ಪಾಕಿಸ್ತಾನದಲ್ಲಿ ಮುಂದುವರಿದ ಅಲ್ಪಸಂಖ್ಯಾತರ ಮೇಲಿನ ದಾಳಿ


ಪಾಕಿಸ್ತಾನದ ಅಲ್ಪಸಂಖ್ಯಾತರು ರಾಷ್ಟ್ರದ ತಾರತಮ್ಯ ನೀತಿಯ ಕೋಪವನ್ನು ಸರ್ಕಾರದ ಕೈಯಲ್ಲಿ ಎದುರಿಸುತ್ತಿದ್ದಾರೆ. ವಿಶೇಷವಾಗಿ ಬಲಪಂಥೀಯ ಉಗ್ರಗಾಮಿಗಳು ಪೂರ್ವಾಗ್ರಹದಿಂದ ಬೃಹತ್ ಪ್ರಮಾಣದಲ್ಲಿಹಿಂಸೆಯನ್ನುಂಟು ಮಾಡಿದ್ದಾರೆ. ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು ಪಾಕಿಸ್ತಾನದಲ್ಲಿ ಒಟ್ಟು ಸುಮಾರು 3 ಮಿಲಿಯನ್ ಗಳಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ತಮ್ಮ ಸಂಪ್ರದಾಯವನ್ನು ಪಾಲಿಸುವುದು ಪಾಕಿಸ್ತಾನದಲ್ಲಿಅಪಾಯಕಾರಿಯಾಗಿ ಪರಿಣಮಿಸಿದೆ. ತಾರತಮ್ಯವನ್ನು ಬಳಸಿಕೊಳ್ಳುವ ಉಪಕರಣಗಳಲ್ಲಿ ಒಂದಾದ ಇಸ್ಲಾಂ ಧರ್ಮದ ತತ್ವಗಳು ಅಥವಾ ಬೋಧನೆಗಳನ್ನು ಅವಮಾನಿಸುತ್ತಿದ್ದಾರೆ ಎಂದು ಅಲ್ಪಸಂಖ್ಯಾತರ ಮೇಲೆ ಕೇಸ್ ಹಾಕಲಾಗುತ್ತಿದೆ.

ಸಿಂಧ್ ಪ್ರಾಂತ್ಯದಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬ ವೈದ್ಯನೊಬ್ಬನು , ಅವನು ಧರ್ಮಗ್ರಂಥವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಅವರ ಮೇಲೆ ಕೇಸ್ ಹಾಕಲಾಗಿದೆ. ಕೆಲವು ವಾರಗಳ ಮುಂಚೆ,ಪಂಜಾಬ್ ಪ್ರಾಂತ್ಯದ ಅಲ್ಪಸಂಖ್ಯಾತರ ಧಾರ್ಮಿಕ ಸಮುದಾಯದಿಂದ ಕೂಡಿದ ಒಬ್ಬ ವ್ಯಕ್ತಿಯು ವ್ಯಕ್ತಿಯೊಬ್ಬನಿಗೆ ತಪ್ಪಾದ ಸಂದೇಶ ಕಳಿಸಿದ್ದಕ್ಕಾಗಿ ಧರ್ಮನಿಂದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಅಸ್ತಿತ್ವದಲ್ಲಿರುವ ಭಯವನ್ನು ಸೇರಿಸುವುದು ಮತ್ತೊಂದು ಗೊಂದಲದ ಘಟನೆಯಾಗಿದ್ದು ಸಿಖ್ ಯಾತ್ರಾಸ್ಥಳವಾದ ಲಾಹೋರ್ ನ ಸುತ್ತಲಿನ ನರವಾಲಿನ್ ಎಂಬ ಸಿಖ್ ಯಾತ್ರಾ ಸ್ಥಳವನ್ನು ಕೆಡವಲಾಗಿದೆ.

ಇವು ಪ್ರತ್ಯೇಕ ಘಟನೆಗಳಾಗಿಲ್ಲ, ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆಯ ಮುಂದುವರಿಕೆಯಾಗಿದೆ. ಧರ್ಮಭ್ರಷ್ಟ ಕಾನೂನಿನಡಿಯಲ್ಲಿ ಅಸಂಖ್ಯಾತ ಅಲ್ಪಸಂಖ್ಯಾತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಅಥವಾ ಕಿರುಕುಳ ನೀಡಲಾಗಿದೆ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಚರ್ಚೆ ನಡೆಸಿದ ಆಸಿಯಾಬಿಬಿ ಪ್ರಕರಣವು ಅತ್ಯಂತ ಪ್ರಮುಖವಾದದ್ದು. ತುಂಬಾ ಟೀಕೆಗಳ ನಂತರವೂ, ಪಾಕಿಸ್ತಾನ ಅಲ್ಪಸಂಖ್ಯಾತರನ್ನು ಈ ದುಷ್ಕೃತ್ಯದ ಕಾನೂನಿನಡಿಯಲ್ಲಿ ಪ್ರಕಟಿಸುತ್ತಿದೆ.

ಸ್ಥಳೀಯ ಮಸೀದಿಯ ಮುಖ್ಯ ಶಿಕ್ಷಕರಿಂದ ದೂರು ಸಲ್ಲಿಕೆಯಾದ ಬಳಿಕ ವೈದ್ಯರನ್ನು ಬಂಧಿಸಲಾಯಿತು. ಪಾಕಿಸ್ತಾನದಲ್ಲಿ ಕಠಿಣ ಶಿಕ್ಷೆಗೆ ಒಳಗಾಗುವ ಕಾನೂನಿನಡಿಯಲ್ಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಲಾಗಿದೆ.ಪಾಕಿಸ್ತಾನದ ನಾಗರಿಕರ ಮನಸ್ಸಿನಲ್ಲಿ ಈ ಕಾನೂನಿನ ಅಜ್ಞಾತ ನಿಯಮಗಳನ್ನು ನಿರೂಪಿಸಲಾಗಿದೆ; ಇದು ಕೆಲವೊಮ್ಮೆ ಸಮೂಹ ಸನ್ನಿಯಾಗಿ ಹೊಡೆದು ಕೊಲ್ಲುವ ಗುಂಪಾಗುತ್ತದೆ. ವೈದ್ಯರನ್ನು ಬಂಧಿಸಿದ ನಂತರ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಗಳಿಗೆ ಬೆಂಕಿ ಹಾಕಿದ್ದು ಈ ಮನಸ್ಥಿತಿಯ ಪರಿಣಾಮವಾಗಿದೆ. ಪಾಕಿಸ್ತಾನದ ಧರ್ಮನಿಂದೆಯ ಕಾನೂನುಗಳು ಸಡಿಲ, ಅಸ್ಪಷ್ಟ ಮತ್ತು ದಬ್ಬಾಳಿಕೆಯನ್ನು ಒಳಗೊಂಡಿದೆ. ಅವರು ಅಸಂಖ್ಯಾತ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮುಗ್ಧ ಜನರ ಮೇಲೆ ಅನೇಕ ತಪ್ಪು ಪ್ರಕರಣಗಳು ವೈಯಕ್ತಿಕ ದ್ವೇಷಗಳನ್ನು ಅನುಸರಿಸುತ್ತವೆ.

ಪಾಕಿಸ್ತಾನದ ಅಲ್ಪಸಂಖ್ಯಾತರು ತಮ್ಮ ಧಾರ್ಮಿಕ ಸ್ಥಳಗಳ ರಕ್ಷಣೆಗೆ ಖಾತರಿ ಹೊಂದಿಲ್ಲ. ಈ ಐತಿಹಾಸಿಕ ಮತ್ತು ಪ್ರಮುಖ ಸಾಂಸ್ಕೃತಿಕ ತಾಣಗಳು ಪಾಕಿಸ್ತಾನದ ಬಲಪಂಥೀಯ ಉಗ್ರಗಾಮಿಗಳಿಗೆ ದೀರ್ಘಕಾಲದವರೆಗೆ ಗುರಿಯಾಗಿವೆ. ನರೋವಾಲ್ ನಲ್ಲಿ ಗುರು ನಾನಕ್ ಅರಮನೆಯ ನಾಶವು ಇದರ ಸುದೀರ್ಘ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಈ ಬಾರಿ ಪ್ರಭಾವಶಾಲಿ ಸ್ಥಳೀಯರು ನೆಲಸಮಗಳನ್ನು ನಡೆಸುತ್ತಿದ್ದು ಅಲ್ಪಸಂಖ್ಯಾತರದಯನೀಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಯಾರೂ ಇಂತಹ ಲಜ್ಜೆಗೆಟ್ಟ ಕೃತ್ಯಗಳ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳುತ್ತಿಲ್ಲ. 15 ನೆಯ ಶತಮಾನದ ಗುರುದ್ವಾರದ ಅಮೂಲ್ಯ ಮತ್ತು ಐತಿಹಾಸಿಕ ಕಿಟಕಿಗಳು,ಬಾಗಿಲುಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಕಳವು ಮಾಡಿ ಮಾರುಕಟ್ಟೆಯಲ್ಲಿ ಬಿಕರಿ ಮಾಡಲಾಗಿದೆಯೆಂದು ಕೂಡ ವರದಿಯಾಗಿದೆ. ಈ ವಿಷಯದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಮೌನವನ್ನು ಉಳಿಸಿಕೊಂಡಿದ್ದಾರೆ. ಇಡೀ ಸಿಖ್ ಸಮುದಾಯದ ಭಾವನೆಗಳನ್ನು ನೋಯಿಸುವಂತಹದ್ದಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ತಾರ್ಪುರ್ ಕಾರಿಡಾರ್ ಉಪಕ್ರಮಕ್ಕೆ ಭಾರೀ ಹೊಡೆತ ನೀಡುತ್ತದೆ. ಸ್ಥಳೀಯರು ಈ ವಿನಾಶದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ ಆದರೆ ಹಿಂದೆ ಇಂತಹ ಅಪರಾಧಗಳಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೆ?

ಮುಸ್ಲಿಮರಲ್ಲದ ಯಾರಾದರೂ ಪಾಕಿಸ್ತಾನದಲ್ಲಿ 'ಕಾಫಿರ್' (ನಂಬಿಕೆಯಿಲ್ಲದವರು) ಎಂದು ಕರೆಯುತ್ತಾರೆ ಮತ್ತು ಪಾಕಿಸ್ತಾನದ ಸಂವಿಧಾನ ಮತ್ತು ಇತರ ರಾಜ್ಯ ರಚನೆಗಳು ಈ ಮತಧರ್ಮಶಾಸ್ತ್ರದ ಸಿದ್ಧಾಂತವನ್ನು ಬೆಂಬಲಿಸುತ್ತವೆ. ರಾಷ್ಟ್ರೀಯ ಉಪಕರಣದಲ್ಲಿ ಅಲ್ಪಸಂಖ್ಯಾತರ ಸರಿಯಾದ ಪ್ರಾತಿನಿಧ್ಯವಿಲ್ಲ, ಆದಾಗ್ಯೂ ಸಂಸತ್ತಿನಲ್ಲಿ ಶೇ. 5ರಷ್ಟು ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ದೇವಾಲಯಗಳು, ಗುರುದ್ವಾರಗಳು ಮತ್ತು ಚರ್ಚುಗಳಂತಹ ಅಲ್ಪಸಂಖ್ಯಾತರ ಮತ್ತು ಅವರ ಧಾರ್ಮಿಕ ಸ್ಥಳಗಳಿಗೆ ಯಾವುದೇ ಭದ್ರತೆ ಇಲ್ಲ. ಧರ್ಮನಿಂದೆಯ ಕಾನೂನುಗಳಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಅಥವಾ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳನ್ನು ಕೆಡವುವ ಅಪರಾಧಿಗಳಿಗೆ ಶಿಕ್ಷೆ ನೀಡಲು ಪಾಕಿಸ್ತಾನದಲ್ಲಿ ಯಾವುದೇ ನಿಬಂಧನೆ ಇಲ್ಲ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ವಿರುದ್ಧ ಶಿಯಾ ಹಜಾರಾಸ್ ಮತ್ತು ಅಹ್ಮದಿಸ್ ಮುಂತಾದವರ ಮಾನವ ಹಕ್ಕುಗಳ ಉಲ್ಲಂಘನೆಗೆ ಇದು ಪ್ರಚೋದನೆಯನ್ನು ನೀಡುತ್ತದೆ.

ಬರಹ: ಡಾ. ಜೈನಾಬ್ ಅಖ್ತರ್, ಸಂಶೋಧಕ ವಿಶ್ಲೇಷಕ, ದಕ್ಷಿಣ ಏಷ್ಯಾ ಕೇಂದ್ರ (ಐಡಿಎಸ್ಎ)

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ