ಸುಧಾರಣೆಯ ಪಥದಲ್ಲಿ ಭಾರತದ ಆರ್ಥಿಕತೆ

ಈ ವರ್ಷದಲ್ಲಿ ಭಾರತವು ಬ್ರಿಟನ್‌ ದೇಶವನ್ನು ಹಿಂದಿಕ್ಕಿ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಮಾರ್ಪಾಡಾಗಲಿದೆ ಮತ್ತು 2025 ರ ಹೊತ್ತಿಗೆ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಆ ಮೂಲಕ ಜಪಾನ್‌ ದೇಶವನ್ನೂ ಹಿಂದಿಕ್ಕಲಿದೆ ಎಂದು ಈಚಿನ ವರದಿಯೊಂದು ಹೇಳಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಅವರ ಪಕ್ಷದ ವಿಜಯದ ಬಗ್ಗೆ ಲಂಡನ್ ಮೂಲದ ಸಂಸ್ಥೆ 'ಐಹೆಚ್ಎಸ್ ಮಾರ್ಕಿಟ್' ಸಂಸ್ಥೆ ವರದಿ ಮಾಡಿದ್ದು, ಮೋದಿ ಸರ್ಕಾರದ ಆರ್ಥಿಕ ದೃಷ್ಟಿಕೋನವು ಎರಡನೇ ಅವಧಿಗೆ "ಸಕಾರಾತ್ಮಕವಾಗಿ ಕಾಣುತ್ತದೆ" ಎಂದು ಗಮನಿಸಿದೆ. 2019-2023ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡ 7 ರಷ್ಟು ಇರಲಿದೆ ಎಂದು ಅದು ಅಂದಾಜಿಸಿದೆ.

"ಭಾರತವು 2019 ರಲ್ಲಿ ಪ್ರಪಂಚದ ಐದನೇ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಊಹಿಸಲಾಗಿದೆ, ಒಟ್ಟು ಜಿಡಿಪಿ ಗಾತ್ರವು US $ 3 ಲಕ್ಷಕೋಟಿಯನ್ನು ಮೀರಿದೆ ಮತ್ತು ಯುನೈಟೆಡ್ ಕಿಂಗ್‌ ಡಮ್‌ ಅನ್ನು ಮೀರಿಸಿದೆ. 2025 ರ ಹೊತ್ತಿಗೆ ಭಾರತ ಜಿಡಿಪಿಯು ಜಪಾನ್‌ ನ್ನು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತವನ್ನು ಏಷ್ಯಾ-ಪೆಸಿಫಿಕ್ ವಲಯದಲ್ಲಿ ಎರಡನೆಯ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲಿದೆ ಎಂದು ವರದಿ ಹೇಳಿದೆ.
ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಏರುಗತಿ ಕಾಣುತ್ತಿದ್ದು, ಜಾಗತಿಕ ಜಿಡಿಪಿ ಬೆಳವಣಿಗೆಗೆ ಅದರ ಕೊಡುಗೆ ಹೆಚ್ಚಾಗುತ್ತಿದೆ. ಏಷ್ಯನ್ ಪ್ರಾದೇಶಿಕ ವ್ಯಾಪಾರ ಮತ್ತು ಹೂಡಿಕೆ ಹರಿವುಗಳನ್ನು ಹೆಚ್ಚಿಸಲು ನೆರವಾಗುವ, ಏಷ್ಯಾ-ಪೆಸಿಫಿಕ್ ಪ್ರದೇಶದ ಪ್ರಮುಖ ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸುತ್ತದೆ.
ಮೋದಿ ಅವರ ಎರಡನೇ ಅವಧಿಯಲ್ಲಿ, ಗಮನಾರ್ಹ ಆರ್ಥಿಕ ಸವಾಲುಗಳನ್ನು ಭಾರತ ಎದುರಿಸಲಿದೆ ಎಂದು ಹೇಳಲಾಗಿದೆ. "ಭಾರತ ಸರ್ಕಾರದ ಪ್ರಮುಖ ಆದ್ಯತೆ ಸಾರ್ವಜನಿಕ ಬ್ಯಾಂಕಿಂಗ್‌ ನಲ್ಲಿ ಸುಧಾರಣೆಗಳನ್ನು ಮುಂದುವರಿಸುವುದು ಮತ್ತು ಕೆಟ್ಟ ಸಾಲಗಳನ್ನು ಹೊರೆಯನ್ನು ಕಡಿಮೆ ಮಾಡುವುದೇ ಆಗಿದೆ ಎಂದು ಐಹೆಚ್ಎಸ್ ಮಾರ್ಕಿಟ್ ವರದಿ ಒತ್ತಿಹೇಳಿದೆ.
ಜಿಡಿಪಿಯಲ್ಲಿ ಉತ್ಪಾದನಾ ಕ್ಷೇತ್ರದ ಗುರಿ ಶೇ. 25 ರಷ್ಟಿದ್ದರೂ ಸಾಧಿಸಿರುವುದು ಶೇಕಡಾ 18ರಷ್ಟು. ಮುಂದಿನ ಎರಡು ದಶಕಗಳಲ್ಲಿ ಸರಾಸರಿ 7.5 ಮಿಲಿಯನ್ ಜನರಿಗೆ ಉದ್ಯೋಗಿಗಗಳನ್ನಾಗಿ ಮಾಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ.
2015 ರಿಂದ 2050ರ ನಡುವೆ ಭಾರತದ ಒಟ್ಟು ಜನಸಂಖ್ಯೆಯ ಹೆಚ್ಚಳವು ಸುಮಾರು 350 ಮಿಲಿಯನ್ ಹೆಚ್ಚಾಗುತ್ತದೆ. ವಿದ್ಯುತ್, ನೈರ್ಮಲ್ಯ, ಕೈಗೆಟುಕುವ ವಸತಿ ಮತ್ತು ಸಾರ್ವಜನಿಕ ಸಾರಿಗೆಯಂತಹ ಸಾಕಷ್ಟು ಭೌತಿಕ ಮೂಲಸೌಕರ್ಯವನ್ನು ಒದಗಿಸುವುದಕ್ಕಾಗಿ ಸರಕಾರಕ್ಕೆ ಗಮನಾರ್ಹ ಹಣಕಾಸಿನ ಸವಾಲುಗಳನ್ನು ಎದುರಿಸಲಿದೆ ಎಂದು ಅದು ಹೇಳಿದೆ.
ಭಾರತದ ಕೈಗಾರಿಕಾ ವಲಯವನ್ನು 'ಮೇಕ್ ಇನ್ ಇಂಡಿಯಾ' ಯೋಜನೆ ಮೂಲಕ ಪರಿವರ್ತಿಸುವುದನ್ನು ಸರ್ಕಾರ ಮುಂದುವರಿಸಲಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆಯನ್ನು ಸುಧಾರಿಸಲು ಮತ್ತು ಬಲವಾದ ಉದ್ಯೋಗದ ಬೆಳವಣಿಗೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಇದು ಪ್ರಮುಖ ಕಾರ್ಯತಂತ್ರ ಎನಿಸಿಕೊಳ್ಳಲಿದೆ. 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು 2014 ರಲ್ಲಿ ಪ್ರಾರಂಭಿಸಿದಾಗ, ಜಿಡಿಪಿಗೆ ಉತ್ಪಾದನೆಯ ಕೊಡುಗೆ 25 ಶೇಕಡಾ ಹೆಚ್ಚಳಕ್ಕೆ ಸಾಕ್ಷಿಯಾಗಿತ್ತು. ಆದಾಗ್ಯೂ, 2018 ರ ಹೊತ್ತಿಗೆ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆ ಶೇ 18ರಷ್ಟು ಇತ್ತು.
ಪ್ರಧಾನಿ ಮೋದಿ ಅವರ ಮೊದಲ ಅವಧಿಯ ಸಮಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ತರವಾದ ಸಾಧನೆಗಳ ಹೊರತಾಗಿ, ಸಾರಿಗೆ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ತ್ವರಿತ ಮೂಲಭೂತ ಸೌಕರ್ಯ ಒದಗಿಸಿದೆ. 2019ಕ್ಕೆ ವಿಶ್ವ ಬ್ಯಾಂಕಿನ ಈಸ್‌ ಆಫ್‌ ಡೂಯಿಂಗ್‌ ಬಿಸ್ನೆಸ್ ವಿಭಾಗಕ್ಕೆ ಸೇರಿಸಲಾದ 190 ದೇಶಗಳಲ್ಲಿ ಭಾರತ 77ನೇ ಸ್ಥಾನದಲ್ಲಿದೆ.
ಚುನಾವಣೆಯಲ್ಲಿನ ಪ್ರಚಂಡ ವಿಜಯವು ಮುಂದಿನ ಐದು ವರ್ಷಗಳಲ್ಲಿ ಭಾರತಕ್ಕೆ ಆರ್ಥಿಕ ನೀತಿಯ ನಿರಂತರತೆಯನ್ನು ಒದಗಿಸಲಿದೆ. ರಾಷ್ಟ್ರವನ್ನು ನಿಯಂತ್ರಿಸುವ ದುರ್ಬಲ ಮತ್ತು ವಿಭಜಿತ ಒಕ್ಕೂಟದ ಯಾವುದೇ ಅಪಾಯವನ್ನು ಸರಕಾರ ಎದುರಿಸುವುದಿಲ್ಲ, ಇದು ಮತ್ತಷ್ಟು ಆರ್ಥಿಕ ಸುಧಾರಣೆಗಳಿಗೆ ಆವೇಗವನ್ನು ನೀಡುತ್ತದೆ.
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಭಾರತವು ಸ್ಥಿರವಾದ ಮತ್ತು ದೃಢವಾದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ ಎಂದು ಐಹೆಚ್ಎಸ್ ಮಾರ್ಕಿಟ್ ವರದಿ ಹೇಳಿದೆ. ಚುನಾವಣೆ ಫಲಿತಾಂಶಗಳು ರಾಷ್ಟ್ರದ ಆಡಳಿತದಲ್ಲಿ ಸರ್ಕಾರದ ಆರ್ಥಿಕ ದಾಖಲೆಯನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ.
2014 ರಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ, ಭಾರತದ ಜಿಡಿಪಿಯು ಶೇ .50 ರಷ್ಟು ಹೆಚ್ಚಳವಾಗಿದೆ. 2014 ರಲ್ಲಿ 2 ಟ್ರಿಲಿಯನ್ ಡಾಲರ್ನಿಂದ 2019 ರಲ್ಲಿ 3 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಒಟ್ಟು ಐದು ವರ್ಷಗಳ ಅವಧಿಯಲ್ಲಿ ಜಿಡಿಪಿಯ ಒಟ್ಟಾರೆ ಏರಿಕೆ 1 ಟ್ರಿಲಿಯನ್ ಯುಎಸ್ ಡಾಲರ್ ಆಗಿದೆ .
ಮೋದಿ ಅವರ ಸರ್ಕಾರದ ಪ್ರಮುಖ ಆರ್ಥಿಕ ನೀತಿ 2017 ರಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾನೂನು ಜಾರಿಯಾಗುವ ಮೂಲಕ ಆರಂಭಗೊಂಡಿತ್ತು. ಭಾರತದಲ್ಲಿ ಏಕೀಕೃತ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಶುರು ಮಾಡಲಾಯಿತು. ಇದು ವಿಭಿನ್ನ ರಾಜ್ಯ-ಆಧಾರಿತ ಪರೋಕ್ಷ ತೆರಿಗೆಗಳ ಸಂಕೀರ್ಣ ವ್ಯವಸ್ಥೆಯನ್ನು ತೆಗೆದುಹಾಕಿತು.

ಲೇಖನ : ಪದಮ್‌ ಸಿಂಗ್‌, ಆಕಾಶವಾಣಿ ಸುದ್ದಿ ವಿಶ್ಲೇಷಕರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ