ಬ್ರೆಕ್ಸಿಟ್ ಒಪ್ಪಂದಕ್ಕೆ ಕೊನೆಯ ಕರೆ: ಮುಂದೇನು?
ಮೂರು ಬಾರಿ ಬ್ರಿಟನ್ ಸಂಸತ್ತು ತೆರೇಸಾ ಮೇ ಅವರ ಬ್ರೆಕ್ಸಿಟ್ ಒಪ್ಪಂದವನ್ನು ತಿರಸ್ಕರಿಸಿದ ನಂತರ, ತನ್ನ ಒಪ್ಪಂದವನ್ನು ಹಿಂತೆಗೆದುಕೊಳ್ಳಬೇಕಾದ ಕೊನೆಯ ಮತ್ತು ಅಂತಿಮ ಸವಾಲನ್ನು ಬ್ರಿಟನ್ ನ ನಾಯಕಿ ಎದುರಿಸುತ್ತಿದ್ದಾರೆ. ಅದು ತಿರಸ್ಕೃತಗೊಂಡರೆ ಹಾನಿಕಾರಕ ಫಲಿತಾಂಶಗಳಿಗೆ ಕಾರಣವಾಗಬಹುದು, ಒಪ್ಪಂದ ಹಾಗೂ ಸರ್ಕಾರ ಬಿಕ್ಕಟ್ಟಿನಲ್ಲಿ ಸಿಲುಕಲಿದೆ. ಯುರೋಪಿಯನ್ ಯೂನಿಯನ್ ಸ್ಟೀಫನ್ ಬಾರ್ಕ್ಲೇ ಅವರು ಇದನ್ನು ತಿಳಿಸಿದ್ದಾರೆ. ಒಂದುವೇಳೆ ನಾವು ಸೋತಲ್ಲಿ ಒಪ್ಪಂದವೂ ಸಾಯಲಿದೆ ಎಂದು ಹೇಳಿದ್ದಾರೆ. ಈಗ ತೀರಾ ದುರ್ಬಲವಾದ ಸ್ಥಾನದಲ್ಲಿರುವ ಥೆರೆಸಾ ಮೇ ಶೀಘ್ರವಾಗಿ ಹೌಸ್ ಆಫ್ ಕಾಮನ್ಸ್ಗೆ ಒಪ್ಪಂದವನ್ನು ಮರಳಿ ತರುವ ಬಯಕೆ ಹೊಂದಿದ್ದಾರೆ. ಆದರೆ ಇದಕ್ಕೆ ಸಂಸತ್ತಿನ ಅನುಮೋದನೆಯನ್ನು ಪಡೆಯಬೇಕು. ಒಪ್ಪಂದದಲ್ಲಿ ಈ ಆರು ವಾರಗಳ ಸಮಾಲೋಚನೆಯ ಸಮಯದಲ್ಲಿ ಯಾವುದೇ ಹೊಸ ಬದಲಾವಣೆಗಳಿವೆಯೇ ಎಂಬುದನ್ನು ಕಾದುನೋಡಬೇಕು.
ತನ್ನ ಕನ್ಸರ್ವೇಟಿವ್ ಪಾರ್ಟಿಯೊಳಗಿರುವ 'ಯೂರೋಸೆಪ್ಟಿಕ್ಸ್'ಗಳು ಈ ಒಪ್ಪಂದವು ಬ್ರಿಟನ್ ದೇಶವನ್ನು ಕಸ್ಟಮ್ಸ್ ಯೂನಿಯನ್ ವ್ಯಾಪ್ತಿಗಷ್ಟೇ ಸೀಮಿತಗೊಳಿಸಲಿದೆ ಎಂದು ಹೇಳಿದೆ. ಡೆಮಾಕ್ರೆಟಿಕ್ ಯೂನಿಯನಿಸ್ಟ್ ಪಾರ್ಟಿ (ಡಿಯುಪಿ) ಬ್ರಿಟನ್ ನ ಆರ್ಥಿಕ ಮತ್ತು ಸಾಂವಿಧಾನಿಕ ಸಮಗ್ರತೆಯನ್ನು ಉಳಿಸಿಕೊಳ್ಳುವ ಸಂಬಂಧ ಒಪ್ಪಂದಲ್ಲಿ ಬದಲಾವಣೆ ಆದರೆ ಮಾತ್ರ ಒಪ್ಪಂದ ಉಳಿದುಕೊಳ್ಳಬುಹುದು. ಅಲ್ಲದೆ ಉತ್ತರ ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್ ನಡುವಿನ ಗಡಿರೇಖೆಯನ್ನು ತಪ್ಪಿಸಲು ಇದು ಕೆಲಸ ಮಾಡಬೇಕು. ಲೇಬರ್ ಪಕ್ಷವು ಕಾರ್ಮಿಕರ ಹಕ್ಕುಗಳ ಸಮಸ್ಯೆಗಳಿಗೆ ಮತ್ತು ಯೂರೋಪಿಯನ್ ಯೂನಿಯನ್ ನೊಳಗೆ ವಾಸಿಸುವ ಬ್ರಿಟನಿನ ಪ್ರಜೆಗಳ ಮಧ್ಯೆ ಎರಡನೇ ಬಾರಿ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಹೇಳಿದೆ.. ಸದಸ್ಯತ್ವದ ಎರಡನೇ ಜನಮತಸಂಗ್ರಹಕ್ಕಾಗಿ ಇದು ಒತ್ತಾಯಿಸಿದೆ. ಲೇಬರ್ ಪಕ್ಷ ನಾಲ್ಕನೇ ಹಂಗತದ ಮತದಲ್ಲಿ ದೂರವಿರುವ ಸಾಧ್ಯವಿದೆ, ಈ ಮೂಲಕ ಮೇ ಅವರು ಸಂಸತ್ತಿನ ಅನುಮೋದನೆಯ ಮೊದಲ ಹಂತವನ್ನು ದಾಟಲು ಅದು ನೆರವಾಗಬಹುದು. ಗ್ರೀನ್ ಪಾರ್ಟಿ, ಲಿಬರಲ್ ಡೆಮೊಕ್ರಾಟ್ಸ್, ಸ್ಕಾಟಿಷ್ ನ್ಯಾಶನಲ್ ಪಾರ್ಟಿ ಮತ್ತು ಪ್ಲೈಡ್ ಸಿಮ್ರು, ಎಲ್ಲರೂ ಸಂಪೂರ್ಣವಾಗಿ ಬ್ರೆಕ್ಸಿಟ್ ಅನ್ನು ವಿರೋಧಿಸುತ್ತಿವೆ.
ಕನ್ಸರ್ವೇಟಿವ್ ಪಕ್ಷಕ್ಕೆ, ಮುಂಬರುವ ದಿನಗಳಲ್ಲಿ ಸವಾಲುಗಳು ತುಂಬಾ ಕಠಿಣವಾಗುತ್ತವೆ. ಸಂಸತ್ತಿನಲ್ಲೂ ಕಠೀಣ ಪರಿಸ್ಥಿತಿ ಇದೆ. ಒಪ್ಪಂದ ಇಲ್ಲ' ಅಥವಾ ' ಬ್ರೆಕ್ಸಿಟ್ ಇಲ್ಲ' ಎಂಬುದರ ನಡುವೆ ಆಯ್ಕೆ ಮಾಡಬೇಕಿದೆ. ಬ್ರೆಕ್ಸಿಟ್ ಸಮಸ್ಯೆ ಹೊರತುಪಡಿಸಿ, ಈ ತಿಂಗಳು ನಡೆದ ಸ್ಥಳೀಯ ಚುನಾವಣೆಯಲ್ಲಿ ಪಕ್ಷ 1334 ಕೌನ್ಸಿಲರ್ ಗಳನ್ನು ಕಳೆದುಕೊಂಡಿತು. ಇಯು-ಪರ ಉದಾರ ಪ್ರಜಾಪ್ರಭುತ್ವವಾದಿಗಳು 703 ಸೀಟುಗಳನ್ನು ಪಡೆದರು. ಯೂರೋಪಿಯನ್ ಯೂನಿಯನ್ ಸಂಸದೀಯ ಚುನಾವಣೆಯಲ್ಲಿ, 23 ಮೇ, 2019ರಂದು ನಡೆಯಲಿದೆ. ಇತ್ತೀಚಿನ ಮತದಾನ ಸರಾಸರಿಯ ಪ್ರಕಾರ, ನಿಗೆಲ್ ಫರಾಜ್ ಅವರ ಬ್ರೆಕ್ಸಿಟ್ ಪಕ್ಷವು ಎರಡು ಪ್ರಮುಖ ಪಕ್ಷಗಳಿಗಿಂತ ಮುಂಚೂಣಿಯಲ್ಲಿದ್ದು, ಶೇ.೩೦ರಷ್ಟು ಮತದಾನ ಅದರ ಪರವಾಗಿದೆ.
ಒಪ್ಪಂದದ ಪ್ರತಿ ಸೋಲಿನ ನಂತರ ಪ್ರಧಾನಿ ಮೇ ರಾಜೀನಾಮೆ ವಿಷಯದಿಂದ ದೂರ ಸರಿದಿದ್ದಾರೆ, ಒಪ್ಪಂದವು ನಾಲ್ಕನೇ ಬಾರಿಗೆ ಸೋಲಿಸಲ್ಪಟ್ಟರೂ ಸಹ, ಸಂಸತ್ತಿನ ಜನಾಭಿಪ್ರಾಯದ ಫಲಿತಾಂಶಗಳನ್ನು ಗೌರವಿಸಲು ಮರೆಯದಿರಿ ಎಂದು ಹೇಳಿದ್ದಾರೆ. ಮೇ ಅವರು ಈ ಬಿಕ್ಕಟ್ಟಿನಿಂದ ಹೊರಬರಲು ಮಾರ್ಗೋಪಾಯ ಕಂಡುಕೊಂಡಲ್ಲಿ ಅದು ಖಂಡಿತವಾಗಿ ಅವರ ಮತ್ತು ಅವರ ಸರ್ಕಾರಕ್ಕೆ ಒಂದು ಸಾಧನೆ ಎನಿಸಿಕೊಳ್ಳಲಿದೆ. ಒಂದು ವೇಳೆ ಹಾಗೆ ಆಗದಿದ್ದಲ್ಲಿ ನಿಜವಾದ ಆರ್ಥಿಕ ಮತ್ತು ಸಾಂವಿಧಾನಿಕ ಸಮಗ್ರತೆಯನ್ನು ಸ್ಥಾಪಿಸುವ ಮುನ್ನ ಬ್ರಿಟನ್ ಕೆಲವು ಅಡಚಣೆಗಳಿಗೆ ತುತ್ತಾಗಬಹುದು. ಉಳಿದ 27 ಯೂರೋಪಿಯನ್ ಯೂನಿಯನ್ ಸದಸ್ಯರು ಬ್ರೆಕ್ಸಿಟ್ ಒಪ್ಪಂದದ ಬಗ್ಗೆ ಮರುಪರಿಶೀಲನೆ ನಡೆಸಲು ೬ ತಿಂಗಳ ಕಾಲವಕಾಶ ನೀಡುವ ಸಾದ್ಯತೆ ಇದೆ..
ಭಾರತಕ್ಕೆ 'ಒಪ್ಪಂದ' ಅಥವಾ ಒಪ್ಪಂದ ಇಲ್ಲ ಎಂಬ ಸನ್ನಿವೇಶವು ಬ್ರಿಟನ್ ಜತೆಗೆ ನಡೆಸುವ ವ್ಯಾಪಾರ ಮತ್ತು ಹೂಡಿಕೆಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಕಾಳಜಿ ಇದೆ. 2019 ರ ಫೆಬ್ರವರಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವರದಿಯು, "ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಬಗ್ಗೆ ಪುನಃಪರಿಶೀಲನೆ ಮಾಡಿದರೆ ಮಾರ್ಚ್ 2019 ರಲ್ಲಿ ಬ್ರೆಕ್ಸಿಟ್ ಸಾಧ್ಯತೆಗಳು ಭಾರತೀಯ ರಫ್ತುದಾರರಿಗೆ ಅವಕಾಶಗಳನ್ನು ಒದಗಿಸಬಹುದು" ಎಂದು ತಿಳಿಸಿದೆ. ಮತ್ತೊಂದೆಡೆ, ಬ್ರೆಕ್ಸಿಟ್ ಕೂಡ ಈ ಸಮಸ್ಯೆಯನ್ನು ಗುರುತಿಸಿದೆ. ಬಲವಾದ ಹೂಡಿಕೆಯ ಸಂಬಂಧದಿಂದಾಗಿ ಭಾರತದ ಬಾಹ್ಯ ವಲಯಕ್ಕೆ ಪರಿಣಾಮಗಳು ಆಗುವ ಲಕ್ಷಣಗಳಿವೆ. ಒಂದು 'ಒಪ್ಪಂದ ಇಲ್ಲ ಎಂದಾದಲ್ಲಿ ಪರಿಸ್ಥಿತಿಯು ಬ್ರಿಟಿಷ್ ಪೌಂಡ್ ಮೇಲೆ ಪರಿಣಾಮ ಬೀರಿ ನಂತರ ಮಾರುಕಟ್ಟೆಗಳಿಗೆ ಹಾನಿ ಮಾಡಲಿದೆ. ಇದರಿಂದಾಗಿ ಯುಕೆಯ ಹಣಕಾಸು ಮಾರುಕಟ್ಟೆ ಮತ್ತು ಅದರ ದುರಂತದ ಪರಿಣಾಮಗಳಿಂದಾಗಿ ಮಾರುಕಟ್ಟೆ ಮತ್ತೆ ಸಹಜ ಸ್ಥಿತಿಗೆ ಬರಲು ಸಾಕಷ್ಟು ಸಮಯ ಬೇಕಾಗಬಹುದು ಎಂಬುದು ಗಮನಿಸಬೇಕಾದ ವಿಷಯ.

ಲೇಖನ : ಡಾ. ಸಂಗಮಿತ್ರ ಶರ್ಮ, ಯೂರೋಪಿಯನ್ ವ್ಯವಹಾರಗಳ ವಿಶ್ಲೇಷಕರು
Comments
Post a Comment