ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು

ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವ ಐತಿಹಾಸಿಕ ಅಧ್ಯಕ್ಷೀಯ ಆದೇಶವನ್ನು ಆಗಸ್ಟ್ 5, 2019 ರಂದು ಘೋಷಿಸಲಾಯಿತು. ಈ ವಿಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ‘ತಾತ್ಕಾಲಿಕ ನಿಬಂಧನೆ’ ಸೇರಿದೆ. ಆದರೆ ರದ್ದತಿ ಮೂಲಕ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲಾಗುತ್ತದೆ ಮತ್ತು ಉಳಿದ ರಾಜ್ಯಗಳಿಗೆ ಅನ್ವಯವಾಗುವ ಸಂವಿಧಾನದ ಎಲ್ಲಾ ನಿಬಂಧನೆಗಳು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತವೆ. ಅಧ್ಯಕ್ಷೀಯ ಆದೇಶವು 1954 ರ ಸುಗ್ರೀವಾಜ್ಞೆಯನ್ನು 35 ಎ ವಿಧಿಯನ್ನು ಪರಿಣಾಮಕಾರಿಯಾಗಿ ರದ್ದುಗೊಳಿಸಿತು. ಇದು ರಾಜ್ಯದ ಖಾಯಂ ನಿವಾಸಿಗಳಿಗೆ ಆಸ್ತಿ ಹಕ್ಕುಗಳನ್ನು ಸೀಮಿತಗೊಳಿಸಿತ್ತು. ರಾಜ್ಯಸಭೆ (ಭಾರತೀಯ ಸಂಸತ್ತಿನ ಮೇಲ್ಮನೆ) ಅದೇ ದಿನ ಜಮ್ಮು ಕಾಶ್ಮೀರ ಪುನರ್ ರಚನೆ ಮಸೂದೆಯನ್ನು ಅಂಗೀಕರಿಸಿತು, ಅದು ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿತು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಿಂದ ಬದಲಾಯಿಸಿತು. ಜಮ್ಮು ಮತ್ತು ಕಾಶ್ಮೀರವು ರಾಜ್ಯ ವಿಧಾನಸಭೆ ಮತ್ತು ಲೆಫ್ಟಿನೆಂಟ್ ಗವರ್ನರ್ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಡಾಖ್ ಸಹ ಕೇಂದ್ರ ಪ್ರದೇಶವಾಗಲಿದೆ. ಆದರೆ ಇಲ್ಲಿ ಶಾಸನ ಸಭೆ ಇರುವುದಿಲ್ಲ.

ಸಂಸತ್ತು ಜಾರಿಗೆ ತಂದಿರುವ ಎಲ್ಲಾ ಭಾರತೀಯ ಕಾನೂನುಗಳು ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುತ್ತವೆ ಎಂದು ಗೃಹ ಸಚಿವರು ರಾಜ್ಯಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಒತ್ತಿ ಹೇಳಿದರು. ಹಿಂದೆ, ಶಿಕ್ಷಣದ ಹಕ್ಕು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳಿಂದ ಇಲ್ಲಿನ ಜನರು ವಂಚಿತರಾಗಿದ್ದರು. ಆದರೆ ಈಗ ತಾರತಮ್ಯವಿಲ್ಲದೆ ಅನ್ವಯಿಸುತ್ತದೆ. ಆಸ್ತಿ ಹಕ್ಕುಗಳನ್ನು ನಿಯಂತ್ರಿಸುವ ಕಾನೂನುಗಳು ಇತರ ರಾಜ್ಯಗಳಲ್ಲಿನ ಕಾನೂನುಗಳಿಗೆ ಸಮನಾಗಿರುತ್ತವೆ. ಜೆ- ಕೆ ಅಸೆಂಬ್ಲಿಯ ಅಧಿಕಾರಾವಧಿಯು 6ರಿಂದ 5 ವರ್ಷಕ್ಕೆ ಇಳಿಯಲಿದೆ. ಇಲ್ಲಿಯವರೆಗೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನವಿತ್ತು. ಅದೂ ಕೂಡ ಇಲ್ಲವಾಗಲಿದೆ. ಭಾರತೀಯ ದಂಡ ಸಂಹಿತೆ ಮೇಲುಗೈ ಸಾಧಿಸಲಿದೆ. ಶಾಶ್ವತವಲ್ಲದ ನಿವಾಸಿಗಳು ಈಗ ಶಾಶ್ವತವಾಗಿ ಜಮ್ಮು ಕಾಶ್ಮೀರದಲ್ಲಿ ನೆಲೆಸಬಹುದು.

ಗೃಹ ಸಚಿವರು ರಾಜ್ಯದಲ್ಲಿ ಭಯೋತ್ಪಾದನೆಯ ಬೇರುಗಳಿಗೆ ಕಡಿವಾಣ ಹಾಕಲಿದ್ದೇವೆ ಮತ್ತು ಭಯೋತ್ಪಾದನೆಯನ್ನು ಎದುರಿಸಲು ರಾಜ್ಯದ ವಿಶೇಷ ಸ್ಥಾನಮಾನ ಮತ್ತು ವಿಭಜನೆಯನ್ನು ತೆಗೆದುಹಾಕುವ ನಿರ್ಧಾರಗಳು ಪೂರಕ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ಭಾರತದಲ್ಲಿ ಬೇರೆಡೆ ಜನರು ಮತದಾನದ ಮಾರ್ಗದಿಂದ ತಮ್ಮ ಹಕ್ಕನ್ನು ಚಲಾಯಿಸಿದರೆ, ಪಟ್ಟಭದ್ರ ಹಿತಾಸಕ್ತಿಗಳು ಉಗ್ರಗಾಮಿ ಪ್ರವೃತ್ತಿಯನ್ನು ಉತ್ತೇಜಿಸುವ ಮೂಲಕ ಮತ್ತು ಹತ್ಯೆಗಳ ಮೂಲಕ ರಾಜಕೀಯ ವ್ಯವಸ್ಥೆಯನ್ನು ಕೂಡ ಕೆಡಿಸಲಾಯಿತು.

ಸುಧಾರಿತ ಮತ್ತು ಪರಿಣಾಮಕಾರಿ ಆಡಳಿತ ಮತ್ತು ವಿಶಾಲ ಆಧಾರಿತ ಅಭಿವೃದ್ಧಿ ಮೂಲಕ ಜನರಿಗೆ ಸ್ಪಷ್ಟ ಉದ್ದೇಶದಿಂದ ಕೂಡಿದ ಪ್ರಯೋಜನಗಳಿಗಾಗಿ ದೇಶದ ಉಳಿದ ಭಾಗಗಳೊಂದಿಗೆ ರಾಜ್ಯವನ್ನು ಒಟ್ಟುಗೂಡಿಸುವುದು ಹೊಸ ಅವಕಾಶಗಳನ್ನು ತೆರೆಯಿಸಬಹುದು. ಜೆ - ಕೆ ಯಲ್ಲಿನ ಭಯೋತ್ಪಾದಕ ಶಕ್ತಿಗಳು ಯುವಕರ ಅವಕಾಶಗಳನ್ನು ನಿರಾಕರಿಸಿತ್ತು. ಇದು ಪ್ರಜಾಪ್ರಭುತ್ವ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕತೆಯ ವೇಗ ತಡೆಯುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಭಯೋತ್ಪಾದಕ ಶಕ್ತಿಗಳು ಜೆ & ಕೆ ಯ ಮುಕ್ತ ರಾಜಕೀಯ ಪರಿಸರದಲ್ಲಿ ಬಹಿರಂಗವಾಗಿ ಪ್ರವರ್ಧಮಾನಕ್ಕೆ ಬಂದವು ಮತ್ತು ಉಗ್ರಗಾಮಿ ಹಿಂಸಾಚಾರದಿಂದ ತಾರಕಕ್ಕೇರಿದವು.

ಅಧ್ಯಕ್ಷೀಯ ಆದೇಶ ಮತ್ತು ಸಂಸತ್ತಿನ ಪ್ರಕ್ರಿಯೆಗಳಿಂದಾಗಿ ಭಯೋತ್ಪಾದನೆಯ ಭೀತಿ ತಡೆಯಲು ಇದು ಸಹಕಾರಿಯಾಗಬಹುದು. ಹೆಚ್ಚು ಪರಿಣಾಮಕಾರಿಯಾಗಿ ವ್ಯವಹರಿಸಲು ರಾಜ್ಯದ ಯಂತ್ರೋಪಕರಣಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಿದೆ.

ವ್ಯಾಪಕವಾದ ಶಾಸನ ಮತ್ತು ಅಧ್ಯಕ್ಷೀಯ ಆದೇಶವು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿದೆ. ಆದರೆ ಇಂಥಾ ಟೀಕೆಗಳಿಗೆ ದೃಢವಾದ ಆಧಾರ ಇರಬೇಕು. ಬದಲಿಗೆ ಈ ಆರೋಪಗಳು ಆಡಳಿತ ಪಕ್ಷದ ವಿರುದ್ಧ ದ್ವೇಷವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. ಆದರೆ ಸರ್ಕಾರದ ಈ ನಿರ್ಧಾರ ಅಗಾಧವಾದ ಜನಪ್ರಿಯ ಬೆಂಬಲವನ್ನು ಪಡೆದಿರುವುದು ಸುಳ್ಳಲ್ಲ.
ಲೇಖನ : ಶೀಲ್ ಕಾಂತ್ ಶರ್ಮ, ಮಾಜಿ ಪ್ರಧಾನ ಕಾರ್ಯದರ್ಶಿ, ಸಾರ್ಕ್

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ