ದೋಹಾದಲ್ಲಿ ಇಂಟ್ರಾ ಅಫ್ಘಾನ್ ಸಂವಾದ
ದೋಹಾದಲ್ಲಿ ನಡೆದ ಎಲ್ಲಾ ಅಫ್ಘನ್ ಸಮ್ಮೇಳನವನ್ನು ಮುಕ್ತಾಯಗೊಂಡ ನಂತರ ಸಮಸ್ಯಾಪೀಡಿತ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಗೊಳ್ಳುವ ಭರವಸೆಯಬೆಳಕಿಂಡಿ ಕಾಣುತ್ತಿದೆ ಎಂದು ಹೇಳಬಹುದು. ಕತಾರ್ ನಲ್ಲಿ ಅಫ್ಘಾನ್ ರಾಜಕಾರಣಿ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವಿನ ಎರಡು ದಿನಗಳ ಸಭೆಯು ಇಂಟ್ರಾ-ಅಫಘಾನ್ ಸಂಭಾಷಣೆ ಎಂದು ಕರೆಯಲ್ಪಟ್ಟಿತು. ಸುಮಾರು 18 ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಮಾರ್ಗಸೂಚಿಗೆ ಅಡಿಪಾಯ ಹಾಕಿದ ಹೇಳಿಕೆಯೊಂದಿಗೆದೇಶವು ಶಾಂತಿಯ ಕಡೆಗೆ ಒಂದು ಹೆಜ್ಜೆ ಹತ್ತಿರವಾಗಿದೆ.
ಜನರ ಘನತೆ, ಅವರ ಜೀವನ ಮತ್ತು ಆಸ್ತಿಯನ್ನು ಗೌರವಿಸಲು ಮತ್ತು ರಕ್ಷಿಸಲು, ನಾಗರಿಕರ ಸಾವುನೋವುಗಳನ್ನು ತಗ್ಗಿಸಲು ಬದ್ಧವಾಗಿದ್ದೇವೆ ಎಂದು ದೋಹಾದಲ್ಲಿಮಾತುಕತೆಯ ಕೊನೆಯಲ್ಲಿ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕತಾರ್ ರಾಜಧಾನಿಯಲ್ಲಿ ಜರ್ಮನಿ ಮತ್ತು ಕತಾರ್ ಸಹ-ಪ್ರಾಯೋಜಿಸಿದಅಂತರ್-ಅಫಘಾನ್ ಸಂವಾದದ ಸಂದರ್ಭದಲ್ಲಿ ಸುಮಾರು 70 ರಾಜಕಾರಣಿಗಳು, ನಾಗರಿಕ ಸಮಾಜ ಕಾರ್ಯಕರ್ತರು ಮತ್ತು ಮಹಿಳಾ ಪ್ರತಿನಿಧಿಗಳು ತಾಲಿಬಾನ್ಪ್ರತಿನಿಧಿಗಳನ್ನು ಭೇಟಿಯಾದರು. ತಾಲಿಬಾನ್ ಇದುವರೆಗೆ ಕಾಬೂಲ್‌ನೊಂದಿಗೆ ನೇರವಾಗಿ ಮಾತುಕತೆ ನಡೆಸಲು ನಿರಾಕರಿಸಿದೆ ಮತ್ತು ಅಶ್ರಫ್ ಘನಿ ಸರ್ಕಾರವನ್ನುಮಾತುಕತೆಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ತಾಲಿಬಾನ್ ಸರ್ಕಾರವನ್ನು ನ್ಯಾಯಸಮ್ಮತವಲ್ಲ ಎಂದು ಕರೆಯುತ್ತಾರೆ.
ಅದೇ ಸಮಯದಲ್ಲಿ, ಶಾಂತಿ ಪ್ರಕ್ರಿಯೆಯ ಆವೇಗಕ್ಕಿಂತ ಹೆಚ್ಚಿನ ರಾಜಕೀಯವು ಇಲ್ಲಿ ಕೆಲಸ ಮಾಡುತ್ತಿದೆ ಎಂದು ಅರ್ಥಮಾಡಿಕೊಳ್ಳಬೇಕು. ಅಫ್ಘಾನಿಸ್ತಾನದಿಂದ ಹೊರಬಲು ಅಮೆರಿಕದಲ್ಲಿ ಅವಸರ ಕಾಣುತ್ತದೆ. ವಾಷಿಂಗ್ಟನ್ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿದೆ, ತಾಲಿಬಾನ್‌ಗೆ ಮೇಲುಗೈ ಸಾಧಿಸಲು ಅವಕಾಶವಿದ್ದರೆ ಈಪ್ರದೇಶಕ್ಕೆ ಆಗುವ ಪರಿಣಾಮಗಳ ಬಗ್ಗೆ ಅದು ತಲೆಕೆಡಿಸಿಕೊಳ್ಳುವುದಿಲ್ಲ. ಕಳೆದ ಸೆಪ್ಟೆಂಬರ್ನಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಲ್ಮೇ ಖಲೀಲ್ಜಾದ್ಅವರನ್ನು ಅಫ್ಘಾನಿಸ್ತಾನ ಸಾಮರಸ್ಯದ ವಿಶೇಷ ರಾಯಭಾರಿಯಾಗಿ ನೇಮಿಸಿದರು. ಖಲೀಲ್ಜಾದ್ ಇದುವರೆಗೆ ದೋಹಾದಲ್ಲಿ ತಾಲಿಬಾನ್ ಅಧಿಕಾರಿಗಳೊಂದಿಗೆ ಏಳುಸುತ್ತಿನ ಮಾತುಕತೆ ನಡೆಸಿದ್ದಾರೆ. ಮಾತುಕತೆಗಳು ಮುಖ್ಯವಾಗಿ ನಾಲ್ಕು ಅಂಶಗಳ ಮೇಲೆ ಕೇಂದ್ರೀಕರಿಸಿವೆ. ಯುಎಸ್ ಸೈನ್ಯದ ವಾಪಸಾತಿ, ಭಯೋತ್ಪಾದನೆಪ್ರತಿರೋಧ ಭರವಸೆ, ಇಂಟ್ರಾ ಅಫಘಾನ್ ಸಂವಾದ ಮತ್ತು ಕದನ ವಿರಾಮ ಒಪ್ಪಂದ.
ಶಾಂತಿಯ ಕೀಲಿಯು ಕಾಬೂಲ್‌ನಲ್ಲಿದೆ ಎಂದು ಖಿಲೀಲ್ಜಾದ್ ಹೇಳಿದ್ದರೂ, ಅದು ಅರ್ಧ ಸತ್ಯ ಮಾತ್ರ. ಮಾತುಕತೆಗಳ ಮೇಲೆ ಪಾಕಿಸ್ತಾನದ ನೆರಳು ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಮಾಜಿ ಅಫಘಾನ್ ಗುಪ್ತಚರ ಮುಖ್ಯಸ್ಥ ಅಮರುಲ್ಲಾ ಸಲೇಹ್ ಹೇಳಿರುವುದು ಗಮನಾರ್ಹ. “ ಶಾಂತಿಗಾಗಿ ದೃಢ ನಿಶ್ಚಯ ಮತ್ತು ಇಚ್ಛಾಶಕ್ತಿಯಾವಾಗಲೂ ಕಾಬೂಲ್‌ನಲ್ಲಿದೆ, ಆದರೆ ಶಾಂತಿಗೆ ಅಡ್ಡಿ ಪಡಿಸುವ ಕೇಂದ್ರ ಬಿಂದು ರಾವಲ್ಪಿಂಡಿ/ಜಿಎಚ್‌ಕ್ಯುನಲ್ಲಿ ಇದೆ " ಎಂದು ಸಲೇಹ್ ಹೇಳಿದ್ದಾರೆ.
ಒಂದು ವರ್ಷದೊಳಗೆ ಸೈನ್ಯವನ್ನು ಹಿಂತೆಗೆದುಕೊಳ್ಳಲೇಬೇಕು ಎಂದು ಅಮೆರಿಕ ಕ್ರಮ ಕೈಗೊಂಡಿದ್ದರಿಂದ ತಾಲಿಬಾನಿಗೆ ವಾಸ್ತವಿಕವಾಗಿ ನಿಯಮಗಳನ್ನು ಕಾಬೂಲ್ ಮೇಲೆ ನಿರ್ದೇಶಿಸುವಂತೆ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾತುಕತೆಗಳಲ್ಲೂ ಇಸ್ಲಾಮಾಬಾದ್‌ನ ಕಾರ್ಯತಂತ್ರದ ಆಸಕ್ತಿಯನ್ನು ಉತ್ತೇಜಿಸುವ ಮೂಲಕ ತಾಲಿಬಾನ್ ಪಾಕಿಸ್ತಾನದ ಪ್ರತಿನಿಧಿ ಎಂದು ತೋರುತ್ತದೆ. ತಾಲಿಬಾನ್ ಜನಾಂಗೀಯವಾಗಿ ಪಶ್ತೂನ್‌ಗಳಲ್ಲ. ಅವರ ಶ್ರೇಣಿಯಲ್ಲಿ ಸಾಕಷ್ಟುಪಾಕಿಸ್ತಾನಿಗಳಿದ್ದಾರೆ ಎಂದೂ ಅವರು ಹೇಳುತ್ತಾರೆ. ಸೆಪ್ಟೆಂಬರ್ 1ರೊಳಗೆ ಮಾರ್ಗಸೂಚಿಯನ್ನು ನಿರ್ಧರಿಸಬಹುದೆಂದು ವಾಷಿಂಗ್ಟನ್ ಭಾವಿಸುತ್ತದೆ. ಇದು ಆಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಅದೇ ಸಮಯದಲ್ಲಿ, ತಾಲಿಬಾನ್ ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧದ 18 ವರ್ಷಗಳ ಸುದೀರ್ಘ ಯುದ್ಧವನ್ನು "ಜಿಹಾದ್" ಎಂದು ವಿವರಿಸುವ ನಿರ್ಣಯದಲೇಖನವು ಸಭೆಗೆ ಬಂದಿತು, ಅಫಘಾನ್ ಸೆನೆಟ್ನಲ್ಲಿ ಸೆನೆಟರ್ ಗಳು ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ ಎಂದು ತಿರಸ್ಕರಿಸಲಾಯಿತು. 1989ರಲ್ಲಿ ಸೋವಿಯತ್ಸೈನ್ಯವನ್ನು ಹಿಂತೆಗೆದುಕೊಂಡ ನಂತರ ಜಿಹಾದ್ ಕೊನೆಗೊಂಡಿತು ಎಂಬುದು ಅವರ ವಾದವಾಗಿತ್ತು. ಅದರ ನಂತರದ ಯಾವುದೇ ಯುದ್ಧವು ಜಿಹಾದ್ ಅಲ್ಲ.ಶಾಂತಿಯ ಹಾದಿಯು ಅನೇಕ ಅಡೆತಡೆಗಳಿಂದ ಕೂಡಿದೆ, ಆದರೆ ಈ ಬಾರಿ ಸಭೆ ನಡೆಯಿತು ಎಂದರೆ ಬಿಕ್ಕಟ್ಟು ಕಡಿಮೆಯಾಗುತ್ತಿದೆ ಎಂಬುದರ ಸಂಕೇತವಾಗಿದೆ. ಇದುಅಫ್ಘಾನಿಸ್ತಾನದಲ್ಲಿ ಶಾಂತಿಯತ್ತ ಒಂದು ಮಹತ್ವದ ಹೆಜ್ಜೆಯಾಗಿ ಕಂಡುಬರುತ್ತದೆ.
ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಶಾಂತಿ ಸಭೆಯ ಸಕಾರಾತ್ಮಕ ಫಲಿತಾಂಶಗಳನ್ನು ಶ್ಲಾಘಿಸಿದ್ದಾರೆ. ಅಫ್ಘಾನಿಸ್ತಾನಕ್ಕೆ ಶಾಂತಿಯ ಮರಳುವಿಕೆ ಸಾಧ್ಯ, ಆಫ್ಘನ್ಸಂವಾದದ ಮೂಲಕ ಆಫ್ಘನ್ನರು ತಮ್ಮ ಭವಿಷ್ಯವನ್ನು ನಿರ್ಧರಿಸಿದಾಗ ಮಾತ್ರ ಅದು ಸಾಧ್ಯ. ಕಳೆದ ತಿಂಗಳು ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಎಸ್‌ಸಿಒ ಪ್ರದೇಶದಲ್ಲಿನ ಸ್ಥಿರತೆ ಮತ್ತು ಸುರಕ್ಷತೆಗಾಗಿ ಶಾಂತಿಯುತ, ಸುರಕ್ಷಿತ ಮತ್ತು ಸಮೃದ್ಧ ಅಫ್ಘಾನಿಸ್ತಾನಕ್ಕಾಗಿ ಒಗ್ಗಟ್ಟು ಅಗತ್ಯ ಎಂದು ಹೇಳಿದ್ದರು. ಅಫ್ಘಾನ್ ನೇತೃತ್ವದ, ಅಫಘಾನ್ ಒಡೆತನದ ಮತ್ತು ಅಫಘಾನ್ ನಿಯಂತ್ರಿತ ಅಂತರ್ಗತ ಶಾಂತಿ ಪ್ರಕ್ರಿಯೆಗಾಗಿ ಸರ್ಕಾರ ಮತ್ತು ಅಫ್ಘಾನಿಸ್ತಾನದಪ್ರಯತ್ನಗಳನ್ನು ಬೆಂಬಲಿಸುವುದು ಭಾರತದ ಉದ್ದೇಶವಾಗಿದೆ ಎಂದು ಪ್ರಧಾನಿ ಹೇಳಿದರು.
ದುರಂತವೆಂದರೆ ಅಫ್ಘಾನಿಸ್ತಾನವನ್ನು ನಿಯಂತ್ರಿಸಲು ಮತ್ತು ಮಾರ್ಗದರ್ಶನ ಮಾಡಲು ವಿವಿಧ ರಾಷ್ಟ್ರಗಳು ಸೈದ್ಧಾಂತಿಕವಾಗಿ ಮತ್ತು ಕಾರ್ಯತಂತ್ರದಿಂದಹೋರಾಡುತ್ತಿವೆ.ಅಫ್ಘಾನಿಸ್ತಾನದ ವಿಶ್ಲೇಷಕರ ಒಂದು ವರ್ಗ ಸೇನೆಯನ್ನು ಹಿಂತೆಗೆದುಕೊಳ್ಳುವ ಅವಸರದ ನಿರ್ಧಾರದ ಪರಿಣಾಮಗಳು ಪಾಕಿಸ್ತಾನಕ್ಕೆಸಹಕಾರಿಯಾಗುತ್ತದೆ ಎಂದು ಎಚ್ಚರಿಸಿದೆ. ಇದರಿಂದ ಕಾಬೂಲ್‌ನಲ್ಲಿ ತಾಲಿಬಾನ್ ಆಡಳಿತ, ಭಾರತ ಸೇರಿದಂತೆ ಈ ಪ್ರದೇಶದಲ್ಲಿ ಜಿಹಾದಿ ವಿಸ್ತರಣೆ, ಮತ್ತು ಚೀನಾದಪ್ರಾದೇಶಿಕ ಉದ್ದೇಶಗಳಿಗೆ ಇದು ಅನುಕೂಲವಾಗಲಿದೆ.
Comments
Post a Comment