ಜಿ-೭ ಸಭೆಯಲ್ಲಿ ಮೋದಿ-ಟ್ರಂಪ್‌ ಮಾತುಕತೆ

ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆದ ಜಿ 7 ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ‘ವಿಶೇಷ ಅತಿಥಿಯಾಗಿ’ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಆಹ್ವಾನಿಸಿದ್ದರು; ಇರಾನ್ ಪರಮಾಣು ಒಪ್ಪಂದವನ್ನು ಉಳಿಸಿಕೊಳ್ಳುವುದು ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಂತಹ ಹಲವಾರು ವಿಷಯಗಳಲ್ಲಿ ಭಾರತವು ಫ್ರಾನ್ಸ್‌ನೊಂದಿಗೆ ಏಕರೂಪದ ಅಭಿಪ್ರಾಯ ಹೊಂದಿದೆ. ಶೃಂಗಸಭೆಯ ನಡುವೆಯೇ ಭಾರತದ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಪರಸ್ಪರ ಭೇಟಿಯಾದರು.

ಸಭೆಯಲ್ಲಿ ಉಭಯ ನಾಯಕರು ವ್ಯಾಪಾರ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಿದರು. ಡಬ್ಲ್ಯುಟಿಒ ನೀಡಿದ ‘ಅಭಿವೃದ್ಧಿಶೀಲ ರಾಷ್ಟ್ರ’ ಟ್ಯಾಗ್‌ನ ಲಾಭವನ್ನು ನವದೆಹಲಿ ಪಡೆದುಕೊಳ್ಳುತ್ತಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿಕೊಂಡಿರುವುದರಿಂದ ಮತ್ತು ಅಮೆರಿಕದಿಂದ ಬರುವ ಉತ್ಪನ್ನಗಳ ಮೇಲೆ ಭಾರತ ಹೆಚ್ಚಿನ ಸುಂಕವನ್ನು ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಭಾರತದಿಂದ ರಫ್ತಾಗುವ ಉಕ್ಕಿನ ಮೇಲೆ ಸುಂಕವನ್ನು ವಿಧಿಸಿದೆ ಮತ್ತು ಭಾರತೀಯ ಉತ್ಪನ್ನಗಳಿಗೆ ಆದ್ಯತೆಯ ಪ್ರವೇಶವನ್ನು ಕೊನೆಗೊಳಿಸಿದೆ.

ಭಾರತವು 2019 ರ ಜೂನ್‌ನಲ್ಲಿ ಯುಎಸ್‌ನಿಂದ ರಫ್ತು ಮಾಡಿದ 28 ಉತ್ಪನ್ನಗಳ ಮೇಲೆ ಪ್ರತೀಕಾರದ ಸುಂಕವನ್ನು ವಿಧಿಸಿತು. ಕಾರ್ಯತಂತ್ರದ ಸಂಬಂಧಗಳನ್ನು ವಿಸ್ತರಿಸುವ ಮಾರ್ಗಗಳ ಬಗ್ಗೆ ಉಭಯ ನಾಯಕರು ಮಾತನಾಡಿದರು. ವ್ಯಾಪಾರವು ಪ್ರವರ್ಧಮಾನಕ್ಕೆ ಬರುತ್ತಿರುವ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಪ್ರಮುಖ ಭಾಗವಾಗಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಮಾರುಕಟ್ಟೆ ಪ್ರವೇಶ ಮತ್ತು ಸುಂಕಗಳ ಮೇಲಿನ ವ್ಯತ್ಯಾಸಗಳು ಉಲ್ಬಣಗೊಂಡಿದ್ದು, ಇದು ದೀರ್ಘಕಾಲದ ಬಿಕ್ಕಟ್ಟಿಗೆ ಕಾರಣವಾಗಿದೆ. ಅದೇನೇ ಇದ್ದರೂ, ಸುಂಕ ಮತ್ತು ಮಾರುಕಟ್ಟೆ ಪ್ರವೇಶದ ಮೇಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಉಭಯ ರಾಷ್ಟ್ರಗಳು ಪ್ರಯತ್ನಿಸುತ್ತಿರುವುದರಿಂದ ಅಮೆರಿಕದಿಂದ ಆಮದನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಯನ್ನು ಭಾರತ ಹೊಂದಿದೆ ಎಂದು ಸಭೆಯ ನಂತರ ಪ್ರಧಾನಿ ಮೋದಿ ಹೇಳಿದ್ದಾರೆ.

ಇಂಧನ ಕ್ಷೇತ್ರದಲ್ಲಿನ ಹೆಚ್ಚಿನ ಸಹಕಾರಕ್ಕಾಗಿ ಇಬ್ಬರು ಚರ್ಚಿಸಿದರು. ಪ್ರಧಾನಿ ಮೋದಿಯವರು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ನಲ್ಲಿ ಅಮೆರಿಕ್ಕೆ ಭೇಟಿ ನೀಡುವ ವೇಳೆ ಹೌಸ್ಟನ್‌ ಗೂ ಅವರು ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮತ್ತು ಇಂಧನ ಕ್ಷೇತ್ರದ ವ್ಯಾಪಾರ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಈ ಭೇಟಿ ಹಿಂದೆ ೨ ಉದ್ದೇಶವಿದೆ. ಭಾರತವು ಅಮೆರಿಕದಿಂದ ಹೆಚ್ಚಿನ ಇಂಧನವನ್ನು (ತೈಲ) ಹೇಗೆ ಆಮದು ಮಾಡಿಕೊಳ್ಳುತ್ತದೆ ಮತ್ತು ಎರಡನೆಯದು ಅಮೆರಿಕದ ಇಂಧನ ಕ್ಷೇತ್ರದಲ್ಲಿ ಹೇಗೆ ಹೂಡಿಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದಾಗಿದೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಭಾರತದ ಪ್ರಧಾನಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಲಿದ್ದಾರೆ. ಪರಸ್ಪರ ಕಾಳಜಿಯ ವಿಷಯಗಳನ್ನು ಇಬ್ಬರು ಚರ್ಚಿಸುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿಯವರು ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಆಯ್ಕೆಯಾದ ನಂತರ ಉಭಯ ನಾಯಕರ ನಡುವಿನ ಮೊದಲ ಸಭೆ ಇದಾಗಿತ್ತು. ಭಾರತದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಈ ಸಭೆ ನಡೆಯಿತು. ಈ ಸಮಸ್ಯೆಯನ್ನು ಸುತ್ತುವರೆದಿರುವ ಪ್ರಾದೇಶಿಕ ರಾಜಕಾರಣವು ಅಂತರರಾಷ್ಟ್ರೀಯ ವೇದಿಕೆಯ ಮೂಲಕ ಪಾಕಿಸ್ತಾನದ ಆಧಾರರಹಿತ ಆರೋಪಗಳ ಮೂಲಕ ಉಲ್ಬಣಗೊಂಡಿದೆ. ಆದಾಗ್ಯೂ, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಅನೌಪಚಾರಿಕ ‌ಸಭೆ ನಡೆಸಿದರೂ ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದು ಆಂತರಿಕ ವಿಷಯವಾಗಿದೆ ಎಂದು ಭಾರತವು ಸಂಪೂರ್ಣವಾಗಿ ಸ್ಪಷ್ಟಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಅದು ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. "ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ. ಕಾಶ್ಮೀರ ದ್ವಿಪಕ್ಷೀಯ ವಿಷಯವಾಗಿದೆ ಎಂದು ಪುನರುಚ್ಚರಿಸುತ್ತಾ, ಭಾರತೀಯ ಪ್ರಧಾನಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದರು. ಭಾರತ ಮತ್ತು ಪಾಕಿಸ್ತಾನವು ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಚರ್ಚಿಸಬಹುದು ಮತ್ತು ಪರಿಹರಿಸಬಹುದು ಮತ್ತು "ನಾವು ಯಾವುದೇ ಮೂರನೇ ದೇಶದ ಮಧ್ಯಪ್ರವೇಶಕ್ಕೆ ಬಯಸುವುದಿಲ್ಲ" ಎಂದು ತಿಳಿಸಿದ್ದಾರೆ. ಇದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಭಾರತದ ತಂತ್ರಗಾರಿಕೆಯಾಗಿದೆ. ಉಭಯ ನಾಯಕರ ನಡುವಿನ ಸಭೆಯನ್ನು ಸಕಾರಾತ್ಮಕ ಬೆಳವಣಿಗೆ ಎಂದೇ ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಗಮನ ಸೆಳೆಯಲು ಸಹಕಾರದ ಕ್ಷೇತ್ರಗಳನ್ನು ವಿಸ್ತರಿಸಲೂ ಇದು ಅನುಕೂಲ.

ಭಾರತದ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ಸಭೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಶ್ವೇತಭವನ ಹೇಳಿದೆ. ಇದೀಗ ಮುಕ್ತಾಯಗೊಂಡ ಜಿ 7 ಶೃಂಗಸಭೆಯಿಂದ ಹೊರಬಿದ್ದ ಪ್ರಮುಖ ಬೆಳವಣಿಗೆಯಾಗಿದೆ. ಶ್ವೇತಭವನದ ಹೇಳಿಕೆಯ ಪ್ರಕಾರ, ಅಧ್ಯಕ್ಷ ಟ್ರಂಪ್ ಸಂವಾದದ ಅಗತ್ಯವನ್ನು ಪುನರುಚ್ಚರಿಸಿದ್ದಾರೆ ಮತ್ತು ಭಾರತ ಮತ್ತು ಯುಎಸ್ ನಡುವಿನ ಉತ್ತಮ ಆರ್ಥಿಕ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಎಂದಿದ್ದಾರೆ.


ಲೇಖನ : ಡಾ. ಸ್ತುತಿ ಬ್ಯಾನರ್ಜಿ, ಅಮೆರಿಕ ವ್ಯವಹಾರಗಳ ವಿಶ್ಲೇಷಕರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ