ಬಹಳಷ್ಟು ವಿಷಯಗಳಲ್ಲಿ ಬದಲಾಗಿರುವ ಪಾಕಿಸ್ತಾನ

ಪಾಕಿಸ್ತಾನದ ಹಿರಿಯ ಪತ್ರಕರ್ತ ಸಲೀಮ್ ಸಫಿ ಅವರು ಇತ್ತೀಚೆಗೆ 'ಡೈಲಿ ಜಾಂಗ್' ಎಂಬ ಒಪೆಡ್ ಪೀಸ್ ಒಂದನ್ನು ಬರೆದಿದ್ದು, ಅದರಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಾಕಿಸ್ತಾನವು 'ಈಗಲೇ ಅಥವಾ ಎಂದಿಗೂ ಇಲ್ಲ' ಎಂಬ ಹೊಸ ಸಾಮಾಜಿಕ ಒಪ್ಪಂದವನ್ನು ತುರ್ತಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ.

ಸಲೀಮ್ ಸಫಿ ಅವರ ಪ್ರಕಾರ ಪಾಕಿಸ್ತಾನವು ತನ್ನದೇ ವಿವಿಧ ಸಂಸ್ಥೆಗಳ ನಡುವೆ ಪರಸ್ಪರ ಜಗಳವಾಡುವ ಹಾಗೂ ಶೂನ್ಯ-ಮೊತ್ತದ ಮನಸ್ಥಿತಿಯನ್ನು ಪರಸ್ಪರ ಪೋಷಿಸುವ ಹಂತವನ್ನು ತಲುಪಿದೆ. ಒಂದು ಸಂಸ್ಥೆಯು ದುರ್ಬಲಗೊಂಡರೆ ಇನ್ನೊಂದು ಸಂಸ್ಥೆ ಸಂತೋಷ ಪಡುತ್ತದೆ. ಇಂತಹ ಸದ್ಯದ ಸನ್ನಿವೇಶದಲ್ಲಿ ಹಿಂದೆ ಘಟಿಸಿರುವ ಪ್ರಮಾದಗಳ ಬಗ್ಗೆ ಪರಮಾರ್ಶೆ ಮಾಡಿಕೊಳ್ಳಲು ಹಾಗೂ ಭವಿಷ್ಯದಲ್ಲಿ ರಾಜಕೀಯದ ಹೊಸ ಮಾದರಿಯೊಂದನ್ನು ಕಂಡುಕೊಳ್ಳಲು ಪಾಕಿಸ್ತಾನಕ್ಕೆ ಸತ್ಯ ಮತ್ತು ಸಾಮರಸ್ಯ ಆಯೋಗದ ಅಗತ್ಯವಿದೆ ಎಂದು ಅವರು ಬರೆದಿದ್ದಾರೆ.

ದೇಶವು ಪ್ರಸ್ತುತ ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳನ್ನು ಗಮನಿಸಿದರೆ ಪಾಕಿಸ್ತಾನದಲ್ಲಿ ಇಂತಹ ಪ್ರಲಾಪಗಳು ಬಹಳ ವೇಗವಾಗಿ ಹರಡುತ್ತಿರುವುದು ತಿಳಿಯುತ್ತದೆ. ರಾಜಕೀಯವಾಗಿ ಹೇಳುವುದಾದರೆ ಮಾಟಗಾತಿ-ಬೇಟೆ ಎಂಬಂತಾಗಿದೆ. ಪ್ರತಿಪಕ್ಷದಲ್ಲಿರುವ ಬಹುತೇಕ ನಾಯಕರು ತಮ್ಮ ಅಧಿಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳನ್ನು ಹಾಗೂ ಸ್ವಜನಪಕ್ಷಪಾತವನ್ನು ಸಮರ್ಥಿಸಿಕೊಳ್ಳುವುದರಲ್ಲೇ ಸಾಕುಸಾಕಾಗಿ ಹೋಗಿದ್ದಾರೆ.

ಪಾಕಿಸ್ತಾನದ ಸಾರ್ವಜನಿಕ ಕಚೇರಿಗಳನ್ನು ದುರಪಯೋಗ ಮಾಡಿಕೊಂಡವರ ವಿರುದ್ಧ ತನಿಖೆ ನಡೆಸಲು ಸ್ಥಾಪಿಸಲಾಗಿದ್ದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಈಗ ಪ್ರತಿಪಕ್ಷದವರ ವಿರುದ್ಧ ಆರೋಪಗೈದು ಅವರ ಸಾರ್ವಜನಿಕ ವರ್ಚಸ್ಸನ್ನು ಕಡಿಮೆ ಮಾಡುವ ಸಾಧನವಾಗಿ ಬದಲಾವಣೆಗೊಂಡಿದೆ. ಪಾಕಿಸ್ತಾನದಲ್ಲಿ‌ ಹೊಸ ಸರ್ಕಾರ ಬಂದಾಗ ಅದು ತನ್ನ ಸ್ವಶಕ್ತಿಯ ಮೇಲೆ ಚಲಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಇಮ್ರಾನ್ ಖಾನ್ ಸರ್ಕಾರವು ಸಮಸ್ಯೆಗಳಲ್ಲದ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ, ದ್ವೇಷದ ರಾಜಕಾರಣವನ್ನು ಪ್ರಾರಂಭಿಸುವ ಮೂಲಕ, ವಾಕ್ಚಾತುರ್ಯದ ಮೇಲೆ ಹೆಚ್ಚು ಮತ್ತು ಕಾರ್ಯಕ್ಷಮತೆಯ ಮೇಲೆ ಕಡಿಮೆ ಗಮನ ಕೊಡುವ ಮೂಲಕ ಪಾಕಿಸ್ತಾನದ ಪ್ರಜಾಪ್ರಭುತ್ವವು ಹಾಸ್ಯಾಸ್ಪದಗೊಳ್ಳುವಂತೆ ಮಾಡಿದೆ. ಶಾಸಕಾಂಗದಲ್ಲಿ ಬಹುಮತದ ಇಲ್ಲದಿದ್ದರೂ ಅವರು ಅದನ್ನು ನಿರ್ವಹಿಸುತ್ತಿರುವುದು ಅವರ ಆಡಳಿತ ಎಷ್ಟು ಸಮರ್ಥವಾಗಿದೆ ಮತ್ತು ಪಕ್ವವಾಗಿದೆ ಎಂಬುದನ್ನು ಹಾಗೂ ಅದು ನಡೆಯುತ್ತಿರುವ ರೀತಿಯನ್ನು ತೋರುತ್ತದೆ. ಇದು ಇಲ್ಲಿನ ನಿಜ ಸ್ಥಿತಿಯಾಗಿದೆ.

ಸರ್ಕಾರವು ಎಲ್ಲಾ ಹಂತಗಳಲ್ಲಿ ವಿಫಲಗೊಂಡು
ದೇಶದಲ್ಲಿ ಪ್ರಜಾಪ್ರತಿನಿಧಿತ್ವದ ರಾಜಕೀಯ ವ್ಯವಹಾರಗಳು ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಪ್ರಬಲವಾದ ವಿರೋಧ ಬರುತ್ತಿರುವುದು ಪ್ರತಿಪಕ್ಷಗಳಿಂದ ಅಲ್ಲ, ಬದಲಿಗೆ ಸರ್ಕಾರದ ಸಹ ಸಂಸ್ಥೆಗಳಿಂದ. ತನ್ನ ಪ್ರಭಾವ ಉಳಿಸಿಕೊಳ್ಳಲು ಸಹ ಸಂಸ್ಥೆಗಳು ಇಂಥ ಅಂತರ-ಸಾಂಸ್ಥಿಕ ಸ್ಪರ್ಧೆಗೆ ಇಳಿಯುವ ಹಂತವನ್ನು ತಲುಪಿವೆ. ಸೇನಾ ಮುಖ್ಯಸ್ಥರ ಮರುನೇಮಕದ ವಿಷಯದಲ್ಲಿ ಹಾಗೂ ಅಲ್ಲಿನ ವಿಶೇಷ ನ್ಯಾಯಾಲಯ ಮಾಜಿ ಮಿಲಿಟರಿ ಸರ್ವಾಧಿಕಾರಿ ಜನರಲ್ ಮುಷರಫ್‌ ಅವರಿಗೆ ಮರಣದಂಡನೆ ವಿಧಿಸಿದ ವಿಷಯದಲ್ಲಿ ನ್ಯಾಯಾಂಗವನ್ನೇ ಪ್ರಶ್ನಿಸಿದ ಪ್ರಕರಣವು ಸದ್ಯದ ಪರಿಸ್ಥಿತಿಯ ದ್ಯೋತಕವಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಬೇರೆ ರೀತಿಯ ನಿರ್ಧಾರಗಳನ್ನು ಕೈಗೊಳ್ಳಬಹುದಿತ್ತು. ಆದರೆ ಈಗಿರುವ ಸಮಸ್ಯೆಗಳನ್ನು ಎದುರಿಸುವುದು ಹಾಗೂ ದೇಶದ ಚಿತ್ರಣವನ್ನು ಬದಲಿಸಲು ಇಮ್ರಾನ್ ಖಾನ್ ಸರ್ಕಾರದ ಮುಂದಿರುವ ಸವಾಲಾಗಿದೆ.

ಇಷ್ಟೆಲ್ಲದರ ನಡುವೆಯೂ ವಿರೋಧ ಪಕ್ಷದ ರಾಜಕೀಯ ಶಕ್ತಿಗಳು ಈ ಪ್ರಬಲ ಸಂಸ್ಥೆಯನ್ನು ವಶಪಡಿಸಿಕೊಳ್ಳಲು ಇಂದಿಗೂ ಸಿದ್ಧರಿಲ್ಲದಿರುವುದು ಕುತೂಹಲಕಾರಿ ಸಂಗತಿಯಾಗಿದೆ. 2020ರ ಜನವರಿ 2ರಂದು ಮುಖ್ಯ ವಿರೋಧ ಪಕ್ಷವಾದ ಪಿಎಂಎಲ್-ಎನ್ ಸೇನಾ ಮುಖ್ಯಸ್ಥರನ್ನು ಮರುನೇಮಕ ಮಾಡಲು ಪ್ರಧಾನಮಂತ್ರಿಗೆ ಅಧಿಕಾರ ನೀಡುವ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದೆ. ಈಗಿರುವ ಪರಿಸ್ಥಿತಿಯನ್ನು ನೀಡುತ್ತಿದ್ದರೆ ಮುಂದಿನ ದಿನಗಳಲ್ಲಿ ಮುಷರಫ್ ವಿರುದ್ಧದ ತೀರ್ಪಿಗೆ ತಡೆ ನೀಡಬಹುದು ಹಾಗೂ ಮಿಲಿಟರಿಯನ್ನು ಉತ್ತೇಜಿಸಲು ಮೃದು ಧೋರಣೆ ತೋರಬಹುದು.

ಇಂತಹ ಪ್ರಜಾಪ್ರಭುತ್ವ ವಿರೋಧಿ ರಾಜಕಾರಣವು ದೇಶದ ವಿಶ್ವಾಸಾರ್ಹ ಸಂಸ್ಥೆಯಾದ ಪಾಕಿಸ್ತಾನ ಸೇನೆಯ ಮೇಲೆ ಪರಿಣಾಮ ಬೀರುತ್ತಿದ್ದು ಅದರ ಮೇಲಿನ ಸಾರ್ವಜನಿಕ ನಂಬಿಕೆಯು ಕ್ರಮೇಣ ಕಡಿಮೆಯಾಗುತ್ತಿದೆ. ಹಿಂದೆಂದಿಗಿಂತಲೂ ಈಗ ಹೆಚ್ಚು ಹೆಚ್ಚು ವಿಶ್ಲೇಷಕರು ಸೈನ್ಯಕ್ಕೆ ವ್ಯತಿರಿಕ್ತವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಪಮತ ಇರುವ ಶಾಸಕಾಂಗವನ್ನು ವಜಾ ಮಾಡಿ ಮಿಲಿಟರಿ ಆಡಳಿತ ನಡೆಸಬಹುದು ಆದರೆ ಅದರ ಚಿತ್ರಣವೇ ಬದಲಾಗಲಿದೆ.

ಸಂವಿಧಾನಿಕ ಸಂಸ್ಥೆಗಳನ್ನು‌ ದುರುಪಯೋಗ ಮಾಡಿಕೊಂಡು ತನ್ನನ್ನು‌ ಅಣಿಯುವ, ಭಯಪಡಿಸುವ ಪರಿಸ್ಥಿತಿಯನ್ನೇ ಪಾಕಿಸ್ತಾನದ ವಿರೋಧ ಪಕ್ಷವು ಲಾಭ ಮಾಡಿಕೊಳ್ಳಲು ಪ್ರಯತ್ನಿಸದಿದ್ದರೆ ಪ್ರಜಾಪ್ರಭುತ್ವವು ಮತ್ತಷ್ಟು ದುರ್ಬಲವಾಗಲಿದೆ. ಇಮ್ರಾನ್ ಖಾನ್ ಸರ್ಕಾರ ಮುನ್ನಡೆಯಲು ಬೆಂಬಲ ನೀಡುವ ಬದಲು ಅದನ್ನು ದುರ್ಬಲಗೊಳಿಸುವುದು ಪ್ರತಿಪಕ್ಷಗಳ ಪ್ರಾಥಮಿಕ ಪ್ರಯತ್ನವಾಗಬೇಕಿದೆ. ಈ ನಡುವೆ ಸರ್ಕಾರವನ್ನು ಬದಿಗೆ ಸರಿಸಿ ತಾನೇ ಆಡಳಿತ ನಡೆಸಲು ಸೇನೆಗೆ ಸಮಯ ಮತ್ತು ಶಕ್ತಿ ಇದೆ. ಈಗ ಬೇರೆಲ್ಲಾ ರಾಜಕೀಯ ಶಕ್ತಿಗಳ ಪೈಕಿ ಇಮ್ರಾನ್ ಖಾನ್ ಸರ್ಕಾರಕ್ಕೆ ಸೇನೆಯಿಂದ ಹೆಚ್ಚಿನ ಆರಾಮದಾಯಕ ವಾತಾವರಣ ಇದೆ. ಇಂತಹ ಸಂದರ್ಭಗಳಲ್ಲಿ ಪಾಕಿಸ್ತಾನದಲ್ಲಿ ಬಹಳಷ್ಟು ವಿಷಯಗಳು ಬದಲಾಗುತ್ತವೆ. ಅಂಥವುಗಳ ನಡುವೆ ಹೊಸ ಸಾಮಾಜಿಕ ಒಪ್ಪಂದಗಳು ಏರ್ಪಡಬೇಕೆಂಬುದು ಸಲೀಮ್ ಸಫಿ ಅವರ ಕನಸಾಗಿದೆ.

ಸ್ಕ್ರಿಪ್ಟ್: ಡಾ. ಅಶೋಕ್ ಬೆಹುರಿಯಾ, ಹಿರಿಯ ಸಹವರ್ತಿ ಮತ್ತು ಸಂಯೋಜಕ, ದಕ್ಷಿಣ ಏಷ್ಯಾ ಕೇಂದ್ರ, ಐಡಿಎಸ್ಎ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ