ಮ್ಯಾನ್ಮಾರ್ ಜೊತೆಗಿನ ಭಾರತದ ಒಪ್ಪಂದಗಳಲ್ಲಿ ಪ್ರಗತಿ
ಮ್ಯಾನ್ಮಾರ್ ಗಣರಾಜ್ಯದ ಅಧ್ಯಕ್ಷರಾದ ಯು ವಿನ್ ಮೈಂಟ್ ಭಾರತಕ್ಕೆ ಭೇಟಿ ನೀಡಿದ್ದರು. ಮ್ಯಾನ್ಮಾರ್ ಭಾರತದ “ಆಕ್ಟ್ ಈಸ್ಟ್” ಮತ್ತು ‘ನೆರೆಹೊರೆಯವರಿಗೆ ಮೊದಲು’ ಎಂಬ ನೀತಿಗಳಲ್ಲಿ ನಿರ್ಣಾಯಕವಾದ ದೇಶ. ಆಗ್ನೇಯ ಏಷ್ಯಾದೊಂದಿಗೆ ವ್ಯಾಪಕವಾದ ಆರ್ಥಿಕ ಮತ್ತು ಕಾರ್ಯತಂತ್ರದ ಸಂಪರ್ಕಗಳನ್ನು ಅಭಿವೃದ್ಧಿಪಡಿಸುವುದು ಪ್ರಾಥಮಿಕ ಗುರಿಯಾಗಿರುವುದರಿಂದ ಭಾರತಕ್ಕೆ ಸಿಎಲ್‌ಎಂವಿ (ಕಾಂಬೋಡಿಯಾ, ಲಾವೊ ಪಿಡಿಆರ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂ) ದೇಶಗಳೊಂದಿಗೆ ವ್ಯವಹರಿಸಲು ಈ ಭೇಟಿ ಬಹಳ ಮಹತ್ವದ್ದಾಗಿದೆ.
ಅಧ್ಯಕ್ಷ ಯು ವಿನ್ ಮೈಂಟ್ ಅವರನ್ನು ವಿಧ್ಯುಕ್ತವಾಗಿ ಸ್ವಾಗತಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬಳಿಕ ವಿನ್ ಮೈಂಟ್ ಜೊತೆ ಚರ್ಚಿಸಿದರು. ಪ್ರಧಾನಿ ನರೇಂದ್ರ ಮೋದಿ ಮ್ಯಾನ್ಮಾರ್ ಅಧ್ಯಕ್ಷರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಉಭಯ ನಾಯಕರು ಪರಸ್ಪರ ಕಾಳಜಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಉನ್ನತ ಮಟ್ಟದ ಭೇಟಿ ವೇಳೆ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ದೃಷ್ಟಿಯಿಂದ ಹತ್ತು ಎಂಓಯು ಮತ್ತು ಇತರೆ ಕೆಲ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಮ್ಯಾನ್ಮಾರ್ ದೇಶದ ರಾಖೈನ್ ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ. ರಾಖೈನ್ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಎರಡೂ ದೇಶಗಳು ಮ್ರೌಕ್ ಓ ಟೌನ್‌ಶಿಪ್ ಆಸ್ಪತ್ರೆಯಲ್ಲಿ ಇನ್ಸಿರೇಟರ್ ನಿರ್ಮಾಣ ಮಾಡಲು, ಬೀಜ ಸಂಗ್ರಹಣೆ ಘಟಕಗಳನ್ನು ರೂಪಿಸಲು, ನೀರು ಸರಬರಾಜು ವ್ಯವಸ್ಥೆ ಮಾಡಲು, ಐದು ಟೌನ್‌ಶಿಪ್‌ಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ವಿತರಿಸಲು ಕ್ಯಾವ್ಲಿಯಾಂಗ್- ಓಹ್ಲ್‌ಫ್ಯೂ ರಸ್ತೆ ಮತ್ತು ಕ್ಯುಂಗ್ ಟೌಂಗ್ ಹಾಗೂ ಬುಥೆಡಾಂಗ್ ಟೌನ್‌ಶಿಪ್‌ನ ಕ್ಯಾವ್ ಪಾಂಗ್ ರಸ್ತೆ ನಿರ್ಮಾಣ ಮಾಡಲು ನೆರವು ನೀಡಲಿವೆ. ಉತ್ತರ ರಾಖೈನ್‌ನಲ್ಲಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಭಾರತವು 2019ರಲ್ಲಿ ಮೊದಲೇ ತಯಾರಿಸಿದ್ದ ಮನೆಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಿತು. ಹೆಚ್ಚುವರಿಯಾಗಿ ಮೆಕಾಂಗ್-ಗಂಗಾ ಸಹಕಾರ ಕಾರ್ಯವಿಧಾನದ ಅಡಿಯಲ್ಲಿ ಹೆಚ್ಚಿನ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳು ಮತ್ತು ತ್ವರಿತ ಪರಿಣಾಮ ಯೋಜನೆಗಳ ಚೌಕಟ್ಟಿನೊಳಗೆ ಅಭಿವೃದ್ಧಿ ಸಹಕಾರವನ್ನು ಮುನ್ನಡೆಸುವ ಒಪ್ಪಂದ ಕೂಡ ಆಗಿದೆ.
ಮ್ಯಾನ್ಮಾರ್ ದೇಶವು ಭಾರತದ ಪ್ರಾದೇಶಿಕ ಸಂಪರ್ಕ ವಿನ್ಯಾಸಗಳ ಕೇಂದ್ರಭಾಗದಲ್ಲಿದೆ. ಸಿಟ್ವೆ ಬಂದರು ಮತ್ತು ಕಲಾದನ್ ಮಲ್ಟಿ ಮಾಡೆಲ್ ಸಾರಿಗೆ ಯೋಜನೆಗೆ ಭಾರತ ಆದ್ಯತೆ ನೀಡುತ್ತಿದೆ. ಫೆಬ್ರವರಿ 2020ರಲ್ಲಿ ಸಿಟ್ವೆ ಬಂದರು ಮತ್ತು ಪ್ಯಾಲೆಟ್ವಾ ಒಳನಾಡಿನ ಜಲ ಸಾರಿಗೆ ಟರ್ಮಿನಲ್ ಅನ್ನು ನಿರ್ವಹಿಸಲು ಬಂದರು ನಿರ್ವಾಹಕರನ್ನು ನೇಮಿಸಲಾಗಿದೆ. ಸಿಟ್ಟೆ ಮತ್ತು ಈಶಾನ್ಯ ಭಾರತವನ್ನು ಸಂಪರ್ಕಿಸುವ ಕಲಾದನ್ ಹೆದ್ದಾರಿಯ ಕೊನೆಯ ಭಾಗವಾಗಿರುವ ಪ್ಯಾಲೆಟ್ವಾ-ಜೋರಿನ್‌ಪುಯಿ ರಸ್ತೆ ಬಹಳ ಪ್ರಮುಖವಾದುದು. ಇದಕ್ಕೂ ಮಿಗಿಲಾಗಿ ತ್ರಿಪಕ್ಷೀಯ ಹೆದ್ದಾರಿಯ ಕಲೇವಾ-ಯಾರ್ಗಿ ವಿಭಾಗದ ಕಾಮಗಾರಿ 2021ರ ವೇಳೆಗೆ ಮುಗಿಯುವ ಸಾಧ್ಯತೆ ಇದೆ. ತ್ರಿಪಕ್ಷೀಯ ಹೆದ್ದಾರಿಯಲ್ಲಿರುವ 69 ಸೇತುವೆಗಳ ನವೀಕರಣಕ್ಕೆ ಭಾರತ ಬದ್ಧವಾಗಿದೆ. ತಮುವಿನ 1ನೇ ಹಂತದ ಆಧುನಿಕ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ನಿರ್ಮಾಣ ಮತ್ತು ಮೋಟಾರು ವಾಹನ ಒಪ್ಪಂದದ ಕುರಿತ ಚರ್ಚೆಗಳ ಆರಂಭಿಕ ತೀರ್ಮಾನವು ಕಾರ್ಯಸೂಚಿಯಲ್ಲಿದೆ. 2020ರ ಏಪ್ರಿಲ್ ವೇಳೆಗೆ ಇಂಫಾಲ್ (ಈಶಾನ್ಯ ಭಾರತದ ರಾಜ್ಯ ಮಣಿಪುರದಲ್ಲಿ) ಮತ್ತು ಮಾಂಡಲೆ ನಡುವೆ ಸಮನ್ವಯದ ಬಸ್ ಸೇವೆಯನ್ನು ಸ್ಥಾಪಿಸಲು ಖಾಸಗಿ ನಿರ್ವಾಹಕರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಭಾರತವು ಪ್ರಾಯೋಗಿಕವಾಗಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ; ಈ ಪೈಕಿ ಮ್ಯಾನ್ಮಾರ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಅಂಡ್ ಟೆಕ್ನಾಲಜಿ (ಎಂಐಐಟಿ) ಮತ್ತು ಅಡ್ವಾನ್ಸ್ಡ್ ಸೆಂಟರ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ ಅಂಡ್ ಎಜುಕೇಶನ್ (ಎಸಿಎಆರ್ ಇ) ನಂತಹ ಪ್ರಮುಖ ಯೋಜನೆಗಳನ್ನು ಒಳಗೊಂಡಿವೆ. ಮ್ಯಾನ್ಮಾರ್-ಭಾರತ ಕೈಗಾರಿಕಾ ತರಬೇತಿ ಕೇಂದ್ರಗಳು ಪಕೋಕ್ಕು ಮತ್ತು ಮೈಂಗ್ಯಾನ್‌ನಲ್ಲಿ ಯುವಕರಿಗೆ ಕೌಶಲ್ಯವನ್ನು ನೀಡುತ್ತಿವೆ, ಇದನ್ನು ಭಾರತೀಯ ಅನುದಾನ ಸಹಾಯದಿಂದ ಮಾಡಲಾಗಿದೆ. ಮೊನಿವಾ ಮತ್ತು ಥಾಟನ್‌ನಲ್ಲಿ ಹೆಚ್ಚುವರಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಚಿನ್ ದೇಶ ಮತ್ತು ನಾಗಾ ಸ್ವ-ಆಡಳಿತ ಪ್ರದೇಶದಲ್ಲಿನ ಮ್ಯಾನ್ಮಾರ್-ಭಾರತ ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಗಳು ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸಲಾಗುತ್ತಿದೆ.
ಭಾರತದ ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂಬ ನೀತಿಯು ಮಿಲಿಟರಿ ತರಬೇತಿ, ಕಣ್ಗಾವಲು ಮತ್ತು ಕಡಲ ಸುರಕ್ಷತೆಯ ಮೇಲೆ ಕೇಂದ್ರೀಕರಿಸುವ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ಕಾರ್ಯತಂತ್ರದ ಉದ್ದೇಶಗಳನ್ನು ಹೆಚ್ಚಿಸಲು ಪೂರಕವಾಗಿದೆ. ಮ್ಯಾನ್ಮಾರ್ ದಂಗೆಕೋರರನ್ನು ಗುರಿಯಾಗಿಸಿಕೊಂಡು ಭಾರತೀಯ ಮತ್ತು ಮ್ಯಾನ್ಮಾರ್ ಸೇನೆಗಳ ಜಂಟಿ ಕಾರ್ಯಾಚರಣೆಗಳು ಈ ನಿಟ್ಟಿನಲ್ಲಿ ಬಲವಾದ ಅಡಿಪಾಯವನ್ನು ಹಾಕಿಕೊಂಡಿವೆ. ಗುಪ್ತಚರಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೆಯ ಮೂಲಕ ಭಯೋತ್ಪಾದಕ ಗುಂಪುಗಳನ್ನು ಮತ್ತು ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವ ಬಗ್ಗೆ ಕೂಡ ಒತ್ತಿ ಹೇಳಲಾಗಿದೆ. ರಕ್ಷಣಾ ಸಹಕಾರ ಕುರಿತ ಒಪ್ಪಂದ ಮತ್ತು ಕಡಲ ಭದ್ರತಾ ಸಹಕಾರ ಹಾಗೂ ಬಿಳಿ ಹಡಗು ದತ್ತಾಂಶಗಳ ವಿನಿಮಯ ಕುರಿತು ದ್ವಿಪಕ್ಷೀಯ ಭದ್ರತಾ ನೆರವುಗಳನ್ನು ಹೆಚ್ಚಿಸಲಾಗಿದೆ.
ಏಷ್ಯಾದ ಕ್ರಿಯಾತ್ಮಕ ಆರ್ಥಿಕತೆಗಳಲ್ಲಿ ಒಂದಾಗಿ ಮ್ಯಾನ್ಮಾರ್ ದೇಶವು ಭಾರತಕ್ಕೆ ಹಲವಾರು ಅವಕಾಶಗಳನ್ನು ನೀಡುತ್ತದೆ. ಆದಾಗ್ಯೂ ಆರ್ಥಿಕ ಸಂಬಂಧಗಳು ದ್ವಿಪಕ್ಷೀಯ ವ್ಯಾಪಾರವು 1.75 ಶತಕೋಟಿ ಯುಎಸ್ ಡಾಲರ್ ಗಳಷ್ಟಿದೆ. ಸಂಪರ್ಕವನ್ನು ನವೀಕರಿಸುವುದು, ಮಾರುಕಟ್ಟೆ ಪ್ರವೇಶ, ಹಣಕಾಸಿನ ವಹಿವಾಟುಗಳಿಗೆ ಸಹಾಯ ಮಾಡುವುದು, ವ್ಯವಹಾರದಿಂದ ವ್ಯವಹಾರಕ್ಕೆ ಸಂಪರ್ಕವನ್ನು ಸರಳೀಕರಿಸುವುದು ಹಾಗೂ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವ್ಯಾಪಾರ ಒಪ್ಪಂದಗಳನ್ನು ಬೆಂಬಲಿಸುವ ಅವಶ್ಯಕತೆಯಿದೆ. ಭಾರತದ ಇಂಧನ ಸಂಬಂಧಗಳಲ್ಲಿ ಮ್ಯಾನ್ಮಾರ್ ಪ್ರಮುಖ ಪಾಲುದಾರ ದೇಶ. ಹಾಗಾಗಿ ಇಂಧನ ಕ್ಷೇತ್ರದಲ್ಲಿ ಉತ್ತಮ ಏಕೀಕರಣದ ಅವಶ್ಯಕತೆಯಿದೆ. ಭಾರತೀಯ ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ ಯುಗಳು) ಮ್ಯಾನ್ಮಾರ್‌ನ ಅಪ್‌ಸ್ಟ್ರೀಮ್‌ನಲ್ಲಿ ಹೂಡಿಕೆ ಮಾಡಿವೆ ಮತ್ತು ಉತ್ಪಾದನೆಯ ಒಂದು ಭಾಗವನ್ನು ಭಾರತಕ್ಕೆ ರಫ್ತು ಮಾಡುವ ಅವಕಾಶಗಳನ್ನು ಅನ್ವೇಷಿಸುತ್ತಿವೆ.
ದ್ವಿಪಕ್ಷೀಯ ಸಂಬಂಧಗಳು ಹಂಚಿಕೆಯು ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳಲ್ಲಿ ಬೇರೂರಿದೆ. ಅಧ್ಯಕ್ಷ ಯು ವಿನ್ ಮೈಂಟ್ ಅವರು ಭಾರತ ಪ್ರವಾಸದ ವೇಳೆ ಬೋಧ್ ಗಯಾ ಮತ್ತು ಆಗ್ರಾಗೆ ಭೇಟಿ ನೀಡಿದ್ದರು. ಭೌಗೋಳಿಕ-ಕಾರ್ಯತಂತ್ರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶಾಲವಾದ ಇಂಡೋ-ಪೆಸಿಫಿಕ್ ಸಹಕಾರದಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಏರಿಸುವಲ್ಲಿ ಭಾರತವು ಹೂಡಿಕೆಯನ್ನು ಮುಂದುವರಿಸಲಿದೆ.
ಸ್ಕ್ರಿಪ್ಟ್: ಡಾ. ತಿಟ್ಲಿ ಬಸು, ಪೂರ್ವ ಮತ್ತು ಆಗ್ನೇಯ ಏಷ್ಯಾದ ಕಾರ್ಯತಂತ್ರದ ವಿಶ್ಲೇಷಕ

Comments
Post a Comment