ಉಗ್ರ ದಾಳಿಗಳ ಬೆನ್ನಲ್ಲೇ ಪಾಕ್‌ ಗೆ ಹಣಕಾಸು ನೆರವು

ಹಲವಾರು ತಿಂಗಳುಗಳ ಕಾಲದ ಚರ್ಚೆಯ ನಂತರ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂತಿಮವಾಗಿ ಪಾಕಿಸ್ತಾನಕ್ಕೆ ಮತ್ತೊಂದು ಹಣಕಾಸಿನ ನೆರವನ್ನು ನೀಡಿದೆ. ಪಾಕಿಸ್ತಾನ ಮತ್ತು ಭೇಟಿ ನೀಡಿದ ಐಎಂಎಫ್‌ ತಂಡದ ನಡುವಿನ ಅಂತಿಮ ಸಮಾಲೋಚನೆಗಳ ಬಳಿಕ ಹಣಕಾಸು ನೆರವನ್ನು ನೀಡಲು ನಿರ್ಧರಸಲಾಯಿತು ಎಂದು ಪಾಕಿಸ್ತಾನದ ಆರ್ಥಿಕ ಸಚಿವರ ಸಲಹೆಗಾರ ಡಾ. ಹಫೀಜ್ ಶೇಖ್ ಅವರು ತಿಳಿಸಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು IMF ದೇಶಕ್ಕೆ 6 ಶತಕೋಟಿ ಡಾಲರ್‌ ಹಣದ ನೆರವನ್ನು ನೀಡಲಿದೆ.  ಇಸ್ಲಾಮಾಬಾದ್ ಭಾರಿ ಸಾಲದ ಸುಳಿಯಲ್ಲಿ ಸಿಲುಕಿದೆ ಮತ್ತು ತನ್ನ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು, ದೇಶದ ಆರ್ಥಿಕತೆಯನ್ನು ಚಲಾಯಿಸಲು ಡಾಲರ್ 18 ಬಿಲಿಯನ್ಗಳಷ್ಟು‌ ಹಣದ ಕೊರತೆಯನ್ನು ಎದುರಿಸುತ್ತಿದೆ. 
ಎಂಟು ತಿಂಗಳ ಹಿಂದೆ ಇಮ್ರಾನ್ ಖಾನ್ ದೇಶದ ಪ್ರಧಾನಿಯಾಗಿ ಚುನಾಯಿತರಾಗಿದ್ದ ಸಂದರ್ಭದಲ್ಲಿ; ಐಎಂಎಫ್‌ ಕಠಿಣ ನಿಯಮಗಳನ್ನು ನಮ್ಮ ಮುಂದಿಟ್ಟರೆ ನಾವು ಹಣಕಾಸು ನೆರವನ್ನು ಕೇಳುವುದಿಲ್ಲ ಎಂದು ಹೇಳಿದ್ದರು. ಅವರು ಹಣಕಾಸು ನೆರವಿಗಾಗಿ ಚೀನಾ, ಸೌದಿ ಅರೇಬಿಯಾ ಮತ್ತು ಯುಎಇಯಂತಹ ಸ್ನೇಹಿತರ ಮೇಲೆ ಹೆಚ್ಚು ಅವಲಂಬಿತರಾದರು. ಆದರೆ IMF ಹಣಕಾಸು ಪ್ಯಾಕೇಜ್‌ ಹೊಸ ನಿಯಮಗಳನ್ನು ಸೇರಿಸುತ್ತಿದೆ ಮತ್ತು ಇಮ್ರಾನ್ ಖಾನ್ IMFಗೆ ಸೂಚಿಸಿದ ಎಲ್ಲಾ ನಿಯಮಗಳನ್ನು ಒಪ್ಪಿಕೊಂಡಿದ್ದಾರೆ. ಕಡಿದಾದ ವಿತ್ತೀಯ ಪುನರ್ವ್ಯವಸ್ಥೆ ಮತ್ತು ಹಣಕಾಸಿನ ಮರು ರೂಪಣೆಗಳ ಕುರಿತ ಅಂಶಗಳು ನಿಯಮಗಳಲ್ಲಿವೆ, ಹೆಚ್ಚಿನ ಆದಾಯವನ್ನು ಸೃಷ್ಟಿಸಲು ತೆರಿಗೆ ದರಗಳನ್ನು ಹೆಚ್ಚಿಸುವುದು, ವಿಶಾಲ ವ್ಯಾಪ್ತಿಯ ರಚನಾತ್ಮಕ ಸುಧಾರಣೆಗಳು, ಸಬ್ಸಿಡಿಗಳ ಮೊಟಕುಗೊಳಿಸುವಿಕೆ, ಮತ್ತು ಮಾರುಕಟ್ಟೆ ನಿರ್ಧಾರಿತ ವಿನಿಮಯ ದರಗಳನ್ನು ಅಳವಡಿಸುವುದು ಇತ್ಯಾದಿ ಅಂಶಗಳು ಇದರಲ್ಲಿವೆ. 
ಇಮ್ರಾನ್ ಖಾನ್ ಅವರು ತೆರಿಗೆಗಳನ್ನು ಹೆಚ್ಚಿಸುವುದಿಲ್ಲ ಮತ್ತು ವಿದ್ಯುತ್ ಮತ್ತು ಅನಿಲ ಶುಲ್ಕವನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗೆ ಕ್ರಮ ಕೈಗೊಂಡಲ್ಲಿ ಜನರು ಹೆಚ್ಚಿನ ತೊಂದರೆಗಳಿಗೆ ಒಳಗಾಗುತ್ತಾರೆ. ಈ ಕ್ರಮಗಳು ಆದಾಯವನ್ನು ಕತ್ತರಿಸುವುದು ಮತ್ತು ಹಣದುಬ್ಬರವನ್ನು ಹೆಚ್ಚಿಸುವುದು ಎಂದರ್ಥ. ದೇಶವು ಈಗಾಗಲೇ ಎಲ್ಲಾ ಅಗತ್ಯ ಸರಕುಗಳ ಬೆಲೆ ಏರಿಕೆಯನ್ನು ಎದುರಿಸುತ್ತಿದೆ. ಪಾಕಿಸ್ತಾನವು ಈಗಾಗಲೇ ಫೈನಾನ್ಷಿಯಲ್‌ ಟಾಸ್ಕ್‌ ಫೋರ್ಸ್‌ ನ ಬೂದು ಪಟ್ಟಿಯಲ್ಲಿದೆ ಮತ್ತು ಅಗತ್ಯವಿದ್ದರೆ ಕಪ್ಪುಪಟ್ಟಿಗೆ ಸೇರುವ ಅಪಾಯವನ್ನು ಎದುರಿಸುತ್ತಿದೆ.  
ಪಾಕಿಸ್ತಾನ ಪ್ರಧಾನಮಂತ್ರಿ ಖಾನ್‌ ಅವರು ಹಣಕಾಸು ಮಂತ್ರಿ ಅಸದ್ ಉಮರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಗವರ್ನರ್‌ ತಾರಿಕ್ ಬಾಜ್ವಾ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದಾರೆ. ಅವರ ಬದಲಿಗೆ ಮಾಜಿ ಐಎಂಎಫ್ ಅಧಿಕಾರಿಗಳನ್ನು ನೇಮಿಸಿರುವುದು ದೇಶದ ಆರ್ಥಿಕತೆಯು ಕುಸಿತದಲ್ಲಿದೆ ಎಂದು ಸೂಚಿಸುತ್ತದೆ. ಜಿಡಿಪಿ ಬೆಳವಣಿಗೆ 3.9% ಕ್ಕೆ ಇಳಿದಿದೆ ಮತ್ತು ಹಣದುಬ್ಬರ 9.4% ರಷ್ಟಿದೆ. ವಿದೇಶಿ ವಿನಿಮಯ ನಿಕ್ಷೇಪಗಳು ಕೇವಲ $ 9 ಬಿಲಿಯನ್ಗಳಿಗೆ ಇಳಿದಿದೆ.
ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ IMF ನಿಯಮಗಳನ್ನು ಅಂಗೀಕರಿಸುವಲ್ಲಿ ಹೆಚ್ಚು ಯೋಚಿಸಲಿಲ್ಲ. ಪಾಕಿಸ್ತಾನವು ಕಟ್ಟುನಿಟ್ಟಾದ ಹಣಕಾಸಿನ ಶಿಷ್ಟಾಚಾರವನ್ನು ಪಾಲಿಸಬೇಕಿದೆ, ಇದು ಎರಡು ಪ್ರಮುಖ ಅಂಶಗಳ ಮೇಲೆ ಅವಲಂಬಿತವಾಗಿದೆ. ಒಂದು, ಭಯೋತ್ಪಾದನೆಗೆ ಕಡಿವಾಣ ಹಾಕುವುದು ಮತ್ತು ಅಭಿವೃದ್ಧಿಯ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವುದು. ದೇಶದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಅವಕಾಶ ನೀಡಬೇಕಿದೆ.  ಸೈನ್ಯವು ದೇಶ ರಕ್ಷಣೆಗೆ ತನ್ನನ್ನು ಸೀಮಿತಗೊಳಿಸಬೇಕು.  
ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಸ್ಥೆಗಳಿಗೆ ಹಣ ಪೂರೈಕೆ ವಿಷಯ ಜಾಗತಿಕ ಸಮುದಾಯಕ್ಕೆ ಪ್ರಮುಖ ಚಿಂತೆಯ ವಿಷಯವಾಗಿದೆ. ಇದರಿಂದಾಗಿಯೇ ಪಾಕ್ ಇತರ ರಾಷ್ಟ್ರಗಳು ಮತ್ತು ಸಂಸ್ಥೆಗಳಿಂದ ಮೃದು ಸಾಲವನ್ನು ಪಡೆದುಕೊಳ್ಳಲು ವಿಫಲವಾಗುತ್ತಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಯ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿನವುಗಳಲ್ಲಿ ಗ್ವಾದರ್ ನಗರವಾದ ಬಲೂಚಿಸ್ತಾನ್ನಲ್ಲಿರುವ ಐದು ಪಂಚತಾರಾ ಹೊಟೆಲ್‌ ಗಳ ಮೇಲೆ ದಾಳಿ ನಡೆದದ್ದನ್ನು ನೆನಪಿಸಿಕೊಳ್ಳಬಹುದು. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್ಎ) ಹೊಣೆ ಹೊತ್ತ ದಾಳಿಯಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಹಿಂದಿನ, ಬಲೂಚಿಸ್ತಾನ್ ಹರ್ನಾಯ್ ಜಿಲ್ಲೆಯಲ್ಲಿ 14 ಜನರು ಬಸ್ ನಿಂದ ಇಳಿಯಲು‌ ಸಾಧ್ಯವಾಗದೆ ಕೊಲ್ಲಲ್ಪಟ್ಟರು. ಇದರಲ್ಲಿ ಪಾಕಿಸ್ತಾನದ ನೌಕಾಪಡೆ ಸಿಬ್ಬಂದಿಯೂ ಇದ್ದರು. ಬಲೂಚಿಸ್ತಾನ್ ನಲ್ಲಿ ಪ್ರತ್ಯೇಕತಾವಾದಿ ಚಳವಳಿಯು ದೀರ್ಘಕಾಲದಿಂದ ನಡೆಯುತ್ತಿದೆ.. ಬಲೂಚಿಸ್ತಾನದ ಜನರು ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವನ್ನು ಕೊಡುಗೆಯಾಗಿ ನೀಡಿದ್ದರೂ, ಅದು ಇನ್ನೂ ಬಡ ಪ್ರಾಂತ್ಯವಾಗಿ ಉಳಿದಿದೆ.
ವಾಸ್ತವವಾಗಿ ಬಲೂಚಿಸ್ತಾನದ ಜನರು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿರುದ್ಧ ನಿಲುವು ಹೊಂದಿದ್ದಾರೆ. ಈ ಕಾರಿಡಾರ್‌ ನ ಬಹುಪಾಲು ಜಾಗ ಬಲೂಚಿಸ್ತಾನ್ ಮೂಲಕ ಹಾದುಹೋಗುತ್ತದೆ. ಆದರೆ ಇದರಿಂದ ಪ್ರಾಂತ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಿಯರ ವಿರುದ್ಧ ಅಸಮಾಧಾನದ ಭಾಗವಾಗಿ ಹೋಟೆಲ್ ಮೇಲೆ ದಾಳಿ‌ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ತಮ್ಮ ವ್ಯವಹಾರ ಪ್ರವಾಸದ ಸಮಯದಲ್ಲಿ ಇದೇ ಹೊಟೆಲ್‌ ನಲ್ಲಿ ಉಳಿದುಕೊಳ್ಳುತ್ತಾರೆ. ಐಎಮ್ಎಫ್ ಹಣಕಾಸು ನೆರವು ದೇಶವನ್ನು ನಡೆಸಲು ತಾತ್ಕಾಲಿಕ ಪರಿಹಾರ ಕ್ರಮವಾಗಿದೆ. ಪಾಕಿಸ್ತಾನದ ನಾಯಕತ್ವ ಪರಿಸ್ಥಿತಿಯನ್ನು ಸಮಗ್ರ ದೃಷ್ಟಿಕೋನದಿಂದ ನೋಡಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಿದೆ.  
 
 
ಲೇಖನ : ಅಶೋಕ್‌ ಹಂದೂ, ರಾಜಕೀಯ ವಿಶ್ಲೇಷಕರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ