ಐಬಿಎಸ್‌ಎ ಸಹಕಾರ ವೃದ್ಧಿ

ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ದೇಶಗಳನ್ನೊಳಗೊಂಡ ಐಬಿಎಸ್ಎ ದೇಶಗಳ ಪ್ರತಿನಿಧಿಗಳ ಸಭೆ ಭಾರತದ ಕೊಚ್ಚಿಯಲ್ಲಿ ನಡೆಯಿತು. ಇದು 2018 ರ ಸೆಪ್ಟಂಬರ್‌ ನಲ್ಲಿ ಯುಎನ್ ಜನರಲ್ ಅಸೆಂಬ್ಲಿ ಅಧಿವೇಶನದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ ನಲ್ಲಿ ನಡೆದ 9 ನೇ ಐಬಿಎಸ್ಎ ತ್ರಿಪಕ್ಷೀಯ ಸಚಿವರ ಆಯೋಗದ ಸಭೆಯ ಅನುಸರಣೆಯಾಗಿತ್ತು.  ಐಬಿಎಸ್ಎ ಯು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಗ್ಗೂಡಿಸುವ ಅನನ್ಯ ವೇದಿಕೆಯಾಗಿದೆ. ಮೂರು ವಿಭಿನ್ನ ಖಂಡಗಳಿಂದ ದೊಡ್ಡ ಪ್ರಜಾಪ್ರಭುತ್ವಗಳು ಮತ್ತು ಪ್ರಮುಖ ಆರ್ಥಿಕತೆಗಳು ಇಲ್ಲಿವೆ. ಈ ದೇಶಗಳು ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತವೆ. ಈ ವೇದಿಕೆ ಮೂಲಕ ಅಭಿವೃದ್ಧಿಶೀಲ, ಬಹುಸಂಖ್ಯಾತ, ಬಹು ಸಾಂಸ್ಕೃತಿಕ, ಬಹು-ಜನಾಂಗೀಯ, ಬಹು-ಭಾಷಾ ಮತ್ತು ಬಹು-ಧಾರ್ಮಿಕ ರಾಷ್ಟ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜೂನ್ 2003 ರಲ್ಲಿ ಬ್ರೆಸಿಲಿಯದಲ್ಲಿ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಪ್ರಾರಂಭವಾದ ಐಬಿಎಸ್ಎ ಕಳೆದ ವರ್ಷ ತನ್ನ 15 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.
ಐಬಿಎಸ್ಎ ಯು ಸಮಾನ-ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ದಕ್ಷಿಣ-ದಕ್ಷಿಣ ಸಮೂಹವಾಗಿದ್ದು, ತಮ್ಮ ಜನರ ಮತ್ತು ಅಭಿವೃದ್ಧಿಶೀಲ ಜಗತ್ತಿನ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಹಾಗೂ ಸಮರ್ಥನೀಯ ಅಭಿವೃದ್ಧಿಯನ್ನು ಒಳಗೊಳ್ಳಲು ಬದ್ಧವಾಗಿದೆ. ಐಬಿಎಸ್ಎ ಸಂವಾದ ವೇದಿಕೆ ಆಧಾರವಾಗಿರುವ ತತ್ವಗಳು, ರೂಢಿಗಳು ಮತ್ತು ಮೌಲ್ಯಗಳು ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ಗೌರವ, ಕಾನೂನು ನಿಯಮ ಮತ್ತು ಬಹುಪಕ್ಷೀಯತೆಯ ಬಲಪಡಿಸುವಿಕೆಗೆ ಆದ್ಯತೆ ನೀಡಿದೆ. ಐಬಿಎಸ್ಎ ಸಹಕಾರವು ಸರ್ಕಾರಗಳ ನಡುವಿನ (ಜಿ 2 ಜಿ) ಸಮಾಲೋಚನೆ ಮತ್ತು ಸಮನ್ವಯವಾಗಿದ್ದು ಜಾಗತಿಕ ಸಮಸ್ಯೆಗಳ ಬಗ್ಗೆ ಕಾಳಜಿಯನ್ನು ಹೊಂದಿದೆ. ಮೂರು ರಾಷ್ಟ್ರಗಳ ಸಾಮಾನ್ಯ ಪ್ರಯೋಜನಕ್ಕಾಗಿ ಯೋಜನೆಗಳ ಮೇಲೆ ತ್ರಿಪಕ್ಷೀಯ ಸಹಯೋಗ ಮತ್ತು ಐಬಿಎಸ್ಎ ನಿಧಿ ಮೂಲಕ ಇತರ ಅಭಿವೃದ್ಧಿಯ ದೇಶಗಳಿಗೆ ಯೋಜನೆಗಳನ್ನು ತೆಗೆದುಕೊಳ್ಳುವ ಮೂಲಕ ಸಹಾಯ ಮಾಡುತ್ತದೆ. ತಜ್ಞರು ಮತ್ತು ತರಬೇತಿ ಮೂಲಕ ದಕ್ಷಿಣ-ದಕ್ಷಿಣ ಸಹಕಾರದ ಅಪೇಕ್ಷಣೀಯತೆ ಮತ್ತು ಕಾರ್ಯಸಾಧ್ಯತೆಯು IBSA ಯ ಯಶಸ್ಸನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಇಲ್ಲಿಯವರೆಗೆ ಐದು ಐಬಿಎಸ್ಎ ನಾಯಕತ್ವದ ಸಭೆಗಳನ್ನು ನಡೆಸಲಾಗಿದೆ. ಅಕ್ಟೋಬರ್ 5ರಲ್ಲಿ ಐದನೇ ಐಬಿಎಸ್ಎ ಶೃಂಗಸಭೆ ಪ್ರಿಟೋರಿಯಾದಲ್ಲಿ ನಡೆಯಿತು. 6 ನೇ ಐಬಿಎಸ್ಎ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ. ಮೂರು ರಾಷ್ಟ್ರಗಳ ನಾಯಕರ ಪರಸ್ಪರ ಅನುಕೂಲಕರ ದಿನಾಂಕಗಳ ಲಭ್ಯವಿಲ್ಲದ ಕಾರಣ 6 ನೇ ಶೃಂಗಸಭೆ ವಿಳಂಬವಾಯಿತು. ಭವಿಷ್ಯದಲ್ಲೇ ಆರನೆಯ ಶೃಂಗಸಭೆಯನ್ನು ಆಯೋಜಿಸುವ ಮಹತ್ವವು ಎಲ್ಲ ನಾಯಕರಿಂದ ಗುರುತಿಸಲ್ಪಟ್ಟಿದೆ ಮತ್ತು ಸ್ವೀಕರಿಸಲ್ಪಟ್ಟಿದೆ. 3 ದೇಶಗಳಲ್ಲಿನ ಚುನಾವಣಾ ಆವರ್ತನದ ನಂತರ ಶೀಘ್ರದಲ್ಲೇ ಮುಂದಿನ ಸಭೆ ನಡೆಸಲು ತೀರ್ಮಾನಿಸಲಾಗುವುದು. ಮೂರು ದೇಶಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಮತ್ತು ಜಂಟಿ ಕಾರ್ಯಕ್ರಮಗಳು, ಚಟುವಟಿಕೆಗಳ ಮೂಲಕ ತಮ್ಮ ವಿಸ್ತರಣೆಯನ್ನು ಸಾಧಿಸಲು ಸಚಿವ ಮತ್ತು ಕಾರ್ಯಾಚರಣೆಯ ಮಟ್ಟದಲ್ಲಿ ಸಭೆಗಳು ಕೂಡ ನಡೆಯುತ್ತಿವೆ ಎಂಬುದನ್ನು ಗಮನಿಸಬಹುದು.  
2004 ರಲ್ಲಿ ಮೂರು ರಾಷ್ಟ್ರಗಳು ಪ್ರಾರಂಭಿಸಿದ ಪ್ರಮುಖ ಯೋಜನೆಗಳಲ್ಲಿ ಐವಿಸಿಎ ಫಂಡ್ ಫಾರ್ ಎಲಿವೇಶನ್ ಆಫ್ ಪವರ್ಟಿ ಅಂಡ್ ಹಂಗರ್ ಕೂಡ ಒಂದು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಇದು ಅನನ್ಯ ಉಪಕ್ರಮವಾಗಿದೆ. ಇಲ್ಲಿಯವರೆಗೂ, ಸುರಕ್ಷಿತ ಕುಡಿಯುವ ನೀರು, ಕೃಷಿ ಮತ್ತು ಜಾನುವಾರು, ಸೌರಶಕ್ತಿ, ತ್ಯಾಜ್ಯ ನಿರ್ವಹಣೆ, ಆರೋಗ್ಯ ಮುಂತಾದವುಗಳಲ್ಲಿ 20 ಪಾಲುದಾರ ಅಭಿವೃದ್ಧಿಶೀಲ ದೇಶಗಳಲ್ಲಿ IBSA 31 ಯೋಜನೆಗಳನ್ನು ಬೆಂಬಲಿಸಿದೆ.  
ಐಬಿಎಸ್ಎ ನಿಧಿ 2006ರಲ್ಲಿ ವಿಶ್ವಸಂಸ್ಥೆ ದಕ್ಷಿಣ-ದಕ್ಷಿಣ ಸಹಭಾಗಿತ್ವ ಪ್ರಶಸ್ತಿ (ಹೈಟಿ ಮತ್ತು ಗಿನಿ-ಬಿಸ್ಸೌದಲ್ಲಿನ ಯೋಜನೆಗಳಿಗಾಗಿ), 2010 ರಲ್ಲಿ ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ಎಡಿಜಿ ಪ್ರಶಸ್ತಿ ಮತ್ತು ದಕ್ಷಿಣ-ದಕ್ಷಿಣ ಚಾಂಪಿಯನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಮನ್ನಣೆಗಳಿಗೆ ಪಾತ್ರವಾಗಿದೆ. ವಿಶ್ವದ ಇತರ ಭಾಗಗಳಲ್ಲಿ ಅಭಿವೃದ್ಧಿ ಅನುಭವಗಳನ್ನು ಹಂಚಿಕೊಳ್ಳಲು, ನವೀನ ವಿಧಾನಗಳನ್ನು ಬಳಸುವಲ್ಲಿ ಮೂರು ರಾಷ್ಟ್ರಗಳ ಕೆಲಸವನ್ನು ಗುರುತಿಸಿ ಪುರಸ್ಕಾರ ನೀಡಲಾಗಿದೆ. IBSA ತ್ರಿಪಕ್ಷೀಯ ಸಹಕಾರದ ಇನ್ನೊಂದು ಪ್ರಮುಖ ಅಂಶವೆಂದರೆ ರಕ್ಷಣಾ ಪ್ರದೇಶದ IBSAMAR (IBSA ಕಡಲಾಭ್ಯಾಸ) ಜಂಟಿ ನೌಕಾಭ್ಯಾಸ. IBSAMAR ಆರು ಆವೃತ್ತಿಗಳನ್ನು ಇಲ್ಲಿಯವರೆಗೆ ಆಯೋಜಿಸಲಾಗಿದೆ. ಇತ್ತೀಚಿನವು ಅಕ್ಟೋಬರ್, 2018 ರಲ್ಲಿ ದಕ್ಷಿಣ ಆಫ್ರಿಕಾದ ಕರಾವಳಿಯಲ್ಲಿ ನಡೆದಿದೆ.
ಕೊಚ್ಚಿಯಲ್ಲಿ ನಡೆದ ಪ್ರತಿನಿಧಿಗಳ ಸಭೆಯು ಇತ್ತೀಚಿನ ಚಟುವಟಿಕೆಗಳ ಸಂಗ್ರಹವನ್ನು ತೆಗೆದುಕೊಂಡು ಸಹಕಾರವನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದೆ. ವಿಶೇಷವಾಗಿ ಪ್ರವಾಸೋದ್ಯಮ ಮತ್ತು ದಕ್ಷಿಣ-ದಕ್ಷಿಣ ಪಾಲುದಾರಿಕೆಯ ಪ್ರದೇಶಗಳಲ್ಲಿ ಸಹಕಾರ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಐಬಿಎಸ್ಎಯ ಹದಿನೈದನೇ ವಾರ್ಷಿಕೋತ್ಸವದ ನೆನಪಿಗಾಗಿ ಕಳೆದ ಒಂದು ವರ್ಷದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು ಮತ್ತು ಗಾಂಧಿ-ಮಂಡೇಲಾ ಸ್ಮಾರಕ ಸ್ವಾತಂತ್ರ್ಯ ಉಪನ್ಯಾಸವನ್ನು ಜನವರಿ 2019 ರಲ್ಲಿ ನವದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷರು ನೀಡಿದ್ದರೆಂಬುದನ್ನು ಬಹಳ ಸಂತೋಷದಿಂದ ನೆನಪಿಸಿಕೊಳ್ಳಲಾಯಿತು. ಮೂರು ರಾಷ್ಟ್ರಗಳ ಪ್ರತಿನಿಧಿಗಳ ನಡುವಿನ ಸಭೆಯು IBSA ಸದಸ್ಯ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಹಯೋಗಕ್ಕೆ ಮತ್ತಷ್ಟು ಪ್ರರೇಪಣೆ ನೀಡಿದೆ. 
ಲೇಖನ : ಅಶೋಕ್‌ ಸಜ್ಜನಹಾರ್, ಮಾಜಿ ರಾಜತಾಂತ್ರಜ್ಞ ಮತ್ತು ಅಧ್ಯಕ್ಷರು, ಇನ್‌ ಸ್ಟಿಟ್ಯೂಟ್‌ ಆಫ್‌ ಗ್ಲೋಬಲ್‌ ಸ್ಟಡೀಸ್

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ