ಐಸೆಜೆಯಲ್ಲಿ ಭಾರತಕ್ಕೆ ರಾಜತಾಂತ್ರಿಕ ಜಯ
ಗೂಢಚರ್ಯೆ ಮತ್ತು ಭಯೋತ್ಪಾದನೆ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಆರೋಪದ ಮೇಲೆ 2016ರ ಮಾರ್ಚ್‌ನಲ್ಲಿ ಕುಲ್ಭೂಷಣ್ ಸುಧೀರ್ ಜಾಧವ್ ಎಂಬ ಭಾರತೀಯ ಪ್ರಜೆಗೆ ಪಾಕಿಸ್ತಾನ ಮರಣದಂಡನೆ ಶಿಕ್ಷೆ ಘೋಷಣೆ ಮಾಡಿತ್ತು. ಏಪ್ರಿಲ್ 2017 ರಲ್ಲಿ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಮೇ 2017ರಲ್ಲಿ, ಭಾರತವು ಪಾಕಿಸ್ತಾನದ ವಿರುದ್ಧ 1963ರ ರಾಜತಾಂತ್ರಿಕ ಸಂಪರ್ಕ ವಿಚಾರಗಳಿಗೆ ಸಂಬಂಧಿಸಿದಂತೆ ವಿಯೆನ್ನಾ ಕನ್ವೆನ್ಷನ್‌ನ ಅಡಿಯಲ್ಲಿ ಪಾಕಿಸ್ತಾನವು ತನ್ನ ಬಾಧ್ಯತೆಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ, ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯ ಅಥವಾ ಐಸಿಜೆಯಲ್ಲಿ ಪಾಕಿಸ್ತಾನದ ವಿರುದ್ಧ ಪ್ರಕರಣವನ್ನು ದಾಖಲಿಸಿತು. ವಿಯೆನ್ನಾ ಕನ್ವೆನ್ಶನ್ 36ನೇ ವಿಧಿಯ ಪ್ರಕಾರ ಪ್ರಕರಣದ ಬಗ್ಗೆ ನಿರ್ದಿಷ್ಟವಾಗಿ ಪಾಕಿಸ್ತಾನವು ಭಾರತಕ್ಕೆ ಮಾಹಿತಿ ನೀಡಬೇಕಿತ್ತು. ಯಾವುದೇ ವಿಳಂಬ ಮಾಡದೆ ಕುಲಭೂಷಣ್ ಜಾಧವ್ ಅವರ ಬಂಧನದ ಬಗ್ಗೆ, ಕುಲಭೂಷಣ್ ಜಾಧವ್ ಅವರ ಹಕ್ಕುಗಳನ್ನು ಅವರಿಗೆ ತಿಳಿಸುವುದಲ್ಲದೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಜಾಧವ್ ರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಭಾರತ ದಾಖಲಿಸಿತು.
ಐಸಿಜೆಯಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನವು ವಿವಿಧ ಕಾನೂನು ವಾದಗಳನ್ನು ಬಳಸಿ ಭಾರತದ ಹಕ್ಕುಗಳನ್ನು ತಿರಸ್ಕರಿಸಿತು. 17 ಜುಲೈ 2019 ರಂದು, ಐಸಿಜೆ ತನ್ನ ತೀರ್ಪನ್ನು ನೀಡಿ, “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ, ಭಾರತೀಯ ಪ್ರಜೆ ಕುಲಭೂಷಣ್ ಸುಧೀರ್ ಜಾಧವ್ ಅವರ ಬಂಧನ ಮತ್ತು ವಿಚಾರಣೆಯ ವಿಷಯದಲ್ಲಿ, ಕಟ್ಟುಪಾಡುಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದೆ ಎಂದು ಹೇಳಿದೆ. ರಾಜತಾತ್ರಿಕ ವಿಷಯಗಳಿಗೆ ಸಂಬಂಧಿಸಿದ ವಿಯೆನ್ನಾ ಸಮಾವೇಶದ 36 ನೇ ಪರಿಚ್ಛೇದದ ಅಡಿಯಲ್ಲಿ ಅದು ಕಾರ್ಯನಿರ್ವಹಣೆ ಮಾಡಿಲ್ಲ ಎಂದು ಕೋರ್ಟ್ ಹೇಳಿದೆ.
ಈ ಐತಿಹಾಸಿಕ ತೀರ್ಪಿನಲ್ಲಿ, ಭಾರತ ಮತ್ತು ಪಾಕಿಸ್ತಾನ ಎರಡೂ ವಿಯೆನ್ನಾ ಸಮಾವೇಶಕ್ಕೆ ಸಹಿ ಹಾಕಿದ ಕಾರಣ ಐಸಿಜೆ ಈ ಪ್ರಕರಣದ ವ್ಯಾಪ್ತಿಯನ್ನು ಹೊಂದಿದೆ ಎಂದು ಸರ್ವಾನುಮತದಿಂದ ಪ್ರತಿಪಾದಿಸಲಾಯಿತು. ಈ ಪ್ರಕರಣವನ್ನು ನೇರವಾಗಿ ಆರ್ಬಿಟ್ರಲ್ ಟ್ರಿಬ್ಯೂನಲ್ ಅಥವಾ ರಾಜಿ ಆಯೋಗಕ್ಕೆ ವರ್ಗಾಯಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಐಸಿಜೆ ತಿರಸ್ಕರಿಸಿತು, ಈ ವಿಷಯದಲ್ಲಿ ಐಸಿಜೆಯನ್ನು ನೇರವಾಗಿ ಸಂಪರ್ಕಿಸುವ ಹಕ್ಕು ಭಾರತಕ್ಕೆ ಇದೆ ಎಂದು ಅಭಿಪ್ರಾಯಡಲಾಗಿದೆ. ಗೂಢಚರ್ಯೆ ಆರೋಪದಲ್ಲಿ ಬಂಧನಕ್ಕೊಳಗಾದ ವ್ಯಕ್ತಿಗಳ ಪ್ರಕರಣಗಳಿಗೆ ವಿಯೆನ್ನಾ ಕನ್ವೆನ್ಷನ್ ಅನ್ವಯಿಸುವುದಿಲ್ಲ ಎಂಬ ಪಾಕಿಸ್ತಾನದ ವಾದವನ್ನು ಐಸಿಜೆ ತಿರಸ್ಕರಿಸಿತು. ಕುಲಭೂಷಣ್ ಜಾಧವ್ ಬಂಧನದ ಮೂರು ವಾರಗಳವರೆಗೆ ಭಾರತಕ್ಕೆ ಮಾಹಿತಿ ನೀಡದಿರುವ ಮೂಲಕ ಭಾರತಕ್ಕೆ ದೂತಾವಾಸದ ಪ್ರವೇಶವನ್ನು ಒದಗಿಸದಿರುವ ಮೂಲಕ ಪಾಕಿಸ್ತಾನವು ವಿಯೆನ್ನಾ ಕನ್ವೆನ್ಷನ್‌ನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯವು ಕಂಡುಕೊಂಡಿದೆ, ವಿಯೆನ್ನಾ ಸಮಾವೇಶದ 36 ನೇ ಪರಿಚ್ಛೇದದ ಅಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಷರತ್ತುಬದ್ಧ ರೀತಿಯಲ್ಲಿ ಅನ್ವಯಿಸುವ ಪಾಕಿಸ್ತಾನದ ಪ್ರಯತ್ನವನ್ನು ಐಸಿಜೆ ತಿರಸ್ಕರಿಸಿತು,
ಐಸಿಜೆ ತೀರ್ಪಿನ ಪ್ರಮುಖಾಂಶ ಸೆಕ್ಷನ್ 6 ರಲ್ಲಿದೆ. ಇದು ಪಾಕಿಸ್ತಾನದ ವಿಯೆನ್ನಾ ಸಮಾವೇಶದ ಉಲ್ಲಂಘನೆಯನ್ನು ಪರಿಹರಿಸುವ ಮಾರ್ಗಗಳನ್ನು ಶಿಫಾರಸು ಮಾಡುತ್ತದೆ. ಕಾನ್ಸುಲಾರ್ ಪ್ರವೇಶದ ಹಕ್ಕು, ಸೇರಿದಂತೆ ಕುಲಭೂಷಣ್ ಜಾಧವ್ ಅವರ ಹಕ್ಕುಗಳನ್ನು ಎತ್ತಿಹಿಡಿಯುವ ತನ್ನ ಜವಾಬ್ದಾರಿಗಳನ್ನು ಪಾಕಿಸ್ತಾನ ನಿರಾಕರಿಸಿದೆ ಎಂದು ಐಸಿಜೆ ಪಾಕಿಸ್ತಾನವನ್ನು ಎರಡೂ ಕಟ್ಟುಪಾಡುಗಳನ್ನು ಅನುಸರಿಸಲು ಹೇಳಿದೆ. "ಈ ಪ್ರಕರಣದಲ್ಲಿ ಸೂಕ್ತವಾದ ಪರಿಹಾರವೆಂದರೆ ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯ ಪರಿಣಾಮಕಾರಿ ವಿಮರ್ಶೆ ಮತ್ತು ಮರುಪರಿಶೀಲನೆ", ಇದನ್ನು ಪಾಕಿಸ್ತಾನವು "ಬೇಷರತ್ತಾಗಿ ನಿರ್ವಹಿಸಬೇಕು" ಎಂದು ಅಭಿಪ್ರಾಯಪಟ್ಟಿದೆ. ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದರೆ ಪಾಕಿಸ್ತಾನವು "ಸೂಕ್ತವಾದ ಶಾಸನವನ್ನು ಜಾರಿಗೆ ತರುವುದು" ಕೂಡ ಇದರಲ್ಲಿ ಸೇರಿದೆ. ಅಲ್ಲಿಯವರೆಗೆ, ಐಸಿಜೆ "ಮರಣದಂಡನೆಯನ್ನು ಮುಂದುವರೆಸಲು ಅವಕಾಶ ನೀಡುವುದಿಲ್ಲ ಎಂದು ಆದೇಶಿಸಿದೆ.
ತೀರ್ಪು ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು, “ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸಿದೆ. ಸತ್ಯಗಳ ವ್ಯಾಪಕ ಅಧ್ಯಯನದ ಆಧಾರದ ಮೇಲೆ ತೀರ್ಪು ನೀಡಿದ ಐಸಿಜೆಗೆ ಅಭಿನಂದನೆಗಳು. ಕುಲಭೂಷಣ್ ಜಾಧವ್ ಅವರಿಗೆ ನ್ಯಾಯ ಸಿಗಲಿದೆ ಎಂದು ನನಗೆ ಖಾತ್ರಿಯಿದೆ. ಪ್ರತಿಯೊಬ್ಬ ಭಾರತೀಯರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಯಾವಾಗಲೂ ಕೆಲಸ ಮಾಡುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಐಸಿಜೆ ತೀರ್ಪು ಹಲವಾರು ಕಾರಣಗಳಿಗಾಗಿ ಗಮನಾರ್ಹವಾಗಿದೆ. ತನ್ನ ನಾಗರಿಕರಿಗೆ ನ್ಯಾಯ ದೊರಕಿಸಿಕೊಡಲು ಕಾನೂನಿನ ನಿಯಮವನ್ನು ಬಳಸುವಲ್ಲಿ ಭಾರತದ ಸ್ಥಿರ ನಂಬಿಕೆ ಮತ್ತು ವಕಾಲತ್ತು ಮತ್ತು ದೇಶಗಳ ನಡುವಿನ ವಿವಾದಗಳ ಶಾಂತಿಯುತ ಇತ್ಯರ್ಥವನ್ನು ಇದು ಸಮರ್ಥಿಸುತ್ತದೆ. ತೀರ್ಪನ್ನು ಅನುಷ್ಠಾನಗೊಳಿಸುವುದು ಅಂತರರಾಷ್ಟ್ರೀಯ ಸಹಕಾರದ ತತ್ವಕ್ಕೆ ಇದು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಅದರ ಕಾನೂನಿನ ನಿಯಮ ಸೇರಿದಂತೆ ಪ್ರಸ್ತುತ ಬಹುಪಕ್ಷೀಯ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
ವ್ಯಾಪಕ ಚೌಕಟ್ಟಿನಲ್ಲಿ, ಐಸಿಜೆ ತೀರ್ಪು ಯುಎನ್ ಚಾರ್ಟರ್ ನ ಆರ್ಟಿಕಲ್ 13.1 ಗೆ ಗೌರವ ನೀಡುವ ಭಾರತದ ಪ್ರವೃತ್ತಿಯನ್ನು ಎತ್ತಿತೋರಿಸುತ್ತದೆ. ಇದು "ಅಂತರರಾಷ್ಟ್ರೀಯ ಕಾನೂನಿನ ಪ್ರಗತಿಶೀಲ ಅಭಿವೃದ್ಧಿ ಮತ್ತು ಅದರ ಕ್ರೋಡೀಕರಣ"ಕ್ಕೆ ಕರೆ ನೀಡುತ್ತದೆ. ಕಾನ್ಸುಲರ್ ಸಂಬಂಧಗಳ ವಿಯೆನ್ನಾ ಸಮಾವೇಶದ ನಿಬಂಧನೆಗಳನ್ನು ಈ ಪ್ರಕರಣದಿಂದ ಗಮನಾರ್ಹವಾಗಿ ವರ್ಧಿಸಲಾಗಿದೆ.
ಲೇಖನ : ಅಶೋಕ್ ಕುಮಾರ್ ಮುಖರ್ಜಿ, ಮಾಜಿ ಖಾಯಂ ಪ್ರತಿನಿಧಿ, ವಿಶ್ವಸಂಸ್ಥೆ

Comments
Post a Comment