ಸ್ಕ್ರಿಪ್ಟ್: ಡಾ. ಜೈನಾಬ್ ಅಖ್ತರ್, ಪಾಕಿಸ್ತಾನದ ಕಾರ್ಯತಂತ್ರದ ವಿಶ್ಲೇಷಕ
2019ರ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಬೇಕಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಬಜ್ವಾ ಅವರ ಅಧಿಕಾರಾವಧಿಯನ್ನು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಆಗಸ್ಟ್ 2019ರಲ್ಲಿ ಅಧಿಸೂಚನೆ ಹೊರಡಿಸಿ ಮೂರು ವರ್ಷಗಳವರೆಗೆ ವಿಸ್ತರಿಸಿದ್ದಾರೆ. ಅಲ್ಲದೆ ಇಮ್ರಾನ್ ಖಾನ್ ಸರ್ಕಾರ ಈ ವಿಸ್ತರಣೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ. ಬಾಲಕೋಟ್ ವೈಮಾನಿಕ ದಾಳಿ, ಪುಲ್ವಾಮಾ ಸ್ಫೋಟದ ನಂತರ ಜಮ್ಮು ಕಾಶ್ಮೀರದಲ್ಲಿ ಆದ ಭಾರತದ ಸಾಂವಿಧಾನಿಕ ಬದಲಾವಣೆಗಳು ಹಾಗೂ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಹೆಚ್ಚುತ್ತಿರುವ ಉದ್ವಿಗ್ನತೆಯ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭದ್ರತಾ ವಾತಾವರಣದಲ್ಲಿ “ಅಸಾಧಾರಣ ಪರಿಸ್ಥಿತಿ” ನಿರ್ಮಾಣವಾಗಿದೆ.
ಆದರೆ ಅಚ್ಚರಿಯ ಬೆಳವಣಿಗೆವೊಂದರಲ್ಲಿ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಕಳೆದ ನವೆಂಬರ್ 26ರಂದು ವಿಸ್ತರಣಾ ನೋಟಿಸ್ ಅನ್ನು ಅಮಾನತುಗೊಳಿಸಿದೆ. ಮುಖ್ಯವಾಗಿ ಸಂಬಂಧಿತ ಕಾನೂನುಗಳ ಅನುಷ್ಠಾನದಲ್ಲಿ ಆಗುತ್ತಿರುವ ಅಕ್ರಮಗಳು ಮತ್ತು ಲೋಪದೋಷಗಳನ್ನು ಉಲ್ಲೇಖಿಸಿ ವೈಜ್ಞಾನಿಕ ಕಾರಣಗಳ ಬಗ್ಗೆ ಪ್ರಶ್ನಿಸಿದೆ. ಸಂವಿಧಾನ 243ನೇ ವಿಧಿ 3ನೇ ನಿಯಮದ ಪ್ರಕಾರ ಸೇನಾ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಒತ್ತಿ ಹೇಳಿದೆ. ಹಿರಿಯ ಸಿಬ್ಬಂದಿಗಳ ಅಧಿಕಾರಾವಧಿ ವಿಸ್ತರಣೆ/ಮರು ನೇಮಕದ ಕಾನೂನು/ಶಾಸನಗಳನ್ನು ರೂಪಿಸುವಂತೆ ಪಿಟಿಐ ಸರ್ಕಾರಕ್ಕೆ ಅದು ಆದೇಶ ನೀಡಿದೆ. ಸರ್ಕಾರ ಈ ರೀತಿ ಮಾಡದಿದ್ದರೆ ಆರು ತಿಂಗಳ ಬಳಿಕ ಬಜ್ವಾ ಅವರನ್ನು ನಿವೃತ್ತರೆಂದು ಘೋಷಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಎಚ್ಚರಿಸಿದೆ.
ಸಂಸತ್ತಿನಲ್ಲಿ ಯಾವುದೇ ಶಾಸನ ತರಲು ವಿರೋಧ ಪಕ್ಷಗಳ ಬೆಂಬಲ ಬೇಕಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯದ ಆದೇಶವು ಪಾಕಿಸ್ತಾನ ಸರ್ಕಾರವನ್ನು ಅತಂಕಕ್ಕೀಡುಮಾಡಿದೆ. ಸಂಸತ್ತಿನಲ್ಲಿ ಕಾಯಿದೆ ಮಾಡುವ ಮೂಲಕ ಸಾಂವಿಧಾನಿಕ ತಿದ್ದುಪಡಿ ತರುವುದು ಶಾಶ್ವತ ಪರಿಹಾರವಾಗಿತ್ತು. ಆದರೆ ಇದಕ್ಕಾಗಿ ಸರ್ಕಾರಕ್ಕೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಬೆಂಬಲ ಅಗತ್ಯವಿದೆ. ಈ ಹಿಂದಿನ ಎಲ್ಲಾ ಸೇನಾ ಮುಖ್ಯಸ್ಥರ ಅವಧಿ ವಿಸ್ತರಣೆಗಳು ಯಾವುದೇ ಕಾನೂನು ಇಲ್ಲದೆ ಸಾಂಪ್ರದಾಯಿಕವಾಗಿ ನಡೆದಿದ್ದವು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ!.
ಸೇನಾ ವ್ಯವಸ್ಥೆಯ ಸಲಹೆ ಮೇರೆಗೆ ಪಿಟಿಐ ಸರ್ಕಾರವು ಪ್ರತಿಪಕ್ಷಗಳ ಬಗ್ಗೆ ತನ್ನ ನಿಲುವನ್ನು ಮೆದುಗೊಳಿಸಲು ಪ್ರಾರಂಭಿಸಿತು ಹಾಗೂ ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್ ನಲ್ಲಿ ಸೇವಾ ಮಸೂದೆಯನ್ನು ಅಂಗೀಕರಿಸಲು ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸುವುದಕ್ಕೂ ಮುಂದಾಯಿತು. ಪಿಎಂಎಲ್-ಎನ್ ಹಿರಿಯ ನಾಯಕ ರಾಣಾ ಸನಾವುಲ್ಲಾ ಅವರಿಗೆ ಮಾದಕವಸ್ತುಗಳ ಕಳ್ಳಸಾಗಣಿಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ನೀಡಲಾಯಿತು. ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಜಾಮೀನು ನೀಡಲಾಯಿತು. ಅಲ್ಲದೆ ನವಾಜ್ ಷರೀಫ್ ಲಂಡನ್‌ನಿಂದ ಪಾಕಿಸ್ತಾನಕ್ಕೆ ಮರಳಿದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಆಕ್ಷೇಪ ವ್ಯಕ್ತವಾಗಲಿಲ್ಲ. ಹೀಗೆ ಎಲ್ಲವೂ ಮ್ಯಾಚ್ ಫಿಕ್ಸಿಂಗ್ ನಂತೆ ನಡೆಯುತ್ತಿತ್ತು. ಈ ಬೆಳವಣಿಗೆಗಳು 2020ರ ಜನವರಿ 07ರಂದು ಸೇವಾ ಕಾಯ್ದೆ ಮಸೂದೆಯನ್ನು ಅಂಗೀಕರಿಸಲು ದಾರಿ ಮಾಡಿಕೊಟ್ಟವು. ಇದು ಸೈನ್ಯವಷ್ಟೇ ಅಲ್ಲ, ಎಲ್ಲಾ ಸೇವಾ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆಗೂ ಸಂಬಂಧಪಟ್ಟದ್ದಾಗಿದೆ. ಪಾಕಿಸ್ತಾನ ಸೇನೆ (ತಿದ್ದುಪಡಿ) ಕಾಯ್ದೆ 2020, ಪಾಕಿಸ್ತಾನ ನೌಕಾಪಡೆ (ತಿದ್ದುಪಡಿ) ಕಾಯ್ದೆ 2020 ಹಾಗೂ ಪಾಕಿಸ್ತಾನ ವಾಯುಪಡೆ (ತಿದ್ದುಪಡಿ) ಕಾಯ್ದೆ 2020 ಎಂಬ ಮೂರು ತಿದ್ದುಪಡಿ ಮಸೂದೆಗಳನ್ನು ಕೆಳಮನೆ (ರಾಷ್ಟ್ರೀಯ ಅಸೆಂಬ್ಲಿ) ಮತ್ತು ಮೇಲ್ಮನೆ (ಸೆನೆಟ್) ಎರಡರಲ್ಲೂ ಮಂಡಿಸಿ ಅಂಗೀಕರಿಸಲಾಗಿದೆ. ಪ್ರಮುಖ ಪಕ್ಷಗಳಾದ ಪಿಎಂಎಲ್-ಎನ್ ಹಾಗೂ ಪಿಪಿಪಿಗಳಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಜಿಯುಐ-ಎಫ್ ಹಾಗೂ ಜಾಮಿಯೆಟ್-ಇ-ಇಸ್ಲಾಮಿ ಮತ್ತು ಪೇಟಿಎಂ ಸೇರಿದಂತೆ ಕೆಲ ವಿರೋಧ ಪಕ್ಷಗಳು ಮಾತ್ರ ಸಭಾತ್ಯಾಗ ನಡೆಸಿದವು.
ಆದರೆ ಸೇವಾ ಮುಖ್ಯಸ್ಥರ ಮಸೂದೆಗಳ ಕರಡು ರಚನೆ ಬಗ್ಗೆ ವಿವಾದಗಳು ಹುಟ್ಟಿಕೊಂಡಿವೆ. ಸೇವಾ ಮುಖ್ಯಸ್ಥರನ್ನು ಮರುನೇಮಕ ಮಾಡುವ ಹಾಗೂ ಅವರ ಅಧಿಕಾರಾವಧಿ ವಿಸ್ತರಣೆ ಮಾಡುವ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗೆ ಹೆಚ್ಚಿನ ವಿವೇಚನಾ ಅಧಿಕಾರವನ್ನು ನೀಡಲಾಗಿದೆಯೇ ಇಲ್ಲವೇ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಬಜ್ವಾ ಅವರ ಅಧಿಕಾರಾವಧಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಶೀಲಿಸುವಂತೆ ಈಗಾಗಲೇ ನ್ಯಾಯಾಂಗದಲ್ಲಿ ಅರ್ಜಿ ಸಲ್ಲಿಸಿರುವಾಗ ಪಾಕಿಸ್ತಾನ ಸರ್ಕಾರವು ಸಂಸತ್ತಿನ ಹಾದಿಯನ್ನು ತುಳಿದಿದ್ದಾದರೂ ಏಕೆ? ಎಂದು ಹಲವರು ಪ್ರಶ್ನಿಸಿದ್ದಾರೆ. ಇಮ್ರಾನ್ ಖಾನ್ ಸರ್ಕಾರದ ಕಾನೂನು ವಿಭಾಗವು ಗೊಂದಲಕ್ಕೆ ಒಳಗಾಗಿದೆ ಎಂಬುದು ಈ ಬೆಳವಣಿಗೆಯಿಂದ ವೇದ್ಯವಾಗುತ್ತದೆ. ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿದರೆ ಅಥವಾ ವಜಾಗೊಳಿಸಿದರೆ ಏನಾಗಬಹುದು?
ಸೇನಾ ಮುಖ್ಯಸ್ಥರ ಮಸೂದೆಗಳು ಬಹಳ ಅಸ್ಪಷ್ಟವಾಗಿದ್ದು, ವರದಿಗಳ ಪ್ರಕಾರ ಮೂರು ಪಡೆಗಳ ಮುಖ್ಯಸ್ಥರ ನಿವೃತ್ತಿ ವಯಸ್ಸನ್ನು ಅರವತ್ತನಾಲ್ಕು ವರ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ದೇಶದ ಪ್ರಧಾನ ಮಂತ್ರಿಯು ಸೈನ್ಯದ ಮುಖ್ಯಸ್ಥರ ಅಧಿಕಾರಾವಧಿಯನ್ನು ಮತ್ತಷ್ಟು ವಿಸ್ತರಿಸಲು ಅನುವು ಮಾಡಿಕೊಡುತ್ತದೆ, ಅಲ್ಲದೆ ಈ ವಿವೇಚನಾಧಿಕಾರವನ್ನು ಎಂದಿಗೂ ಪ್ರಶ್ನಿಸಲು ಸಾಧ್ಯವಿಲ್ಲದಾಗಿದೆ. ಯಾವುದೇ ಸೇವಾ ಮುಖ್ಯಸ್ಥರನ್ನು ತಾವು ಬಯಸಿದಾಗಲೆಲ್ಲಾ ರದ್ದುಗೊಳಿಸಬಹುದಾದ ಅಧಿಕಾರವೂ ಪ್ರಧಾನ ಮಂತ್ರಿಗಳಿಗೆ ಇದೆ ಎಂದು ಸಹ ಹೇಳಲಾಗಿದೆ. ಆದರೆ ಇದು ಸಾಧ್ಯವಾಗುತ್ತದೆಯೇ? ನವಾಜ್ ಷರೀಫ್ ಅವರ ಚುನಾಯಿತ ಸರ್ಕಾರವು ಹಾಗೆ ಮಾಡಲು ಪ್ರಯತ್ನಿಸಿತು. ಇದರ ಪರಿಣಾಮವಾಗಿ ಸೈನ್ಯವು ಅಧಿಕಾರವನ್ನು ವಶಪಡಿಸಿಕೊಂಡಿತು. ಪಾಕಿಸ್ತಾನಕ್ಕೆ ಬಲವಾದ ಸಂಸ್ಥೆಯನ್ನು ನಿರ್ಮಿಸುವ ಉದ್ದೇಶ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿದೆ. ಇದಲ್ಲದೆ ಪ್ರತಿಪಕ್ಷಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೆಚ್ಚಿನ ರಿಯಾಯಿತಿಗಳನ್ನು ನಿರೀಕ್ಷಿಸುತ್ತಿವೆ. ಆದ್ದರಿಂದ ಭ್ರಷ್ಟಾಚಾರ ಮುಕ್ತ ‘ನಯಾ’ ಪಾಕಿಸ್ತಾನದ ಕನಸು ಈ ಕ್ಷಣಕ್ಕೆ ಮುಗಿದ ಅಧ್ಯಾಯವಾಗಿದೆ.

Comments
Post a Comment