ಉತ್ತಮ ಬೆಳವಣಿಗೆಯತ್ತ ಭಾರತದ ಆರ್ಥಿಕತೆ
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವ ಆರ್ಥಿಕ ಔಟ್‌ಲುಕ್‌ಗೆ ಇತ್ತೀಚಿನ ನೀಡಿದ ವರದಿಯಲ್ಲಿ, ಭಾರತದ ಜಿಡಿಪಿ ಬೆಳವಣಿಗೆಯನ್ನು ಈ ಹಣಕಾಸು ವರ್ಷದಲ್ಲಿ 7% ಮತ್ತುಮುಂದಿನ ಹಣಕಾಸು ವರ್ಷದಲ್ಲಿ 7.2% ಕ್ಕೆ ತಲುಪಲಿದೆ ಎಂದು ದಾಖಲಿಸಿದೆ. ಐಎಂಎಫ್ ಮುನ್ಸೂಚನೆಯು ಕೇಂದ್ರ ಬಜೆಟ್ 2019ರ ಮೊದಲು ಸರ್ಕಾರವು ಬಿಡುಗಡೆ ಮಾಡಿದ ಆರ್ಥಿಕಸಮೀಕ್ಷೆಯ ವರದಿಯಲ್ಲಿನ ಪ್ರಕ್ಷೇಪಣಗಳನ್ನು ಸಮರ್ಥಿಸುತ್ತದೆ ಮತ್ತು ಬಲವಾದ ಜಾಗತಿಕ ಬದಲಾವಣೆಗಳ ಹೊರತಾಗಿಯೂ, ಭಾರತದ ಆರ್ಥಿಕ ಬೆಳವಣಿಗೆ ದೃಢವಾಗಿ ಉಳಿಯುತ್ತದೆ ಎಂಬಸ್ಪಷ್ಟ ಸಂಕೇತಗಳನ್ನು ಕಳುಹಿಸುತ್ತದೆ.
ಐಎಂಎಫ್ ಈ ಹಣಕಾಸಿನ ಬೆಳವಣಿಗೆಯ ಮುನ್ಸೂಚನೆಯನ್ನು 7.3% ರಿಂದ 7% ಕ್ಕೆ ಇಳಿಸಿದ್ದರೂ, ಸುದೀರ್ಘವಾದ ವ್ಯಾಪಾರ ಸಮರಗಳು ಮತ್ತು ರಕ್ಷಣಾತ್ಮಕತೆಯ ಹಿನ್ನೆಲೆಯಲ್ಲಿಸಂದರ್ಭೋಚಿತವಾಗಿದೆ; ಚೀನಾ ಸೇರಿದಂತೆ ಪ್ರಮುಖ ಆರ್ಥಿಕತೆಗಳ ಮಂದಗತಿ ಮತ್ತು ಜಾಗತಿಕ ಹೂಡಿಕೆಯಿಂದ ಉಂಟಾಗುವ ತೊಂದರೆಯು, ಈ ಬೆಳವಣಿಗೆಯ ಪ್ರಕ್ಷೇಪಣವುನಿಜವಾಗಿಯೂ ಭಾರತದ ಬೆಳೆಯುತ್ತಿರುವ ಆರ್ಥಿಕತೆಗೆ ಇಟ್ಟ ಒಂದು ಗರಿ ಎನ್ನಬಹುದು. ದುರ್ಬಲ ಜಾಗತಿಕ ಬೆಳವಣಿಗೆಯಿದ್ದರೂ ನಿರಂತರ ಬೆಳವಣಿಗೆಯು ಬಲವಾದ ದೇಶೀಯ ಆರ್ಥಿಕಸುಧಾರಣೆಗಳು ಮತ್ತು ಹಣಕಾಸಿನ ಶಿಸ್ತಿನ ಮೇಲೆ ಅವಲಂಬಿತವಾಗಿದೆ ಎಂಬ ಅಂಶವನ್ನು ಇದು ಸೂಚಿಸುತ್ತದೆ.
ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಸುಮಾರು 7.5% ರಷ್ಟಿದೆ. ಇದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಪರ್ಚೇಸಿಂಗ್ ಪವರ್ ಪ್ಯಾರಿಟಿ(ಪಿಪಿಪಿ) ಪರಿಭಾಷೆಯಲ್ಲಿ ಅಳೆಯಲ್ಪಟ್ಟ ಭಾರತವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಯುಎಸ್ ಮತ್ತು ಜರ್ಮನಿಯ ನಂತರದ ಸ್ಥಾನದಲ್ಲಿದೆ. ಕಳೆದ ಕೆಲವುವರ್ಷಗಳಿಂದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಪರಿಚಯಿಸಿರುವುದು ಮತ್ತು ದಿವಾಳಿತನ ಸಂಹಿತೆಯಲ್ಲಿ (ಐಬಿಸಿ) ಕಾನೂನಿನ ಮುಖೇನ ಅಳವಡಿಸಿಕೊಳ್ಳುವಂತಹ ಪ್ರಮುಖಆರ್ಥಿಕ ಸುಧಾರಣೆಗಳನ್ನು ಭಾರತ ಬಿಚ್ಚಿಟ್ಟಿದೆ. ಜಿಎಸ್ಟಿಯು ಆರ್ಥಿಕ ಸುಧಾರಣೆಯ ಅತ್ಯುತ್ತಮ ಪ್ರಯೋಗಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಲಾಗಿದ್ದರೂ, ದಿವಾಳಿತನಗಳನ್ನು ಪರಿಹರಿಸಲುಮತ್ತು ವ್ಯವಹಾರ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಐಬಿಸಿ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡಿದೆ. ಇಂತಹ ಸುಧಾರಣೆಗಳನ್ನು ಇತ್ತೀಚಿನ ದಿನಗಳಲ್ಲಿ ಐಎಂಎಫ್ಮಾತ್ರವಲ್ಲ, ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನಂತಹ ಇತರ ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳೂ ಶ್ಲಾಘಿಸಿವೆ. ವಿವಿಧ ಅಂತರರಾಷ್ಟ್ರೀಯ ಆರ್ಥಿಕಮಾನದಂಡಗಳಾದ ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’, ‘ಟ್ರೇಡಿಂಗ್ ಅಕ್ರಾಸ್ ಬಾರ್ಡರ್ಸ್’ ಮತ್ತು ಗ್ಲೋಬಲ್ ಇನ್ನೋವೇಶನ್ ಸೂಚ್ಯಂಕಗಳು ಭಾರತದ ಹೆಚ್ಚಿನ ಬೆಳವಣಿಗೆಯ ಪಥವನ್ನುಅನುಸರಿಸುವ ಬಗ್ಗೆ0 ಮಾತನಾಡುತ್ತಿವೆ.
ವ್ಯವಹಾರವನ್ನು ಮತ್ತಷ್ಟು ಸುಲಭಗೊಳಿಸಲು ಮತ್ತು ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಸುಧಾರಣೆಗಳನ್ನು ಮುಂದುವರೆಸಲು ಹಾಗೂ ವೇಗಗೊಳಿಸಲು ಭಾರತ ಬಲವಾಗಿ ಬದ್ಧವಾಗಿದೆ. 2018-19ರಲ್ಲಿ ಭಾರತದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವು ಯುಎಸ್ $ 64 ಬಿಲಿಯನ್‌ನಷ್ಟಿದೆ. ಇದು ಹಿಂದಿನ ವರ್ಷಕ್ಕಿಂತ 6% ಬೆಳವಣಿಗೆಯನ್ನು ಗುರುತಿಸಿದೆ. ವಾರ್ಷಿಕ 300 ಬಿಲಿಯನ್ ಯುಎಸ್ ಡಾಲರ್ ವ್ಯಾಪ್ತಿಯಲ್ಲಿ ಹೂಡಿಕೆಗಳನ್ನು ಗುರಿಯಾಗಿಸಲು, ವಾಯುಯಾನ ಮತ್ತು ವಿಮಾ ಕ್ಷೇತ್ರಗಳಂತಹ ಕ್ಷೇತ್ರಗಳನ್ನು ಎಫ್‌ಡಿಐಗೆ ತೆರೆಯಲು ಮತ್ತು ದೀರ್ಘಾವಧಿಯಕಾರ್ಪೊರೇಟ್ ಬಾಂಡ್‌ಗಳನ್ನು ಆಕರ್ಷಿಸಲು ಮಾರುಕಟ್ಟೆಗಳನ್ನು ಪರಿಣಾಮಕಾರಿಯಾಗಿಸಲು ಸರ್ಕಾರ ಯೋಜಿಸಿದೆ. 2024ರ ವೇಳೆಗೆ 5 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆಯ ಬಗ್ಗೆಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸಾಧಿಸುವ ಪ್ರಯತ್ನದಲ್ಲಿ ಭಾರತ ಸ್ಥಿರವಾಗಿದೆ. ಭಾರತೀಯ ಆರ್ಥಿಕತೆಯು ಇಲ್ಲಿಯವರೆಗೆ 2.87 ಟ್ರಿಲಿಯನ್ ಯುಎಸ್ ಡಾಲರ್ ಗಳನ್ನು ತಲುಪಿದೆ. ಮುಂದಿನ 5 ವರ್ಷಗಳಲ್ಲಿ ಇದನ್ನು ದ್ವಿಗುಣಗೊಳಿಸಲು, ಸುಮಾರು 8% ರಷ್ಟು ಬೆಳವಣಿಗೆಯ ಅಗತ್ಯವಿರುತ್ತದೆ. ಈ ಬೆಳವಣಿಗೆಯನ್ನು ಮುಂದುವರಿದ ರಚನಾತ್ಮಕ ಸುಧಾರಣೆಗಳು, ಕಡಿಮೆ ವೆಚ್ಚದ ಬಂಡವಾಳದ ಪ್ರವೇಶ ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯ ಅಗತ್ಯವಿದೆ. ಅಧಿಕಾರಕ್ಕೆ ವಾಪಸ್ ಬಂದ ಬಳಿಕ ಮಂಡಿಸಿದ ಮೊದಲ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವುಈಗಾಗಲೇ ಇದನ್ನು ನಿಗದಿಪಡಿಸಿದೆ. 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡುವ ಸಲುವಾಗಿ, ಸರ್ಕಾರವು 'ಸೂರ್ಯೋದಯ' ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿಮೆಗಾ-ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು ಹೂಡಿಕೆ ಲಿಂಕ್ ಅನ್ನು ಒದಗಿಸಲು ಪಾರದರ್ಶಕ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಜಾಗತಿಕ ಕಂಪನಿಗಳನ್ನು ಆಹ್ವಾನಿಸುವಯೋಜನೆಯನ್ನು ಪ್ರಾರಂಭಿಸಲಿದೆ.
ಹೆಚ್ಚಿನ ಬೆಳವಣಿಗೆಯನ್ನು ಕಾಯ್ದುಕೊಳ್ಳುವ ವೇಳೆ, ಹಣದುಬ್ಬರವನ್ನು ಶೇಕಡಾ 4ರೊಳಗೆ ಸ್ಥಿರತೆ ಕಾಪಾಡುವ ಮೂಲಕ ಮತ್ತು ಜಿಡಿಪಿ ಅನುಪಾತಕ್ಕೆ ನಿರ್ವಹಿಸಬಹುದಾದ ಚಾಲ್ತಿ ಖಾತೆಕೊರತೆಯನ್ನು ಹೊಂದುವ ಮೂಲಕ ಭಾರತ ತನ್ನ ಸ್ಥೂಲ-ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿದೆ. ಐಎಂಎಫ್ ಲೆಕ್ಕಾಚಾರ ಪ್ರಶಂಸೆಗೆ ಕಾರಣವಾದರೂ, ಭಾರತವು ತನ್ನ ಬೆಳವಣಿಗೆ ಬಗ್ಗೆ ತೃಪ್ತಿಹೊಂದಿಲ್ಲ. ಕಾನೂನುಗಳ ಸರಾಗಗೊಳಿಸುವಿಕೆ ಮತ್ತು ಮತ್ತಷ್ಟು ಹಣಕಾಸಿನ ಬಲವರ್ಧನೆ, ಬ್ಯಾಂಕಿಂಗ್ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿನ ಸಕಾರಾತ್ಮಕ ಬದಲಾವಣೆಗಳು ಮತ್ತು ಸಾರ್ವಜನಿಕಸಾಲವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿನ ಸಮಸ್ಯೆಗಳನ್ನು ಸಡಿಲಿಸುತ್ತವೆ ಮತ್ತು ಭಾರತವು ಜಾಗತಿಕ ಬೆಳವಣಿಗೆ ಮತ್ತು ನಾವೀನ್ಯತೆ ಸಾಧಿಸಿರುವ ಪ್ರಮುಖ ದೇಶಗಳಲ್ಲಿ ಒಂದಾಗಿದೆಎಂಬುದನ್ನು ಖಚಿತಪಡಿಸುತ್ತದೆ.
ಲೇಖನ : ಸತ್ಯಜಿತ್ ಮೊಹಂತಿ, ಐ.ಆರ್.ಎಸ್, ಹಿರಿಯ ಆರ್ಥಿಕ ವಿಶ್ಲೇಷಕರು
Comments
Post a Comment