ಹಣಕಾಸು ಬಜೆಟ್ ಗೆ ಸಂಬಂಧಿಸಿದ ವಿಷಯಗಳು
ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವುದೇ ಕೇಂದ್ರ ಬಜೆಟ್ 2019ರ ಪ್ರಮುಖ ಅಂಶವಾಗಿರಲಿದೆ. ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸಿನ ಬಲವರ್ಧನೆಯ ಹಾದಿಯಿಂದ ವಿಚಲನ ಅಗತ್ಯವಾಗಬಹುದು.3.5 ವಿತ್ತೀಯು ಕೊರತೆ ಇರುವ ಹಿನ್ನೆಲೆಯಲ್ಲಿ ಜಿಡಿಪಿ ಪ್ರಮಾಣವನ್ನು ಹಠಾತ್ತನೆ ಏರಿಸಲು ಸಾಧ್ಯವಾಗುವುದಿಲ್ಲ. ಆದರೆ ವಿಶೇಷವಾಗಿ ಬಂಡವಾಳ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಸಾರ್ವಜನಿಕ ಹೂಡಿಕೆಯುಆರ್ಥಿಕತೆಯನ್ನು ಹಿಂದಿನ ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ಯುವ ಸಾಧ್ಯತೆ ಇದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ಯಾವೆಲ್ಲಾ ನಿರೀಕ್ಷೆಗಳನ್ನು ಈಡೇರಿಸಲಿದ್ದಾರೆ ಮತ್ತು ಕ್ರಾಂತಿಕಾರಿ ಕ್ರಮಗಳನ್ನ ಕೈಗೊಳ್ಳುತ್ತಾರೆಂಬುದನ್ನು ಕಾದುನೋಡಬೇಕು.
ಆದಾಗ್ಯೂ, ಖರ್ಚಿನ ಕಡಿತದ ಮೂಲಕ ಹಣಕಾಸಿನ ಬಲವರ್ಧನೆಯ ಮಾರ್ಗವನ್ನು ಸಾಧಿಸಿದರೆ, ಅದು ದೀರ್ಘಕಾಲೀನ ಪ್ರತಿಕೂಲ ಬೆಳವಣಿಗೆಯ ಪರಿಣಾಮಗಳನ್ನು ಉಂಟುಮಾಡಬಹುದು. ಸೂಕ್ತ ತೆರಿಗೆಸುಧಾರಣೆಗಳ ಮೂಲಕ ಮಾತ್ರ ತೆರಿಗೆ ಸುಧಾರಣೆ ಹೆಚ್ಚಾಗುತ್ತದೆ. ಕಾರ್ಪೊರೇಟ್ ತೆರಿಗೆಯ ಪುನರುಜ್ಜೀವನವನ್ನು ಬಜೆಟ್ ನಲ್ಲಿ ನಿರೀಕ್ಷಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 25ಕ್ಕೆಇಳಿಸಲಾಯಿತು, ಆದರೆ ಇದನ್ನು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ಮಾತ್ರ ಘೋಷಿಸಲಾಯಿತು. ಖರ್ಚಿನ ಭಾಗದಲ್ಲಿ, ರೈತರು ಮತ್ತು ಮಹಿಳೆಯರಿಗಾಗಿ ಯೋಜನೆಗಳನ್ನು ಘೋಷಿಸುವ ಅಥವಾ ಅವರ ಅಭಿವೃದ್ಧಿಗೆ ಸಂಬಂಧಿಸಿದ ಕ್ರ ಕೈಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಅಂತಹ ದೊಡ್ಡ ಪ್ರಕಟಣೆಗಳಿಗೆ ಸೂಕ್ತವಾದ ಬಜೆಟ್ ಹಂಚಿಕೆಯೊಂದಿಗೆ ಸಂಪನ್ಮೂಲ ಹೊಂದಿಸಿಕೊಳ್ಳುವುದು ನಿರ್ಣಾಯಕವಾಗಿದೆ.
ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ, ಇದರಿಂದ ರೈತರಿಗೆ ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಎಲ್ಲಾ'ಖಾರಿಫ್' ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್ಪಿ) ಹೆಚ್ಚಿಸಲು ಅನುಮೋದನೆ ನೀಡಿದೆ. ಇದು 2019-20ರ ಋತುವಿಗೆ ಅನ್ವಯವಾಗಲಿದೆ. ರೈತರಿಗೆ ಖಚಿತವಾದ ಸಂಭಾವನೆ ದರಗಳ ಮೂಲಕ ಹೂಡಿಕೆಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. 2019-20ರ ಖಾರಿಫ್ ಬೆಳೆಗಳಾದ ಸೋಯಾಬೀನ್‌ನ ಎಂಎಸ್‌ಪಿಗಳನ್ನು ರೂ. 311, ಸೂರ್ಯಕಾಂತಿ ರೂ. ಕ್ವಿಂಟಲ್‌ಗೆ 262 ಮತ್ತು ಸೀಸಂನ್ನು ರೂ. ಪ್ರತಿಕ್ವಿಂಟಲ್‌ಗೆ 236 ರೂ ಹೆಚ್ಚಿಸಿದೆ. ಇದು ರೈತರ ಆದಾಯವನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ.
ಭಾರತದ ಹೊಸ ಸ್ಥೂಲ ಆರ್ಥಿಕ ಚೌಕಟ್ಟು ಮುಂದಿನ ಬಜೆಟ್‌ನಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಪಡೆಯಲಿದೆ. ಕೊರತೆಗಳನ್ನು ನೀಗಿಸಲು ಹೆಚ್ಚುವರಿ ಮೀಸಲು ಹಣವನ್ನು ತೆರಿಗೆ ರಹಿತ ಆದಾಯ ವರ್ಗದ ಅಡಿಯಲ್ಲಿಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸರ್ಕಾರಕ್ಕೆ ವರ್ಗಾಯಿಸುವ ಬಗ್ಗೆ ಚರ್ಚೆಗಳಿವೆ. ಈ ವಿಷಯವು ಮುಂಬರುವ ಬಜೆಟ್‌ನಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಪಡೆಯುತ್ತದೆ.
ಶ್ರೀಮತಿ ಸೀತಾರಾಮನ್ ಅವರು ದೇಶದಲ್ಲಿ ಹೊಸ ಆರ್ಥಿಕ ನೀತಿಗಳ ಸ್ವರೂಪವನ್ನು ಅನ್ವೇಷಿಸುವ ನಿರೀಕ್ಷೆಯಿದೆ. ಇದು ಉದ್ಯೋಗ ಸೃಷ್ಟಿಯನ್ನು ಖಾತರಿಪಡಿಸುವುದಕ್ಕಿಂತ ಹೆಚ್ಚು ಹಣಕಾಸಿನ ಸೇರ್ಪಡೆಯಮೂಲಕ “ಕನಿಷ್ಠ ಮೂಲ ಆದಾಯ” ವನ್ನು ಖಾತರಿಪಡಿಸುತ್ತದೆ.
ಸಾಮಾಜಿಕ ಮೂಲಸೌಕರ್ಯಗಳ ಬಗ್ಗೆ ಸರ್ಕಾರದ ನಿರಂತರ ಗಮನ, ವಿಶೇಷವಾಗಿ ನೀರು ಮತ್ತು ನೈರ್ಮಲ್ಯ ಮತ್ತು ಕಡಿಮೆ ಆದಾಯದ ಕುಟುಂಬಗಳಲ್ಲಿ ಮಹಿಳೆಯರಿಗೆ ಶುದ್ಧ ಇಂಧನವನ್ನು ಒದಗಿಸುವುದುಸ್ವಾಗತಾರ್ಹ. ಆದಾಗ್ಯೂ, ಆರೋಗ್ಯ ಮತ್ತು ಶಿಕ್ಷಣದಂತಹ ಸಾಮಾಜಿಕ ವಲಯದ ಬಜೆಟ್ ಇತರ ಮಹತ್ವದ ಅಂಶಗಳ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸಬೇಕಾಗಿದೆ. ಮಾನವ ಬಂಡವಾಳ ರಚನೆಯಲ್ಲಿರಾಜ್ಯದ ಹೊಸ ಪಾತ್ರ-ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಗಮನಹರಿಸಬೇಕಿದೆ. ರಾಷ್ಟ್ರೀಯ ಪೌಷ್ಠಿಕಾಂಶ ಯೋಜನೆ ಬಲಪಡಿಸುವ ಬಜೆಟ್ ಪ್ರಕಟಣೆಯನ್ನೂ ನಿರೀಕ್ಷಿಸಲಾಗಿದೆ. ಹವಾಮಾನಬದಲಾವಣೆಯ ಸಮಸ್ಯೆಯನ್ನು ಸಹ ಬಜೆಟ್‌ನಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ.
"ವ್ಯಾಪಾರವನ್ನು ಸುಲಭಗೊಳಿಸುವು"ದನ್ನು ಹೆಚ್ಚಿಸಲು ಮತ್ತು ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ರಚನಾತ್ಮಕ ಸುಧಾರಣೆಗಳು ಸಹ ಅಗತ್ಯ. ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರವುಈ ಸುಧಾರಣೆಗಳ ಪಟ್ಟಿಯನ್ನು ಘೋಷಿಸಬಹುದು. ಹಣಕಾಸು ನೀತಿ ಸಮಿತಿಯು ನೀತಿ ದರಗಳನ್ನು ಕಡಿಮೆ ಮಾಡಿದೆ. ಮೂಲಸೌಕರ್ಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ. ಅದುಖಂಡಿತವಾಗಿಯೂ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಎಲ್ಲರಿಗೂ ಆದ್ಯತೆ ನೀಡುವುದು ಮೋದಿ ಸರ್ಕಾರದ ಧ್ಯೇಯವಾಕ್ಯವಾಗಿದೆ.
ಭಾರತೀಯ ಆರ್ಥಿಕತೆಯ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಬಲವಾಗಿರುವುದರಿಂದ, ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್ ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿಸುವ ನಿರೀಕ್ಷೆಯಿದೆ. ಬಜೆಟ್ಮಂಡನೆ ಬಳಿಕ ಹಣಕಾಸಿನ ಏರುಗತಿಯನ್ನು ಗಮನಿಸಬಹುದು.
ಅಮೆರಿಕ-ಚೀನಾ ವ್ಯಾಪಾರ ಯುದ್ಧ ಮತ್ತು ತೈಲ ಬೆಲೆಗಳು, ಹಣದುಬ್ಬರದಲ್ಲಿನ ಏರಿಳಿತಗಳಂತಹ ಜಾಗತಿಕ ಪ್ರಕ್ಷುಬ್ಧತೆಗಳ ಹಿನ್ನೆಲೆಯಲ್ಲಿ ದೇಶೀಯ ಆರ್ಥಿಕ ಬೆಳವಣಿಗೆಯನ್ನು ಪ್ರಚೋದಿಸಲು ಇದನ್ನು ಹೇಗೆಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಭಾರತೀಯ ಹಣಕಾಸು ಸಚಿವರು ಗಮನಹರಿಸಲಿದ್ದಾರೆ.
ಲೇಖನ : ಡಾ. ಲೇಖಾ ಎಸ್. ಚಕ್ರವರ್ತಿ, ಪ್ರೊಫೆಸರ್, ಎನ್ಐಪಿಎಫ್ಪಿ

Comments
Post a Comment