ಇರಾನ್-ಅಮೆರಿಕ ಬಿಕ್ಕಟ್ಟು ಇತ್ಯರ್ಥದ ಅಗತ್ಯ
ಪ್ರತಿ ದಿನ ಕಳೆದಂತೆ, ಇರಾನ್ ಮತ್ತು ಅಮೆರಿಕ ಸ್ಟೇಟ್ಸ್ ನಡುವಿನ ಸಂಘರ್ಷವು ತೀವ್ರಗೊಳ್ಳುತ್ತಿದೆ. ಇದಕ್ಕೆ ಅಂತರರಾಷ್ಟ್ರೀಯ ಸಮುದಾಯದ ಗಮನ ಅಗತ್ಯವಿದೆ. ಇರಾನ್-ಯುಎಸ್ ಸಂಘರ್ಷದಉಗಮವನ್ನು 1979 ರ ಇರಾನ್ ಕ್ರಾಂತಿಯ ಮೂಲಕ ಕಂಡುಹಿಡಿಯಬಹುದಾದರೂ, ಕಳೆದ ವರ್ಷ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಂಟಿ ಸಮಗ್ರ ಯೋಜನೆ ಅಥವಾ ಜೆಸಿಪಿಒಎಯಿಂದಏಕಪಕ್ಷೀಯವಾಗಿ ಹಿಂದೆ ಸರಿದಾಗ ಈ ಸಂಘರ್ಷ ಪ್ರಮಾಣ ಹೆಚ್ಚಾಯಿತು. ಅಂದಿನಿಂದ, ಯುಎಸ್ ಇರಾನ್ ಮೇಲೆ ನಿರ್ಬಂಧಗಳನ್ನು ಪುನಃ ಜಾರಿ ಮಾಡಿದೆ ಮತ್ತು ಇರಾನಿನ ಕ್ರಾಂತಿಕಾರಿ ಗಾರ್ಡ್ಕಾರ್ಪ್ಸ್ ಮತ್ತು ಇರಾನಿನ ಸುಪ್ರೀಂ ಲೀಡರ್ ಅನ್ನು ಗುರಿಯಾಗಿಸಿಕೊಂಡು ಹೊಸ ನಿರ್ಬಂಧಗಳನ್ನೂ ಹೇರಿದೆ.
ಡೊನಾಲ್ಡ್ ಟ್ರಂಪ್ ಅವರು ಜೆಸಿಪಿಒಎಯಿಂದ ಹಿಂದೆ ಸರಿಯುವ ಬಗ್ಗೆ ಅವರು ತಮ್ಮ ಅಧ್ಯಕ್ಷೀಯ ಚುನಾವಣೆ ಪ್ರಚಾರದ ದಿನಗಳಿಂದಲೂ ಪ್ರಸ್ತಾಪ ಮಾಡಿದ್ದರು. ಚುನಾವಣೆಯ ನಂತರ, ಅಧ್ಯಕ್ಷಟ್ರಂಪ್ ತಮ್ಮ ಪ್ರಾದೇಶಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇರಾನ್ ವಿರುದ್ಧ ಹೆಚ್ಚು ಆಕ್ರಮಣಕಾರಿ ನೀತಿಯನ್ನು ಅನುಸರಿಸಿದ್ದಾರೆ. ಈ ನೀತಿಯ ಮೂಲತತ್ವವೆಂದರೆ ಇರಾನ್ಮೇಲೆ ಗರಿಷ್ಠ ಒತ್ತಡ ಹೇರುವ ಮೂಲಕ ಅಮೆರಿಕದೊಂದಿಗೆ ಹೊಸ ಪರಮಾಣು ಒಪ್ಪಂದಕ್ಕೆ ಇರಾನ್ ಮುಂದಾಗುವಂತೆ ಮಾಡುವುದು ಆಗಿದೆ. ರಾಜಕೀಯ ಮತ್ತು ಆರ್ಥಿಕ ನಿರ್ಬಂಧಗಳಹೊರತಾಗಿ, ಯುಎಸ್ ನೀತಿಯು ಗಲ್ಫ್ ಪ್ರದೇಶದಲ್ಲಿ ವಿಮಾನವಾಹಕ ನೌಕೆ, ಬಿ 52-ಬಾಂಬರ್‌ಗಳು ಮತ್ತು ಹೆಚ್ಚುವರಿ 1000 ಅಮೆರಿಕನ್ ಸೈನಿಕರನ್ನು ಒಳಗೊಂಡಂತೆ ಗಣನೀಯ ಪ್ರಮಾಣದಮಿಲಿಟರಿ ರಚನೆಗೆ ಕಾರಣವಾಗಿದೆ.
ಈ ಯುಎಸ್ ಕ್ರಮಗಳಿಗೆ ಪ್ರತಿಯಾಗಿ, ಇರಾನ್ ಅಂತಹ ಕ್ರಮಗಳನ್ನು ಕೈಗೊಂಡಿದೆ. ಇದು ಉಭಯ ರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇವುಗಳಲ್ಲಿ ಪ್ರಮುಖವಾದುದುಇರಾನ್‌ನಿಂದ ಜೆಸಿಪಿಒಎ ಅಡಿಯಲ್ಲಿ ಅದರ ಕೆಲವು ಬದ್ಧತೆಗಳನ್ನು ಮೊಟಕುಗೊಳಿಸುವುದು. ಇದು ಯುರೇನಿಯಂ ದಾಸ್ತಾನು ರಫ್ತು ಮತ್ತು ಯುರೇನಿಯಂ ಪುಷ್ಟೀಕರಣದ ಮಟ್ಟವನ್ನುಹೆಚ್ಚಿಸುವುದನ್ನು ಒಳಗೊಂಡಿತ್ತು. ಇರಾನಿನ ಪರಮಾಣು ಚಟುವಟಿಕೆಗಳ ಮೇಲಿನ ಈ ನಿರ್ಬಂಧಗಳನ್ನು ಜೆಸಿಪಿಒಎ ಕಡ್ಡಾಯಗೊಳಿಸಿತು ಮತ್ತು ಆರ್ಥಿಕ ಲಾಭಗಳಿಗೆ ಬದಲಾಗಿ ಅಂತಹ ಮಿತಿಗಳಿಗೆತಾನು ಒಪ್ಪಿಗೆ ಸೂಚಿಸಿದೆ ಎಂದು ಇರಾನ್ ವಾದಿಸಿದೆ. ಆದರೆ ಈ ಒಪ್ಪಂದದಿಂದ ಯುಎಸ್ ಹಿಂದೆ ಸರಿದ ಕಾರಣ ನಿರೀಕ್ಷಿಸಿದ್ದನ್ನು ಪಡೆಯಲು ಸಾಧ್ಯವಾಗಲಿಲ್ಲ. ಇದು ತಾಂತ್ರಿಕವಾಗಿ ಇರಾನ್ಪರಮಾಣು ಒಪ್ಪಂದದಿಂದ ನಿರ್ಗಮಿಸುವುದಕ್ಕೆ ಕಾರಣವಾಗುವುದರಿಂದ, ಒಪ್ಪಂದದ ಯುರೋಪಿಯನ್ ಪಾಲುದಾರರು ಇರಾನ್ ಅನ್ನು ಜೆಸಿಪಿಒಎ ಸಂಪೂರ್ಣ ಅನುಸರಣೆಗೆ ಮರಳುವಂತೆಒತ್ತಾಯಿಸಿದ್ದಾರೆ. ಆ ಮೂಲಕ ಇದರಿಂದಾಗಿ ಒಪ್ಪಂದವನ್ನು ಉಳಿಸಬಹುದು.
ಇತ್ತೀಚಿನ ವಾರಗಳಲ್ಲಿ ಗಲ್ಫ್ ಪ್ರದೇಶದಲ್ಲಿ ಹಲವಾರು ಸಂಘರ್ಷ ಸಂಬಂಧಿತ ಘಟನೆಗಳು ಸಂಭವಿಸಿವೆ ಮತ್ತು ಇದು ಪ್ರಸ್ತುತ ಸಂಘರ್ಷವನ್ನು ಹೆಚ್ಚಿಸಿದೆ. ಇವುಗಳಲ್ಲಿ ಒಮಾನ್ ಕೊಲ್ಲಿಯಲ್ಲಿ ತೈಲಟ್ಯಾಂಕರ್‌ಗಳ ಮೇಲೆ ಹಲವಾರು ದಾಳಿಗಳು, ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಯುಎಸ್ ಡ್ರೋನ್ ಉರುಳಿಸುವುದು, ಜಿಬ್ರಾಲ್ಟರ್‌ನಲ್ಲಿ ಬ್ರಿಟಿಷ್ ಪಡೆಗಳು ಇರಾನಿನ ತೈಲ ಟ್ಯಾಂಕರ್ವಶಪಡಿಸಿಕೊಳ್ಳುವುದು ಮತ್ತು ಪ್ರತೀಕಾರದ ಇರಾನ್‌ನ ಎಚ್ಚರಿಕೆಗಳು ಸೇರಿವೆ. ಇರಾನ್‌ನ ಆರ್ಥಿಕ ಒತ್ತಡ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಪ್ರಯತ್ನಕ್ಕೆ ಒತ್ತಾಯಿಸಬಹುದೆಂಬಆತಂಕದಿಂದ ಈ ಘಟನೆಗಳು ಹೆಚ್ಚಾಗಿವೆ. ಆ ಮಾರ್ಗದ ಮೂಲಕ ಸಾಗುವ ಹಡಗುಗಳ ಸುರಕ್ಷತೆ ಬಗ್ಗೆ ಗಂಭೀರ ಕಳವಳ ಸೃಷ್ಟಿಯಾಗುದೆ. ವಿಶ್ವದ ಕಡಲತಡಿಯ ತೈಲ ಸಾಗಣೆಯ ಮೂರನೇಒಂದು ಭಾಗವು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ ಮತ್ತು ಅದರ ಮುಚ್ಚುವಿಕೆ ಅಥವಾ ಅಂತಹ ಪ್ರಮುಖ ಹಾದಿಯಲ್ಲಿನ ಯಾವುದೇ ಗಂಭೀರ ಅಡಚಣೆಗಳು ಕೊಲ್ಲಿಯಲ್ಲಿಮಿಲಿಟರಿ ಉಲ್ಬಣಕ್ಕೆ ಕಾರಣವಾಗುತ್ತವೆ.
ಆದ್ದರಿಂದ, ರಾಜತಾಂತ್ರಿಕ ವಿಧಾನಗಳ ಮೂಲಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ವಿಶ್ವ ಶಕ್ತಿಗಳು ಗಂಭೀರ ಪ್ರಯತ್ನಗಳನ್ನು ಮಾಡಲೇಬೇಕಾದ ಸಮಯ ಬಂದಿದೆ.
ಭಾರತವು ಇಂಧನ ಆಮದುದಾರ ದೇಶವಾಗಿದ್ದು, ಅದರಲ್ಲಿ ಹೆಚ್ಚಿನವು ಕೊಲ್ಲಿಯಿಂದ ಬಂದಿವೆ. ಇದು ಈ ಪ್ರದೇಶವನ್ನು ಭಾರತಕ್ಕೆ ಪ್ರಮುಖವಾಗಿಸುತ್ತದೆ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನಯಾವುದೇ ಅಡಚಣೆಗಳು ಭಾರತದ ಹೈಡ್ರೋಕಾರ್ಬನ್ ಆಮದನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಅದರ ಸುರಕ್ಷತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಪ್ರದೇಶದಲ್ಲಿಚಾಲ್ತಿಯಲ್ಲಿರುವ ಉದ್ವಿಗ್ನತೆಯಿಂದಾಗಿ, ಭಾರತೀಯ ನೌಕಾಪಡೆಯು ತನ್ನ ಮಿಲಿಟರಿ ಹಡಗುಗಳಾದ ಐಎನ್ಎಸ್ ಚೆನ್ನೈ ಮತ್ತು ಸುನಯೆನಾವನ್ನು ಒಮನ್ ಕೊಲ್ಲಿಯಲ್ಲಿ ನಿಯೋಜಿಸಿದೆ. ಪರ್ಷಿಯನ್ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ಮೂಲಕ ಕಾರ್ಯನಿರ್ವಹಿಸುವ ಅಥವಾ ಸಾಗಿಸುವ ಭಾರತೀಯ ಹಡಗುಗಳ ಸುರಕ್ಷತೆಗೆ ಇದು ಧೈರ್ಯ ತುಂಬುತ್ತದೆ. ಭಾರತವು ಈ ಪ್ರದೇಶದ ದೇಶಗಳೊಂದಿಗೆಉತ್ತಮ ದ್ವಿಪಕ್ಷೀಯ ಸಂಬಂಧವನ್ನು ಉಳಿಸಿಕೊಂಡಿದೆ ಮತ್ತು ಈ ಪ್ರದೇಶದ ಯಾವುದೇ ಮಿಲಿಟರಿ ಸಂಘರ್ಷವನ್ನು ತನ್ನ ಸ್ವಂತ ಹಿತಾಸಕ್ತಿಗಳಿಗೆ ವಿರುದ್ಧ ಎಂದು ಭಾವಿಸಿದೆ. ಇಡೀ ಪ್ರದೇಶವನ್ನುಯುದ್ಧದ ಕಾರ್ಮೋಡಕ್ಕೆ ತಳ್ಳುವ ಮೊದಲು ಈ ಬಿಕ್ಕಟ್ಟಿನ ತಡೆಗೆ ದೇಶಗಳು ಶಾಂತಿಯುತ ಮತ್ತು ಗಂಭೀರವಾದ ಪ್ರಯತ್ನಗಳನ್ನು ಮಾಡಬೇಕು. ಇಲ್ಲದಿದ್ದಲ್ಲಿ ಅಪಾರ ಆರ್ಥಿಕ ನಷ್ಟ ಮತ್ತುಮಾನವ ಸಾವುನೋವುಗಳನ್ನು ಇದು ಉಂಟುಮಾಡುವ ಭೀತಿ ಇದೆ.
ಲೇಖನ : ಡಾ. ಆಸಿಫ್ ಶೂಜಾ, ಇರಾನ್ ವ್ಯವಹಾರಗಳ ವಿಶ್ಲೇಷಕರು
Comments
Post a Comment