ಕೃಷಿಕರ ರಕ್ಷಣೆಗೆ ಕೇಂದ್ರದ ಕ್ರಮ
ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರಕಾರದ ಮೊದಲ ಕ್ಯಾಬಿನೆಟ್ ಸಭೆಯು ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕೆ ಗಮನ ಹರಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನ್ ಮಂತ್ರಿ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯ ವಾರ್ಷಿಕ ಅನುದಾನವಾದ ರೂ 6,000 ಅನ್ನು 145 ದಶಲಕ್ಷ ಭಾರತೀಯ ರೈತರಿಗೆ ಒದಗಿಸಲು ಅನುಮೋದಿಸಿತು.
ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ರೈತರಿಗೆ ರೂ. 2000 ಬೆಂಬಲ ಆದಾಯನ ನೀಡುವಂತೆಯೂ ಕ್ಯಾಬಿನೆಟ್ ತೀರ್ಮಾನಿಸಿತು. "ಸಣ್ಣ ಮತ್ತು ಅತಿಸಣ್ಣ ರೈತರಿಗೆ ಭರವಸೆಯ ಆದಾಯವನ್ನು ಒದಗಿಸಲು," ಪ್ರಧಾನ್ ಮಂತ್ರಿ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ. ಲೋಕಸಭಾ ಚುನಾವಣೆ ಘೋಷಿಸುವ ಮೊದಲು ಈ ವರ್ಷದ ಆರಂಭದಲ್ಲಿ ಗೋರಖಪುರದಲ್ಲಿ ಚಾಲನೆ ಸಿಕ್ಕಿದ ಈ ಕಾರ್ಯಕ್ರಮದ ವಿಸ್ತರಣೆಯಿಂದಾಗಿ 2019 ರ ವಾರ್ಷಿಕ ಹಣವನ್ನು ರೂ. 75000 ಕೋಟಿ ಎಂದು ಅಂದಾಜಿಸಲಾಗಿದೆ.
ಪಿಎಂ ಕಿಸಾನ್ ರೈತರಿಗೆ ಹಣಕಾಸು ಅನುದಾನ ನೀಡುವ ಯೋಜನೆಯಾಗಿದ್ದು, ರೈತರ ಖಾತೆಗಳಿಗೆ ಹಣ ನೇರವಾಗಿ ತಲುಪಲಿದೆ. ೨೦೧೯-೨೦ರ ಬಜೆಟ್ ನಲ್ಲಿ ಇದನ್ನು ಆರಂಭದಲ್ಲಿ ಘೋಷಣೆ ಮಾಡಲಾಗಿತ್ತು. ೨ ಹೆಕ್ಟೇರ್ ಭೂಮಿಯುಳ್ಳ ೧೨೦ ಮಿಲಿಯನ್ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಈ ಯೋಜನೆ ಮೂಲಕ ವಾರ್ಷಿಕ ರೂ.೬೦೦೦ ನೀಡಲಾಗುವುದು. ಮೂರು ಕಂತುಗಳಲ್ಲಿ ಹಣ ರೈತರಿಗೆ ಸೇರುತ್ತದೆ. ಕೃಷಿ ಬಿಕ್ಕಟ್ಟಿನ ನಿವಾರಣೆಗೆ ಕೇಂದ್ರ ಈ ಕ್ರಮ ಕೈಗೊಂಡಿದೆ.
ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರು ಈಗಲೂ ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ. ಹೀಗಾಗಿ ಸಾಲ ಮನ್ನಾ ಯೋಜನೆಗಳು ಕೇವಲ ಹೆಸರಿಗೆ ಮಾತ್ರ ಚೆನ್ನಾಗಿರುತ್ತವೆ. ಅಲ್ಲದೆ ಇದರಿಂದ ಸಾರ್ವಜನಿಕ ಹಣಕಾಸು ವ್ಯವಸ್ಥೆ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
ಆಹಾರ ಧಾನ್ಯಗಳು, ತೋಟಗಾರಿಕೆ, ತೈಲ ಬೀಜಗಳು, ಹತ್ತಿ ಮತ್ತು ಕಬ್ಬಿನ ದೊಡ್ಡ ಪ್ರಮಾಣದ ಉತ್ಪಾದನೆ ಹಾಗೂ ಕಡಿಮೆ ಮಾರಾಟದ ಪರಿಣಾಮ ರೈತರು ಯಾತನೆ ಅನುಭವಿಸುತ್ತಿದ್ದಾರೆ. ಅವರಿಗೆ ಪಿಎಂ ಕಿಸಾನ್ ಯೋಜನೆಯಿಂದ ನೆರವಾಗಲಿದೆ.
'ಖಾತರಿ ಉದ್ಯೋಗ' ನಿಂದ 'ಖಾತರಿಪಡಿಸಿದ ಆದಾಯ' ಎಂಬುದಾಗಿ ಈಚಿಗೆ ನೀತಿ ಸಂಭಾಷಣೆಯಲ್ಲಿ ಬದಲಾವಣೆಯಾಗಿದೆ. 'ಖಾತರಿಪಡಿಸಿದ ಆದಾಯ' ಸಮಾಜದ ದುರ್ಬಲ ವರ್ಗಗಳಿಗೆ ಘನತೆ ಮತ್ತು ಸಬಲೀಕರಣವನ್ನು ಒದಗಿಸುತ್ತದೆ. ಇದರಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಸೇರಿದ್ದಾರೆ. ಆದರೆ ಇದು ಕೃಷಿ ವ್ಯವಸ್ಥೆಯಲ್ಲಿ 'ರಚನಾತ್ಮಕ ಸಮಸ್ಯೆಗಳನ್ನು' ಪರಿಹರಿಸಲು ದೀರ್ಘಕಾಲದ ಪರಿಹಾರವಲ್ಲ.
ಈ ಕ್ಷೇತ್ರದ ಬೆಳವಣಿಗೆಗೆ ಕೃಷಿ ವಲಯದಲ್ಲಿ ಒಟ್ಟಾರೆ ಬಂಡವಾಳ ರಚನೆಯನ್ನು ಹೆಚ್ಚಿಸುವ ಅಗತ್ಯವಿದೆ. ಐದು ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕಾಗಿ ಕೃಷಿ ವಲಯದಲ್ಲಿ ಸುಮಾರು 14-15 ಶೇ. ನೀರಾವರಿ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಗಮನಾರ್ಹವಾದ ಕೃಷಿ ಭೂಮಿ ಕೂಡ ಮಾನ್ಸೂನ್ ಮಳೆ ಅವಲಂಬಿಸಿರುತ್ತದೆ.
ಕ್ಯಾಬಿನೆಟ್ ಸಭೆ ನೀಡಿದಂತೆ ಯೋಜನೆಗಳಿಗೆ ಅನುಕೂಲವಾಗಲು ಬಜೆಟ್ ಹಂಚಿಕೆಗಳಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಸರ್ಕಾರವು ಎಚ್ಚರಿಕೆಯ ವಿಶ್ಲೇಷಣೆ ನಡೆಸುವ ಅಗತ್ಯವಿದೆ. ಕೆಲವು ದೇಶಗಳಲ್ಲಿ, 'ಹಣಕಾಸು ಸಮಿತಿ' ಎಂಬ ಹೆಸರಿನ ಸಂಸ್ಥೆಯು ಕಾರ್ಯಕ್ರಮಗಳ ಮೇಲೆ ಬಜೆಟ್ ಮತ್ತು ವಾಸ್ತವಿಕ ಖರ್ಚುಗಳ ನಡುವಿನ ವ್ಯತ್ಯಾಸಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸುತ್ತದೆ.
PM-KISAN ಕೈಗೊಳ್ಳಲು ಲಭ್ಯವಿರುವ ಹಣಕಾಸಿನ ಬಗ್ಗೆ ಸಹ ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹಣಕಾಸು ಮಂತ್ರಿ ನಿರ್ಮಲಾ ಸಿತಾರಾಮಾನ್ ಅವರು ಮುಂದಿನ ದಿನಗಳಲ್ಲಿ ಬಜೆಟ್ ಮಂಡಿಸಿದ ಬಳಿಕ ಹಣಕಾಸು ಹಂಚಿಕೆಗಳೊಂದಿಗೆ ಇನ್ನಷ್ಟು ಸ್ಪಷ್ಟತೆಯನ್ನು ಪಡೆಯಬಹುದಾಗಿದೆ. ಕೃಷಿ ವಲಯಕ್ಕೆ ಈ ಬಜೆಟ್ ನಲ್ಲಿ ನಂತರದ ಬಜೆಟ್ನಲ್ಲಿ ಒತ್ತು ನೀಡುವ ನಿರೀಕ್ಷೆಗಳಿವೆ.
ಪ್ರಧಾನಿ ಕಿಸಾನ್ ಸಮ್ಮನ್ ಯೋಜಾನೆಗೆ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ನೀಡುತ್ತಿದೆ. "ಸಹಕಾರಿ ಒಕ್ಕೂಟ" ಮಾದರಿಯಲ್ಲಿ ಅದನ್ನು ಪುನರ್ ವಿನ್ಯಾಸಗೊಳಿಸಲಾಗುವುದೋ ಎಂಬುದನ್ನು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅದೇನೇ ಇರಲಿ, ಇದು ಮಾನವ ಅಭಿವೃದ್ಧಿ ದೃಷ್ಟಿಯಿಂದ ತೆಗೆದುಕೊಂಡಿರುವ ಒಂದು ಪ್ರಮುಖ ಕ್ರಮವಾಗಿದೆ. ಈ ಮಧ್ಯೆ ಅನೇಕ ರಾಜ್ಯಗಳು ತಮ್ಮ ರೈತ ಕಲ್ಯಾಣ ಯೋಜನೆಗಳನ್ನು ಹೊರತರುವ ನಿರೀಕ್ಷೆಯಿದೆ.
ಆರ್ಥಿಕ ಬೆಳವಣಿಗೆಯು ಮಾನವ ಅಭಿವೃದ್ಧಿಯನ್ನು ಖಾತರಿಪಡಿಸುವುದಿಲ್ಲ. ಭಾರತದ ದುರ್ಬಲ ರೈತ ವರ್ಗದ ಜೀವನೋಪಾಯದ ಖಾತರಿಗೆ PM-KISAN ನಂತಹ ಸಾರ್ವಜನಿಕ ನೀತಿಗಳು ಅಗತ್ಯವಾಗಿರುತ್ತದೆ. ಪ್ರಧಾನಿ ಮೋದಿ ಅವರ "ಲೀವ್ ನೋ ವನ್ ಬಿಹೈಂಡ್" (LNOB) ಮಾದರಿಯ ಪ್ರಮುಖ ಉದ್ದೇಶ ಏನೆಂದರೆ 'ಸಬ್ಕಾಸಾತ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ಆಗಿದೆ. ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು, ಸಾಮಾನ್ಯ ಜನರ ಕಷ್ಟಗಳನ್ನು ತೆಗೆದುಹಾಕುವ ಮೂಲಕ ದುರ್ಬಲ ವರ್ಗಗಳಿಗೆ ಘನತೆ ಮತ್ತು ಸಬಲೀಕರಣವನ್ನು ಯೋಜನೆ ಖಾತ್ರಿಗೊಳಿಸುತ್ತದೆ.
ಲೇಖನ : ಡಾ. ಲೇಖಾ ಚಕ್ರವರ್ತಿ, ಪ್ರೊಫೆಸರ್, ಎನ್.ಐ.ಪಿ.ಎಫ್.ಪಿ

Comments
Post a Comment