ಸಂಸತ್ತಿನಲ್ಲಿ ಈ ವಾರದ ಬೆಳವಣಿಗೆಗಳು...
ನವದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸಲು ಮತ್ತು ಪ್ರಮುಖ ಮಧ್ಯಸ್ಥಿಕೆ ಕೇಂದ್ರವಾಗಿ ಅದರ ಒಟ್ಟಾರೆ ಅಭಿವೃದ್ಧಿಗೆ, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಘೋಷಿಸುವ2019ರ ನವದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಮಸೂದೆಯ ಕುರಿತ ಚರ್ಚೆಗೆ ಬುಧವಾರ ಉತ್ತರಿಸಿದ ಕಾನೂನು ಸಚಿವ ರವಿಶಂಕರ್ಪ್ರಸಾದ್, ದೇಶವನ್ನು ಅಂತರರಾಷ್ಟ್ರೀಯ ಮತ್ತು ದೇಶೀಯ ಮಧ್ಯಸ್ಥಿಕೆಯ ಕೇಂದ್ರವನ್ನಾಗಿ ಮಾಡಲು ಸರ್ಕಾರ ಉತ್ಸುಕವಾಗಿದೆ ಎಂದರು.
ಸಂಸತ್ತಿನ ಉಭಯ ಸದನಗಳು ಪಾಕಿಸ್ತಾನದಿಂದ ಆಮದಾಗುವ ಅಥವಾ ಅಲ್ಲಿಗೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ಶೇ 200 ರಷ್ಟು ಸುಂಕ ವಿಧಿಸಲು ಶಾಸನಬದ್ಧ ನಿರ್ಣಯಗಳನ್ನುಅಂಗೀಕರಿಸಿದೆ. ಕಸ್ಟಮ್ ಸುಂಕದ ಮೊದಲ ವೇಳಾಪಟ್ಟಿಯಲ್ಲಿ ತಿದ್ದುಪಡಿ ಮಾಡಿದೆ. ಈ ವರ್ಷದ ಫೆಬ್ರವರಿ 16 ರಿಂದ ಜಾರಿಗೆ ಬರುವಂತೆ ಇಸ್ಲಾಮಾಬಾದ್‌ನಿಂದ ರಫ್ತು ಮಾಡುವ ಎಲ್ಲಾ ಸರಕುಗಳಮೇಲೆ ಶೇ 200 ರಷ್ಟು ಕಸ್ಟಮ್ ಸುಂಕವನ್ನು ಭರಿಸಲಾಗುವುದು ಎಂದು ನವದೆಹಲಿ ತಿಳಿಸಿದೆ. ಈ ನಿರ್ಣಯಗಳನ್ನು ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರು ಮಂಡಿಸಿದರು.
ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಾರ್ವಜನಿಕ ವೆಚ್ಚದಲ್ಲಿ ರಾಜಿ ಮಾಡಿಕೊಳ್ಳದೆಹಣಕಾಸಿನ ಬಲವರ್ಧನೆಗೆ ಸಹ ಬದ್ಧವಾಗಿದೆ ಎಂದು ಅವರು ಹೇಳಿದರು. ಲೋಕಸಭೆಯಲ್ಲಿ ಬುಧವಾರ ಕೇಂದ್ರ ಬಜೆಟ್ 2019-20ರ ಚರ್ಚೆಗೆ ಉತ್ತರಿಸಿದ ಅವರು, ಬಜೆಟ್ ಪ್ರಸ್ತಾಪಗಳು ದೇಶದಲ್ಲಿಪರಿವರ್ತನೆಯನ್ನು ತರುವ ಗುರಿಯನ್ನು ಹೊಂದಿವೆ. ಹಣಕಾಸಿನ ಕೊರತೆಯನ್ನು ಶೇಕಡ 3.3 ರಷ್ಟನ್ನು ಇಟ್ಟುಕೊಳ್ಳುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ ಎಂದು ಅವರು ಹೇಳಿದರು.
2018 ರ ಇದೇ ಅವಧಿಗೆ ಹೋಲಿಸಿದರೆ 2019ರ ಮೊದಲಾರ್ಧದಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯಾಚೆಗಿನ ಒಳನುಸುಳುವಿಕೆ ಶೇಕಡಾ 43 ರಷ್ಟು ಕುಸಿದಿದೆ ಎಂದು ಗೃಹ ವ್ಯವಹಾರಗಳ ರಾಜ್ಯಸಚಿವ ಜಿ. ಕಿಶನ್ ರೆಡ್ಡಿ ಮಂಗಳವಾರ ಲೋಕಸಭೆಗೆ ತಿಳಿಸಿದರು. ರಾಜ್ಯದಲ್ಲಿ ಭಯೋತ್ಪಾದನೆ ಸಂಬಂಧಿ ಘಟನೆಗಳು ಶೇಕಡಾ 28ರಷ್ಟು ಮತ್ತು ಉಗ್ರರ ಸ್ಥಳೀಯ ನೇಮಕಾತಿ ಶೇಕಡಾ 40 ರಷ್ಟುಕಡಿಮೆಯಾಗಿದೆ. ಇಂಡೋ-ಪಾಕ್ ಗಡಿಯಲ್ಲಿ 2019 ರ ಜೂನ್ ವರೆಗೆ 1299 ಕದನ ವಿರಾಮ ಉಲ್ಲಂಘನೆಗಳು ನಡೆದಿವೆ ಎಂದು ರಕ್ಷಣಾ ರಾಜ್ಯ ಸಚಿವ ಸೋಮವಾರ ರಾಜ್ಯಸಭೆಗೆ ತಿಳಿಸಿದ್ದಾರೆ.ಕಳೆದ ವರ್ಷ ಇದೇ ಅವಧಿಯಲ್ಲಿ 1629 ರಷ್ಟಿತ್ತು.
ಗಗನ ಯಾನ ಯೋಜನೆಯು 75ನೇ ಸ್ವಾತಂತ್ರ್ಯ ದಿನಾಚರಣೆ ಅಥವಾ ಅದಕ್ಕೂ ಮುನ್ನ ಸಾಕಾರಗೊಳ್ಳುವ ಹಾದಿಯಲ್ಲಿದೆ ಎಂದು ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಸಚಿವ ಡಾ.ಜಿತೇಂದ್ರಸಿಂಗ್ ಹೇಳಿದ್ದಾರೆ. ಪ್ರಮುಖ ಉಪ ವ್ಯವಸ್ಥೆಗಳ ವಿನ್ಯಾಸ ಮತ್ತು ಸಂರಚನೆಯನ್ನು ಅಂತಿಮಗೊಳಿಸಲಾಗಿದೆ. ಹಾರಾಟ ವ್ಯವಸ್ಥೆಗಳ ಮಾನವ ರೇಟಿಂಗ್‌ಗೆ ಸಂಬಂಧಿಸಿದ ಅರ್ಹತಾ ಪರೀಕ್ಷೆಗಳುಪ್ರಾರಂಭವಾಗಿವೆ ಮತ್ತು ಕ್ರಯೋಜೆನಿಕ್ ಎಂಜಿನ್ ಪರೀಕ್ಷೆಗಳು ಪ್ರಗತಿಯಲ್ಲಿವೆ. ಸಿಬ್ಬಂದಿ ತರಬೇತಿ ಯೋಜನೆಯನ್ನು ಅಂತಿಮಗೊಳಿಸಲಾಗಿದೆ ಮತ್ತು ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯನ್ನುಪ್ರಾರಂಭಿಸಲಾಗಿದೆ. ಗುರುವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ತಿಳಿಸಿದ ಅವರು, ವಿವಿಧ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಸದಸ್ಯರೊಂದಿಗೆಗಗನಯಾನ ರಾಷ್ಟ್ರೀಯ ಸಲಹಾ ಮಂಡಳಿಯನ್ನು ರಚಿಸಲಾಗಿದೆ.
ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಮೊಬೈಲ್ ಸಂಪರ್ಕಗಳನ್ನು ಪಡೆಯಲು ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ನ್ನು ನೀಡುವ ಅನುಮತಿಸುವ ಮಸೂದೆಯನ್ನು ಸಂಸತ್ತುಅಂಗೀಕರಿಸಿದೆ. ಸಂಸತ್ತಿನಲ್ಲಿ ಶೀಘ್ರದಲ್ಲೇ ಜಾರಿಗೆ ತರಲಿರುವ ದೃಢವಾದ ದತ್ತಾಂಶ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ರೂಪಿಸುತ್ತಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸದಸ್ಯರಿಗೆತಿಳಿಸಿದರು. ಇಡೀ ಜಗತ್ತು ಭಾರತದ ದತ್ತಾಂಶ ಸಂರಕ್ಷಣೆಯತ್ತ ನೋಡುತ್ತಿದೆ ಎಂದರು. ಆಧಾರ್ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ 2019 ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದರೆ ಖಾಸಗಿ ಸಂಸ್ಥೆಗಳಿಗೆ ಒಂದು ಕೋಟಿ ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆಯನ್ನು ನೀಡಲಾಗುವುದು.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಕೋಲಾಹಲದ ನಂತರ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಉಭಯ ಸದನಗಳು ಗದ್ದಲದ ದೃಶ್ಯಗಳಿಗೆ ಸಾಕ್ಷಿಯಾದವು. ಲೋಕಸಭೆಯಲ್ಲಿ,ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನ ಮಾಡುತ್ತಿದೆ ಎಂದು ಅಧೀರ್ ರಂಜನ್ ಚೌಧರಿ ಆರೋಪಿಸಿದರು. ಆದರೆ, ರಕ್ಷಣಾ ಸಚಿವ ರಾಜನಾಥ್ಸಿಂಗ್, ರಾಜ್ಯದಲ್ಲಿ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆಗೂ ಕೇಂದ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದರು.

ಲೇಖನ : ವಿ. ಮೋಹನ್ ರಾವ್, ಪತ್ರಕರ್ತರು
Comments
Post a Comment