ಸುಸ್ಥಿರ ಬೆಳವಣಿಗೆಗೆ ಹೂಡಿಕೆ ಸ್ನೇಹಿ ಬಜೆಟ್ ಮಂಡನೆ
ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಎರಡನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಸರಳೀಕರಣಗೊಳಿಸಲು ನೆರವಾಗುವ, ಅಡೆತಡೆಗಳನ್ನು ಎದುರಿಸದ ‘ವ್ಯವಹಾರವನ್ನು ಸುಲಭಗೊಳಿಸುವ’ ನಿರೀಕ್ಷೆಗೆ ತಕ್ಕಂತೆ ಇದೆ ಎನ್ನಲಡ್ಡಿಯಿಲ್ಲ. ಆರ್ಥಿಕತೆಯ ಡಿಜಿಟಲೀಕರಣದತ್ತ ಗಮನ ಹರಿಸುವ ಮೂಲಕ ಭಾರತದಾದ್ಯಂತದಜನರಿಗೆ ಸುಲಭವಾಗಿ ಜೀವನ ಸಾಗಿಸುವಂತಾಗಬೇಕು ಎಂಬ ಉದ್ದೇಶ ಬಜೆಟ್ ಹಿಂದಿದೆ. ಪ್ರಸಕ್ತ ವರ್ಷದಲ್ಲಿ ಭಾರತವು ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಸಜ್ಜಾಗಿರುವುದರಿಂದ, ಕೆಲವೇವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ತಲುಪಲು ಬಜೆಟ್ ಒಂದು ಮಾರ್ಗಸೂಚಿಯನ್ನು ಮುಂದಿಟ್ಟಿದೆ. ಮುಖ್ಯವಾಗಿ ಹೂಡಿಕೆ ಸ್ನೇಹಿ ಎಂದರೂ ತಪ್ಪಲ್ಲ. ಪ್ರತಿ ನಾಗರಿಕನು ಉತ್ತಮಜೀವನಮಟ್ಟದತ್ತ ಸಾಗಲು ಅನುಕೂಲವಾಗುವಂತೆ ಎಲ್ಲರನ್ನೂ ಒಳಗೊಳ್ಳುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಸರ್ಕಾರ-ವ್ಯವಹಾರ-ನಾಗರಿಕರ ಸಂಪರ್ಕವನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಳವಣಿಗೆಯ ಪರ ಮತ್ತು ಬಡವರ ಪರ ಎಂಬ ಸರ್ಕಾರದ ನಂಬಿಕೆಗೆ ಅನುಗುಣವಾಗಿ, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಅರ್ಥಪೂರ್ಣ ಸಹಭಾಗಿತ್ವದ ಮೂಲಕ ಸಂಪತ್ತುಉತ್ಪಾದನೆಗೆ ಬಜೆಟ್ ಮುನ್ನುಡಿ ಬರೆದಿದೆ. ಸಂಪತ್ತು ಉತ್ಪತ್ತಿಯಾಗದಿದ್ದರೆ ನಾಗರಿಕರ ನಿಜವಾದ ಪ್ರಗತಿ ಮತ್ತು ಕಲ್ಯಾಣವು ಸುಸ್ಥಿರವಾಗುವುದಿಲ್ಲ. ಆದ್ದರಿಂದ, ವರ್ಷಕ್ಕೆ 400 ಕೋಟಿ ರೂಪಾಯಿಗಳ ವಹಿವಾಟುಹೊಂದಿರುವ ಎಲ್ಲಾ ಸಂಸ್ಥೆಗಳಿಗೆ ಕಾರ್ಪೊರೇಟ್ ಆದಾಯ ತೆರಿಗೆಯನ್ನು ಶೇಕಡಾ 25 ಕ್ಕೆ ಇಳಿಸಲು ಮುಂದಾಗಿದೆ. ಇದು ದೇಶದ ಶೇಕಡಾ 99.3 ರಷ್ಟು ಸಂಸ್ಥೆಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸುತ್ತದೆ ಮತ್ತುಹೆಚ್ಚಿನ ಹೂಡಿಕೆಗಾಗಿ ಹಣವನ್ನು ಮರುಹಂಚಿಕೊಳ್ಳಲು ಸಾಧ್ಯವಾಗುವುದರಿಂದ ದೇಶೀಯ ಉದ್ಯಮಕ್ಕೆ ನೆರವಾಗಲಿದೆ. ಖಾಸಗಿ ಹೂಡಿಕೆಯ ಇಂತಹ ವರ್ಧಿತ ಕ್ರಮವು ಬೇಡಿಕೆಯನ್ನು ಹೆಚ್ಚಿಸುತ್ತದೆ,ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ಕಾರ್ಮಿಕರಿಗೆ ಲಾಭದಾಯಕ ಉದ್ಯೋಗವನ್ನು ನೀಡುತ್ತದೆ.
ಖಾಸಗಿ ವಲಯವನ್ನು ಒಳಗೊಂಡ ಆರ್ಥಿಕ ಮತ್ತು ಪರಿಣಾಮಕಾರಿ ಮೂಲಸೌಕರ್ಯಗಳನ್ನು ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಮುದ್ರಮಾರ್ಗಗಳು, ರೈಲ್ವೆಗಳು, ರಸ್ತೆಮಾರ್ಗಗಳು ಮತ್ತು ವಿಮಾನನಿಲ್ದಾಣಗಳಂತಹ ಪ್ರಮುಖ ವಿಭಾಗಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಹೆಚ್ಚಿಸಲು ಮತ್ತು ಮುಂದಕ್ಕೆ ತೆಗೆದುಕೊಳ್ಳಲು ಬಜೆಟ್ ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಿದೆ. ಇದುರಚನಾತ್ಮಕ ಸ್ವಭಾವದ, ದೂರಗಾಮಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದು ವ್ಯಾಪಕವಾದ ಚಟುವಟಿಕೆಗಳಲ್ಲಿ ನಿರಂತರ ದಕ್ಷತೆಯ ಲಾಭವನ್ನು ಹೊಂದಲು ಸಹ ಬದ್ಧವಾಗಿದೆ. ಈ ಸನ್ನಿವೇಶದಲ್ಲಿ,ಹೂಡಿಕೆಯನ್ನು ಆಕರ್ಷಿಸಲು ಮತ್ತು ಹೆಚ್ಚಿಸಲು, ಮೂಲಸೌಕರ್ಯ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಬಂಡವಾಳ ಹೂಡಿಕೆದಾರರನ್ನು (ಎಫ್‌ಪಿಐ) ಉತ್ತೇಜಿಸಲು, ಮೂಲಸೌಕರ್ಯ ಕ್ಷೇತ್ರಕ್ಕೆ ಕ್ರೆಡಿಟ್ಡೀಫಾಲ್ಟ್ ವಿನಿಮಯವನ್ನು ಪರಿಚಯಿಸಲು, ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯನ್ನು ಗಾಢವಾಗಿಸಲು ಮತ್ತು ಅನಿವಾಸಿಗಳಿಂದ ಸಮಾನ ಹೂಡಿಕೆಯನ್ನು ಉತ್ತೇಜಿಸಲು ಪ್ರಸ್ತಾಪಿಸಿದೆ.
ದೇಶೀಯ ಬ್ಯಾಂಕಿಂಗ್ ವಲಯವು ಅನುತ್ಪಾದಕ ಸಾಲದ ಸುಳಿಯಲ್ಲಿ ಸಿಲುಕಿರುವುದರಿಂದ ಮತ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ದಿವಾಳಿತನ ಸಂಹಿತೆ (ಐಬಿಸಿ ಕೋಡ್) ಮೂಲಕಕಾನೂನಾತ್ಮಕ ವಿಷಯಗಳನ್ನು ಇತ್ಯರ್ಥಗೊಳಿಸಲು ಬಜೆಟ್ ನಲ್ಲಿ ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ನೀಡಲಾಗಿದೆ. ಸಾಲದ ಹರಿವನ್ನು ಉಳಿಸಿಕೊಳ್ಳಲು ಬ್ಯಾಂಕಿಂಗ್ ಉದ್ಯಮದಬಂಡವಾಳದ ಮೂಲವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.
ವಿದೇಶಿ ನೇರ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡಲು, ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆ ಉದ್ಯಮ ಹೊಂದಿರುವುದರಿಂದ ವಿಮಾನಯಾನದಲ್ಲಿಎಫ್‌ಡಿಐ ಅನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಪರಿಶೀಲಿಸುತ್ತಿದೆ ಎಂದು ಬಜೆಟ್ ಹೇಳಿದೆ. ವಿಮಾ ಮಧ್ಯವರ್ತಿಗಳಿಗೆ ಶೇ 100 ರಷ್ಟು ಎಫ್‌ಡಿಐಗೆ ಅನುಮತಿ ನೀಡಲು ಮತ್ತು ಒನ್ ಬ್ರಾಂಡ್ ಚಿಲ್ಲರೆ ವ್ಯಾಪಾರಕ್ಷೇತ್ರದಲ್ಲಿ ಎಫ್‌ಡಿಐಗಾಗಿ ಬಜೆಟ್ ಪ್ರಸ್ತಾಪಿಸಿದೆ. ಇದರಿಂದಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಗುಣಮಟ್ಟದ ಗ್ರಾಹಕ ಉತ್ಪನ್ನಗಳು ಭಾರತೀಯರಿಗೆ ಪ್ರಯೋಜನವನ್ನು ನೀಡುತ್ತದೆ. ಬಜೆಟ್ ಪ್ರಮುಖ ಸಮಸ್ಯೆಗಳನ್ನುಬಗೆಹರಿಸುವ ಮೂಲಕ ರಿಯಾಲ್ಟಿ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಪ್ರಮುಖ ಆಟಗಾರರಾಗಿರುವ ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ ) ತ್ತವೂ ಗಮನ ಹರಿಸಿದೆ.
ಜಿಡಿಪಿ ಅನುಪಾತಕ್ಕೆ ತನ್ನ ಬಾಹ್ಯ ಸಾಲವು ಶೇಕಡಾ ಐದಕ್ಕಿಂತ ಕಡಿಮೆಯಿರುವುದರಿಂದ ಮತ್ತು ಜಾಗತಿಕವಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಭಾರತ ತನ್ನ ಬಾಹ್ಯ ಸಾಲ ಕಾರ್ಯಕ್ರಮವನ್ನುಹೆಚ್ಚಿಸುವ ಉದ್ದೇಶವನ್ನು ಪ್ರಕಟಿಸಿತು. ಹಣಕಾಸಿನ ದೃಷ್ಟಿಯಿಂದ, ಬಜೆಟ್ ಅತಿ ಶ್ರೀಮಂತರಿಗೆ ಆದಾಯ ತೆರಿಗೆಯನ್ನು ಹೆಚ್ಚಿಸಿದೆ, ಜೊತೆಗೆ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಹೆಚ್ಚಿಸಲು ಕೈಗಾರಿಕಾಉತ್ಪನ್ನಗಳಿಗೆ ಕಚ್ಚಾ ತೈಲ ಮತ್ತು ಚಿನ್ನದಂತಹ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ. ಸರ್ವಾಂಗೀಣ ಬೆಳವಣಿಗೆಯನ್ನು ಉತ್ತೇಜಿಸಲು ಬಜೆಟ್ ಸಮರ್ಥನೀಯ ಕ್ರಮಗಳನ್ನು ಕೈಗೊಂಡಿದೆ.
ಲೇಖನ : ಜಿ. ಶ್ರೀನಿವಾಸನ್, ಹಿರಿಯ ಆರ್ಥಿಕ ಪತ್ರಕರ್ತರು

Comments
Post a Comment