ನೆರೆಹೊರೆ ಆದ್ಯತೆ ನೀಡಿ ಪುನರುಚ್ಚರಿಸಿದ ಭಾರತ
ವಾರಾಂತ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ಮತ್ತು ಶ್ರೀಲಂಕಾಕ್ಕೆ ಭೇಟಿ ನೀಡಿದರು; ಎರಡನೆಯ ಅವಧಿಗೆ ಭಾರತದಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ವಿದೇಶಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ಎರಡು ಬಂದರು ದೇಶಗಳಾಗಿದ್ದು'ನೆರೆಹೊರೆಯ ಪ್ರಥಮ' ನೀತಿ ಮತ್ತು 'ಈ ಪ್ರದೇಶದ ಎಲ್ಲರಿಗೂ ಸುರಕ್ಷತೆ ಮತ್ತು ಬೆಳವಣಿಗೆ' (SAGAR) ಸಿದ್ಧಾಂತಕ್ಕೆ ಭಾರತ ಅಗ್ರಗಣ್ಯಆದ್ಯತೆಯನ್ನು ನೀಡುತ್ತದೆ.
'ನೆರೆಹೊರೆಯ ಪ್ರಥಮ' ನೀತಿಯ ಮೇಲೆ ಗಮನ ಕೇಂದ್ರೀಕರಿಸಿದ್ದರೂ, ಆ ದೇಶದ ರಾಜಕೀಯ ಬಿಕ್ಕಟ್ಟಿನಿಂದಾಗಿ ಮೋದಿ ಅವರು ತಮ್ಮ ಮೊದಲಅಧಿಕಾರಾವಧಿಯಲ್ಲಿ ಮಾಲ್ಡೀವ್ಸ್ ಗೆ ಭೇಟಿ ನೀಡಿರಲಿಲ್ಲ. ಅಕ್ಟೋಬರ್ 2018ರಲ್ಲಿ ಇಬ್ರಾಹಿಂ ಮೊಹಮದ್ ಸೊಲಿಹ್ ಅವರು ಮಾಲ್ಡೀವ್ಸ್ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನವೆಂಬರ್ 2018 ರಲ್ಲಿ, ಭಾರತೀಯ ಪ್ರಧಾನಿ ಅಧ್ಯಕ್ಷ ಸೋಲಿಹ್ ಅವರ ಪ್ರಮಾಣ ವಚನ ಸಮಾರಂಭಕ್ಕೆಹಾಜರಾಗಲು ದ್ವೀಪ ರಾಷ್ಟ್ರಕ್ಕೆ ಭೇಟಿ ಕೊಟ್ಟರು. ತಮ್ಮ ಎರಡನೇ ಅಧಿಕಾರವಧಿಯಲ್ಲಿ ಮಾಲ್ಡೀವ್ಸ್ ದೇಶಕ್ಕೆ ಮೊದಲ ಭೇಟಿ ನೀಡುವ ಮೂಲಕಭಾರತೀಯ ಪ್ರಧಾನ ಮಂತ್ರಿ ಸಾಂಪ್ರದಾಯಿಕವಾಗಿ ಬಲವಾಗಿರುವ ಭಾರತ-ಮಾಲ್ಡೀವ್ಸ್ ಸಂಬಂಧಗಳನ್ನು ವರ್ಧಿಸಲು ಮತ್ತು ಉತ್ತೇಜಿಸಲು ಮುಂದಾಗಿದ್ದಾರೆ. ಸೊಲಿಹ್ ಆಡಳಿತದೊಂದಿಗೆ ಕೆಲಸ ಮಾಡುವ ತಮ್ಮ ಸರ್ಕಾರದ ಉದ್ದೇಶವನ್ನು ಮಂಡಿಸಿದ್ದಾರೆ.
ಎರಡು ದಿನಗಳ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರಿಗೆ ಇಝುದ್ದೀನ್ ಆರ್ಡರ್ ಆಫ್ ಡಿಸ್ಟಿಂಗ್ವಿಶ್ಡ್ ರೂಲ್ ಅನ್ನು ನೀಡಿ ಗೌರವಿಸಲಾಯಿತು. ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳು ಸಹಕಾರ ಚೌಕಟ್ಟನ್ನು ಸ್ಥಾಪಿಸಲು ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಅವುಗಳಲ್ಲಿ; ಹೈಡ್ರೋಗ್ರಾಫಿಯ ಕ್ಷೇತ್ರದಲ್ಲಿ ಒಪ್ಪಂದಗಳು; ಆರೋಗ್ಯ, ಸಾಗರದಲ್ಲಿ ಪ್ರಯಾಣಿಕರ ಮತ್ತು ಸರಕು ಸೇವೆಗಳನ್ನು ಆರಂಬಿಸುವುದು; ಕಸ್ಟಮ್ಸ್ ನಲ್ಲಿ ಸಹಕಾರ , ಮಾಲ್ಡೀವಿಯನ್ ನಾಗರಿಕ ಸೇವಾ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಭಾರತೀಯ ನೌಕಾಪಡೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್ಡಿಎಫ್) ನಡುವೆ ನೌಕಾ ಮಾಹಿತಿಯನ್ನು ಹಂಚಿಕೊಳ್ಳುವ ತಾಂತ್ರಿಕ ಒಪ್ಪಂದ ಒಳಗೊಂಡಿದೆ.
ಪ್ರಧಾನಿ ಮೋದಿ ಅವರು ಪೀಪಲ್ಸ್ ಮಜ್ಲಿಸ್ (ಪಾರ್ಲಿಮೆಂಟ್) ಉದ್ದೇಶಿಸಿ ಮಾತನಾಡಿದರು. ಇದು ಎಂಭತ್ತಾರು ವರ್ಷಗಳ ಮಜ್ಲಿಸ್ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶಿ ಗಣ್ಯರಿಗೆ ನೀಡಲ್ಪಟ್ಟ ಒಂದು ಅವಕಾಶ ಎಂಬುದು ಗಮನಾರ್ಹ. ಮಜ್ಲಿಸ್ ನಲ್ಲಿ ಮಾಡಿದ ಭಾಷಣದಲ್ಲಿ ಮೋದಿ ಅವರು, ಪ್ರಜಾಪ್ರಭುತ್ವ ಕುರಿತ ತಮ್ಮ ದೃಷ್ಟಿಕೋನ, ನ್ಯಾಯಸಮ್ಮತವಾದ ಜಾಗತಿಕ ವ್ಯವಸ್ಥೆ, ಹಿಂದೂ ಮಹಾಸಾಗರದ ಪ್ರದೇಶದಲ್ಲಿಶಾಂತಿ ಮತ್ತು ಪ್ರಗತಿಯನ್ನು ನೋಡಬೇಕೆಂಬ ತಮ್ಮ ಬಯಕೆಯನ್ನು ಹೊರಹಾಕಿದರು.
ಭಾರತದ ಪ್ರಧಾನಿ ಅಲ್ಲಿನ ಸ್ಪೀಕರ್ ಮೊಹಮದ್ ನಶೀದ್, ಉಪ ರಾಷ್ಟ್ರಪತಿ ಫೈಸಲ್ ನಸೀಮ್ ಮತ್ತು ಮೌಮುನ್ ರಿಫಾರ್ಮ್ ಮೂವ್ ಮೆಂಟ್ ಮುಖಂಡ ಮೌಮುನ್ ಅಬ್ದುಲ್ ಗಯೂಮ್, ಜುಮೌರೇ ಪಾರ್ಟಿ ಮುಖಂಡ ಕಾಶಿಮ್ ಇಬ್ರಾಹಿಂ ಮತ್ತು ಅದಾಲಾತ್ ಪಕ್ಷದ ಇಮ್ರಾನ್ ಅಬ್ದುಲ್ಲಾ ಸೇರಿದಂತೆ ರಾಜಕೀಯ ನಾಯಕರನ್ನು ಭೇಟಿ ಮಾಡಿದರು. ಈ ಭೇಟಿಗಳು ಮೂಲಕ ಮಾಲ್ಡೀವ್ಸ್ನಲ್ಲಿ ಪ್ರಜಾಪ್ರಭುತ್ವವನ್ನು ವರ್ಧಿಸಲು ಮತ್ತು ಆಡಳಿತದ ಒಕ್ಕೂಟವನ್ನು ಕಾಪಾಡಿಕೊಳ್ಳಲು ಕೇಂದ್ರೀಕರಿಸಲ್ಪಟ್ಟವು.
ಭಾರತವು ಮಾಲ್ಡೀವ್ಸ್ ಜೊತೆಗಿನ ವಿಶೇಷ ಸಂಬಂಧ ಮುಂದುವರಿಸಿದೆ ಮತ್ತು ಈ ಭೇಟಿಯನ್ನು ಯಶಸ್ವಿ ಎಂದು ಪರಿಗಣಿಸಲಾಗಿದೆ. ಪ್ರಧಾನಿ ಮೋದಿ ಜತೆಗಿನ ಜಂಟಿ ಹೇಳಿಕೆಯಲ್ಲಿ ಅಧ್ಯಕ್ಷ ಸೊಲಿಹ್, ತಮ್ಮ ಸರಕಾರದ 'ಭಾರತ ಮೊದಲ ನೀತಿ'ಯನ್ನು ಪುನರುಚ್ಚರಿಸಿದರು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಬಹುಮುಖಿ, ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಯನ್ನು ಗಾಢಗೊಳಿಸುವ ಕಡೆಗೆ ತಮ್ಮ ಸರ್ಕಾರದ ಸಂಪೂರ್ಣ ಬೆಂಬಲದ ಬಗ್ಗೆ ವಾಗ್ದಾನ ಮಾಡಿದರು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಶಾಶ್ವತ ಅಭ್ಯರ್ಥಿ ಸ್ಥಾನ ಸಿಗಬೇಕು ಎನ್ನುವುದು ಮಾಲ್ಡಿವ್ಸ್ ನಿಲುವಾಗಿದೆ. 2020-2021ರಲ್ಲಿ ವಿಸ್ತಾರವಾದ ಮತ್ತು ಸುಧಾರಣಾ ಯುಎನ್ ಸೆಕ್ಯುರಿಟಿ ಕೌನ್ಸಿಲ್ನ ಸದಸ್ಯತ್ವ ಮತ್ತು ಶಾಶ್ವತವಾದ ಸ್ಥಾನಕ್ಕೆ ಭಾರತದ ಅಭ್ಯರ್ಥಿಯಾಗಿರಬೇಕು ಎಂದು ತಿಳಿಸಿದರು.
ಮಾಲ್ಡೀವ್ಸ್ ನಿಂದ ಹಿಂತಿರುಗಿದ ವೇಳೆ ಪ್ರಧಾನಿ ಮೋದಿ ಅವರು ಶ್ರೀಲಂಕಾಕ್ಕೆ ಭೇಟಿ ನೀಡಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಕೊಲಂಬೋದಲ್ಲಿ ರಾಷ್ಟ್ರಪತಿ ಮೈತ್ರಿಪಾಲಾ ಸಿರಿಸೇನ ಅವರನ್ನು ಭೇಟಿ ಮಾಡಿದರು. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಹಾಗೂ ಇತರೆ ನಾಯಕರನ್ನೂ ಅವರು ಭೇಟಿ ಮಾಡಿದರು. ಇದೇ ವೇಲೆ ಸಂತ ಅಂಥೋನಿ ಚರ್ಚ್ ಗೆ ಭೇಟಿ ನೀಡಿ ಈಸ್ಟರ್ ಸಂಡೆ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಿದರು.
ಶ್ರೀಲಂಕಾ ಪ್ರವಾಸದ ಮುಖ್ಯ ಉದ್ದೇಶವು ಶ್ರೀಲಂಕಾ ಜತೆಗೆ ತಾವಿದ್ದೇವೆ ಎಂಬ ಸಂದೇಶ ರವಾನಿಸುವುದಾಗಿದೆ. ಏಕೆಂದರೆ ದೇಶವು ಭಯೋತ್ಪಾದಕ ದಾಳಿಯನ್ನು ಎದುರಿಸುತ್ತಿದೆ. ಈಸ್ಟರ್ ಭಾನುವಾರದಂದು ಭೀಕರ ಸ್ಫೋಟಗಳ ನಂತರ ಶ್ರೀಲಂಕಾಕ್‍ಕೆ ಭೇಟಿ ನೀಡುವ ಮೊದಲ ವಿದೇಶಿ ನಾಯಕ ಮೋದಿ ಅವರಾಗಿದ್ದಾರೆ. ಶ್ರೀಲಂಕಾದ ಆರ್ಥಿಕ, ವ್ಯಾಪಾರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯನ್ನು ಉತ್ತೇಜಿಸಲು ಈ ಪ್ರವಾಸವು ಉಪಯುಕ್ತವಾಗಿದೆ ಎಂದು ಅಧ್ಯಕ್ಷ ಸಿರಿಸೇನಾ ಅವರು ಭಾರತೀಯ ಪ್ರಧಾನ ಮಂತ್ರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಈ ದಾಳಿ ಶ್ರೀಲಂಕಾದ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ದ್ವಿಪಕ್ಷೀಯ ಚರ್ಚೆಗಳಲ್ಲಿ, ಭಾರತದ ಪ್ರಧಾನ ಮಂತ್ರಿ ಮತ್ತು ಶ್ರೀಲಂಕಾದ ಅಧ್ಯಕ್ಷರು ಭಯೋತ್ಪಾದನೆಗೆ ಕಡಿವಾಣ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಸಹಕಾರವನ್ನು ಮುಂದುವರಿಸಲು ಒಪ್ಪಿಕೊಂಡರು.
ಭಯೋತ್ಪಾದನೆ ವಿರುದ್ಧ ಹೋರಾಡಲು ಮತ್ತು ಕಡಲ ಭದ್ರತೆಗಾಗಿ ನೆರೆಹೊರೆಯ ದೇಶಗಳೊಂದಿಗೆ ಸಹಕಾರ ಹಂಚಿಕೊಳ್ಳಲು ಪ್ರಧಾನಿ ಮೋದಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಈ ಭೇಟಿಗಳು ಸೂಚಿಸಿವೆ.
ಲೇಖನ : ಡಾ. ಗುಲ್ಬಿನ್ ಸುಲ್ತಾನಾ, ರಿಸರ್ಚ್ ಅನಾಲಿಸ್ಟ್, ಐ.ಡಿ.ಎಸ್.ಎ

Comments
Post a Comment