5G ತಂತ್ರಜ್ಞಾನಕ್ಕೆ ತೆರೆದುಕೊಳ್ಳಲಿರುವ ಭಾರತ
ಮುಂದಿನ 100 ದಿನಗಳಲ್ಲಿ ಐದನೇ ಪೀಳಿಗೆಯ ಅಥವಾ 5ಜಿ ಮೊಬೈಲ್ ಸಂವಹನ ತಂತ್ರಜ್ಞಾನದ ಪ್ರಯೋಗಗಳನ್ನು ಭಾರತ ಹೊರತರಲಿದೆ. ಈ ಮುಂದಿನ ಪೀಳಿಗೆಯ ಮೊಬೈಲ್ ಫೋನ್ ಜಾಲವು ಹೆಚ್ಚಿನ ಸಂಪರ್ಕ ವೇಗ, ಕಡಿಮೆ ಸುಪ್ತತೆ (ಪ್ರತಿಕ್ರಿಯೆ ಸಮಯ) ಮತ್ತು ಪ್ರಸ್ತುತ 4ಜಿ ನೆಟ್ವರ್ಕ್ಗಳಿಗಿಂತ ಹೆಚ್ಚಿನ ವಿಶ್ವಾಸಾರ್ಹತೆಯ ಭರವಸೆಯನ್ನು ನೀಡುತ್ತದೆ.
ಹೊಸ ಯುಗದ 5ಜಿ ತಂತ್ರಜ್ಞಾನವು ವಿಕಸನೀಯ ಮತ್ತು ಕ್ರಾಂತಿಕಾರಿ ಸೇವೆಗಳನ್ನು ಓದಗಿಸುತ್ತದೆ. ಇದು ದೇಶದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಪ್ರಸ್ತುತ 2G, 3G ಮತ್ತು 4G ಮೊಬೈಲ್ ನೆಟ್ವರ್ಕ್ ಗಳಿಗೆ ಹೆಚ್ಚುವರಿಯಾಗಿ ೫G ಜಾಲ ಹೊರಬರಲಿದೆ. ಡಿಜಿಟಲೀಕರಣದಲ್ಲಿ ಸೂಪರ್ ಫಾಸ್ಟ್ ೫ಜಿ ಪ್ರಮುಖ ಪಾತ್ರವಹಿಸಲಿದೆ. ಇದು ಭಾರತದಲ್ಲಿ ಒಂದು ಪ್ರಮುಖ ಸಾಮಾಜಿಕ ರೂಪಾಂತರದ ಸಾಮರ್ಥ್ಯವನ್ನು ಹೊಂದಿದೆ.
ಜೂನ್ 3 ರಂದು ಅಧಿಕಾರಸ ಸ್ವೀಕರಿಸಿ ಮಾತನಾಡಿದ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು, "5 ಜಿ ತಂತ್ರಜ್ಞಾನವು ವಂಚಿತ ಕ್ಷೇತ್ರಕ್ಕೆ, ಸಾಮಾಜಿಕ ಕೆಲಸಗಳಿಗೆ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಮತ್ತು ಗ್ರಾಮೀಣ ಜನಋ ಬಳಿಕೆಗೆ ನೆರವಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದು ಹೇಳಿದರು.
ಪ್ರಯೋಗಗಳು ಕನಿಷ್ಟ ಆರು ತಿಂಗಳ ಕಾಲ ಮತ್ತು ಅದಕ್ಕೂ ಮೀರಿದ ಅವಧಿಗೆ ನಡೆಯಬಹುದು. ಮುಂದಿನ ವರ್ಷ ಪ್ರಾರಂಭವಾಗುವಂತೆ, 5G ತಂತ್ರಜ್ಞಾನಗಳು ಸೇವೆಗಳನ್ನು ಆರಂಭಿಸುವ ಸಾಧ್ಯತೆ ಇದೆ. 2024 ರ ಹೊತ್ತಿಗೆ ಸಂಪೂರ್ಣ ಶ್ರೇಣಿಯ ಸೇವೆಗಳ ನಿರೀಕ್ಷೆಯಿದೆ. ವರ್ಲ್ಡ್ ವೈಡ್ ವೈರ್ಲೆಸ್ ವೆಬ್ (WWWW) ಪದವನ್ನು 5G ಗಾಗಿ ಸೃಷ್ಟಿಸಲಾಗಿದೆ.
ಹಿಂದಿನ ಪೀಳಿಗೆಯ ಮೊಬೈಲ್ ನೆಟ್ವರ್ಕ್ಗಳು ವೈಯಕ್ತಿಕ ಫೋನ್ ಗಳಿಗೆ ಮಾತ್ರ ಸೇವೆಗಳನ್ನು ಒದಗಿಸುತ್ತಿದ್ದವು. ಮೊದಲ ಪೀಳಿಗೆಯಲ್ಲಿ, 1 ಜಿ, ಫೋನ್ ಗಳು ಕಾರ್ಯನಿರ್ವಹಿಸುತ್ತಿದ್ದವು ಮತ್ತು ಅವುಗಳಲ್ಲಿ ಮೊದಲ ಮೊಬೈಲ್ ಅಥವಾ ಸೆಲ್ಯುಲರ್ ಫೋನ್ಗಳು ಬಳಕೆಯಾಗುತ್ತಿದ್ದವು. ಆ ಕಾಲದಲ್ಲಿ ಅವುಗಳನ್ನೇ ಕ್ರಾಂತಿಕಾರಿ ಬೆಳವಣಿಗೆ ಎಂದು ಬಣ್ಣಿಸಲಾಗಿತ್ತು. ಅವು ಕಡಿಮೆ ಪ್ರಮಾಣದ ಸ್ಪೆಕ್ಟ್ರಮ್ ಸಾಮರ್ಥ್ಯ ಮತ್ತು ಭದ್ರತೆಯನ್ನು ಹೊಂದಿದ್ದವು.
ಎರಡನೆಯ ಪೀಳಿಗೆಯ ಅಥವಾ 2ಜಿ ನೆಟ್ವರ್ಕ್ ಡಿಜಿಟಲ್ ತಂತ್ರಜ್ಞಾನವನ್ನು ಆಧರಿಸಿತ್ತು. ಇದು ಹೆಚ್ಚು ಸ್ಪೆಕ್ಟ್ರಮ್ ದಕ್ಷತೆ, ಭದ್ರತೆ ಮತ್ತು ಟೆಕ್ಸ್ಟ್ ಸಂದೇಶಗಳು ಮತ್ತು ಕಡಿಮೆ ಡೇಟಾ ದರ ಸಂವಹನಗಳಂತಹ ಹೊಸ ವೈಶಿಷ್ಟ್ಯಗಳನ್ನು ಒದಗಿಸಿತು. ಮೂರನೆಯ ತಲೆಮಾರಿನ 3ಜಿ ತಂತ್ರಜ್ಞಾನವು ಹೆಚ್ಚಿನ ವೇಗದ ದತ್ತಾಂಶವನ್ನು ಒದಗಿಸಿತು. ನಾಲ್ಕನೇ ಪೀಳಿಗೆಯ 4 ಜಿ (ಇಂಟರ್ನೆಟ್ ಪ್ರೊಟೊಕಾಲ್) 1 (ಒಂದು) ಜಿಬಿಪಿಎಎಸ್ ಡಾಟಾ ದರವನ್ನು ಒದಗಿಸುವ ಸಾಮರ್ಥ್ಯವಿರುವ ಆಲ್-ಐಪಿ ಆಧಾರಿತ ತಂತ್ರಜ್ಞಾನವಾಗಿದೆ.
5 ಜಿ ಸೇವೆಗಳು ಇವುಗಳನ್ನು ಮೀರಿ ನಿಲ್ಲಲಿದೆ. ವ್ಯಾಪಕ ಶ್ರೇಣಿಯ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಬೆಂಬಲಿಸಲು ೫ಜಿ ನೆರವಾಗಲಿದೆ. ಸಂವೇದಕಗಳು, ವಾಹನಗಳು, ರೋಬೋಟ್ಗಳು ಮತ್ತು ಡ್ರೋನ್ಸ್ಗಳಂತಹ ಹೊಸ ಸಾಧನಗಳನ್ನು ಕೂಡ ಇದು ಸಹ ಸಂಪರ್ಕಿಸುತ್ತದೆ. ಇವೆಲ್ಲವೂ ಹೊಸ ಆರ್ಥಿಕ ಅವಕಾಶಗಳನ್ನು ಪ್ರಚೋದಿಸಬಹುದು.
ಇದು ಅಭಿವೃದ್ಧಿಗೆ ಸಾಂಪ್ರದಾಯಿಕ ಅಡೆತಡೆಗಳಿರುವುದನ್ನು ತಡೆಯುತ್ತದೆ. 5ಜಿ 'ಡಿಜಿಟಲ್ ಇಂಡಿಯಾ' ಮತ್ತು ಸಂಯೋಜಿತ ಮಿಷನ್ ಗಳ ವ್ಯಾಪ್ತಿ ಮತ್ತು ಉಪಯುಕ್ತತೆಯನ್ನು ಬಳಸಿಕೊಳ್ಳಲಿದೆ. ಬೃಹತ್ ಪ್ರಮಾಣದ ದತ್ತಾಂಶವನ್ನು ಸಾಗಿಸಲು ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸುವ ಮೂಲಕ ಇಂಟರ್ ನೆಟ್ ಆಫ್ ಥಿಂಗ್ಸ್ (ಐಓಟಿ) ತಂತ್ರಜ್ಞಾನದ ಏರಿಕೆಗೆ ಸಹಾಯ ಮಾಡುತ್ತದೆ. ಇದು ಹೆಚ್ಚು ಚುರುಕಾದ ಮತ್ತು ಹೆಚ್ಚು ಸಂಪರ್ಕ ಹೊಂದಿದ ಜಗತ್ತಿಗೆ ಅವಕಾಶ ನೀಡುತ್ತದೆ. ೫ ಜಿಯಲ್ಲಿ ಭಾರತದ ಅಗತ್ಯತೆಗಳಿಗೆ ಬೇಕಾದ ಅಪ್ಲಿಕೇಷನ್ ಗಳನ್ನು ಬೆಂಬಲಿಸುವ ನಮ್ಯತೆ ಇದೆ.
ಒಂದು ಉತ್ತಮ ಉದಾಹರಣೆ ಟೆಲಿಫೋನಿ. 1990 ರ ದಶಕದ ತನಕ ಭಾರತದ ಟೆಲಿಫೋನ್ ಸಾಂದ್ರತೆಯು ಹೆಚ್ಚು ವೆಚ್ಚದ ಸ್ಥಿರ ಟೆಲಿಫೋನ್ ಕಾರಣದಿಂದಾಗಿ ಚಿಕ್ಕದಾಗಿತ್ತು. ಆದಾಗ್ಯೂ, 21 ಮೊಬೈಲ್ ಜಾಲಗಳ ಆಗಮನವು ಸೇವಾ ವಿತರಣೆಯ ವೆಚ್ಚವನ್ನು ಕಡಿಮೆಗೊಳಿಸಿತು. ದೇಶದ ಟೆಲಿಫೋನ್ ಬರುವಿಕೆ 1995ರಲ್ಲಿ 5% ಕ್ಕಿಂತಲೂ ಕಡಿಮೆ ಇತ್ತು. 2010ರ ಹೊತ್ತಿಗೆ ಅದು 95% ಕ್ಕೆ ಏರಿತು. ಇದು ಭಾರತೀಯ ಆರ್ಥಿಕತೆಗೆ ಗಮನಾರ್ಹ ಪ್ರಯೋಜನಗಳನ್ನು ತಂದುಕೊಟ್ಟಿತು. 4ಜಿ ಸ್ಮಾರ್ಟ್ ಫೋನ್ ಗಳಲ್ಲಿ ನಿಸ್ತಂತು ಅಂತರ್ಜಾಲ ಪ್ರವೇಶದಿಂದ ಭಾರಿ ಅನುಕೂಲವಾಗಿದೆ.
ನಿಖರವಾದ ಉತ್ಪಾದನೆಗೆ ತಯಾರಿಕೆ ವೇಳೆ ೫ಜಿಗೆ ರೋಬಾಟಿಕ್ಸ್ ಬಳಕೆಯಾಗಲಿದೆ. ನಿರ್ದಿಷ್ಟವಾಗಿ ಮನುಷ್ಯರು ಈ ಕಾರ್ಯಗಳನ್ನು ಸುರಕ್ಷಿತವಾಗಿ ಅಥವಾ ಅಗತ್ಯವಾದ ನಿಖರತೆಯೊಂದಿಗೆ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕಚ್ಚಾ ಸಾಮಗ್ರಿಗಳ ಉತ್ಪನ್ನ ವಿತರಣೆ ಮತ್ತು ದೇಶದಾದ್ಯಂತ ಉತ್ಪಾದನಾ ಸಂಪನ್ಮೂಲಗಳ ಸುಧಾರಿತ ಹಂಚಿಕೆಗೆ ಮತ್ತು ಸರಕುಗಳನ್ನು ಪತ್ತೆಹಚ್ಚಲು 5G ನೆರವಾಗಲಿದೆ.
ಕೃಷಿಯಲ್ಲಿ, ಜಾನುವಾರು ನಿರ್ವಹಣೆಗೆ, ನಿಖರವಾದ ಕೃಷಿ, ಸ್ಮಾರ್ಟ್ ನೀರಾವರಿ, ಸುಧಾರಿತ ಮಣ್ಣು ಮತ್ತು ಬೆಳೆ ಮೇಲ್ವಿಚಾರಣೆಗಳು 5ಜಿಯಿಂದ ಸಾಧ್ಯವಿದೆ.
ಇಂಧನ ವಲಯದಲ್ಲಿ, 'ಸ್ಮಾರ್ಟ್ ಗ್ರಿಡ್ಸ್' ಮತ್ತು 'ಸ್ಮಾರ್ಟ್ ಮೀಟರಿಂಗ್' ಪರಿಣಾಮಕಾರಿಯಾಗಿ ಜಾರಿಯಾಗಲು ಹಾಗೂ ಇಂಧನ ತಂತ್ರಜ್ಞಾನಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಆರೋಗ್ಯ-ಆರೈಕೆಯಲ್ಲಿ, 5Gಯು ಹೆಚ್ಚು ಪರಿಣಾಮಕಾರಿ, ಟೆಲಿ-ಮೆಡಿಸಿನ್ ವಿತರಣೆ, ಶಸ್ತ್ರಚಿಕಿತ್ಸೆಯ ರೋಬಾಟಿಕ್ಸ್ ಟೆಲಿ ನಿಯಂತ್ರಣ ಮತ್ತು ಪ್ರಮುಖ ಅಂಕಿ ಅಂಶಗಳ ನಿಸ್ತಂತು ಮೇಲ್ವಿಚಾರಣೆಯನ್ನು ಕೂಡ ಇದು ಸಕ್ರಿಯಗೊಳಿಸುತ್ತದೆ.
ಲೇಖನ : ಕೆ.ವಿ. ವೆಂಕಟಸುಬ್ರಹ್ಮಣ್ಯನ್, ಹಿರಿಯ ಪತ್ರಕರ್ತರು

Comments
Post a Comment