ಅಮೆರಿಕ-ಭಾರತ ಸಂಬಂಧ ಸುಧಾರಣೆಯ ಪಥದಲ್ಲಿ

ಟ್ರಂಪ್ ಆಡಳಿತವು ಭಾರತಕ್ಕೆ ವಿಸ್ತರಿಸಿರುವ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (ಜಿಎಸ್ಪಿ) ಪ್ರಯೋಜನಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವ ಸುಮಾರು ಇಪ್ಪತ್ತೆಂಟು ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸುವ ನಿರ್ಧಾರ, ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೆಲವೇ ದಿನಗಳಲ್ಲಿ‌ ಪ್ರಮುಖ ಸುದ್ದಿಗಳಾಗಿ ಹೊರಬಿದ್ದಿವೆ. ಆದಾಗ್ಯೂ, ಅವರ “ವ್ಯೂಹಾತ್ಮಕ ಪಾಲುದಾರಿಕೆ” ಗೆ ಸಂಬಂಧಿಸಿದಂತೆ ಎರಡು ದೇಶಗಳು ಒಂದೇ ನಿಲುವನ್ನು ತಾಳಿವೆ. ಜಪಾನ್‌ನ ಒಸಾಕಾದಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೆ ಸ್ವಲ್ಪ ಮುಂಚೆ, ಯು.ಎಸ್. ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್. ಪೊಂಪಿಯೊ ಅವರು 2019 ರ ಜೂನ್ 25 ರಿಂದ 27 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಭಾರತದಲ್ಲಿ ಚುನಾವಣೆಯ ನಂತರ ಯುಎಸ್ ಜೊತೆಗಿನ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ. ಅವರ ಭೇಟಿಯ ಸಂದರ್ಭದಲ್ಲಿ ಅವರು ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಗಣ್ಯರನ್ನು ಭೇಟಿ ಮಾಡಲಿದ್ದಾರೆ. ಕಾರ್ಯದರ್ಶಿ ಪೊಂಪಿಯೊ ಅವರ ಭೇಟಿ ಭಾರತ-ಯು.ಎಸ್ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಲು ಎರಡೂ ಕಡೆಯವರಿಗೆ ಒಂದು ಪ್ರಮುಖ ಅವಕಾಶವಾಗಿದೆ. ಕಾರ್ಯತಂತ್ರದ ಸಹಭಾಗಿತ್ವ, ಮತ್ತು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು ಸೇರಿದಂತೆ ಪರಸ್ಪರ ಆಸಕ್ತಿಯ ವಿಷಯಗಳಲ್ಲಿ ಉನ್ನತ ಮಟ್ಟದ ಸಂಬಂಧವನ್ನು ಮುಂದುವರಿಸಲು ಅನುಕೂಲವಾಗಲಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯವರು ಭಾರತೀಯ ವಿದೇಶಾಂಗ ಇಲಾಖೆಗೆ ಎಸ್.ಜೈಶಂಕರ್ ಅವರನ್ನು ಸಚಿವರನ್ನಾಗಿ ನೇಮಕ ಮಾಡಿದ ಬಗ್ಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅಮೆರಿಕ ಪ್ರಕಟಣೆ ತಿಳಿಸಿದೆ. "ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸಲು ಹೊಸ ಭಾರತೀಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಯುಎಸ್ ಬಲವಾದ ಬದ್ಧತೆಯನ್ನು ಕಾರ್ಯದರ್ಶಿ ಪೊಂಪಿಯೊ ಒತ್ತಿಹೇಳಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.
ಕಾರ್ಯದರ್ಶಿ ಪೊಂಪಿಯೊ ಮತ್ತು ಭಾರತೀಯ ವಿದೇಶಾಂಗ ಸಚಿವರು ಮುಕ್ತ ಇಂಡೋ-ಪೆಸಿಫಿಕ್, ಯುಎಸ್-ಇಂಡಿಯಾ ಭದ್ರತಾ ಸಹಕಾರ ಮತ್ತು ಯುಎಸ್-ಇಂಡಿಯಾ ಆರ್ಥಿಕ ಸಹಭಾಗಿತ್ವವನ್ನು ಕಾಪಾಡುವಲ್ಲಿ ಯು.ಎಸ್ ಮತ್ತು ಭಾರತೀಯ ಉದ್ದೇಶಗಳನ್ನು ಹಂಚಿಕೊಂಡಿದ್ದಾರೆ ಎಂದು ಅಮೆರಿಕ ರಾಜ್ಯ ಇಲಾಖೆ ತಿಳಿಸಿದೆ. 

ಒಸಾಕಾದಲ್ಲಿ ನಡೆದ ಜಿ 20 ಶೃಂಗಸಭೆಯ ಹೊರತಾಗಿ, ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಭೆಗೆ ಅಡಿಪಾಯ ಹಾಕಲು ಯು.ಎಸ್. ವಿದೇಶಾಂಗ ಕಾರ್ಯದರ್ಶಿ ನವದೆಹಲಿ ಭೇಟಿಗೆ ಕೆಲವು ದಿನಗಳ ಮೊದಲು ಪೊಂಪಿಯೊ ಅವರ ದೂರವಾಣಿ ಕರೆ ಬಂದಿತ್ತು. ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಭಾರತ-ಯುಎಸ್-ಜಪಾನ್ ತ್ರಿಪಕ್ಷೀಯಕ್ಕಾಗಿ ಮೋದಿ ಮತ್ತು ಟ್ರಂಪ್, ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು ಜಂಟಿಯಾಗಿ ಭೇಟಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಇಂಡೋ-ಯುಎಸ್ ದ್ವಿಪಕ್ಷೀಯ ಸಂಬಂಧದ ಒಟ್ಟಾರೆ ನಿರ್ದೇಶನವು ಬಹಳ ಸಕಾರಾತ್ಮಕವಾಗಿ ಉಳಿದಿದೆ ಎಂಬುದು ಭಾರತದ ಅಭಿಪ್ರಾಯ. ಕಳೆದ ಹಲವು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವು ಸುಮಾರು 15೦ ಬಿಲಿಯನ್ ಶತಕೋಟಿಗೆ ಬೆಳೆದಿದೆ ಮತ್ತು ವ್ಯಾಪಾರ ಸಂಬಂಧಗಳಲ್ಲಿನ ಯಾವುದೇ ಅಡೆತಡೆಗಳನ್ನು ನವದೆಹಲಿ ಮತ್ತು ವಾಷಿಂಗ್ಟನ್ ಎರಡೂ ಸರಿಪಡಿಸಿಕೊಳ್ಳಬೇಕಿದೆ. ಎಚ್1ಬಿ ವೀಸಾಗಳಿಗೆ (ಹೆಚ್ಚು ತರಬೇತಿ ಪಡೆದ ವಿದೇಶಿಯರಿಗೆ ಯುಎಸ್ ವೃತ್ತಿಪರ ವೀಸಾಗಳು) ಐಟಿ ವೃತ್ತಿಪರರಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳ ಬಗ್ಗೆ ಯುಎಸ್ ಅಧಿಕೃತವಾಗಿ ಭಾರತಕ್ಕೆ ಮಾಹಿತಿ ನೀಡಿಲ್ಲ ಎಂಬುದನ್ನು ಸಹ ಗಮನಿಸಬೇಕು. 

ಟ್ರಂಪ್-ಮೋದಿ ದ್ವಿಪಕ್ಷೀಯ ಭೇಟಿ ಸಂದರ್ಭದಲ್ಲಿ ಇರಾನ್ ನಿರ್ಬಂಧದ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ ಮತ್ತು ಪೊಂಪಿಯೊ ಅವರ ನವದೆಹಲಿ ಭೇಟಿಯ ಸಮಯದಲ್ಲಿ ಇಂಧನ ಸುರಕ್ಷತೆಯ ಬಗ್ಗೆ ಭಾರತದ ಕಾಳಜಿಗಳನ್ನು ಚರ್ಚಿಸಲಾಗುವುದು.

ಪೊಂಪಿಯೊ ಮತ್ತು ಸಚಿವ ಜೈಶಂಕರ್ ಸಹ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಮತ್ತೊಂದು ಸಭೆಯ ಸಾಧ್ಯತೆಯನ್ನು ಎರಡೂ ಸರ್ಕಾರಗಳು ಅನ್ವೇಷಿಸುತ್ತಿವೆ ಮತ್ತು ಜೈಶಂಕರ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾರ್ಷಿಕ 2 + 2 ಶೃಂಗಸಭೆಗೆ ವಾಷಿಂಗ್ಟನ್‌ಗೆ ತೆರಳಲಿದ್ದಾರೆ. ಭವಿಷ್ಯದಲ್ಲಿ ಭಾರತಕ್ಕೆ ಅಮೆರಿಕದ ಅಧ್ಯಕ್ಷೀಯ ಭೇಟಿಯನ್ನು ಭಾರತವು ನಿರೀಕ್ಷಿಸುತ್ತಿದೆ. 

ಚೀನಾದ ಟೆಲಿಕಾಂ ಕಂಪನಿ ಹುವಾಯ್ ಭಾರತದಲ್ಲಿ 5 ಜಿ ರೋಲ್ ನಲ್ಲಿ ಭಾಗವಹಿಸುವ ಬಗ್ಗೆ ಯು.ಎಸ್. ಕಾಳಜಿಗಳಿಗೆ ಸಂಬಂಧಿಸಿದಂತೆ; ಅದರ ಬಗ್ಗೆ ಆಂತರಿಕ ಚರ್ಚೆಗಳು ಪ್ರಸ್ತುತ ನಡೆಯುತ್ತಿರುವುದರಿಂದ, ಆರ್ಥಿಕ ಮತ್ತು ಭದ್ರತಾ ಅಂಶಗಳನ್ನು ಕೇಂದ್ರೀಕರಿಸುವುದು ಮತ್ತು ಈ ಚರ್ಚೆಗಳ ಬಗ್ಗೆ ತಕ್ಷಣವೇ ತೀರ್ಮಾನಕ್ಕೆ ಬರಲಾಗುವುದಿಲ್ಲ ಎಂದು ಭಾರತೀಯ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಎರಡು ಅಂಶಗಳಲ್ಲಿ ಯಾವುದು ಭದ್ರತೆ ಮತ್ತು ಆರ್ಥಿಕ-ಪ್ರಕರಣವನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿದೆ ಎಂಬುದನ್ನು ಭಾರತ ನೋಡಬೇಕಾಗಿದೆ. ಭಾರತ ಈ ವಿಷಯದ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. 

ಡೇಟಾ ಸ್ಥಳೀಕರಣ, ಗಡಿಯಾಚೆಗಿನ ಇ-ಕಾಮರ್ಸ್ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ದೊಡ್ಡ ಸಮಸ್ಯೆಗಳು ಸಹ ಮಾತುಕತೆಯ ಭಾಗವೆಂದು ನಿರೀಕ್ಷಿಸಲಾಗಿದೆ. ಬಲವಾದ ದ್ವಿಪಕ್ಷೀಯ ಸಂಬಂಧವನ್ನು ದೃಢವಾಗಿ ರೂಪಿಸಲಾಗಿದೆ ಮತ್ತು ಕೆಲವು ಕ್ಷಣಿಕ ಅಡೆತಡೆಗಳು ಸೌಹಾರ್ದಯುತ ಸಂಬಂಧಗಳನ್ನು ಕದಡುವುದಿಲ್ಲ ಎಂದು ಎರಡೂ ದೇಶದವರು ಅರ್ಥಮಾಡಿಕೊಳ್ಳುತ್ತಾರೆ. ಎರಡನೇ ಬಾರಿಗೆ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ಅಮೆರಿಕ ವಿದೇಶಾಂಗ ಕಾರ್ಯದರ್ಶಿಯ ಭೇಟಿಯು ವಾಷಿಂಗ್ಟನ್‌ ಭಾರತದೊಂದಿಗೆ ವಿಶೇಷ ಸಂಬಂಧಗಳನ್ನು ಹೊಂದಿರುವುದನ್ನು ಒತ್ತಿಹೇಳುತ್ತದೆ. ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು 21 ನೇ ಶತಮಾನದಲ್ಲಿ “ನಿರಂತರ ಜಾಗತಿಕ ಪಾಲುದಾರರು” ಎಂಬುದನ್ನು ಅಲ್ಲಗಳೆಯಲಾಗದು.


ಲೇಖನ : ಸತ್ಯಜಿತ್‌ ಮೊಹಂತಿ, ಐಇಎಸ್‌, ಹಿರಿಯ ಆರ್ಥಿಕ ವಿಶ್ಲೇಷಕರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ