ಮೂಲಸೌಕರ್ಯ ವೃದ್ಧಿಗೆ ಬಜೆಟ್ ಒತ್ತು
ಐದು ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಗುರಿ ಹೊಂದಿರುವ ಕೇಂದ್ರ ಬಜೆಟ್, ಮೂಲಸೌಕರ್ಯಗಳ ಮೇಲೆ ಹೆಚ್ಚು ಒತ್ತು ನೀಡಿದೆ. ಮೂಲಸೌಕರ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ 100 ಲಕ್ಷ ಕೋಟಿರೂ.ಗಳ ಹೂಡಿಕೆ ಮಾಡುವ ಬದ್ಧತೆಯನ್ನು ಬಜೆಟ್ ಪುನರುಚ್ಚರಿಸಿದ್ದು 5 ಟ್ರಿಲಿಯನ್ ಆರ್ಥಿಕತೆ ಹೊಂದುವ ವಿಶ್ವಾಸವನ್ನು ನೀಡುತ್ತದೆ. ಒಂದು ರಾಷ್ಟ್ರ, ಒಂದು ಗ್ರಿಡ್ ಅನ್ನು ಪ್ರಸ್ತಾಪಿಸಲಾದ ಬಜೆಟ್ ನಲ್ಲಿ ರಸ್ತೆ, ಅನಿಲ, ನೀರು,ವಿಮಾನ ನಿಲ್ದಾಣಗಳನ್ನು ರೂಪಿಸುವ ಮೂಲಕ ಆರ್ಥಿಕತೆಯನ್ನು ಗುಣಾತ್ಮಕವಾಗಿ ಪರಿವರ್ತಿಸಬಹುದು.
ಭಾರತದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮೊದಲ ಬಜೆಟ್ ಮೂಲಸೌಕರ್ಯ ಹೂಡಿಕೆಯನ್ನು ಹೆಚ್ಚಾಗಿಸಲು ಪ್ರಯತ್ನಿಸಿದೆ. ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಅವಧಿಯು ಮೂಲಸೌಕರ್ಯವನ್ನು ಆದ್ಯತೆಯ ಕ್ಷೇತ್ರವನ್ನಾಗಿಟ್ಟುಕೊಂಡಿತ್ತು. ರಸ್ತೆಗಳು, ಬಂದರುಗಳು ಮತ್ತು ರೈಲ್ವೆಗಳ ವಿಸ್ತರಣೆಗೆ ಮೊದಲ ಅವಧಿ ಸಾಕ್ಷಿಯಾಯಿತು.ಅಲ್ಲದೆ, ಮೂಲಸೌಕರ್ಯದ ಅಡೆತಡೆಗಳನ್ನು ಸರ್ಕಾರ ಬಗೆಹರಿಸಿತು. ಸರ್ಕಾರವು ಈಗ ಮೂಲಸೌಕರ್ಯ ಕ್ಷೇತ್ರವನ್ನು ಆರೋಗ್ಯಕರ ಸ್ಥಿತಿಗೆ ಮರುಸ್ಥಾಪಿಸುತ್ತಿದೆ.
2018 ಮತ್ತು 2030ರ ನಡುವೆ ರೈಲ್ವೆಯಲ್ಲಿ 50 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಬಜೆಟ್ ಪ್ರಸ್ತಾಪಿಸಿದೆ. ಈ ಉದ್ದೇಶ ಶ್ಲಾಘನೀಯ. ಏಕೆಂದರೆ ರೈಲ್ವೆ ಕೇವಲ ರಾಷ್ಟ್ರೀಯ ಸಾರಿಗೆ ವ್ಯವಸ್ಥೆಯಲ್ಲ. ಆದು ಭಾರತದಜೀವಸೆಲೆ. ಹಿಂದೆ, ರೈಲ್ವೆ, ರಸ್ತೆ ವಲಯಕ್ಕೆ ಹೂಡಿಕೆಯ ಪ್ರಮಾಣದಲ್ಲಿ ಕೊರತೆಯಾಗಿತ್ತು. ರೈಲ್ವೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಹೂಡಿಕೆಯನ್ನು ಹೆಚ್ಚಿಸುವಲ್ಲಿ ನೆರವಾಗಿದೆ. ಆದ್ದರಿಂದ,ರೈಲ್ವೆಯಲ್ಲಿ ಸಾರ್ವಜನಿಕ-ಖಾಸಗಿ-ಪಾಲುದಾರಿಕೆ ಕ್ರಮವು ಬಾಕಿ ಇರುವ ಯೋಜನೆಗಳ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಬಯಸುತ್ತದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆ. ಇದಲ್ಲದೆ, ತ್ವರಿತ ನಗರೀಕರಣದ ಹಿನ್ನೆಲೆಯಲ್ಲಿದೆಹಲಿ-ಮೀರತ್ ಕ್ಷಿಪ್ರ ಪ್ರಾದೇಶಿಕ ಸಾರಿಗೆ ವ್ಯವಸ್ಥೆಯ ಮಾರ್ಗದಲ್ಲಿ ಉಪ-ನಗರ ರೈಲ್ವೆಗಳ ಮೇಲೆ ಗಮನವನ್ನು ಕೂಡ ಬಜೆಟ್ ನಲ್ಲಿ ನೀಡಲಾಗಿದೆ. ಪ್ರಸ್ತುತ 657 ಕಿಲೋಮೀಟರ್ ಮೆಟ್ರೊ ರೈಲುಕಾರ್ಯನಿರ್ವಹಿಸುತ್ತಿರುವುದು ನಗರ ಜನರು ತಮ್ಮ ಕೆಲಸದ ಸ್ಥಳಗಳಿಗೆ ಸುಲಭವಾಗಿ ಪ್ರಯಾಣಿಸಲು ನೆರವಾಗಿದೆ.
ಪೂರ್ವ ಮತ್ತು ಪಶ್ಚಿಮ, ಅವಳಿ ಸರಕು ಕಾರಿಡಾರ್‌ಗಳನ್ನು ಪೂರ್ಣಗೊಳಿಸುವುದರಿಂದ ಪ್ರಯಾಣಿಕರ ಸೇವೆಗಳ ವಿಸ್ತರಣೆಗೆ ಸಾಕಷ್ಟು ಟ್ರ್ಯಾಕ್ ಸಾಮರ್ಥ್ಯಗಳನ್ನು ಮುಕ್ತಗೊಳಿಸುತ್ತದೆ ಎಂದು ಬಜೆಟ್ ಪುನರುಚ್ಚರಿಸಿದೆ. ರೈಲ್ವೆನಿಲ್ದಾಣಗಳ ತ್ವರಿತ ಆಧುನೀಕರಣಕ್ಕೆ ಒತ್ತು ನೀಡಿದೆ. ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂ.ಗಳ ಹಣವನ್ನು ಒದಗಿಸಲು ಎಲ್ಲಾ ಆಯ್ಕೆಗಳನ್ನು ಅನ್ವೇಷಿಸುವುದಾಗಿ ಸರ್ಕಾರ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಕ್ರೆಡಿಟ್ಗ್ಯಾರಂಟಿ ವರ್ಧಕ ನಿಗಮವನ್ನು ರಚಿಸುವ ಯೋಜನೆ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.
ಕೈಗಾರಿಕಾ ಕಾರಿಡಾರ್‌ಗಳು, ಭಾರತ್ ಮಾಲಾ, ಸಾಗರಮಾಲಾ, ಜಲ ಮಾರ್ಗ ವಿಕಾಸ್ ಮತ್ತು ಉಡಾನ್ ಅಡಿಯಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಬಜೆಟ್ ಸ್ಪಷ್ಟವಾಗಿ ಹೆಚ್ಚಿನ ಆದ್ಯತೆಯನ್ನುನೀಡಿದೆ. ಬಜೆಟ್ ಒಂದು ರಾಷ್ಟ್ರ, ರಸ್ತೆಗಳು, ಜಲಮಾರ್ಗಗಳು, ರೈಲ್ವೆಗಳು, ವಿದ್ಯುತ್ ಮತ್ತು ವಾಯುಯಾನಗಳಿಗೆ ಒಂದು ಗ್ರಿಡ್ ಎಂಬ ಪರಿಕಲ್ಪನೆಗೆ ಹಣಕಾಸಿನ ಅನುದಾನಗಳನ್ನು ನೀಡಲು ಪ್ರಯತ್ನಿಸಲಿದೆ. ವಾರಣಾಸಿ-ಹಲ್ದಿಯಾ ಜಲಮಾರ್ಗಗಳು ಭಾರತದ ಶ್ರೀಮಂತ ನದಿಗಳನ್ನು ಕಡಿಮೆ ವೆಚ್ಚದಲ್ಲಿ ಸರಕುಗಳ ಸಾಗಣೆಗೆ ಬಳಸುವ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ರಫ್ತು ಸಾಮರ್ಥ್ಯವನ್ನು ನಿರ್ವಹಿಸಲು ಸರ್ಕಾರ ಸಾಗರಮಾಲಾಯೋಜನೆಗಳನ್ನು ಹೆಚ್ಚು ನಿರ್ಣಾಯಕವಾಗಿಸುತ್ತದೆ. ಹೊಸ ಬಂದರುಗಳ ಅಭಿವೃದ್ಧಿ ಮತ್ತು ಟೌನ್‌ಶಿಪ್‌ಗಳ ಜೊತೆಗೆ ಹಳೆಯದಾದ ಸಾಮರ್ಥ್ಯಗಳ ವಿಸ್ತರಣೆ, ಸಾಗರ್ಮಲಾ ಯೋಜನೆಯನ್ನು ವಿಶ್ವ ವ್ಯಾಪಾರದಲ್ಲಿ ತನ್ನ ಪಾಲನ್ನುಹೆಚ್ಚಿಸುವ ಭಾರತದ ಪ್ರಯತ್ನಕ್ಕೆ ಸಹಕಾರಿಯಾಗಲಿದೆ. ರಫ್ತು ಕ್ಷೇತ್ರವು ಖಂಡಿತವಾಗಿಯೂ ಉದ್ಯೋಗ ಸೃಷ್ಟಿಯ ಮೂಲವಾಗಿದೆ.
ಅಲ್ಲದೆ, ವಿಮಾನ ನಿರ್ವಹಣೆ, ದುರಸ್ತಿ ಮತ್ತು ಸಾಮರ್ಥ್ಯವನ್ನು ಟ್ಯಾಪ್ ಮಾಡುವ ಮೂಲಕ ಭಾರತವನ್ನು ವಾಯುಯಾನ ಕೇಂದ್ರವನ್ನಾಗಿ ಮಾಡಲು ಬಜೆಟ್ ಪ್ರಯತ್ನಿಸಿದೆ. ಭಾರತ್ಮಾಲಾ ಹಂತ 2 ದೇಶಾದ್ಯಂತ 48000ಕಿಲೋಮೀಟರ್ ರಸ್ತೆ ಜಾಲವನ್ನು ನಿರ್ಮಿಸಲು ಉದ್ದೇಶಿಸಿದೆ. ಭಾರತಮಾಲಾ ಯೋಜನೆಗಳ ಅನುಷ್ಠಾನಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳನ್ನು ಬೆಂಬಲಿಸಲು ಬಜೆಟ್ ಪ್ರಸ್ತಾಪಿಸಿದೆ. ಇದುಖಂಡಿತವಾಗಿಯೂ ಭೂಸ್ವಾಧೀನವನ್ನು ತ್ವರಿತಗೊಳಿಸುತ್ತದೆ. ದೇಶದಲ್ಲಿ ಶೇಕಡಾ 97 ರಷ್ಟು ಅರ್ಹ ಆವಾಸಸ್ಥಾನಗಳು ಈಗ ಎಲ್ಲಾ ರಸ್ತೆ ಜಾಲಗಳೊಂದಿಗೆ ಸಂಪರ್ಕ ಹೊಂದಿವೆ ಎಂಬುದು ನಿಜಕ್ಕೂ ಶ್ಲಾಘನೀಯ. ಪ್ರಧಾನ್ಮಂತ್ರಿ ಗ್ರಾಮ ಸಡಕ್ ಯೋಜನೆ ಗಮನಾರ್ಹವಾಗಿ ದೇಶದ ಗ್ರಾಮೀಣ ಭಾಗಗಳನ್ನು ನಗರ ಕೇಂದ್ರಗಳಿಗೆ ಹತ್ತಿರ ತಂದಿದೆ. ಭೌತಿಕ ಸಂಪರ್ಕದ ಲಾಭವನ್ನು ರೈತರಿಗೆ ಪಡೆಯಲು ಬಜೆಟ್ ಗ್ರಾಮೀಣ ರಸ್ತೆಗಳ ಮೇಲೆಗಮನಹರಿಸಿದೆ. ಮೂಲಸೌಕರ್ಯ ಹೂಡಿಕೆ ಖಂಡಿತವಾಗಿಯೂ ಆರ್ಥಿಕತೆಗೆ ಒಂದು ಶಕ್ತಿ ಗುಣಕವಾಗಿದೆ. ಪ್ರತಿ ವರ್ಷ ಮೂಲಸೌಕರ್ಯಕ್ಕಾಗಿ ರೂ 20 ಲಕ್ಷ ಕೋಟಿ ಬಳಸಲು ಬಜೆಟ್ ಒತ್ತು ನೀಡುತ್ತಿರುವುದು ಆರ್ಥಿಕತೆಯಸುಧಾರಣೆಯನ್ನು ಸಂಕೇತಿಸುತ್ತದೆ.
ಲೇಖನ : ಮನೀಶ್ ಆನಂದ್, ಹಿರಿಯ ಪ್ರತಿನಿಧಿ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

Comments
Post a Comment