ಮೋದಿ ಮರು ಆಯ್ಕೆ : ಭಾರತದ ವಿದೇಶಾಂಗ ನೀತಿಗೆ ಆದ್ಯತೆ


ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. 2014ರ ಭಾರತದ ಮಹತ್ವಾಕಾಂಕ್ಷೆಯ ರೂಪಾಂತರವನ್ನು ಮುಂದುವರೆಸಬೇಕೇಂಬ ಭಾರತದ 900 ಮಿಲಿಯನ್ಮತದಾರರ ಆದೇಶ ಬಂದಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಭಾರತದ ವಿದೇಶಿ ನೀತಿಗಳ ಉಪಕ್ರಮಗಳಿಗೆ ಹಲವು ಅವಕಾಶ ಸಿಕ್ಕದೆ.

ಸಬ್ಕಾಸಾತ್, ಸಬ್ಕಾ ವಿಕಾಸ್, ಸಬ್ಕಾವಿಶ್ವಾಸ್ ಎಂಬ ಘೋಷಣೆಯ ಅಡಿಯಲ್ಲಿ ಆಡಳಿತ ನೀಡುವುದು ಮೋದಿಯವರ ಉದ್ದೇಶ. ಭಾರತದ ವಿದೇಶಾಂಗ ನೀತಿಗೆ ಹೆಚ್ಚಿನ ಗಮನವನ್ನು ನೀಡಿ ಭಾರತವನ್ನು ಬದಲಿಸುವ ಕ್ರಮಗಳಿಗೆ ವೇಗವರ್ಧಕಗಳನ್ನು ಒದಗಿಸಿ ಆ ಮೂಲಕ ತನ್ನ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಗರಿಷ್ಠಗೊಳಿಸಲು ಸರ್ಕಾರ ಉದ್ದೇಶಿಸಿದೆ.

ವಿಶ‍್ವದ ಪ್ರಮುಖ ಶಕ್ತಿಗಳು ವಿಶೇಷವಾಗಿ ಚೀನಾ, ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾಗಳೊಂದಿಗೆ ತನ್ನ ಸಂಬಂಧಗಳನ್ನು ಮಾಪನ ಹೆಚ್ಚಿಸುವುದು, ಅಂತರರಾಷ್ಟ್ರೀಯ ಅಡೆತಡೆಗಳನ್ನುಕಡಿಮೆ ಮಾಡುವುದು ಭಾರತದ ವಿದೇಶಾಂಗ ನೀತಿಯ ಒಂದು ಪ್ರಮುಖ ಉದ್ದೇಶವಾಗಿದೆ. ಈ ಸಂಬಂಧಗಳಲ್ಲಿ ಯಾವುದಾದರೂ ಹೂಡಿಕೆಗಳು, ಉಪಕರಣಗಳು ಮತ್ತು ಭದ್ರತೆಗೆಅಗತ್ಯವಿರುವ ತಂತ್ರಜ್ಞಾನಗಳು ಭಾರತ ಶಕ್ತಿವನ್ನು ಮಾರ್ಪಡಿಸಲಿವೆ. ಅಮೆರಿಕ ಚೈನಾ, ಯುರೋಪಿಯನ್ ಒಕ್ಕೂಟ, ಜಪಾನ್, ಏಷಿಯಾನ್ ಮತ್ತು ರಷ್ಯಾ ಸೇರಿದಂತೆ ಪ್ರಮುಖ ಆರ್ಥಿಕತೆಗಳೊಂದಿಗೆ ಭಾರತ ಪರಸ್ಪರ ವಿಚಾರ ವಿನಿಮಯದಲ್ಲಿ ತೊಡಗಿಸಿಕೊಂಡಿದೆ.

ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಉದಯೋನ್ಮುಖ ಆರ್ಥಿಕತೆಯಾಗಿ ಮುಂದುವರೆಯಲು ಭಾರತ ಸುರಕ್ಷಿತ , ಸದೃಢ ನೆರೆಹೊರೆಯ ರಾಷ್ಟ್ರಗಳ ಸಹಕಾರ ಅವಶ್ಯಕ. ಶಾಂತಿ ಮತ್ತು ಭದ್ರತೆ ಇಲ್ಲದೆ, ಸುಸ್ಥಿರ ಅಭಿವೃದ್ಧಿಯಿಲ್ಲ ಎಂಬುದು ಭಾರತಕ್ಕೆ ಗೊತ್ತಿದೆ. ಭಾರತದ ಸುತ್ತಲೂ ಬೆಂಬಲ ನೀಡುವ ಪರಿಸರವನ್ನು ಮತ್ತು ಕಡಲ ಗಡಿಗಳ ಉದ್ದಕ್ಕೂ ಅದನ್ನು ಖಚಿತಪಡಿಸುವುದು ಭಾರತದ ವಿದೇಶಾಂಗ ನೀತಿಯ ಮಹತ್ವದ ಆದ್ಯತೆಯಾಗಿರುತ್ತದೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಮತ್ತು ತ್ವರಿತ ಮತ್ತು ಸಮರ್ಥ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ವಿಶ್ವಾಸಾರ್ಹ ಕ್ರಮಗಳನ್ನು ಜಾರಿಗೆ ತರುವಲ್ಲಿ ಭಾರತ ನೆರೆಹೊರೆಯವರಿಗೆ ತೊಡಗಿಸಿಕೊಳ್ಳುವುದು ದೇಶದ ಮುಂದಿರುವ ಆದ್ಯತೆಯಾಗಿದೆ.

ಏಷ್ಯಾದಲ್ಲಿ, ಮುಂದಿನ ಐದು ವರ್ಷಗಳು ಭಾರತ-ಪೆಸಿಫಿಕ್ ನ ಆಯಕಟ್ಟಿನ ಚೌಕಟ್ಟನ್ನು ಆಫ್ರಿಕಾದ ತೀರದಿಂದ ಅಮೆರಿಕಾದ ಕಡೆಗೆ ತಿರುಗಿಸುವ ಅವಕಾಶವನ್ನು ಭಾರತಕ್ಕೆಒದಗಿಸುತ್ತದೆ. ಪ್ರಧಾನಿ ಮೋದಿ ಅವರು ಮಾರ್ಚ್ 2015 ರಲ್ಲಿ ಎಲ್ಲರಿಗೂ ಭದ್ರತೆ ಹಾಗೂ ಅಭಿವೃದ್ಧಿ ಸಾಧಿಸುವ ಬಗ್ಗೆ ಸಿಂಗಪುರದ ಶಾಂಗ್ರಿಲಾ ಸಭೆಯಲ್ಲಿ ಹೇಳಿದ್ದರು. ಭಾರತದವಿದೇಶಾಂಗ ನೀತಿಯ ವಿಶೇಷ ಆದ್ಯತೆ ಹಿಂದೂ ಮಹಾಸಾಗರದಲ್ಲಿ 'ಬ್ಲೂ ಎಕಾನಮಿ' ಮತ್ತು ಭದ್ರತೆಗೆ ಹೆಚ್ಚು ಆದ್ಯತೆ ನೀಡಿದೆ. ಇದು ಭಾರತದ ರೂಪಾಂತರದ ಮೇಲೆ ನೇರವಾಗಿಪರಿಣಾಮ ಬೀರುತ್ತದೆ.

ಪಶ್ಚಿಮ ಇಂಡೋ-ಪೆಸಿಫಿಕ್ನಲ್ಲಿ, ಭಾರತದ ವಿದೇಶಾಂಗ ನೀತಿ ಕಳೆದ ಐದು ವರ್ಷಗಳಲ್ಲಿ ಐತಿಹಾಸಿಕ ಉಪಕ್ರಮಗಳನ್ನು ಕೈಗೊಂಡಿದೆ. ಗಲ್ಫ್ ಮತ್ತು ಪಶ್ಚಿಮ ಏಷ್ಯಾದಲ್ಲಿ 8 ಮಿಲಿಯನ್ಭಾರತೀಯರು ವಾಸಿಸುತ್ತಿದ್ದಾರೆ ಮತ್ತು ನೌಕರಿ ಮಾಡುತ್ತಿದ್ದಾರೆ. ಭಾರತದ ಆರ್ಥಿಕ ಮತ್ತು ಇಂಧನದ ಅಗತ್ಯತೆಗಳು ಅಡೆನ್ ಗಲ್ಫ್ ಮತ್ತು ಹೋರ್ಮಝ್ ಸ್ಟ್ರೈಟ್ಸ್ ಮೂಲಕ ಭಾರತದವ್ಯಾಪಾರ ಮತ್ತು ಡಿಜಿಟಲ್ ಸಂಪರ್ಕ ಕಂಡುಕೊಳ್ಳಬಹುದಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ದೃಢವಾದ ರಾಜತಾಂತ್ರಿಕ ಮಾತುಕತೆ ಅಗತ್ಯವಿರುತ್ತದೆ. ಹೊಸದಿಲ್ಲಿಯ ಆಯಕಟ್ಟಿನಅಗತ್ಯತೆಗಳಲ್ಲಿ ಚಾಬಾಹಾರ್ ನಂತಹ ಸಂಪರ್ಕ ಯೋಜನೆಗಳು ಮುಂಚೂಣಿಯಲ್ಲಿವೆ. ಅಫ್ಘಾನಿಸ್ತಾನ ಮತ್ತು ಸೆಂಟ್ರಲ್ ಏಷ್ಯನ್ ದೇಶಗಳು ಜಾಗತಿಕ ಹೂಡಿಕೆ ಮತ್ತು ಮಾರುಕಟ್ಟೆಗಳಿಗೆಪ್ರವೇಶ ನೀಡುತ್ತವೆ. ಈ ಉಪಕ್ರಮಗಳು ಪಶ್ಚಿಮ ಇಂಡೋ-ಪೆಸಿಫಿಕ್ನಲ್ಲಿ ನಿವ್ವಳ ಭದ್ರತಾ ಪೂರೈಕೆದಾರರಾಗಿ ಭಾರತದ ಪಾತ್ರವನ್ನು ಹೆಚ್ಚಿಸುತ್ತದೆ.

ಭಾರತ-ಆಫ್ರಿಕಾ ವೇದಿಕೆಯ ಶೃಂಗಸಭೆ, ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರಕ್ಕಾಗಿ ವೇದಿಕೆ ಮತ್ತು ಕಳೆದ ಐದು ವರ್ಷಗಳಲ್ಲಿ ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ರಾಜ್ಯಗಳಭಾರತೀಯ ಸಮುದಾಯ ಸಭೆಗಳಲ್ಲಿ ಮಾಡಲಾದ ಪ್ರಸ್ತಾಪಗಳನ್ನು ಜಾರಿಗೆ ತರಲು ಭಾರತೀಯ ವಿದೇಶಾಂಗ ನೀತಿಯ ಕ್ರಮ ಕೈಗೊಂಡಿದೆ. ಇದು ಭಾರತ ಜಾಗತಿಕ ಇಮೇಜ್ ನ್ನು ವರ್ಧಿಸಲಿದೆ.

ಹೊಸ ತಂತ್ರಜ್ಞಾನ ಹಾಗೂ ನಾಲ್ಕನೇ ಕೈಗಾರಿಕಾ ಕ್ರಾಂತಿ ಮೂಲಕ 21ನೇ ಶತಮಾನಕ್ಕೆ ಭಾರತವನ್ನು ಸಜ್ಜಗೊಳಿಸಲು ಭಾರತದ ವಿದೇಶಾಂಗ ನೀತಿ ಸಹಕಾರಿಯಾಗಲಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯಲ್ಲೂ ಭಾರತ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗ್ಲೋಬಲ್ ಎಲೆಕ್ಟ್ರಾನಿಕ್ ಕಾಮರ್ಸ್ ಮೂಲಕ ಭಾರತದ ಡಿಜಿಟಲ್ ಇಂಡಿಯಾ ಯೋಜನೆ ಸುಧಾರಿಸಿ ಆ ಮೂಲಕ ಜಾಗತಿಕವಾಗಿ ಹೆಚ್ಚು ಗಮನಸೆಳೆಯಬಹುದಾಗಿದೆ.

ಜೂನ್ 2020ರಲ್ಲಿ ಆರಂಭಗೊಂಡು 2022ರಲ್ಲಿ ಅಂತ್ಯಗೊಳ್ಳುವ ಅವಧಿ ತನಕ ಎರಡು ವರ್ಷಗಳ ಕಾಲ ವಿಶ್ವಸಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರಾಗಿ ಭಾರತ ಆಯ್ಕೆಯಾಗಲಿದೆ. 2021 ರಲ್ಲಿ ಯುಎನ್ ಮಾನವ ಹಕ್ಕುಗಳ ಮಂಡಳಿಗೆ ಚುನಾವಣೆ ನಡೆಯಲಿದೆ. ಇದರ ಅವಧಿ 2024 ರಲ್ಲಿ ಅಂತ್ಯಗೊಳ್ಳುತ್ತದೆ. 2022ರಲ್ಲಿ ಭಾರತವು ಜಿ -20 ಯ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. ಈ ಪ್ರಮುಖ ಬಹುಪಕ್ಷೀಯ ನಾಯಕತ್ವ ಪಾತ್ರಗಳು ಅಂತರರಾಷ್ಟ್ರೀಯ ಸಹಕಾರ ತತ್ವವನ್ನು ಎತ್ತಿಹಿಡಿಯಲು ಹಾಗೂ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ತನ್ನ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ, ಇದು ಭಾರತದ ರೂಪಾಂತರಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ಲೇಖನ : ಅಶೋಕ್ ಕುಮಾರ್ ಮುಖರ್ಜಿ, ವಿಶ್ವಸಂಸ್ಥೆಗೆ ಭಾರತದ ಖಾಯಂ ಮಾಜಿ ಸದಸ್ಯರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ