2019ರ ವಿಶ್ವಕಪ್ ಇಂದಿನಿಂದ ಆರಂಭ
12ನೇ ವಿಶ್ವಕಪ್ ಕ್ರಿಕೆಟ್ ಇಂದಿನಿಂದ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಆರಂಭಗೊಳ್ಳುತ್ತಿದೆ. 30ರಿಂದ ಜುಲೈ 14ರ ತನಕ ಇದು ನಡೆಯಲಿದೆ. ಒಂದೂವರೆ ತಿಂಗಳ ಕಾಲ ಈ ಪಂದ್ಯಾವಳಿ ನಡೆಯಲಿದ್ದು 10 ತಂಡಗಳು ಪಾಲ್ಗೊಳ್ಳುತ್ತಿವೆ. ಹಿಂದೆ ನಾಲ್ಕು ಬಾರಿ ಅಂದರೆ 1975, 1979, 1983 ಮತ್ತು 1999ರಲ್ಲಿ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ನಡೆದಿತ್ತು. ಈ ಬಾರಿ ಐದನೇ ವಿಶ್ವಕಪ್ ಪಂದ್ಯಾವಳಿಗೆ ಇಂಗ್ಲೆಂಡ್ ಸಾಕ್ಷಿಯಾಗುತ್ತಿದೆ.
ಕೆಲವೇ ದೇಶಗಳು ಕ್ರಿಕೆಟ್ ಆಡುತ್ತಿದ್ದರೂ (ಬ್ರಿಟಿಷ್ ಸಾಮ್ರಾಜ್ಯದ ವಸಾಹತುಗಳ ಪೈಕಿ ಹೆಚ್ಚಿನವುಗಳು) 'ವಿಲೋಗಳ ಆಟ' ಎಂದು ಖ್ಯಾತಿಯಾಗಿರುವ ಕ್ರಿಕೆಟ್ ಅನೇಕ ಕಡೆ ಬಹಳ ಜನಪ್ರಿಯವಾಗಿದೆ. ಪ್ರೇಕ್ಷಕರು ಮತ್ತು ಬೆಂಬಲಿಗರಿಗೆ ಸಂಬಂಧಿಸಿದಂತೆ, ಇದು ಫುಟ್ಬಾಲ್ ಮತ್ತು ಲಾನ್ ಟೆನಿಸ್ ನಂತರದ ಸ್ಥಾನದಲ್ಲಿದೆ. ಉಪ-ಖಂಡದಲ್ಲಿ ಕ್ರಿಕೆಟ್ ಆಟವು ಬಹುಮಟ್ಟಿಗೆ ಒಂದು ಧರ್ಮವಾಗಿದೆ ಮತ್ತು ಕ್ರಿಕೆಟಿಗರನ್ನು ದೇವರಂತೆ ಕಾಣಲಾಗುತ್ತದೆ. ಉಪ-ಖಂಡದ ತಂಡಗಳ ನಡುವಿನ ಪೈಪೋಟಿಯು ತುಂಬಾ ಹೆಚ್ಚಾಗಿದೆ. ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ದೇಶಗಳು ಸೇರಿ ಒಟ್ಟು ನಾಲ್ಕು ಬಾರಿ ವಿಶ್ವ ಕಪ್ ಗಳನ್ನು ಗೆದ್ದುಕೊಂಡಿವೆ. ಕ್ರಿಕೆಟಿಗರನ್ನು ಅನುಸರಿಸುತ್ತಿರುವ ಬಹುಸಂಖ್ಯೆಯ ಅಭಿಮಾನಿಗಳು ವಿಶ್ವದ ಈ ಭಾಗದಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ಪಾಕಿಸ್ತಾನದ ಇಮ್ರಾನ್ ಖಾನ್ ಅಲ್ಲಿನ ಪ್ರಧಾನ ಮಂತ್ರಿ ಆಗಿದ್ದಾರೆ. ಹಲವು ಕ್ರಿಕೆಟಿಗರು ದಕ್ಷಿಣದ ಎಲ್ಲಾ ಪ್ರಮುಖ ಕ್ರಿಕೆಟ್ ರಾಷ್ಟ್ರಗಳಲ್ಲಿ ಮಂತ್ರಿಗಳು ಮತ್ತು ಶಾಸಕರಾಗಿದ್ದಾರೆ.
ಪ್ರಸ್ತುತ ವಿಶ್ವ ಕಪ್ನ ಮೊದಲ ಪಂದ್ಯವನ್ನು ಇಂಗ್ಲೆಂಡ್ ನ ಓವಲ್ನಲ್ಲಿ ಆಡಲಾಗುತ್ತದೆ, ಇದರಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಫೈನಲ್ ಪಂದ್ಯ ಲಾರ್ಡ್ಸ್ ನಲ್ಲಿ ನಡೆಯಲಿದೆ. ಇದು ಮೆಕ್ಕಾ ಆಫ್ ಕ್ರಿಕೆಟ್ ಎಂದು ಪ್ರಸಿದ್ಧಿಯಾಗಿದೆ.
ಪಂದ್ಯಾವಳಿಯ ಸ್ವರೂಪದ ಬಗ್ಗೆ ಹೇಳುವುದಾದರೆ 10 ತಂಡಗಳ ಗುಂಪು ಇರಲಿದೆ. ಪ್ರತಿ ತಂಡವು ಉಳಿದ 9 ತಂಡಗಳ ವಿರುದ್ಧ ಅಡಲಿವೆ. ಕೊನೆಯ ನಾಲ್ಕು ತಂಡಗಳು ಸೆಮಿ ಫೈನಲ್ ಹಂತಕ್ಕೆ ತಲುಪಲಿವೆ. ಪಂದ್ಯಾವಳಿಯಲ್ಲಿ ಅಸೋಸಿಯೇಟ್ ತಂಡಗಳ ಕೊರತೆಯಿಂದಾಗಿ 10-ತಂಡಗಳ ಪಂದ್ಯಾವಳಿ ಆಗಿ ಇದು ಪರಿವರ್ತನೆಗೊಂಡಿದೆ.. ಟೆಸ್ಟ್ ಆಡುವ ರಾಷ್ಟ್ರಗಳು 10 ರಿಂದ 12 ರವರೆಗಿನ ಹೆಚ್ಚಳವಾಗಿವೇ. ಆದರೆ, ಜೂನ್ 2017 ರಲ್ಲಿ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನದ ಟೆಸ್ಟ್ ತಂಡಗಳು ಎಂದು ಗುರುತಿಸಿಕೊಂಡಿವೆ. ಆದರೆ, ಟೆಸ್ಟ್ ಪಂದ್ಯಾವಳಿಗಳನ್ನು ಆಡುವ ಎಲ್ಲಾ ರಾಷ್ಟ್ರಗಳಿಲ್ಲದೆ ಸ್ಪರ್ಧೆಗೆ ಸಾಕ್ಷಿ ಆಗಿರುಬ ಮೊದಲ ವಿಶ್ವ ಕಪ್ ಇದು ಆಗಲಿದೆ.
ದುಃಖಕರವೆಂದರೆ, ಕ್ರಿಕೆಟ್ ಆಟಕ್ಕೆ ಜನ್ಮ ನೀಡಿದ ಇಂಗ್ಲೆಂಡ್ ಈವರೆಗೆ ವಿಶ್ವಕಪ್ ಗೆದ್ದಿಲ್ಲ. ಭಾರತ ತಂಡ 1983 ಮತ್ತು 2011ರಲ್ಲಿ ವಿಶ್ವಕಪ್ ಗೆದ್ದಿದೆ. ಭಾರತ 2003 ರಲ್ಲಿ ರನ್ನರ್ ಅಪ್ ಆಗಿತ್ತು. ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಆಸ್ಟ್ರೇಲಿಯಾದಲ್ಲಿ 2015ರ ವಿಶ್ವ ಕಪ್ನಲ್ಲಿ ಭಾರತ ಸೆಮಿಫೈನಲ್ ಹಂತ ತಲುಪಿತ್ತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕನ್ನರು, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡಿಯನ್ಸ್ ತಂಡಗಳು ವಿಶ್ವಕಪ್ ನಲ್ಲಿ ಪ್ರಬಲ ಪೈಪೋಟಿ ನೀಡಬಹುದು.. ಸಹಜವಾಗಿ, ವಿಶ್ವಕಪ್ನಲ್ಲಿ ಯಾವುದೇ ತಂಡವನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸ್ಪೂರ್ತಿದಾಯಕ ನಾಯಕ ಮತ್ತು ಪ್ರಚಂಡ ಹೋರಾಟಗಾರರಾಗಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮುಂತಾದ ಎಲ್ಲ ವಿಭಾಗಗಲ್ಲಿ ಭಾರತವು ಉತ್ತಮ ನಿರ್ವಹಣೆ ತೋರಿದೆ. ಸಹಜವಾಗಿ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಂಡದ ಹಿರಿಯ ಸದಸ್ಯ ಮತ್ತು 2011 ಮತ್ತು 2015 ರ ಭಾರತೀಯ ತಂಡಗಳ ನಾಯಕನಾಗಿದ್ದರು. ಶ್ರೀಲಂಕಾದ ವಿರುದ್ಧ 2011 ರಲ್ಲಿ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಭಾರತದ "ಗೆಲುವನ್ನು" ಸಿಕ್ಸ್ ಭಾರಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಈ ವಿಶ್ವ ಕಪ್ ಅನ್ನು, ಸಚಿನ್ ತೆಂಡೂಲ್ಕರ್ ಅವರಿಗೆ ಉಡುಗೊರೆಯನ್ನಾಗಿ ನೀಡಲಾಗಿತ್ತು.
ಜೂನ್ 5 ರಂದು ಸೌತ್ಆಂಪ್ಟನ್ ರೋಸ್ ಬೌಲ್ನಲ್ಲಿ ದಕ್ಷಿಣ ಆಫ್ರಿಕನ್ನರ ವಿರುದ್ಧ ಭಾರತ ವಿಶ್ವ ಕಪ್ ಅಭಿಯಾನ ಪ್ರಾರಂಭವಾಗುತ್ತದೆ. 9 ಮತ್ತು 13 ನೇ ಜೂನ್ ರಂದು ಅನುಕ್ರಮವಾಗಿ ಆಸ್ಟ್ರೇಲಿಯಾದ ಮತ್ತು ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳಿವೆ. ನಂತರ, ಮ್ಯಾಂಚೆಸ್ಟರ್ ನ ಓಲ್ಡ್ ಟ್ರ್ಯಾಫೋರ್ಡ್ನಲ್ಲಿ ಜೂನ್ 16 ರಂದು ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ. ಈ ನಿರ್ದಿಷ್ಟ ಪಂದ್ಯಕ್ಕೆ ಟಿಕೆಟ್ ಈಗಾಗಲೇ ಮಾರಾಟಗೊಂಡಿದೆ! ವಿಶ್ವಕಪ್ ವೇದಿಕೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಯಾವತ್ತೂ ಸೋತಿಲ್ಲ. ಇದು ಈ ಬಾರಿಯೂ ಮುಂದುವರಿಯುವ ವಿಶ್ವಾಸ ಭಾರತೀಯರದ್ದು. ನಂತರ ಭಾರತವು ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಆತಿಥೇಯ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಆಡುತ್ತಿದೆ.
ಜುಲೈನಲ್ಲಿ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಮೊದಲ ಸೆಮಿ-ಫೈನಲ್ ಆಟ ನಡೆಯಲಿದೆ. ಎರಡನೇ ಮತ್ತು ಮೂರನೇ ಕ್ವಾಲಿಫೈಯರ್ಗಳ ಮಧ್ಯೆ ಜುಲೈ 11 ರಂದು ಏಜ್ ಬಾಸ್ಟನ್ ನಲ್ಲಿ ಪಂದ್ಯ ನಡೆಯಲಿದೆ. ವಿಜೇತ ತಂಡವು ಟ್ರೋಫಿ ಮತ್ತು $ 4 ಮಿಲಿಯನ್ ನಗದು ಪಡೆದುಕೊಳ್ಳಲಿದೆ..
ಲೇಖನ: ಕೌಶಿಕ್ ರಾಯ್, ಆಕಾಶವಾಣಿ ಸುದ್ದಿ ವಿಶ್ಲೇಷಕರು

Comments
Post a Comment