ಪಾಕ್ ಆರ್ಥಿಕ ಬಿಕ್ಕಟ್ಟು ಮತ್ತು ಜರ್ದಾರಿ ಬಂಧನ
ಪಾಕಿಸ್ತಾನದ ರಾಷ್ಟ್ರೀಯ ಅಕೌಂಟಬಿಲಿಟಿ ಬ್ಯೂರೋ (ಎನ್ಎಬಿ) ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರನ್ನು ನಕಲಿ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಆರೋಪದಲ್ಲಿ ಬಂಧಿಸಿದೆ. ಜರ್ದಾರಿ ಅವರುಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷರಾಗಿರುವ ಬಿಲಾವಾಲ್ ಭುಟ್ಟೋ ಜರ್ದಾರಿಯವರ ತಂದೆಯಾಗಿದ್ದಾರೆ ಮತ್ತು ಅವರು ಪಾಕಿಸ್ತಾನ ನ್ಯಾಶನಲ್ ಅಸೆಂಬ್ಲಿಯ ಹಾಲಿ ಸದಸ್ಯರಾಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿದ್ದನ್ನು ಇಸ್ಲಾಮಾಬಾದ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಜರ್ದಾರಿ ಮತ್ತು ಅವರ ಸೋದರಿ ಫರ್ಯಾಲ್ ತಲ್ಪುರ್ ರನ್ನು ಬಂಧನಕ್ಕೊಳಪಡಿಸಲಾಗಿದೆ.
2015ರಲ್ಲಿ ಸಮಿತ್ ಬ್ಯಾಂಕ್, ಸಿಂಧ್ ಬ್ಯಾಂಕ್ ಮತ್ತು ಯುಬಿಲ್ ನಲ್ಲಿ ನಕಲಿ ಖಾತೆಗಳನ್ನು ಹೊಂದಿರುವ ಲಭ್ಯವಾದ ಬೆನ್ನಲ್ಲೇ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಈ ನಕಲಿ ಖಾತೆಗಳ ವ್ಯವಹಾರಗಳ ಬಗ್ಗೆ ತನಿಖೆ ಆರಂಭಿಸಿತ್ತು. ಅಲ್ಲಿಂದ ವಂಚಕರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ತನಿಖಾ ಸಂಸ್ಥೆ ತೊಡಗಿಕೊಂಡಿದೆ.
ಜರ್ದಾರಿ ಮತ್ತು ಅವರ ಸೋದರಿ ಸೇರಿ ಒಟ್ಟು 7 ಮಂದಿ ಈ ಖಾತೆಗಳನ್ನು ಬಳಸಿಕೊಂಡು ಅನುಮಾನಸ್ಪದ ವ್ಯವಹಾರಗಳನ್ನು ನಡೆಸಿದ್ದರು ಎಂದು ಹೇಳಲಾಗಿದೆ. ಕಿಕ್ ಬ್ಯಾಕ್ ಮೂಲಕ ಪಡೆದ ಹಣಗಳನ್ನು ಹೂಡಲು ಈ ಖಾತೆಗಳನ್ನು ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಎ ತನಿಖೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತು ಮತ್ತು ಜಂಟಿ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಲು ಆದೇಶಿಸಿತ್ತು.
ತನಿಖೆಯ ಹಂತದಲ್ಲಿ ಜಂಟಿ ತನಿಖಾ ತಂಡವು 33 ಶಂಕಾಸ್ಪದ ನಕಲಿ ಖಾತೆಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪ್ರಕರಣದೊಂದಿಗೆ ಜೋಡಿಸಲಾಯಿತು. ಸುಮಾರು 170 ಮಂದಿಯನ್ನು ಪ್ರಕರಣದಲ್ಲಿ ಗುರುತಿಸಿ ಅವರಿಗೆ ದೇಶ ಬಿಟ್ಟು ಹೋಗದಂತೆ ಸೂಚಿಸಲಾಯಿತು.
ಎನ್ಎಬಿ ಮತ್ತು ಎಫ್ಐಎ ಹೇಳಿರುವ ಪ್ರಕಾರ ಶಂಕಾಸ್ಪದ ಕಂಪನಿಗಳಿಗೆ ಸೇರಿರುವ ಈ ನಕಲಿ ಖಾತೆಗಳಿಗೆ ಸುಮಾರು 4.4 ಬಿಲಿಯನ್ ಪಾಕಿಸ್ತಾನಿ ಹಣ ಬಂದಿದ್ದು, ಅದರಲ್ಲಿ ರೂ.30 ಮಿಲಿಯನ್ ಹಣವನ್ನು ಜರ್ದಾರಿ ಗ್ರೂಪ್ ಆಫ್ ಕಂಪನಿಗೆ ಎರಡು ಹಂತಗಳಲ್ಲಿ ಪಾವತಿ ಮಾಡಲಾಗಿತ್ತು.
ಪಾಕಿಸ್ತಾನದ ಮಾಜಿ ಅಧ್ಯಕ್ಷರನ್ನು ಬಂಧಿಸುವ ಮುನ್ನ ಪಾಕಿಸ್ತಾನದ ಬ್ಯಾಂಕ್ ಸಂಬಂಧಿ ಕೋರ್ಟ್ ನಲ್ಲಿ ಎಫ್ಐಎ ಕೇಸೊಂದನ್ನು ದಾಖಲಿಸಿತ್ತು ಮತ್ತು ಆ ಮೂಲಕ ನ್ಯಾಯಾಯಲವು ಜರ್ದಾರಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. 2018 ಆಗಸ್ಟ್ ತಿಂಗಳಲ್ಲಿ ಜರ್ದಾರಿ ಪಾಕ್ ನ ಇಸ್ಲಾಮಾಬಾದ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ನಂತರ ಪ್ರಕರಣವು ಪಾಕಿಸ್ತಾನದ ಕರಾಚಿಯಲ್ಲಿರುವ ಅಕೌಂಟಬಿಲಿಟಿ ಬ್ಯೂರೋದಿಂದ ಇಸ್ಲಾಮಾಬಾದ್ ನಲ್ಲಿರುವ ಅಕೌಂಟಬಿಲಿಟಿ ಕೋರ್ಟ್ ಗೆ ವರ್ಗಾವಣೆಗೊಂಡಿತ್ತು. ಪಿಪಿಪಿ ಪಕ್ಷ ಪ್ರಕರಣದ ಮೇಲೆ ಪ್ರಭಾವ ಬೀರುವ ಯತ್ನ ಮಾಡುತ್ತಿದೆ ಎಂದು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಜರ್ದಾರಿ ಮತ್ತು ತಲ್ಪುರ್ ವಿರುದ್ಧ ಇಬ್ಬರು ಆರೋಪಿಗಳು ದೂರುಗಳನ್ನು ಒಪ್ಪಿಕೊಂಡಿದ್ದರು.
ಪಿಪಿಪಿ ಮುಖಂಡ ಮತ್ತು ಅವರ ಸಹೋದರಿ ಮಧ್ಯಂತರ ಜಾಮೀನನ್ನು ಸೋಮವಾರ ತಿರಸ್ಕರಿಸುವ ಮೊದಲು ಹಲವಾರು ಬಾರಿ ವಿಸ್ತರಣೆ ಮಾಡಲಾಗಿತ್ತು. ಪಾಕಿಸ್ತಾನದ ಮಾಜಿ ಅಧ್ಯಕ್ಷರು ಕನಿಷ್ಠ ಏಳುಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದಾರೆ.
ಪಾಕಿಸ್ತಾನ ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಸರ್ಕಾರ ಜನರಿಗೆ ಬಾಧಿಸುತ್ತಿರುವ ಮೂಲ ವಿಷಯಗಳಾದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದ ವಿಷಯಗಳನ್ನು ಮರೆ ಮಾಚುವ ಯತ್ನದಲ್ಲಿದ್ದಾರೆ. ಜರ್ದಾರಿ ಬಂಧನದ ಬಳಿಕ ಪಾಕ್ ಪ್ರಧಾನಿ ಭ್ರಷ್ಟಾಚಾರಿಗಳ ವಿರುದ್ಧ ನಮ್ಮ ನಿಲುವು ಎಂದು ಹೇಳಿದ್ದಾರೆ. ಪಾಕಿಸ್ತಾನದ ಬಜೆಟ್ ಮಂಡನೆ ಬಳಿಕ ಖಾನ್ ಅವರು, ದೇಶವನ್ನು ಭ್ರಷ್ಟ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಳೆದ ಕಾಲು ಶತಮಾನದಲ್ಲಿ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಲೆ, ಆಸ್ಪತ್ರೆಗಳನ್ನು ದೇಶದಲ್ಲಿ ನಿರ್ಮಾಣಗೊಂಡಿಲ್ಲ ಎಂದ ಖಾನ್, ಹೊಸ ಪಾಕಿಸ್ತಾನವು ಆಧುನಿಕ ಇಸ್ಲಾಮಿಕ್ ಮಾದರಿ ದೇಶವಾಗಿ ಹೊರಹೊಮ್ಮಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಆದರೆ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಸುರಕ್ಷೆ ನೀಡುವುದರಿಂದ ದೇಶ ಮುಕ್ತವಾಗಲಿದೆಯೇ ಎಂಬ ಅಂಶದ ಬಗ್ಗೆ ಅವರು ಯಾವುದೇ ಮಾತುಗಳನ್ನಾಡಲಿಲ್ಲ.
ಖಾನ್ನ ಮಾತುಗಳು ನಿಜಕ್ಕೂ ಕೆಚ್ಚೆದೆಯದ್ದಾಗಿವೆ; ಆದರೆ, ತಮ್ಮ ದೇಶ ಮುಳುಗುವ ಆರ್ಥಿಕತೆಯನ್ನು ಎದುರಿಸುತ್ತಿದೆ ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು. IMF ಹಣಕಾಸು ಪ್ಯಾಕೇಜ್ ಹಲವಾರುಷರತ್ತಗಳ ಬಳಿಕ ಸಿಕ್ಕಿದೆ. ಪಾಕಿಸ್ತಾನದ ಬಜೆಟ್ ದೇಶವು ಈ ಆರ್ಥಿಕ ವರ್ಷದಲ್ಲಿ 2.4 ಪ್ರತಿಶತದಷ್ಟು ಅಭಿವೃದ್ಧಿ ಸಾಧಿಸುವ ನಿರೀಕ್ಷೆ ಹೊರಹಾಕಿದೆ. ಹಣದುಬ್ಬರವು 11 ರಿಂದ 13 ಪ್ರತಿಶತದಷ್ಟು ಹೆಚ್ಚಾಗಲಿದೆ,ತೆರಿಗೆಗಳನ್ನು ಹೆಚ್ಚಿಸಲಾಗಿದೆ ಮತ್ತು IMF ಷರತ್ತುಗಳಿಂದಾಗಿ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ. ದೇಶದ ಬಜೆಟ್ ವೆಚ್ಚವು ಪಾಕಿಸ್ತಾನದ ಸುಮಾರು ರೂ. 7 ಟ್ರಿಲಿಯನ್ ಆಗಿದ್ದರೂ ನಿವ್ವಳ ಆದಾಯ ಕೇವಲಪಾಕಿಸ್ತಾನಿ ರೂ .3.5 ಟ್ರಿಲಿಯನ್ ಆಗಿರುತ್ತದೆ. ಉಳಿದ ಹಣವನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆಗೆ ಪಾಕಿಸ್ತಾನದ ಹಣಕಾಸು ಸಚಿವ ಹಮ್ಮದ್ ಅಝರ್ ಅವರು ಉತ್ತರಿಸದೆ ಉಳಿದಿದ್ದಾರೆ. ಉದ್ಯೋಗಗಳನ್ನುಸೃಷ್ಟಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ!

ಲೇಖನ : ಕೌಶಿಕ್ ರಾಯ್, ಆಕಾಶವಾಣಿ ವಿಶ್ಲೇಷಕರು
Comments
Post a Comment