ಬಲಿಷ್ಠ ಸರ್ಕಾರಕ್ಕೆ ಮತ ಹಾಕಿದ ಭಾರತ
ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಪರವಾಗಿ ಭಾರತೀಯ ಮತದಾರರು ನಿರ್ಣಾಯಕ ತೀರ್ಪನ್ನು ನೀಡಿದ್ದಾರೆ. ಮೂವತ್ತೈದು ವರ್ಷಗಳಲ್ಲಿ ಮೊದಲ ಬಾರಿಗೆ, ಪಕ್ಷವೊಂದು ಲೋಕಸಭೆಯಲ್ಲಿ 303 ಸ್ಥಾನಗಳನ್ನು ಗಳಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿಯ ಅವಳಿ ಸಾದನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಲೇಖನ: ಪ್ರೊ. ಶಿವಾಜಿ ಸರ್ಕಾರ್, ರಾಜಕೀಯ ವಿಶ್ಲೇಷಕರು
೧೭ನೇ ಲೋಕಸಭೆಗೆ ಒಟ್ಟು ೭ ಹಂತಗಳಲ್ಲಿ ಮತದಾನ ನಡೆದಿತ್ತು. ಭಾರತೀಯ ಮತದಾರರು ಎಲ್ಲಾ ಏಳು ಹಂತಗಳಲ್ಲೂ ಬಿಜೆಪಿ ಕೈ ಹಿಡಿದರು. ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲೂ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಹಿಂದೆ ಅಲ್ಲಿ ಬಿಜೆಪಿ ರಾಜಕೀಯ ಅಸ್ತಿತ್ವ ಕಾಣಿಸುವಷ್ಟರ ಮಟ್ಟಿಗೆ ಇರಲಿಲ್ಲ. ಕಾಂಗ್ರೆಸ್ ನಿರೀಕ್ಷಿತ ಸಾಧನೆ ಮಾಡುವಲ್ಲೂ ವಿಫಲವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಳೆದೈದು ವರ್ಷಗಳ ಕಾರ್ಯವೈಖರಿಗೆ ಜನ ತಲೆಬಾಗಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 133 ಅಭಿವೃದ್ಧಿ ಯೋಜನಗಳನ್ನು ಎನ್ಡಿಎ ಆರಂಭಿಸಿದೆ. ನೈರ್ಮಲ್ಯ, ಅಡುಗೆ ಅನಿಲ, ಸಬ್ಸಿಡಿಗಳ ಸರಿಯಾದ ವಿತರಣೆ, ದೊಡ್ಡ ಸಂಖ್ಯೆಯಲ್ಲಿ ಬ್ಯಾಂಕ್ ಖಾತೆಗಳನ್ನು ಭಾರತೀಯರಿಗೆ ತೆರೆಯುವಿಕೆ ಮುಂತಾದ ಧನಾತ್ಮಕ ಯೋಜನೆಗಳನ್ನು ಜನರು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ ಎಂಬುದು ಫಲಿತಾಂಶದಿಂದ ಹೊರಬಿದ್ದಿದೆ.
ರಾಷ್ಟ್ರೀಯ ಭದ್ರತೆಯ ಕ್ಷೇತ್ರದಲ್ಲಿ, ಎನ್ಡಿಎ ಸರಕಾರವು ಬಲವಾದ ಕ್ರಮ ಕೈಗೊಂಡಿದೆ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಸರ್ಕಾರ ಹೊಂದಿದೆ ಎಂಬ ಸ್ಪಷ್ಟ ಸಂದೇಶ ನೀಡಲಾಗಿದೆ. ಭಾರತದ ಭದ್ರತಾ ಪಡೆಗಳು ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಭಾರೀ ಯಶಸ್ಸನ್ನು ಸಾಧಿಸಿವೆ. ಅದರಲ್ಲೂ ವಿಶೇಷವಾಗಿ ಗಡಿಯುದ್ದಕ್ಕೂ ಭಯೋತ್ಪಾದನೆ ಎದುರಿಸುತ್ತಿರುವ ಸನ್ನಿವೇಶದಲ್ಲಿ, ಕಾಶ್ಮೀರದಲ್ಲೂ ಉಗ್ರ ದಮನಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಇದಲ್ಲದೆ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಬಾಲಾಕೋಟ್, ಚಕೋಟಿ ಮತ್ತು ಮುಜಫರಾಬಾದ್ನಲ್ಲಿನ ಜೈಶ್-ಎ-ಮೊಹಮ್ಮದ್ (ಜೆಎಂ) ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಗಳು ಸದ್ದು ಮಾಡಿವೆ. ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ದಾಳಿಯನ್ನು ಭಾರತ ಮಾಡಿತ್ತು. ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಬಿಡುಗಡೆಗೆ ಮೋದಿ ಸರಕಾರವು ಸಮರ್ಥ ಕ್ರಮಗಳನ್ನು ಕೈಗೊಂಡಿತು. ವರ್ಧಮಾನ್ ಅವರ ವಿಮಾನ ಪಾಕಿಸ್ತಾನದ ಭೂಪ್ರದೇಶದಲ್ಲಿ ಕುಸಿದು ಬಿದ್ದಿತ್ತು.

ಪ್ರಧಾನಿ ಮೋದಿ ಅವರು ಭಾರತದ ವಿದೇಶಿ ನೀತಿಗೆ ಹೊಸ ವೇಗ ಮತ್ತು ನಿರ್ದೇಶನವನ್ನು ನೀಡುವಲ್ಲಿ ಯಶಸ್ವಿಯಾದರು. ಭಾರತದ ಪೂರ್ವ ಭಾಗದ ದೇಶಗಳ ಜತೆಗೆ ಊತ್ತಮ ಸಂಬಂಧ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಅವರ 'ಆಕ್ಟ್ ಈಸ್ಟ್' ನೀತಿ ಕಾರಣವಾಗಿದೆ. ದೋಖ್ಲಾಮ್ ನಿಲುವು ಯಶಸ್ವಿಯಾಯಿತು; ಯುಎಸ್, ರಷ್ಯಾ, ಚೀನಾ, ಸೌದಿ ಅರೇಬಿಯಾ, ಇರಾನ್ ಮತ್ತು ಇಸ್ರೇಲ್ಗಳೊಂದಿಗೆ ಆಳವಾದ ಸಂಬಂಧಗಳು ಭಾರತೀಯ ಸಾರ್ವಜನಿಕರ ಮನಸ್ಸನ್ನು ಸೆರೆಹಿಡಿದವು.
2019 ರ ಚುನಾವಣೆಯಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡು ಮತ ಹಾಕಿದ್ದಾರೆ.. ಜಾತಿ, ಧರ್ಮ, ಭಾಷೆ ಮತ್ತು ಲಿಂಗವನ್ನು ಹೊರತುಪಡಿಸಿ ಮತದಾರರು ಜಾತಿಗಳ ಸಂಯೋಜನೆಯನ್ನು ತಿರಸ್ಕರಿಸಿದ್ದಾರೆ. ಆ ಮೂಲಕ ಮೋದಿಯವರ ಪರ ಅಗಾಧವಾಗಿ ಮತ ಚಲಾಯಿಸಿದರು. ಮತದಾರರು ಉತ್ತಮ ಜೀವನ ಬಯಸುತ್ತಾರೆ ಮತ್ತು ಮೋದಿ ಅವರು ಅದನ್ನು ಒದಗಿಸಬಹುದು ಎಂದು ನಂಬಿದ್ದಾರೆ.

ಈಗ ಭಾರತದ ಪ್ರಧಾನಿ ಮುಂದೆ ಸವಾಲಿನ ಹಾದಿಯಿದೆ. ಬಡಜನರು, ಆಹಾರ, ನಗದು ಬೆಂಬಲ, ಮನೆ ಮತ್ತು ಶೌಚಾಲಯಗಳ ಮೂಲಭೂತ ಅಂಶಗಳನ್ನು ಹೆಚ್ಚಿಸಬೇಕಾಗಿದೆ. ಭಾರತ ಸುಮಾರು $ 2,000 ತಲಾ ಆದಾಯದ ದೇಶಗಳ ಮಧ್ಯಮ ಆದಾಯ ವರ್ಗವನ್ನು ಹೊಂದಿದೆ. ಕಡಿಮೆ ಬೇಡಿಕೆಯಿರುವ ಗ್ರಾಮೀಣ ಯುವಕರು ಕೂಡ ನಗರ ಯುವಜನರೊಂದಿಗೆ ಉದ್ಯೋಗಕ್ಕಾಗಿ ಸ್ಪರ್ಧಿಸುತ್ತಿದ್ದಾರೆ.
ಭಾರತೀಯ ಆರ್ಥಿಕತೆಗೂ ಸಹ ಒಂದು ವರ್ಧಕದ ಅಗತ್ಯವಿದೆ. ಕಳೆದ ಐದು ವರ್ಷಗಳಲ್ಲಿ ಆಹಾರ ಬೆಲೆಗಳು ಸಾಧಾರಣ ಹೆಚ್ಚಳವನ್ನು ದಾಖಲಿಸಿದ್ದವು. ಈಗ, ಜಾಗತಿಕ ಆರ್ಥಿಕ ಕುಸಿತವು ಹೆಚ್ಚುತ್ತಿದೆ. ಬೆಲೆ ಏರಿಕೆ ಒತ್ತಡದ ಆರಂಭದ ಸೂಚನೆ ಇವೆ. ಜಾಗತಿಕ ವ್ಯಾಪಾರ ಯುದ್ಧಗಳು ಕೂಡ ಇರುವುದನ್ನು ನೋಡಬಹುದು.
ಮುಂದಿನ ಸರ್ಕಾರವು ನೋಡಬೇಕಾದ ಅತ್ಯಂತ ಪ್ರಮುಖವಾದ ಪ್ರದೇಶವೆಂದರೆ ಉದ್ಯೋಗಗಳನ್ನು ಸೃಷ್ಟಿಸುವುದು. ಲಕ್ಷಾಂತರ ಜನರೊಂದಿಗೆ, ಎಲ್ಲರಿಗೂ ಉದ್ಯೋಗವನ್ನು ಒದಗಿಸುವುದು ಸುಲಭವಲ್ಲ. 'ಕೌಶಲ್ಯ ಭಾರತ' ಮತ್ತು 'ಮುದ್ರ' ಸಾಲ ಯೋಜನೆಗಳಂತಹ ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸಬೇಕಿದೆ. ಶಿಕ್ಷಣ ಮತ್ತು ಉತ್ಪಾದನೆಯ ಮೇಲೆ ಹೆಚ್ಚು ಗಮನ ಇರಬೇಕು.
ತೆರಿಗೆ ವ್ಯವಸ್ಥೆಗೆ ಸುಧಾರಣೆ ಅಗತ್ಯವಿರುತ್ತದೆ. ಏಕೆಂದರೆ ಜಿಎಸ್ಟಿ ಇನ್ನೂ ಸರಳಗೊಳಿಸಬೇಕಾಗಿದೆ. ಜನರ ಕೊಳ್ಳುವ ಶಕ್ತಿಯು ಸರ್ಕಾರದ ಆದಾಯದಷ್ಟೇ ಹೆಚ್ಚಾಗಬೇಕಾದರೆ ಇದು ಕಠಿಣ ಕೆಲಸವಾಗಿದೆ.
ಜನರ ಆಶಯಗಳು 2014ಕ್ಕಿಂತ ಹೆಚ್ಚಾಗಿವೆ. ಪ್ರಧಾನಮಂತ್ರಿ ಮೋದಿ ಅವರಿಗೆ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಭಾರತದ ಆರ್ಥಿಕತೆಯನ್ನು ಹೆಚ್ಚಿಸಲು ಮೋದಿ ಸಮರ್ಥರಿದ್ದಾರೆ ಎಂದು ಭಾರತೀಯರು ನಂಬಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಭಾರತವು ಹೊಸ ಸಾಧನೆಗಳನ್ನು ತಲುಪಲಿದೆ ಎಂದು ಭಾರತೀಯ ಮತದಾರರು ಭರವಸೆ ನೀಡಿದ್ದಾರೆ.
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸೇರಿದಂತೆ ಅನೇಕ ವಿಶ್ವ ನಾಯಕರು ಈಗಾಗಲೇ ಪ್ರಧಾನಮಂತ್ರಿಯನ್ನು ಅಭಿನಂದಿಸಿದ್ದಾರೆ ಮತ್ತು ಅವರೊಂದಿಗೆ ಉತ್ತಮ ಸಂಬಂಧ ಸಾಧಿಸಿ ಕೆಲಸ ಮಾಡುವ ಆಶಯ ಹೊರಹಾಕಿದ್ದಾರೆ
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸೇರಿದಂತೆ ಅನೇಕ ವಿಶ್ವ ನಾಯಕರು ಈಗಾಗಲೇ ಪ್ರಧಾನಮಂತ್ರಿಯನ್ನು ಅಭಿನಂದಿಸಿದ್ದಾರೆ ಮತ್ತು ಅವರೊಂದಿಗೆ ಉತ್ತಮ ಸಂಬಂಧ ಸಾಧಿಸಿ ಕೆಲಸ ಮಾಡುವ ಆಶಯ ಹೊರಹಾಕಿದ್ದಾರೆ
Comments
Post a Comment