನ್‌ ದೇಶದ ಮಹತ್ವವನ್ನು ಭಾರತ ಗುರುತಿಸಿದೆ. ಹಾಗೂ ಕಳೆದ ಕೆಲವು ದಶಕಗಳ...

19ನೇ ಭಾರತ-ಇರಾನ್ ಜಂಟಿ ಆಯೋಗದ ಸಭೆ

ಉಭಯ ದೇಶಗಳ ಜಂಟಿ ಆಯೋಗದ ಸಭೆಯ 19ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಇರಾನ್‌ಗೆ ಭೇಟಿ ನೀಡಿದ್ದರು. ಭಾರತ ಮತ್ತು ಇರಾನ್‌ ವಿದೇಶಾಂಗ ಸಚಿವರ ಸಹ-ಅಧ್ಯಕ್ಷತೆಯಲ್ಲಿರುವ ಜಂಟಿ ಆಯೋಗವು ಈ ಎರಡು ಸ್ನೇಹಪರ ರಾಷ್ಟ್ರಗಳ ನಡುವಿನ ಆಳವಾದ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯವಿಧಾನವಾಗಿದೆ. ಡಾ. ಜೈಶಂಕರ್ ಅವರು ಭೇಟಿಯ ಸಂದರ್ಭದಲ್ಲಿ ಇರಾನ್ ಅಧ್ಯಕ್ಷ ಡಾ. ಹಸನ್ ರೂಹಾನಿ ಅವರನ್ನು ಭೇಟಿ ಮಾಡಿ ಜಂಟಿ ಆಯೋಗದ ಸಭೆಯಲ್ಲಿನ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಇರಾನ್ ದೇಶದ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ರಿಯರ್ ಅಡ್ಮಿರಲ್ ಅಲಿ ಶಮ್ಖಾನಿ ಹಾಗೂ ರಸ್ತೆಗಳು ಮತ್ತು ನಗರಾಭಿವೃದ್ಧಿ ಸಚಿವ ಮೊಹಮ್ಮದ್ ಎಸ್ಲಾಮಿ ಅವರನ್ನು ಕೂಡ ಭೇಟಿ ಮಾಡಿದರು.   ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನಿರಂತರವಾಗಿ ನಡೆಯುತ್ತಿದ್ದ ವ್ಯವಹಾರ ಸ್ಥಗಿತಗೊಂಡು ಇರಾನ್ ದೇಶವು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲಿ ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಭೆಗಳನ್ನು‌ ಆಯೋಜಿಸಲಾಗಿದೆ. ಇರಾನ್ ಜೊತೆ ಪರಮಾಣು ಒಪ್ಪಂದದಿಂದ ಯುಎಸ್ ಏಕಪಕ್ಷೀಯವಾಗಿ ಹಿಂದೆ ಸರಿದಿದೆ. ಇರಾನ್ ಮೇಲೆ ಕಠಿಣ ಆರ್ಥಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ಹೇರುವ ದೃಷ್ಟಿಯಿಂದಲೇ ಯುಎಸ್ ಇಂಥ ನಿಲುವಿಗೆ ಬಂದಿದೆ ಎಂಬು...

ಭಾರತ-ಚೀನಾ 22ನೇ ವಿಶೇಷ ಪ್ರತಿನಿಧಿಗಳ ಮಾತುಕತೆಯಲ್ಲಿ ಪ್ರಗತಿ

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೊತೆ ಗಡಿ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಉದ್ದೇಶದಿಂದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ್ದರು. ಅಲ್ಲದೆ ವಾಂಗ್ ಅವರು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನೂ ಭೇಟಿ ಮಾಡಿದ್ದರು. ಕೆಲವು ಅಂಶಗಳಿಂದಾಗಿ ಈ ಬಾರಿಯ ವಿಶೇಷ ಪ್ರತಿನಿಧಿಗಳ ಮಾತುಕತೆಯು ಗಮನಾರ್ಹವಾಗಿತ್ತು. ಭಾರತದ ಪ್ರಧಾನಿ ಮತ್ತು ಚೀನಾ ಅಧ್ಯಕ್ಷರು ತಮ್ಮ 2ನೇ ಅನೌಪಚಾರಿಕ ಶೃಂಗಸಭೆಯನ್ನು ಚೆನ್ನೈ ಬಳಿಯ ಮಾಮಲ್ಲಾಪುರದಲ್ಲಿ 2019ರ ಅಕ್ಟೋಬರ್‌ನಲ್ಲಿ ನಡೆಸಿದ್ದರು. ಶೃಂಗಸಭೆಯ ಕೊನೆಯಲ್ಲಿ ಉಭಯ ನಾಯಕರು ಎರಡೂ ದೇಶಗಳ ನಡುವೆ ಹೆಚ್ಚಿನ ವಿಶ್ವಾಸ ಮೂಡಿಸುವಂತಹ ಕ್ರಮಗಳನ್ನು (ಸಿಬಿಎಂ) ರೂಪಿಸಿದರೆ ಗಡಿಗಳು ಶಾಂತವಾಗಿರುತ್ತವೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಎರಡೂ ದೇಶಗಳ ನಾಯಕತ್ವವು "ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿ ಮತ್ತು ಗಡಿ ಪ್ರಶ್ನೆಯ ಇತ್ಯರ್ಥಕ್ಕೆ ಹೊಸ ದೃಷ್ಟಿ ಮತ್ತು ಕಾರ್ಯತಂತ್ರವನ್ನು ಅನುಸರಿಸುತ್ತಿವೆ" ಎಂದು ಎನ್ಎಸ್ಎ ಅಜಿತ್ ದೋವಲ್ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. "ಭಾರತ ಮತ್ತು ಚೀನಾ ದೇಶಗಳು ನಿರ್ವಹಣಾ ನಿಯಮಗಳನ್ನು ರೂಪಿಸಲು ಒಪ್ಪಿಕೊಂಡಿವೆ ಮತ್ತು ಗಡಿ ಪಡೆಗಳ ನಡುವೆ ಸಂವಹನ ಹಾಗೂ ವಿನಿಮಯವನ್ನು ವೃದ್ಧಿಸಿಕೊಳ್ಳಲು ಅನುಕೂಲ ಆಗುವಂತಹ ಗಡಿ ಸಭಾ ಕೇಂದ್ರಗಳನ್ನು ನಿರ್ಮಿಸಲು‌ ಒಪ್ಪಿಕೊಂಡಿವೆ" ಎಂದು ಮಾತುಕತೆಯ ಬಳಿಕ ಚೀನಾ...

ಆರ್ಥಿಕತೆ ವಿಸ್ತರಣೆಯ ಪಥದಲ್ಲಿ - ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಆರ್ಥಿಕತೆಯು ವಿಸ್ತರಣೆಯ ಪಥದಲ್ಲಿದೆ ಎಂದು ಒತ್ತಿ ಹೇಳಿದ್ದಾರೆ. GDPಯ (ಸರಕು ಮತ್ತು ಸೇವಾ ದರ) ಬೆಳವಣಿಗೆಯ ಹಿನ್ನಡೆಯ ಸಂದರ್ಭದಲ್ಲಿ ಸರ್ಕಾರ ಭಾರತೀಯ ಆರ್ಥಿಕತೆಯನ್ನು ಐದು ವರ್ಷದಲ್ಲಿ ಐದು ಟ್ರಿಲಿಯನ್ ಡಾಲರ್ ವಿಸ್ತರಿಸುವುದಕ್ಕೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಸರಕಾರದ ಆರ್ಥಿಕ ನೀತಿಯ ಬಗ್ಗೆ ಈಗಾಗಲೇ ಹಲವಾರು ಆರೋಗ್ಯವರ್ಧಕ ಹೆಜ್ಜೆಗಳನ್ನು ಇಟ್ಟಿದೆಯೆಂದು ಪ್ರಧಾನ ಮಂತ್ರಿಯವರು ಅವರ ನಿಸ್ಸಂದಿಗ್ಧ ಪುನರಾವರ್ತನೆಯಲ್ಲಿ ತಿಳಿಸಿದರು. ಅದು ಮುಂದಿನ ವರ್ಷಗಳಲ್ಲಿ ಪ್ರತಿಫಲವನ್ನು ನೀಡಲಿದೆ ಎಂದು ಪುನರುಚ್ಚರಿಸಿದರು. ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಇಂಡಿಯನ್ ಇಂಡಸ್ಟ್ರಿ ಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡುತ್ತಾ ಭಾರತೀಯ ಆರ್ಥಿಕ ನೀತಿ ಸಂಕುಚಿತಗೊಳ್ಳುತ್ತಿದೆ ಎಂಬ ತಪ್ಪು ಭಾವನೆಯನ್ನು ತಳ್ಳಿಹಾಕಿದರು. GDPಯಾ ಬೆಳವಣಿಗೆ ದರ ಕುಸಿಯುತ್ತಿರುವ ಬಗ್ಗೆ ಹಿಂದಿನ ಹಲವು ತ್ರೈಮಾಸಿಕಗಳಲ್ಲಿ ಬಹಳ ಹೇಳಿಕೆಗಳಿವೆ. ಜಾಗತಿಕ ಆರ್ಥಿಕತೆ ಹಿನ್ನಡೆಯ ಹಿನ್ನೆಲೆಯೂ ಇದಕ್ಕೆ ಕಾರಣವಾಗಿರಬಹುದು. ಅಮೇರಿಕ ಮತ್ತು ಚೀನಾಗಳ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರವು ಭಾರತೀಯ ಆರ್ಥಿಕತೆಯ ಮೇಲೆ ನಿಸ್ಸಂದೇಹವಾಗಿ ಪರಿಣಾಮವಾಗಿದೆ. ಕೆಟ್ಟ ಸಾಲಗಳಿಂದ ಆವೃತಗೊಂಡ ಆರ್ಥಿಕತೆಯನ್ನು ಪ್ರಧಾನ ಮಂತ್ರಿ ಮೋದಿಯವರು ಅಧಿಕಾರ ವಹಿಸಿಕೊಳ್ಳುವಾಗ ಬಳುವಳಿಯಾಗಿ ಪಡೆದ...

ಸೌದಿ-ಕತಾರ್ ಹಿಮದ್ರವನ: ಮೃದುಭಾವಗಳ ಆಟ

40ನೇ ಕೊಲ್ಲಿ ಸಹಕಾರ ಮಂಡಳಿಯ (GCC) ಸುಪ್ರೀಂ ಕೌನ್ಸಿಲ್ ಶೃಂಗಸಭೆಯಿಂದ ಸೌದಿ-ಕತಾರ್ ಸಂಬಂಧ ತಿಳಿಯಾಗುತ್ತಿದೆಯೆಂಬ ಭಾವನೆಗೆ ಆಸ್ಪದ ಕೊಟ್ಟಿದೆ. ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಸೌದಿ ಅರೇಬಿಯಾ, ಈಜಿಪ್ಟ್, UAE ಮತ್ತು ಬಹ್ರೇನ್ ಕ್ವಾರ್ಟೆಟ್, ಕತಾರ್ ಅನ್ನು ದೂಷಿಸಿ ರಾಜತಾಂತ್ರಿಕ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಿತ್ತು. ರಿಯಾದ್‌ನಲ್ಲಿ ನಡೆಯಲಿರುವ 2019ರ GCC ಶೃಂಗಸಭೆಯಲ್ಲಿ ಭಾಗವಹಿಸಲು ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರು ಕತಾರಿ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ಥಾನಿಗೆ ವೈಯಕ್ತಿಕ ಆಹ್ವಾನವನ್ನು ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಕತಾರ್ ತನ್ನ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಬಿನ್ ನಾಸರ್ ಅಲ್ಥಾನಿಯನ್ನು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಳುಹಿಸಿತ್ತು. ಇದು 2017ರಿಂದೀಚೆಗೆ ಕತಾರ್ ನ ಅತ್ಯುನ್ನತ ಪ್ರಾತಿನಿಧ್ಯವಾಗಿದೆ. ಈ ಸಮಯದಲ್ಲಿ ಸೌದಿ ಅರೇಬಿಯಾ ಕತಾರ್ ಅನ್ನು ಅರೇಬಿಯನ್ ಪರ್ಯಾಯ ದ್ವೀಪದಿಂದ ವಿಮುಕ್ತಿಗೊಳಿಸಲು ಬಯಸಿತ್ತು. ಇದನ್ನು ಪೂರೈಸಲು ಕತಾರ್ ಅನ್ನು ಒಂದು ದ್ವೀಪವನ್ನಾಗಿ ಪರಿವರ್ತಿಸಲು 200 ಮೀಟರ್ ಅಗಲದ ‘ಸಾಲ್ವ’ ಕಾಲುವೆಯನ್ನು ಕತಾರ್‌ನ 61 ಕಿ.ಮೀ ಗಡಿಯುದ್ದಕ್ಕೂ ನಿರ್ಮಿಸಲು ಬಯಸಿತ್ತು. ಸೌದಿ-ಕತಾರ್ ಮೃದುವಾದ ನಡವಳಿಕೆಯಿಂದ ಎರಡೂ ದೇಶಗಳ ಪರಸ್ಪರ ಸಂಬಂಧ ಬೆಚ್ಚಗಾಗುತ್ತಿದೆ. ಈ ವರ್ಷದ ಆರಂಭದಲ್ಲಿ, ಸೌದಿ ಅರಾಮ್ಕೊ ತೈಲ ಸೌಲಭ್ಯದ ...

ಎರಡನೇ 2 + 2 ಭಾರತ -ಅಮೇರಿಕಾ ಸಭೆ

ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಮಂತ್ರಿಗಳು ಮತ್ತು ಭಾರತ ಹಾಗೂ ಅಮೆರಿಕದ ಹಿರಿಯ ಅಧಿಕಾರಿಗಳ ನಡುವಿನ ಎರಡನೇ 2 + 2 ಸಭೆ ಈ ವಾರ ವಾಷಿಂಗ್ಟನ್ ಡಿ.ಸಿ ಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈಚರ್ಚೆಯ ಸಮಯದಲ್ಲಿ ಕಾರ್ಯಸೂಚಿಯಲ್ಲಿನ ಪ್ರಮುಖ ಅಂಶಗಳು - ಪ್ರಾದೇಶಿಕ ಭದ್ರತಾ ಪರಿಸರದಲ್ಲಿನ ಪ್ರಮುಖ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ವಿನಿಮಯ, ಭಯೋತ್ಪಾದನೆಯನ್ನು ನಿಭಾಯಿಸುವುದು, ಅಫ್ಘಾನಿಸ್ತಾನವನ್ನು ಸ್ಥಿರಗೊಳಿಸುವುದು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿಯುತ ಮತ್ತು ಸ್ಥಿರವಾದ ಕ್ರಮಕ್ಕೆ ಕೆಲಸ ಮಾಡುವುದು. ಈ ಸಭೆಯ ಅತ್ಯಂತ ಮಹತ್ವದ ಫಲಿತಾಂಶವೆಂದರೆ ಕೈಗಾರಿಕಾ ಭದ್ರತೆಯಲ್ಲಿ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದು; ಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ 2 + 2 ಸಂವಾದದ ಮೊದಲ ಸುತ್ತಿನಲ್ಲಿ, ಉಭಯ ದೇಶಗಳ ಮಿಲಿಟರಿ ಪಡೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ ಅಥವಾ COMCASA ಸಹಿ ಮಾಡಿದ್ದು ಒಂದು ನಿರ್ಣಾಯಕ ನಿರ್ಧಾರ. ಎರಡನೇ ಸುತ್ತಿನ 2 + 2 ರಲ್ಲಿ ಉಭಯ ದೇಶಗಳ ನಡುವಿನ ಆಳವಾದ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಿತು. ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆಯ ಬಗೆಗಿನ ಅಭಿಪ್ರಾಯಗಳ ಒಮ್ಮುಖವನ್ನು ದೃಢವಾಗಿ...

ಭಾರತ-ಪೋರ್ಚುಗಲ್  ನಡುವಣ ಸಂಬಂಧಗಳ ವಿಕಾಸ  

ಪೋರ್ಚುಗೀಸ್ ಪ್ರಧಾನಿ ಶ್ರೀ ಆಂಟೋನಿಯೊ ಕೋಸ್ಟಾ ಅವರು ಮತ್ತೆ ಆಯ್ಕೆಯಾದ ನಂತರ ಯುರೋಪಿನಾಚೆ, ಭಾರತಕ್ಕೆ ಮೊದಲ ದ್ವಿಪಕ್ಷೀಯ ಭೇಟಿಯನ್ನು ನೀಡಿದರು. ಈ ಭೇಟಿ ವಿವಿಧ ಕಾರಣಗಳಿಗಾಗಿ ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ. ಶ್ರೀ ಕೋಸ್ಟಾ ಅವರು ಈವರೆಗೆ ಮೂರು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಅವರ ಜನವರಿ 2017 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಭಾರತವು ಅವರಿಗೆ “ಪ್ರವಾಸಿ ಭಾರತೀಯ ಸಮ್ಮನ್” ಪ್ರಶಸ್ತಿಯನ್ನು ನೀಡಿತು. ಶ್ರೀ ಕೋಸ್ಟಾ ಅವರು ಗಾಂಧಿನಗರದಲ್ಲಿ ನಡೆದ ‘ಸ್ಪಂದನಶೀಲ ಗುಜರಾತ್ ಜಾಗತಿಕ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಿದ್ದರು. ಅದೇ ವರ್ಷದಲ್ಲಿ ಭಾರತೀಯ ಪ್ರಧಾನಿ ಅವರು ಪೋರ್ಚುಗಲ್ ಭೇಟಿಯ ಸಂದರ್ಭ ದಲ್ಲಿ ವ್ಯಾಪಕವಾದ ಸಮಸ್ಯೆಗಳ ಕುರಿತು ಚರ್ಚೆಗಳನ್ನು ನಡೆಸಿದರು ಮತ್ತು ಸಹಕಾರದ ಅಗತ್ಯವಿರುವ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸಿದರು. ಪ್ರಧಾನಿ ಮೋದಿಯವರು ಪೋರ್ಚುಗಲ್‌ನ 65,000 ಭಾರತೀಯರ ಕೊಡುಗೆಗಳನ್ನು ಶ್ಲಾಘಿಸಿದರು ಮತ್ತು ಅವರನ್ನು ಭಾರತದ “ನಿಜವಾದ ರಾಯಭಾರಿಗಳು” ಎಂದು ಕರೆದರು. 2018 ರಲ್ಲಿ ಭಾರತದ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಪೋರ್ಚುಗಲ್‌ಗೆ ಭೇಟಿ ನೀಡಿದ್ದರು. ದಶಕಗಳ ಬಾಹ್ಯ ನಿಶ್ಚಿತಾರ್ಥಗಳ ನಂತರ ಪೋರ್ಚುಗಲ್ ದೇಶವು ಭಾರತೀಯ ವಿದೇಶಾಂಗ ನೀತಿ-ತಯಾರಕರ ರೇಡಾರ್‌ನಲ್ಲಿದೆ. ಪೋರ್ಚುಗಲ್ಲನ್ನು ಆದರಿಸಲು ಭಾರತಕ್ಕೆ ವ್ಯಾವಹಾರಿಕ ಕಾರಣಗಳಿವೆ. ಪ್ರಧಾನಿ ಕೋಸ್ಟಾ ಹೇಳಿದಂತೆ, ಪೋರ್...

ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿ ನಿರ್ಧಾರವನ್ನು ಸ್ಪಷ್ಟವಾಗಿ ನಿರಾಕರಿಸಿದ ಭಾರತ

ಪಾಕಿಸ್ತಾನವು ತನ್ನ ವಿವಿಧ ಸಂಸ್ಥೆಗಳ ನಡುವೆಯೇ ಭಿನ್ನಾಭಿಪ್ರಾಯವನ್ನು ಹೊಂದಿರುವ ದೇಶವಾಗಿದೆ. ಅಲ್ಲದೆ, ಪಾಕಿಸ್ತಾನವು ಭಾರತದೊಳಗಿನ ಎಲ್ಲಾ ವಿಷಯಗಳ ಬಗ್ಗೆ ಅನಾವಶ್ಯಕವಾಗಿ ಚರ್ಚಿಸುವಂತಹ ಕೀಳು ಅಭ್ಯಾಸವನ್ನು ಬೆಳೆಸಿಕೊಂಡಿದೆ. ಭಾರತದಲ್ಲಿ ಈಗ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಆಗಿ ಮಾರ್ಪಟ್ಟಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಭಾರತೀಯ ಸಂಸತ್ತು ಅಂಗೀಕಾರ ಮಾಡುತ್ತಿದ್ದಂತೆ, ಅಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿತು. ಇದು ಭಾರತದ ಆಂತರಿಕ ವಿಷಯವಾದುದರಿಂದ ಈ ಬಗ್ಗೆ ನಿಲುವು ತೆಗೆದುಕೊಳ್ಳಲು ಇಸ್ಲಾಮಾಬಾದ್ ಅಥವಾ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಈ ವಿಷಯದಲ್ಲಿ ಬೇರೆ ಯಾವುದೇ ದೇಶವು ಕೂಡ ಯಾವುದೇ ನಿಲುವನ್ನು ಹೊಂದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಕಿರುಕುಳಕ್ಕೊಳಗಾಗಿರುವ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡುವ ಉದ್ದೇಶದೊಂದಿಗೆ ರೂಪುಗೊಂಡಿದೆ. ಭಾರತ ಪೌರತ್ವ ತಿದ್ದುಪಡಿ ಕಾಯಿದೆ ತಂದ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ಕೋಲಾಹಲವೇ ಸೃಷ್ಟಿಯಾಗಿದ್ದು ಇಸ್ಲಾಮಾಬಾದ್ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ವಿಚಾರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಚಿಕೆ ಪಡುವಂತಾಗಿದೆ. ತನ್ನ ದೇಶದ ಅಲ್ಪಸಂಖ್ಯಾತ ಜನರನ್ನು ನಿಭಾಯಿಸುವ ವಿಷಯದಲ್ಲಿ ಪಾಕಿಸ್ತಾನವು ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದೆ.‌ ಭಯ...

ಇಂಡೋ-ಪೆಸಿಫಿಕ್ ಟ್ರ್ಯಾಕ್ 1.5 ಸಂವಾದಗಳು

ಸ್ಕ್ರಿಪ್ಟ್: ಡಾ. ಟಿಟ್ಲಿ ಬಸು, ಪೂರ್ವ ಮತ್ತು ಆಗ್ನೇಯ ಏಷ್ಯಾದ ಕಾರ್ಯತಂತ್ರದ ವಿಶ್ಲೇಷಕ ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪರಿಕಲ್ಪನೆಯೊಂದಿಗೆ ಭೌಗೋಳಿಕ ರಾಜಕೀಯ ಮಂಥನ ನಡೆಯುತ್ತಿರುವ ಸಂದರ್ಭದಲ್ಲಿಯೇ ನವದೆಹಲಿಯಲ್ಲಿ 6ನೇ ಭಾರತೀಯ ಹಿಂದೂ ಮಹಾಸಾಗರೋತ್ತರ ಮತ್ತು ದೆಹಲಿ XI ಎಂಬ ಎರಡು ರೀತಿಯ ಸಂವಾದಗಳನ್ನು ಆಯೋಜಿಸಲಾಗಿತ್ತು. ಇಂಡೋ-ಪೆಸಿಫಿಕ್ ವಿಷಯಗಳನ್ನಾಧರಿಸಿ 2019ರ ಜೂನ್ ತಿಂಗಳಲ್ಲಿ ನಡೆದ ಆಸಿಯಾನ್ ಔಟ್‌ಲುಕ್ ನಲ್ಲಿ ಘೋಷಿಸಿದಂತೆ ಭಾರತವು ಉಚಿತ, ಮುಕ್ತ, ಅಂತರ್ಗತ ಹಾಗೂ ನಿಯಮ ಆಧಾರಿತ ಇಂಡೋ-ಪೆಸಿಫಿಕ್‌ನ ಕಾರ್ಯತಂತ್ರದ ಪರಿಕಲ್ಪನೆ ಕುರಿತಾದ ತನ್ನ ದೃಷ್ಟಿಕೋನದ ಬಗ್ಗೆ ಚರ್ಚಿಸುವುದು ಈ ಸಂವಾದಗಳ ಉದ್ದೇಶವಾಗಿತ್ತು. 2018ರ ಜೂನ್ ತಿಂಗಳಲ್ಲಿ ನಡೆದ ಶಾಂಗ್ರಿಲಾ ಸಂವಾದದಲ್ಲೂ ಇದೇ ಇಂಡೋ-ಪೆಸಿಫಿಕ್ ದೃಷ್ಟಿಕೋನದ ಬಗ್ಗೆ ಚರ್ಚಿಸಲಾಗಿತ್ತು. ಈ ರೀತಿಯ 1.5 ಎರಡು ಸಂವಾದಗಳನ್ನು ಸತತವಾಗಿ ಆಯೋಜಿಸಿದ ನಿದರ್ಶನ ಇದೇ ಮೊದಲಾಗಿದೆ. ಇಂಡೋ-ಪೆಸಿಫಿಕ್ ಸಂವಾದ ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು, ಭಾರತವು ಗಲ್ಫ್, ಆಫ್ರಿಕನ್ ರಾಷ್ಟ್ರಗಳು ಮತ್ತು ಪೂರ್ವ ಹಿಂದೂ ಮಹಾಸಾಗರ ಸೇರಿದಂತೆ ಪಶ್ಚಿಮ ಸಾಗರವನ್ನೂ ಒಳಗೊಂಡ ಭೌಗೋಳಿಕ ಅಕ್ಷಾಂಶಗಳಿಗೂ ಸೇರಿದ ದೃಷ್ಟಿಕೋನವನ್ನು ಇಟ್ಟುಕೊಂಡಿದೆ ಎಂದು ಹೇಳಿದರು. ಇಂಡೋ-ಪೆಸಿಫಿಕ್ ಪರಿಕಲ್ಪನೆಗೆ ಸಂಬಂಧಿಸಿದಂತೆ ಎಲ್ಲಾ ವಿಷಯ ತಜ್ಞರ...

ಮ್ಯಾಡ್ರಿಡ್ ಕಾನ್ಫರೆನ್ಸ್‌ನಲ್ಲಿ ಹವಾಮಾನ ಬದಲಾವಣೆ ತಗ್ಗಿಸುವ ಬಗ್ಗೆ ಭಾರತದ ಅಜೆಂಡಾ

ಹವಾಮಾನ ಬದಲಾವಣೆಯು ವಾಸ್ತವವಾಗಿದ್ದು, ಅದರ ಬಗ್ಗೆ ಉಪೇಕ್ಷೆ ಮಾಡಲು‌ ಸಾಧ್ಯವಿಲ್ಲ. ಪ್ರಪಂಚದ ಯಾವುದೇ ದೇಶ ಕೂಡ ಇದರ ಪರಿಣಾಮಗಳಿಂದ ಪ್ರತ್ಯೇಕವಾಗಿ ಉಳಿಯುವ ಪ್ರಶ್ನೆಯೇ ಇಲ್ಲ. ಏಕೆಂದರೆ ಇದು ಯಾವುದೋ ಒಂದು ದೇಶದ ಕ್ರಿಯೆ ಅಥವಾ ನಿಷ್ಕ್ರಿಯತೆಯ ಆಧಾರದ ಮೇಲೆ ಮಾತ್ರ ಅವಲಂಬಿತ ಆಗಿರುವುಂಥದ್ದಲ್ಲ. ಹವಾಮಾನ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಯ ಬಿಸಿಯನ್ನು ಭಾರತ ಈಗಾಗಲೇ ಅನುಭವಿಸಲು ಆರಂಭಿಸಿದೆ. ಅನಿರ್ದಿಷ್ಟವಾದ ಮಳೆ, ಬಿಸಿ‌ ಗಾಳಿಯ ವಿಪರೀತ ಹಾವಳಿ, ಬದಲಾದ ಸಮಯದಲ್ಲಿ ತಣ್ಣನೆಯ ಗಾಳಿ ಒಂದಕ್ಕೊಂದು ಸಂಬಧ ಇಲ್ಲದಂತಾಗಿವೆ. ಇವು ಆಹಾರ ಉತ್ಪಾದನೆ, ಆರೋಗ್ಯ ಮತ್ತಿತ್ಯಾದಿಗಳ ಮೇಲೆ ಕೂಡ ಪರಿಣಾಮ‌ ಬೀರುತ್ತಿವೆ. ಹವಾಮಾನ ಬದಲಾವಣೆ ಅಥವಾ ಸಿಓಪಿ25 ಬಗ್ಗೆ ನಡೆದ ಮ್ಯಾಡ್ರಿಡ್ ಸಮ್ಮೇಳನದಲ್ಲಿ 2020 ರಿಂದ 2015ರ ಪ್ಯಾರಿಸ್ ಒಪ್ಪಂದವನ್ನು ಕಾರ್ಯಗತಗೊಳಿಸುವ ಕ್ರಿಯಾ ಯೋಜನೆಯನ್ನು ಹೇಗೆ ಪೂರ್ಣಗೊಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಎರಡು ವಾರಗಳ ಕಾಲ ನಡೆದ ಸಮ್ಮೇಳನದಲ್ಲಿ ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳು, ಇದಕ್ಕೆ ಪೂರಕವಾಗಿ ನಿರ್ಮಾಣವಾಗುತ್ತಿರುವ ಪರಿಸ್ಥಿತಿ ಮತ್ತು ಮಾನವಕುಲದ ಮೇಲೆ ಆಗುತ್ತಿರುವ ದುರಂತಗಳಿಂದ ಜಗತ್ತನ್ನು ಉಳಿಸುವ ಕ್ರಮಗಳ ಕುರಿತು ಇರುವ ವೈಜ್ಞಾನಿಕ ಎಚ್ಚರಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಯುಎನ್ ಏಜೆನ್ಸಿ, ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪ...

ಭಾರತ ಮತ್ತು ಮಾಲ್ಡೀವ್ಸ್ ನಡುವೆ 6ನೇ ಜಂಟಿ ಆಯೋಗದ ಸಭೆ

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ 6ನೇ ಜಂಟಿ ಆಯೋಗದ ಸಭೆ (ಜೆಸಿಎಂ) ನವದೆಹಲಿಯಲ್ಲಿ ನಡೆಯಿತು. ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಾಹಿದ್ ಹಾಗೂ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ಸಹಕಾರದ ಸಂಪೂರ್ಣ ಹಾದಿಯನ್ನು ಪರಿಶೀಲಿಸುವ ಬಗ್ಗೆ ಈ ಜೆಸಿಎಂ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಮಾಲ್ಡೀವ್ಸ್ ನಲ್ಲಿ ಸೋಲಿಹ್ ಸರ್ಕಾರ ರಚನೆಯಾದ ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗಿವೆ. ಪ್ರಜಾತಾಂತ್ರಿಕವಾಗಿ ಪರಿವರ್ತನೆಯಾಗುವ ನಿಟ್ಟಿನಲ್ಲಿ ವ್ಯಾಪಕ ಅವಕಾಶಗಳನ್ನು ಒಳಗೊಂಡ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ದಾರಿ ಮಾಡಿಕೊಡಲಾಗಿದೆ‌. ಅಭಿವೃದ್ಧಿಯಲ್ಲಿ ಸಹಕಾರ ಎಂಬುದರ ಮೂಲಕ ಮಾಲ್ಡೀವ್ಸ್‌ನಲ್ಲಿ ಸಾಮಾಜಿಕ ವಲಯದ ಅಭಿವೃದ್ಧಿಯ ಹೊರತಾಗಿ ಉಭಯ ದೇಶಗಳ ಕಡಲುಗಳು, ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ವಿಸ್ತರಿಸಲು ಮುಂದಾಗಿವೆ. ಮಾಲ್ಡೀವ್ ಅಧ್ಯಕ್ಷೀಯ ಚುನಾವಣೆ ನಡೆದ ಬಳಿಕ ಭಾರತವು ಆ ದೇಶಕ್ಕೆ 1.4 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಘೋಷಣೆ ಮಾಡಿದೆ. ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗಾಗಿ 800 ಮಿಲಿಯನ್ ಯುಎಸ್ ಡಾಲರ್ ಸಾಲ ನೀಡುವುದಾಗಿ ಹೇಳಿದೆ. ಅಲ್ಲದೆ ಹೆಚ್ಚಿನ ಮಟ್ಟದಲ್ಲಿ ಪ್ರಭಾವ ಬೀರುವ ಸಮುದಾಯದ ಅಭಿವೃದ್ಧಿ ಯೋಜನೆಗಳಿಗಾಗಿ 5.6 ಮಿಲಿಯನ್ ಯುಎಸ್ ಡಾಲರ್ ಅನುದಾನ ನೀಡುವು...

ಸಂಸತ್ತಿನ ವಾರದ ವಿವರ

ಪೌರತ್ವ (ತಿದ್ದುಪಡಿ) ಮಸೂದೆ, 2019ರ ಅಂಗೀಕಾರ ಆಗಿರುವುದು ಸಂಸತ್ತಿನ ಚಳಿಗಾಲದ ಅಧಿವೇಶನದ ಪ್ರಮುಖ ಅಂಶವಾಗಿತ್ತು. ಸಂಸತ್ತಿನ ಉಭಯ ಸದನಗಳು ಬುಧವಾರ ಮಸೂದೆಗೆ ಅನುಮೋದನೆ ನೀಡಿವೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸುವುದು ಐತಿಹಾಸಿಕ ಅವಶ್ಯಕತೆಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಧಾರ್ಮಿಕ ಮಾರ್ಗಗಳ ವಿಭಜನೆಯ ನಂತರ ಆ ದೇಶಗಳಲ್ಲಿನ ಅಲ್ಪಸಂಖ್ಯಾತರು ನಿರಂತರ ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ಅವರು ಹೇಳಿದರು. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಆರು ಸಮುದಾಯಗಳ ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಲು 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಯತ್ನಿಸಿದೆ. ಆ ಸಮುದಾಯಗಳೆಂದರೆ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು. ಸಾಂವಿಧಾನಿಕತೆ ಬಗ್ಗೆ ಉತ್ತರಿಸಿದ ಅಮಿತ್ ಶಾ, ಷರತ್ತುಗಳನ್ನು ಪೂರೈಸಲು ಮಸೂದೆಯು ಸಮಂಜಸವಾದ ವರ್ಗೀಕರಣವನ್ನು ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ಆ ದೇಶಗಳಿಂದ ಬಂದ 566 ಮುಸ್ಲಿಮರಿಗೆ ಪೌರತ್ವ ನೀಡಲು ಭಾರತವು ಚಿಂತನೆ ನಡೆಸಿದೆ ಎಂದು ಹೇಳಿದರು. ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆ ಸಮಸ್ಯೆಗಳಿಂದ ದೂರವಿರಲು ಮಸೂದೆಯನ್ನು ತರಾತುರಿಯಲ್ಲಿ ಅಥವಾ ಯಾವುದೇ ವಿಷಯಗಳನ್ನು ಕತ್ತಲಲ್ಲಿ ಇಟ್ಟು ಪ್ರಸ್ತುತಪಡಿಸಲಾಗುತ್ತ...

ಬ್ರಿಟೀಷ್ ಚುನಾವಣೆ- ಬ್ರೆಕ್ಸಿಟ್ ವಿಷಯದಲ್ಲಿ ಮಾಡು ಇಲ್ಲವೇ ಮಡಿ

2016ರ ಜೂನ್ 23ರಂದು ಜನಮತ ಸಂಗ್ರಹದ ಮೂಲಕ ಬ್ರೆಕ್ಸಿಟ್ ಯುರೋಪಿಯನ್ ಯೂನಿಯನ್ (ಇಯು) ತೊರೆಯುವ ನಿರ್ಧಾರ ತಳೆದುದರಿಂದ ಬ್ರಿಟನ್ ರೋಲರ್ ಕೋಸ್ಟರ್ ಒತ್ತಡದಲ್ಲಿದೆ. ಈ ಫಲಿತಾಂಶವು ಇಬ್ಬರು ಪ್ರಧಾನ ಮಂತ್ರಿಗಳಾದ ಡೇವಿಡ್ ಕ್ಯಾಮರೂನ್ ಮತ್ತು ಥೆರೆಸಾ ಮೇ ಅವರ ಭವಿಷ್ಯಕ್ಕೆ ಪೂರಕವಾಗಿ ಬಂದಿಲ್ಲ ಮಾತ್ರವಲ್ಲ, ಇಯುನಿಂದ ಹೊರಬರಲು ಅಣಿಯಾಗುತ್ತಿದ್ದ ಯುಕೆ ಅನ್ನು ಇನ್ನಷ್ಟು ಆರ್ಥಿಕ ಅನಿಶ್ಚಿತತೆಯನ್ನು ಒಳಗೊಂಡ ಅರಾಜಕ ರಾಜಕೀಯ ಪರಿಸ್ಥಿತಿಗೆ ದೂಡಿದೆ. ಬ್ರೆಕ್ಸಿಟ್ ಗಾಗಿ ಇಯು ಜೊತೆಗೆ ಏರ್ಪಟ್ಟಿದ್ದ ಒಪ್ಪಂದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಥೆರೆಸಾ ಮೇ ಅವರು ನಡೆಸಿದ ಪುನರಾವರ್ತಿತ ಪ್ರಯತ್ನಗಳನ್ನು ಅವರ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಅಂಗೀಕರಿಸಿರಲಿಲ್ಲ, ಇದರ ಪರಿಣಾಮವಾಗಿ ಅವರು ಕೆಳಗಿಳಿಯಬೇಕಾಯಿತು ಮತ್ತು ಬೋರಿಸ್ ಜಾನ್ಸನ್ ಅವರು ಪಕ್ಷದ ಹೊಸ ನಾಯಕರಾದರು ಹಾಗೂ 2019ರ ಜುಲೈನಲ್ಲಿ ಪ್ರಧಾನಿಯಾಗುವಂತಾಯಿತು. ಅಕ್ಟೋಬರ್ 31ರೊಳಗೆ ಬ್ರಿಟಿಷ್ ಸಂಸತ್ತಿನಿಂದ ನಿರ್ಗಮನವಾಗಬೇಕು ಎಂದು ಅವರು ನಡೆಸಿದ ಪ್ರಯತ್ನಗಳು ಕಾರ್ಯರೂಪಕ್ಕೆ ಬರಲಿಲ್ಲ. ಅವರು 2020ರ ಜನವರಿವರೆಗೆ ಬ್ರಸೆಲ್ಸ್ ನಿಂದ 3 ತಿಂಗಳ ವಿಸ್ತರಣೆಯನ್ನು ಪಡೆದರು. ಆದಾಗ್ಯೂ, ಬ್ರಿಟಿಷ್ ಸಂಸತ್ತಿನಲ್ಲಿ ಬಿಸಿ ಎದುರಿಸುತ್ತಿರುವ ಬೋರಿಸ್ ಜಾನ್ಸನ್ 2019ರ ಅಕ್ಟೋಬರ್ 24ರಂದು ತ್ವರಿತ ಚುನಾವಣೆಗಳನ್ನು ಘೋಷಿಸಿದರು. ಯುರೋಪಿಯನ್ ಆರ್ಥಿಕ ಸಮುದಾಯವು(ಇಇಸಿ) ಯುನೈಟೆಡ್ ಕಿಂಗ್‌ಡಂ ಪ್ರ...

ಹಫೀಜ್ ಸಯೀದ್ ಮೇಲಿನ ದೋಷಾರೋಪಣೆ ವ್ಯಂಗ್ಯವೋ ನಿಜವೋ?

ವಿಶ್ವಸಂಸ್ಥೆ (ಯುಎನ್)ಯೇ ಭಯೋತ್ಪಾದಕ ಎಂದು ಘೋಷಿಸಿರುವ ಜಮಾಅತ್-ಉದಾ-ದವಾ (ಜುಡಿ) ಮುಖ್ಯಸ್ಥ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮೇಲೆ ಲಾಹೋರ್ ನ್ಯಾಯಾಲಯವು ಭಯೋತ್ಪಾದಕ ಚಟುವಟಿಕೆಗೆ ಹಣಕಾಸು ಒದಗಿಸಿದ ದೋಷಾರೋಪಣೆ ಮಾಡಿದೆ. ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆಯು (ಸಿಟಿಡಿ) ಜುಲೈ ತಿಂಗಳಿನಲ್ಲಿ ಹಫೀಜ್ ಸಯೀದ್ ಮತ್ತು ಆತನ ಸಹಚರರ ವಿರುದ್ಧ 23 ಎಫ್‌ಐಆರ್ ಗಳನ್ನು ದಾಖಲಿಸಿ ನ್ಯಾಯಾಂಗ ರಿಮಾಂಡ್‌ ಮೂಲಕ ಲಾಹೋರಿನ ಕೋಟ್ ಲಖಪತ್ ಜೈಲಿಗೆ ಕಳುಹಿಸಿಕೊಟ್ಟಿತ್ತು. ಪ್ರಕರಣದ ಬಗ್ಗೆ ಶಿಕ್ಷೆ ಪ್ರಕಟಿಸಿದಾಗ ಸಯೀದ್ ನ್ಯಾಯಾಲಯದಲ್ಲೇ ಇದ್ದರು ಎನ್ನಲಾಗಿದೆ. ಪಾಕಿಸ್ತಾನದ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಡಿಸೆಂಬರ್ 11 ಅನ್ನು ಸಯೀದ್ ವಿರುದ್ಧದ ಆರೋಪಗಳನ್ನು ರೂಪಿಸುವ ದಿನಾಂಕವೆಂದು ಹೇಳಿದೆ. ಈಗ ಪ್ರಶ್ನೆ ಇರುವುದು ಪ್ರಕರಣ ಈಗೇಕೆ? ನ್ಯಾಯಾಲಯವು ಈಗ ಸಯೀದ್ ವಿರುದ್ಧದ ಪ್ರಕರಣವನ್ನು ಗಂಭೀರವಾಗಿ ಮುಂದುವರಿಸುತ್ತದೆಯೇ? ಎಂದು. ಪಾಕಿಸ್ತಾನದ ವ್ಯವಸ್ಥೆಗಳು ಕಾರ್ಯನಿರ್ವಹಿಸುವ ವಿಧಾನವನ್ನು ಬಲ್ಲ ಪ್ರತಿಯೊಬ್ಬರೂ ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಜಾಗತಿಕ ಭಯೋತ್ಪಾದನಾ-ವಿರೋಧಿ ಹಣಕಾಸು ವಾಚ್‌ಡಾಗ್ ಎಂದೇ ಹೇಳಲಾಗುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಭಯೋತ್ಪಾದಕ ಹಣಕಾಸನ್ನು ಭೇದಿಸಬೇಕೆಂದು ಅಂತರರಾಷ್ಟ್ರೀಯ ಸಮೂಹಗಳ ಮೂಲಕ ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂಬು...

ಯುಎಸ್ - ತಾಲಿಬಾನ್ ಮಾತುಕತೆ ಪುನರಾರಂಭ ಗೊಂಡರೂ ಮುಂದಿದೆ ಕಠಿಣ ಸವಾಲು

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಾಗ್ರಾಮ್ ವಾಯುನೆಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಲಿಬಾನ್ ಜೊತೆ ಶಾಂತಿ ಮಾತುಕತೆ ಪುನರಾರಂಭಿಸುವುದಾಗಿ ಘೋಷಿಸಿದ ಕೆಲ ದಿನಗಳಲ್ಲೇ ಅದೇ ವಾಯುನೆಲೆಯ ಹೊರಗಿರುವ ವೈದ್ಯಕೀಯ ಸೌಲಭ್ಯದ ಮೇಲೆ ಬುಧವಾರ ತಾಲಿಬಾನ್ ನಿಂದ ಪ್ರಬಲ ಆತ್ಮಾಹುತಿ ಬಾಂಬ್ ದಾಳಿ ನಡೆಯಿತು. ಕಾಬೂಲ್‌ನಲ್ಲಿನ ನ್ಯಾಟೋ ಮಿಲಿಟರಿ ಸೌಲಭ್ಯವನ್ನು ಗುರಿಯಾಗಿಸಿಕೊಂಡ ನಂತರ ಅಮೆರಿಕದ ಅಧ್ಯಕ್ಷರು ತಾಲಿಬಾನ್ ಜೊತೆ ಮಾತುಕತೆ ಸ್ಥಗಿತಗೊಳಿಸಿದ ನಂತರ ಸ್ಥಗಿತಗೊಂಡ ಶಾಂತಿ ಮಾತುಕತೆಯ ತೊಂದರೆಗಳನ್ನು ಮತ್ತೊಮ್ಮೆ ಬಾಂಬ್ ಸ್ಫೋಟವು ತೋರಿಸಿದೆ. ಸೆಪ್ಟೆಂಬರ್ ನಲ್ಲಾದ ಹಿನ್ನಡೆಯ ನಂತರ, ಕದನ ವಿರಾಮದ ನಿಯಮಗಳನ್ನು ಅಂತಿಮಗೊಳಿಸಿದ ನಂತರ ಯುದ್ಧಕ್ಕೆ ವಿರಾಮ ಘೋಷಿಸಿ, ಸಂವಾದಕ್ಕೆ ಮುಕ್ತವಾಗಿರುವುದಾಗಿ ತಾಲಿಬಾನ್ ಹೇಳಿಕೊಂಡಿತ್ತು. ಮಾತುಕತೆಗೆ ತಾತ್ಕಾಲಿಕ ಹಿನ್ನಡೆಯ ನಂತರ ಈ ಸಂದೇಶದೊಂದಿಗೆ ಬೀಜಿಂಗ್, ಮಾಸ್ಕೋ ಮತ್ತು ಇಸ್ಲಾಮಾಬಾದ್‌ಗೆ ಭೇಟಿ ನೀಡಲಾಗಿದೆ. ವಿಳಂಬದ ಹೊರತಾಗಿಯೂ, ಯುಎಸ್ ಮತ್ತು ತಾಲಿಬಾನ್ ನಡುವಿನ ಮಾತುಕತೆ ಯಾವುದೇ ಅಡೆತಡೆಯಿಲ್ಲದೆ ಪುನರಾರಂಭವಾಯಿತು ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ. ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಗಣರಾಜ್ಯದಿಂದ ಇಸ್ಲಾಮಿಕ್ ಎಮಿರೇಟ್ ಎಂದು ಬದಲಾಯಿಸಲು ತಾಲಿಬಾನ್ ಬಯಸಿದೆ. ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನದ ಪ್ರಸ್ತುತ ಸರ್ಕಾರದಿಂದ ಇದು ಪ್ರತ...

ನೆರೆಯ ದೇಶಗಳ ಅಲ್ಪಸಂಖ್ಯಾತ ನಿರಾಶ್ರಿತರಿಗೆ ನಾಗರಿಕತ್ವ ನೀಡುವುದೇ ಕ್ಯಾಬ್ ಉದ್ದೇಶ

ನೆರೆಹೊರೆಯ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಯನ್ನು ಭಾರತೀಯ ಸಂಸತ್ತಿನಲ್ಲಿ ಮಂಡಿಸಿ ಚರ್ಚಿಸಲಾಗುತ್ತಿದೆ. ಪಾಕಿಸ್ತಾನವು ಈ ಕ್ರಮವನ್ನು ವಿರೋಧಿಸಿದೆ. ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇಕಡಾ 23.5 ರಿದ್ದರೆ ಈಗ ಅಲ್ಪಸಂಖ್ಯಾತರ ಪ್ರಮಾಣವು ಶೇ. 3.5 ರಷ್ಟಕ್ಕೆ ಇಳಿದಿದೆ. ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಪರಸ್ಪರರ ದೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ನೀಡುವ ಭರವಸೆ ನೀಡಿದ ನೆಹರೂ-ಲಿಯಾಕತ್ ಅಲಿ ಒಪ್ಪಂದದ ಹೊರತಾಗಿಯೂ, ಭಾರತದ ನೆರೆಯಲ್ಲಿ ಅಲ್ಪಸಂಖ್ಯಾತರನ್ನು ಸ್ಥಿರವಾಗಿ ಕಡಿಮೆ ಮಾಡಲಾಗುತ್ತಿದೆ ಮತ್ತು ಅನೇಕ ಧಾರ್ಮಿಕ ಅಲ್ಪಸಂಖ್ಯಾತರು ಭಾರತಕ್ಕೆ ಪಲಾಯನ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ, 1971 ರಲ್ಲಿ 21.3 ರಷ್ಟಿದ್ದ ಅಲ್ಪಸಂಖ್ಯಾತ ಜನಸಂಖ್ಯೆಯು ಈಗ ಕೇವಲ 8.5 ಕ್ಕೆ ಇಳಿಸಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು ಹೆಚ್ಚಾಗಿ ತಾರತಮ್ಯಕ್ಕೆ ಒಳಗಾಗುತ್ತಾರೆ ಮತ್ತು ಅವರನ್ನು ‘ಪಟ್ಟಭದ್ರ’ರು ಎಂದು ವರ್ಗೀಕರಿಸಿದ ನಂತರ ಅವರ ಆಸ್ತಿಯನ್ನು ಪಡೆದುಕೊಳ್ಳಲಾಗುತ್ತದೆ. ಭಾರತದಲ್ಲಿ, ವಿಭಜನೆಯ ನಂತರದ 9.8% ರಷ್ಟಿದ್ದ ಅಲ್ಪಸಂಖ್ಯಾತ ಜನಸಂಖ್ಯೆಯು ಸ್ಥಿರವಾಗಿ ಬೆಳೆದಿದೆ ಎಂಬುದನ್ನು ಗಮನಿಸಬೇಕು. ಇದು ಭಾರತದಲ್ಲಿನ ಅಲ್ಪಸಂಖ್ಯಾತರ ಮತ್ತು ಅದರ ಹತ್ತಿರದ ದೇ...