ಮತ್ತೆ ಗೊಂದಲ ಸೃಷ್ಟಿಸಿದ ಟ್ರಂಪ್
ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ ಎಂದುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗಿನ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದು ಅರ್ಧ ಮಾಹಿತಿ ಅಷ್ಟೇ,. ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಕಾರ್ಯತಂತ್ರದ ಚರ್ಚೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸಬೇಕು. ಅಮೆರಿಕ ಈ ವಿಷಯದಲ್ಲಿ ತನ್ನ ಪಾತ್ರವನ್ನುಹುಡುಕುತ್ತಿಲ್ಲ ಮತ್ತು ಕಾಶ್ಮೀರ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷರ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ, ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಅಮೆರಿಕದ ಅಧ್ಯಕ್ಷರಿಗೆ ಪ್ರಧಾನಿ ಮೋದಿಅವರು ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕಳೆದ ತಿಂಗಳು ಜಪಾನ್‌ನಲ್ಲಿ ನಡೆದ ಒಸಾಕಾ ಜಿ 20 ಶೃಂಗಸಭೆಯ ಮಧ್ಯೆ ಅಮೆರಿಕ ಅಧ್ಯಕ್ಷ ಮತ್ತು ಪ್ರಧಾನಿ ಮೋದಿ ಚರ್ಚೆ ನಡೆಸಿದರು. ಉಭಯ ನಾಯಕರುಯುಎನ್ ಜನರಲ್ ಅಸೆಂಬ್ಲಿಯ ಸಭೆ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ. ಅಧ್ಯಕ್ಷ ಟ್ರಂಪ್ ಮುಂದಿನ ದಿನಗಳಲ್ಲಿ ದ್ವಿಪಕ್ಷೀಯಸಂವಾದಕ್ಕಾಗಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅತ್ಯುನ್ನತ ಮಟ್ಟದ ಈ ಸಭೆಯಲ್ಲಿ ಹಲವಾರು ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚಿಸಲು ಎರಡೂಕಡೆಯವರು ಸಜ್ಜಾಗಿದ್ದಾರೆ.
ಒಂದೆಡೆ ಆಮೆರಿಕ ಜುಲೈ ಮೊದಲ ವಾರದಲ್ಲಿ ಭಾರತಕ್ಕೆ "ನ್ಯಾಟೋದಂತಹ ಮಿತ್ರರಾಷ್ಟ್ರ" ಸ್ಥಾನಮಾನವನ್ನು ನೀಡುವ ಶಾಸನವನ್ನು ಅಂಗೀಕರಿಸಿದೆ ಮತ್ತುಇನ್ನೊಂದೆಡೆ, ಅಫ್ಘಾನಿಸ್ತಾನದ ಪ್ರಾದೇಶಿಕ ವಿಷಯದ ಬಗ್ಗೆ ಎರಡೂ ಕಡೆಯವರು ಸಮಾಲೋಚಿಸುತ್ತಿದ್ದಾರೆ. ಇದಲ್ಲದೆ ಹೆಚ್ಚಿನ ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯೂ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಮಸ್ಯೆಯಾದ ಕಾಶ್ಮೀರದ ಬಗ್ಗೆ ಮಧ್ಯಸ್ಥಿಕೆ ವಹಿಸಲು ಇಚ್ಛಿಸುವುದಾಗಿವಿವಿಧ ಪಕ್ಷಗಳ ಅಧ್ಯಕ್ಷರ ಅಡಿಯಲ್ಲಿ ಅಮೆರಿಕದ ವಿವಿಧ ಆಡಳಿತಗಳು ಎಚ್ಚರಿಕೆಯ ನಿಲುವು ತೆಗೆದುಕೊಂಡಿರುವುದರಿಂದ ಹಾಲಿ ಯುಎಸ್ ಅಧ್ಯಕ್ಷರು ಹೀಗೇಕೆ ಮಾತನಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರಾಜತಾಂತ್ರಿಕವಾಗಿ ಪವಿತ್ರವಾದ ತತ್ವಗಳು ಅಮೆರಿಕದಲ್ಲಿ ಇನ್ನು ಮುಂದೆ ಮಾನ್ಯವಾಗುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಪಾಕಿಸ್ತಾನದೊಂದಿಗಿನವಿವಾದಗಳನ್ನು ದ್ವಿಪಕ್ಷೀಯವಾಗಿ ನಿಭಾಯಿಸಲಾಗುವುದು ಮತ್ತು ಈ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಭಾಗವಹಿಸುವಿಕೆಯು ಇಷ್ಟವಿಲ್ಲ ಎಂದು 1972ರಶಿಮ್ಲಾ ಒಪ್ಪಂದದಲ್ಲಿ ಭಾರತ ದಾಖಲಿಸಿದೆ. 1971 ರ ಯುದ್ಧದ ನಂತರದ ವಾರಗಳಲ್ಲಿ ಈ ತತ್ವವನ್ನು ಪಾಕಿಸ್ತಾನಕ್ಕೂ ತಿಳಿಸಲಾಯಿತು. ಏಕೆಂದರೆ ಭಾರತವುಯುದ್ಧದಲ್ಲಿ ವಿಜಯಶಾಲಿಯಾಗಿತ್ತು.
ಅಂದಿನಿಂದ, ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗಾಗಿ ಪಾಕಿಸ್ತಾನ ಒತ್ತಾಯಿಸಿದರೂ ಭಾರತ ಮಾತ್ರ ಒಪ್ಪಿಲ್ಲ. ಆದಾಗ್ಯೂ, ಈ ಬಾರಿ ಭಾರತವು ದ್ವಿಪಕ್ಷೀಯವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದೆ.
ಪಾಕಿಸ್ತಾನ ಮತ್ತು ಯುಎಸ್ ನಡುವಿನ ಉನ್ನತ ಮಟ್ಟದ ಸಂವಾದಚು ದಕ್ಷಿಣ ಏಷ್ಯಾದ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಮತ್ತು ಭಾರತವನ್ನು ಮರುಸಮತೋಲನಗೊಳಿಸುವ ವಿಷಯದಲ್ಲಿ ಇಸ್ಲಾಮಾಬಾದ್‌ಗೆ ಹೊಸ ಪಾತ್ರವನ್ನು ನೀಡುವ ಗುರಿಯನ್ನು ಹೊಂದಿತ್ತು. ಯುಎಸ್ ಆಡಳಿತವು ಒಂದು ಹೆಜ್ಜೆ ಮುಂದೆಹೋಗಿ ಅಫ್ಘಾನಿಸ್ತಾನದ ದುರ್ಬಲವಾದ ವ್ಯವಹಾರಗಳನ್ನು ನಿರ್ವಹಿಸುವ ಪಾತ್ರವನ್ನು ಪಾಕಿಸ್ತಾನಕ್ಕೆ ನೀಡಿದೆ ಎಂದು ತೋರುತ್ತದೆ. ದೇಶದಲ್ಲಿ ಸುಮಾರು ಎರಡುದಶಕಗಳ ಹಳೆಯ ಮಿಲಿಟರಿ ಕಾರ್ಯಾಚರಣೆಯಿಂದ ಅಮೆರಿಕ ಗೌರವಾನ್ವಿತ ನಿರ್ಗಮನ ಬಯಸುತ್ತಿರುವುದರಿಂದ. ಅಫ್ಘಾನಿಸ್ತಾನವನ್ನು ಬಿಡಲು ವಾಷಿಂಗ್ಟನ್ಉತ್ಸುಕವಾಗಿದೆ.
ಕಾಶ್ಮೀರದ ಬಗ್ಗೆ ಯುಎಸ್ ಅಧ್ಯಕ್ಷರ ಹೇಳಿಕೆಯು ಗಮನ ಸೆಳೆದಿದ್ದರೂ, ಪಾಕಿಸ್ತಾನ ಮತ್ತು ಯುಎಸ್ ಎರಡೂ ಹಲವಾರು ತಿಂಗಳುಗಳಿಂದ ಸಂಕೀರ್ಣರಾಜತಾಂತ್ರಿಕ ಸಂವಾದದಲ್ಲಿವೆ. ಪಾಕಿಸ್ತಾನವು ದೇಶದಲ್ಲಿ ಹಫೀಜ್ ಸಯೀದ್ ಅವರಂತಹ ದೇಶೀಯ ಭಯೋತ್ಪಾದಕನನ್ನು ಬಂಧಿಸಿ ಯುಎಸ್ ಬಯಸಿದ್ದನ್ನುಮಾಡುತ್ತಿದ್ದೇವೆ ಎಂಬ ಅಭಿಪ್ರಾಯ ರೂಪಿಸಲು ಯತ್ನಿಸಿದೆ. ಯುಎಸ್ ತನ್ನ ದಕ್ಷಿಣ ಏಷ್ಯಾ ನೀತಿಯನ್ನು ಮರು ಸಮತೋಲನಗೊಳಿಸಿದೆ. ಪ್ರಧಾನಿ ಇಮ್ರಾನ್ಖಾನ್ ತಮ್ಮ ಯುಎಸ್ ಪ್ರವಾಸದಿಂದ ಅಧ್ಯಕ್ಷ ಟ್ರಂಪ್ ಅವರ ಸ್ಪಷ್ಟ ಬೆಂಬಲದೊಂದಿಗೆ ಹಿಂದಿರುಗಿದಾಗ ಹೊಸ ಆಟ ಪ್ರಾರಂಭವಾಗುವ ನಿರೀಕ್ಷೆಯಿದೆ.
ಅಮೆರಿಕದ ಅಧ್ಯಕ್ಷರು ಅಸಾಂಪ್ರದಾಯಿಕ ಶೈಲಿಯ ರಾಜತಾಂತ್ರಿಕತೆಯನ್ನು ಅನುಸರಿಸುತ್ತಾರೆ ಮತ್ತು ಅವರು ಅಮೆರಿಕಾದ ಕಾಳಜಿಯ ಕ್ಷೇತ್ರಗಳಿಗೆ ಸಂಬಂಧಿಸಿದವಿವಿಧ ಡೊಮೇನ್‌ಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆದರೆ ದಕ್ಷಿಣ ಏಷ್ಯಾದ “ನ್ಯೂಕ್ಲಿಯರ್ ಫ್ಲ್ಯಾಷ್‌ಪಾಯಿಂಟ್” ನಲ್ಲಿ ಮಧ್ಯಸ್ಥಿಕೆಯ ಪಾತ್ರವನ್ನುವಹಿಸುವ ಅವರ ಇತ್ತೀಚಿನ ಕ್ರಮವು ಹೊಸತು ಎಂದು ವಿಶ್ಲೇಷಿಸಲಾಗುತ್ತಿದೆ. ಇಂಡೋ-ಯುಎಸ್ ಸಂಬಂಧಗಳ ಸ್ಥಿತಿಯನ್ನು ಗಮನಿಸಿದರೆ, ಭಾರತವು ತನ್ನಸಾರ್ವಭೌಮತ್ವದ ಕಾಳಜಿಯನ್ನು ಕಾಪಾಡಿಕೊಂಡು ಎಚ್ಚರಿಕೆಯಿಂದ ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ವಿದೇಶಾಂಗ ನೀತಿಯು ವಿಕಸನಗೊಂಡಿರುವುದುಪ್ರಬುದ್ಧತೆಯ ಮೂಲಕವೇ ಹೊರತು ಅಜಾಗರೂಕ ಹೇಳಿಕೆಗಳಿಂದಲ್ಲ ಎಂಬುದನ್ನು ಯುನೈಟೆಡ್ ಸ್ಟೇಟ್ಸ್ ಅರಿತುಕೊಳ್ಳಬೇಕು. ಕಾಶ್ಮೀರಕ್ಕೆ ಸಂಬಂಧಿಸಿದಂತೆಭಾರತದ ನೀತಿ ವಿವಿಧ ಸರ್ಕಾರಗಳ ಅಡಿಯಲ್ಲಿ ಸ್ಥಿರವಾಗಿದೆ ಮತ್ತು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಅಥವಾ ಮಧ್ಯಸ್ಥಿಕೆಗೆ ಅವಕಾಶ ನೀಡುವುದಿಲ್ಲ.
ಲೇಖನ : ಕಲ್ಲೋಲ್ ಭಟ್ಟಾಚಾರ್ಜಿ, ಹಿರಿಯ ವರದಿಗಾರರು, ದ ಹಿಂದು

Comments
Post a Comment