ನೀರಿನ ಬವಣೆ ನಿಭಾಯಿಸಲು ಹೊಸ ಸಚಿವಾಲಯ

ಬದುಕಿಗೆ ನೀರು ಅತ್ಯಗತ್ಯ. ಆದರೆ ವಿಶ್ವದ 844 ದಶಲಕ್ಷ ಜನರಿಗೆ ನೀರು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ವಿಶ್ವ ಆರ್ಥಿಕ ವೇದಿಕೆಯ ವರದಿಯ ಪ್ರಕಾರ,ಸಮಾಜದ ಮೇಲಿನ ಪರಿಣಾಮ ಬೀರುತ್ತಿರುವ ಪ್ರಮುಖ ಅಂಶಗಳಲ್ಲಿ ನೀರಿನ ಬಿಕ್ಕಟ್ಟು ನಾಲ್ಕನೇ ಸ್ಥಾನದಲ್ಲಿದೆ.

ಭಾರತದಲ್ಲಿ ಕೂಡ ಪರಿಸ್ಥಿತಿ ಉತ್ತಮವಾಗಿಲ್ಲ. ಪುರಸಭೆಯ ಕುಡಿಯುವ ನೀರಿನ ವ್ಯವಸ್ಥೆಗಳ ಲಭ್ಯತೆ ಮತ್ತು ಗುಣಮಟ್ಟ ಎರಡರಲ್ಲೂ ಕಳೆದ ದಶಕಗಳಲ್ಲಿಭಾರತ ಗಮನಾರ್ಹ ಸುಧಾರಣೆಗಳನ್ನು ಮಾಡಿದೆಯಾದರೂ, ದೊಡ್ಡ ಜನಸಂಖ್ಯೆಗೆ ಬೇಕಾದ ಯೋಜಿತ ನೀರಿನ ಸಂಪನ್ಮೂಲಗಳನ್ನು ಮತ್ತು ಗ್ರಾಮೀಣಪ್ರದೇಶಗಳಿಗೆ ಇದು ತಲುಪಿಲ್ಲ ಎಂದು ವರದಿ ಒತ್ತಿಹೇಳಿದೆ. ಜೊತೆಗೆ, ಭಾರತದ ನಗರ ಪ್ರದೇಶಗಳಲ್ಲಿನ ಬೆಳವಣಿಗೆ ಹಾಗೂ ಹೆಚ್ಚಿನ-ಖಾಸಗೀಕರಣದ ಜತೆಗಿನ ಹೊಂದಾಣಿಕೆಯಿಂದಾಗಿ ಸಮಸ್ಯೆ ದುಪ್ಪಟ್ಟಾಗುತ್ತಿದೆ.

ಅಲ್ಲದೆ, ಕುಡಿಯುವ ನೀರಿನ ಮೂಲಗಳನ್ನು ಶುದ್ಧೀಕರಣದ ಹೊರತಾಗಿಯೂ, ಅನೇಕ ಇತರ ನೀರಿನ ಮೂಲಗಳು ಜೈವಿಕ ಮತ್ತು ರಾಸಾಯನಿಕ ಮಾಲಿನ್ಯ ಕಾರಕಗಳಿಂದ ಕಲುಷಿತಗೊಳ್ಳುತ್ತಿವೆ ಮತ್ತು ದೇಶದ 21%ಕ್ಕಿಂತ ಹೆಚ್ಚಿನ ರೋಗಗಳು ಜಲ ಸಂಬಂಧಿಯಾಗಿವೆ. ಇದಲ್ಲದೆ, ದೇಶದ ಕೇವಲ 33%ರಷ್ಟು ಭಾಗಸಾಂಪ್ರದಾಯಿಕ ಚರಂಡಿ ವ್ಯವಸ್ಥೆಯ ಸಮಸ್ಯೆ ಎದುರಿಸುತ್ತಿವೆ.

ಭಾರತವು ಮರುಬಳಕೆ ಮಾಡಬಹುದಾದ ನೀರಿನ ಸಂಪನ್ಮೂಲಗಳ ಒಟ್ಟಾರೆ ದೀರ್ಘಾವಧಿಯ ಲಭ್ಯತೆ ಮೇಲೆ ಹೆಚ್ಚು ಗಮನ ನೀಡಿಲ್ಲ ಎಂಬುದು ಕಳವಳಕಾರಿ ಸಂಗತಿ. ಭಾರತ ಅತಿ ಹೆಚ್ಚು ಧಾನ್ಯದ ಉತ್ಪಾದನೆಯನ್ನು ಮಾಡುತ್ತಿರುವ ದೇಶ. ಇದಕ್ಕಾಗಿ ದೊಡ್ಡ ಪ್ರಮಾಣದ ನೀರಿನ ಅಗತ್ಯವಿದೆ. ದೊಡ್ಡ ಕೃಷಿಉತ್ಪಾದನೆಯಿರುವ ಎಲ್ಲಾ ದೇಶಗಳಂತೆ, ಆಹಾರ ಉತ್ಪಾದನೆಗಾಗಿ ಹೆಚ್ಚಿನ ನೀರಿನ ಬಳಕೆಯಿಂದಾಗಿ ಒಟ್ಟಾರೆ ನೀರಿನ ಲಭ್ಯತೆ ಪ್ರಮಾಣದ ಕಡಿಮೆಯಾಗುತ್ತಿದೆ.

ನೀತಿ ಆಯೋಗದ ವರದಿ ಪ್ರಕಾರ ದೇಶದ 600 ಮಿಲಿಯನ್ ಮಂದಿ ಅತಿ ಹೆಚ್ಚು ನೀರಿನ ಕೊರತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 75% ಕುಟುಂಬಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಮೂಲಗಳನ್ನು ಹೊಂದಿಲ್ಲ. ಈ ಮಧ್ಯೆ ಸುಮಾರು 2 ಲಕ್ಷ ಮಂದಿ ಸಮರ್ಪಕ ನೀರಿನ ಪೂರೈಕೆ ಇಲ್ಲದೆ ಸಾವಿಗೀಡಾಗುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಪ್ರತಿ ವರ್ಷದ ಏಪ್ರಿಲ್ ನಿಂದ ಜುಲೈವರೆಗೆ ದೇಶದ 8 ಜಿಲ್ಲೆಗಳಲ್ಲಿ ನೀರಿನ ವಿಪರೀತ ಅಭಾವ ಕಂಡುಬರುತ್ತಿದೆ. ಹವಾಮಾನ ಬದಲಾವಣೆ ಹಾಗೂ ಭೂ ತಾಪಮಾನ ಏರಿಕೆ ಕೂಡ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ.

ಈ ಬೆಳೆಯುತ್ತಿರುವ ಬಿಕ್ಕಟ್ಟನ್ನು ನಿಭಾಯಿಸುವ ಸಲುವಾಗಿ, ಭಾರತವು ನೀರಿನ ಸಮಸ್ಯೆಗಳ ವಿರುದ್ಧ ಹೋರಾಡಲು ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುವಉದ್ದೇಶದಿಂದ ಹೊಸ ಏಕೀಕೃತ 'ಜಲಶಕ್ತಿ' ಅಥವಾ 'ಜಲ ಶಕ್ತಿ' ಸಚಿವಾಲಯವನ್ನು ಪ್ರಾರಂಭಿಸಿದೆ. ನೀರಿನ ಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾಪುನರುಜ್ಜೀವನ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವನ್ನು ವಿಲೀನಗೊಳಿಸುವುದರ ಮೂಲಕ ಹೊಸ ಸಚಿವಾಲಯ ರಚನೆಯಾಗಿದೆ. ಇದುಶುದ್ಧ ಕುಡಿಯುವ ನೀರು ಮತ್ತು ಅಂತರರಾಷ್ಟ್ರೀಯ ಮತ್ತು ಅಂತರ್-ರಾಜ್ಯ ನೀರಿನ ವಿವಾದಗಳನ್ನು ನಿರ್ವಹಿಸುವುದರ ಜತೆಗೆ, ಗಂಗಾ ನದಿಯ ಮತ್ತು ಅದರಉಪನದಿಗಳನ್ನು ಶುಚಿಗೊಳಿಸುವ, ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ನೀಡಿದ ಭರವಸೆಯ ಮುಂದುವರಿದ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸುರಕ್ಷಿತ ಕುಡಿಯುವನೀರಿನ್ನು ಒದಗಿಸುವುದು ನಮ್ಮ ಉದ್ದೇಶ ಎಂದು ಪ್ರಧಾನಿ ಹೇಳಿದ್ದರು. ರೈತರಿಗೆ ಸ್ವಚ್ಛ ನೀರು ಮತ್ತು ಉನ್ನತ ದರ್ಜೆಯ ನೀರಾವರಿ ನೀರು ಸೌಲಭ್ಯಗಳನ್ನುಖಾತ್ರಿಪಡಿಸಲು ನೀರಿನ ಸಂಪನ್ಮೂಲಗಳಿಗಾಗಿ ಪ್ರತ್ಯೇಕ ಸಚಿವಾಲಯ ಆರಂಬಿಸಲಿದ್ದೇವೆ ಎಂದೂ ಹೇಳಿದ್ದರು.

ಪ್ರಸ್ತುತ ಹಲವಾರು ಸಚಿವಾಲಯಗಳು ಜಲ ವಿಷಯವನ್ನು ನಿಭಾಯಿಸುತ್ತಿವೆ. ಉದಾಹರಣೆಗೆ, ಅರಣ್ಯ ಮತ್ತು ಪರಿಸರ ಸಚಿವಾಲಯವು ದೇಶದ ಹೆಚ್ಚಿನ ನದಿಗಳಸಂರಕ್ಷಣೆಯನ್ನು ನಿಭಾಯಿಸುತ್ತಿದೆ. ಅಂತೆಯೇ, ನಗರಾಭಿವೃದ್ಧಿ ಸಚಿವಾಲಯವು ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ ನಗರ ನೀರಿನ ಸರಬರಾಜು ಕೆಲಸವನ್ನು ನಿಭಾಯಿಸುತ್ತಿದೆ.

ಹೊಸ ಸರಕಾರದ ಜಲಶಕ್ತಿ ಸಚಿವಾಲಯದ ಆದೇಶದ ಪ್ರಕಾರ, ಹಿಂದಿನ ಜಲ ಸಂಪನ್ಮೂಲಗಳ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಗಳನ್ನು ಒಂದೇ ವೇದಿಕೆಯಡಿಗೆ ತರುವುದು ಉದ್ದೇಶ. ಹೊಸ ಇಲಾಖೆಯು ದೇಶದಲ್ಲಿ ಒಟ್ಟಾರೆ ಜಲ ಬೇಡಿಕೆ ಮತ್ತು ನೀರಿನ ಸರಬರಾಜನ್ನುಸಂಯೋಜಿಸಲು ಪ್ರಯತ್ನಿಸಲಿದೆ. ಇದರಿಂದ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರ ರೀತಿಯಲ್ಲಿ ವ್ಯವಹರಿಸುವ ಉದ್ದೇಶವಿದೆ. ಕೃಷಿಸಚಿವಾಲಯದೊಂದಿಗೆ ಜಲ ನೀತಿಯನ್ನು ಸಂಯೋಜಿಸುವ ಅಧಿಕಾರವನ್ನು ಹೊಸ ಸಚಿವಾಲಯಕ್ಕೆ ನೀಡಬೇಕಾಗಿದೆ. ಅಲ್ಲದೆ, ವಿಭಿನ್ನ ಹವಾಮಾನ ವಲಯಗಳಿಗೆಪರ್ಯಾಯ ಬೆಳೆಗಳ ಸರಿಯಾದ ಆಯ್ಕೆಗಾಗಿ ಮಾರ್ಗದರ್ಶನವನ್ನು ನೀಡಬೇಕಾಗುತ್ತದೆ. ಲಭ್ಯವಿರುವ ನೀರಿನ ಸಂಪನ್ಮೂಲಗಳ ಗರಿಷ್ಟ ಬಳಕೆಗಾಗಿ ಮಳೆಕಾಡುಅಲ್ಲದ ಪ್ರದೇಶಗಳಲ್ಲಿ ನೀರಿನ ಉಳಿತಾಯಕ್ಕೆ ಯೋಗ್ಯವೆನಿಸುವ ಹನಿ ನೀರಾವರಿ ವಿಧಾನಗಳಂತಹ ಹೊಸ ನೀರಿನ ಉಳಿಸುವ ತಂತ್ರಜ್ಞಾನಗಳನ್ನುಪರಿಚಯಿಸಬೇಕಿದೆ. 

ಲೇಖನ : ಬಿಮನ್ ಬಸು, ಹಿರಿಯ ವಿಜ್ಞಾನ ವಿಶ್ಲೇಷಕರು


Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ