ಜಿ-7 ಸಮಾವೇಶ

ವಿಶ್ವದ ಏಳು ಅತಿದೊಡ್ಡ ಮುಂದುವರಿದ ಆರ್ಥಿಕತೆಗಳ ನಾಯಕರು ಜಾಗತಿಕ ಸಮಸ್ಯೆಗಳನ್ನು ಸರಿಪಡಿಸುವ ಉದ್ದೇಶಕ್ಕಾಗಿ ಜಿ -7 ಶೃಂಗಸಭೆಯೆಂಬ ವೇದಿಕೆಯನ್ನು ಸ್ಥಾಪಿಸಲಾಯಿತು. ಫ್ರಾನ್ಸ್ ನಲ್ಲಿ 1975ರಲ್ಲಿ ಮೊದಲ ಸಭೆ ನಡೆಯಿತು. ನಿರ್ಣಾಯಕ ವಿಷಯಕ್ಕೆ ಸಂಬಂಧಿಸಿಂತೆ ಜಿ -7 ಹೊರಗಿನ ಪ್ರಮುಖ ದೇಶಗಳನ್ನು ವಿಸ್ತರಿಸುವುದರಿಂದ ಜಿ -7 ಚರ್ಚೆಗಳ ಪ್ರಭಾವವು ಜಾಗತಿಕ ಪರಿಣಾಮವನ್ನು ಬೀರುತ್ತದೆ. 1989ರಲ್ಲಿ,ಫ್ರಾನ್ಸ್ ಆಯೋಜಿಸಿದ್ದ ಜಿ -7 ಶೃಂಗಸಭೆಯು ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುವ ಉದ್ದೇಶದಿಂದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ಅನ್ನು ರಚಿಸಿತ್ತು. ಇತ್ತೀಚಿನ ವರ್ಷಗಳಲ್ಲಿ, ಎಫ್‌ಎಟಿಎಫ್ ಸದಸ್ಯರಾಗಿರುವ ಭಾರತವು ಪಾಕಿಸ್ತಾನ ಪ್ರಾಯೋಜಿಸಿದ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುವಲ್ಲಿ ಅಂತರರಾಷ್ಟ್ರೀಯಸಹಕಾರವನ್ನು ಜಾರಿಗೆ ತರಲು ಸಕ್ರಿಯವಾಗಿ ಪ್ರಯತ್ನಿಸಿದೆ.

'ವಿಶೇಷ ಬಿಯರಿಟ್ಜ್ ಪಾಲುದಾರ'ನಾಗಿ ಬಿಯರಿಟ್ಜ್ ಫ್ರಾನ್ಸ್‌ನಲ್ಲಿ ನಡೆದ ಜಿ -7 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಯಿತು. ಎಲ್ಲಾ ರೀತಿಯಅಸಮಾನತೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತವನ್ನು "ಪ್ರಮುಖ ಪ್ರಜಾಪ್ರಭುತ್ವ" ಎಂದು ಕಾನೂನುಬದ್ಧವಾಗಿ ಸೇರಿಸಿಕೊಳ್ಳಬೇಕೆಂಬುದು ಫ್ರಾನ್ಸ್ ಬಯಕೆಯಾಗಿತ್ತು.. "ಬಹುಪಕ್ಷೀಯತೆಯನ್ನುಎತ್ತಿಹಿಡಿಯಲು ಬದ್ಧವಾಗಿರುವ ಪ್ರಜಾಪ್ರಭುತ್ವ ಸಮಾಜಗಳು" ಎಂದು, ಭಾರತ ಮತ್ತು ಫ್ರಾನ್ಸ್ ಹವಾಮಾನ ಬದಲಾವಣೆ, ಜೀವವೈವಿಧ್ಯತೆ ಮತ್ತು ಸಾಗರಗಳು ಮತ್ತು ಡಿಜಿಟಲ್ ಪರಿವರ್ತನೆಯ ಕ್ಷೇತ್ರಗಳಲ್ಲಿ ಜಿ-7 ಚೌಕಟ್ಟಿನೊಳಗೆ ಪರಸ್ಪರ ಕ್ರಿಯೆಗೆ ಆದ್ಯತೆ ನೀಡಿವೆ.

ಹವಾಮಾನ ಮತ್ತು ಜೀವವೈವಿಧ್ಯತೆಯ ವಿಷಯದಲ್ಲಿ, ಜಿ -7 ರ ಚೌಕಟ್ಟಿನಡಿಯಲ್ಲಿ ಭಾರತವು ಹೊಸ ಉಪಕ್ರಮಗಳನ್ನು ಬೆಂಬಲಿಸುತ್ತದೆ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ 23 ಸೆಪ್ಟೆಂಬರ್ 2019ರಂದು ನಡೆಯುವ ಹವಾಮಾನ ಕ್ರಿಯಾ ಶೃಂಗಸಭೆಯನ್ನು ಬೆಂಬಲಿಸುತ್ತದೆ. ಸಭೆಯಲ್ಲಿ ಪ್ರಧಾನಿ ಮೋದಿ ಅವರು “ಭಾರತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತೆಗೆದುಹಾಕಲಿದೆ, ನೀರನ್ನು ಸಂರಕ್ಷಿಸುವುದು, ಸೌರಶಕ್ತಿಯನ್ನು ಬಳಸುವುದು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸುವ ಕಡೆಗೆ ದೊಡ್ಡ ಪ್ರಮಾಣದ ಪ್ರಯತ್ನಗಳನ್ನು ಮಾಡುತ್ತಿದೆ ” ಎಂದರು.

ಜಿ -7 ಶೃಂಗಸಭೆಯ ನಂತರದ ಭಾರತದ ಚಟುವಟಿಕೆಗಳು ಇದರ ಹಂತಗಳನ್ನು ಒಳಗೊಂಡಿರುತ್ತವೆ. ಯುಎನ್‌ಎಫ್‌ಸಿಸಿಯ 2015ರ ಪ್ಯಾರಿಸ್ ಒಪ್ಪಂದದ ಉದ್ದೇಶಗಳೊಂದಿಗೆ ಹೊಂದಿಕೆಯಾಗುವ ಹಣಕಾಸಿನ ಹರಿವಿನ ಮೂಲಕ ಗ್ರೀನ್ ಹೌಸ್ ಗ್ಯಾಸ್ (ಜಿಎಚ್‌ಜಿ) ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ “ಹವಾಮಾನ ಬದಲಾವಣೆಯನ್ನು ತಗ್ಗಿಸಿ” ಎಂದು ಒತ್ತಾಯಿಸಲಾಗಿದೆ. ಮಾಂಟ್ರಿಯಲ್ ಪ್ರೊಟೊಕಾಲ್‌ನ ಕಿಗಾಲಿ ಯೋಜನೆಯ ಭಾಗವಾಗಿ, ಪರಿಣಾಮಕಾರಿ ಕ್ರಮಕ್ಕಾಗಿ ಜಿ -7 ರ ಬಿಯರಿಟ್ಜ್ ಪ್ರತಿಜ್ಞೆಯು ಹೈಡ್ರೊ-ಫ್ಲೋರೋ-ಕಾರ್ಬನ್‌ಗಳನ್ನು (ಎಚ್‌ಎಫ್‌ಸಿ) ಕಡಿತಗೊಳಿಸುವ ಮತ್ತು ಶೈತ್ಯೀಕರಣ ಕ್ಷೇತ್ರದಲ್ಲಿ ಸುಧಾರಿತ ಇಂಧನ ದಕ್ಷತೆಯ ಮಾನದಂಡಗಳ ಯೋಜನೆಗಳಲ್ಲಿ ಭಾರತ ಕೂಡ ಪಾಲ್ಗೊಳ್ಳಲಿದೆ.

ಡಿಜಿಟಲ್ ಕ್ಷೇತ್ರದಲ್ಲಿ, ಭಾರತ ಮತ್ತು ಫ್ರಾನ್ಸ್ ಎರಡೂ “ಮುಕ್ತ ಮತ್ತು ಸುರಕ್ಷಿತ ಮತ್ತು ಶಾಂತಿಯುತ ಸೈಬರ್‌ ಸ್ಪೇಸ್ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಬೆಂಬಲಿಸಿವೆ, ಇದಕ್ಕೆ ಅಂತರರಾಷ್ಟ್ರೀಯ ಕಾನೂನು ಅನ್ವಯಿಸುತ್ತದೆ.”

ಜಿ -7 ಶೃಂಗಸಭೆಯಲ್ಲಿ ಡೇಟಾ ಸೆಟ್‌ಗಳನ್ನು ಆಯ್ಕೆ ಮಾಡುವ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಚರ್ಚಿಸಲಾಯಿತು. ಈ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಭಾರತದಿಂದ ಸೇರಿದಂತೆ ಕೃತಕ ಬುದ್ಧಿಮತ್ತೆಯ ತಜ್ಞರ ಗುಂಪನ್ನು ಪ್ರಸ್ತಾಪಿಸಲಾಗಿದೆ. ಎರಡನೆಯದಾಗಿ, ಮುಕ್ತ, ಉಚಿತ ಮತ್ತು ಸುರಕ್ಷಿತ ಅಂತರ್ಜಾಲದಲ್ಲಿ ಪ್ರಸ್ತಾವಿತ ಯೋಜನೆ ಮೂಲಕ ಆನ್‌ಲೈನ್ ವೇದಿಕೆಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆಗೆ ಜಿ -7 ಚರ್ಚೆಗಳು ಆದ್ಯತೆ ನೀಡಿವೆ. ಡಿಜಿಟಲ್ ವಲಯದ ಸರ್ಕಾರಗಳು, ವೇದಿಕೆಗಳು ಮತ್ತು ವ್ಯವಹಾರಗಳು ಅಂತರ್ಜಾಲದಲ್ಲಿ ಅಪಾಯಕಾರಿ ವಿಷಯಗಳ ಹರಡುವಿಕೆಯನ್ನು ಎದುರಿಸಲು ದೃಢವಾದ ಬದ್ಧತೆ ಪ್ರದರ್ಶಿಸಲು ಸಿದ್ಧವಿರಲಿವೆ. ಡೇಟಾ ಆಧಾರಿತ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳಲ್ಲಿ, ವಿಶೇಷವಾಗಿ 5 ಜಿ ತಂತ್ರಜ್ಞಾನ ಮತ್ತು ಡೇಟಾದ ಮುಕ್ತ ಹರಿವಿನ ಬಗ್ಗೆ ವಿಶ್ವಾಸವನ್ನು ಉಂಟುಮಾಡಲು ಸಂಬಂಧಿಸಿದ ಜಿ -7 ನಲ್ಲಿ ಚರ್ಚಿಸಲಾದ ಮೂರನೇ ವಿಷಯವಾಗಿದೆ. ಈ ಪ್ರಮುಖ ಕ್ಷೇತ್ರಗಳಲ್ಲಿ ಭಾರತದ ಭಾಗವಹಿಸುವಿಕೆಯು ಭಾರತದ ಪರಿವರ್ತನೆಗಾಗಿ ಸೈಬರ್‌ಪೇಸ್‌ನ ಬಳಕೆಯ ಜಾಗತಿಕ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆ.

ಸಮಾಜವನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನವನ್ನು ಹತೋಟಿಯಲ್ಲಿಟ್ಟುಕೊಳ್ಳುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ಅವರು “ಹೊಸತನವನ್ನು ಹೆಚ್ಚಿಸಲು ಪರಿವರ್ತಕ ತಂತ್ರಜ್ಞಾನದ ಶಕ್ತಿಯನ್ನು ಎತ್ತಿ ತೋರಿಸಿದರು ಮತ್ತು ಭಾರತವು ತಂತ್ರಜ್ಞಾನವನ್ನು ಮತ್ತಷ್ಟು ನಾವೀನ್ಯತೆ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಹೇಗೆ ಬಳಸುತ್ತಿದೆ” ಎಂದರು.

ಜಿ -7 ಡಿಜಿಟಲ್ ಉಪಕ್ರಮವು ಭವಿಷ್ಯದಲ್ಲಿ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಸೈಬರ್‌ಸ್ಪೇಸ್ ಕುರಿತ ಬಹು-ಪಾಲುದಾರರ ಸಮಾವೇಶದ ಮಾತುಕತೆ ಮತ್ತು ಅಳವಡಿಕೆಗೆ ವೇಗವರ್ಧನೆ ನೀಡುತ್ತದೆ. ಜನರು ಸುಸ್ಥಿರ ಅಭಿವೃದ್ಧಿಗೆ ಡಿಜಿಟಲ್ ತಂತ್ರಜ್ಞಾನಗಳನ್ನು ಅನ್ವಯಿಸುವಲ್ಲಿ ಪರಿಣಾಮಕಾರಿ ಅಂತರರಾಷ್ಟ್ರೀಯ ಸಹಕಾರಕ್ಕಾಗಿ ತತ್ವಗಳು ಮತ್ತು ಉದ್ದೇಶಗಳನ್ನು ಒದಗಿಸಲು ಇಂತಹ ಸಮಾವೇಶದ ಅಗತ್ಯವಿದೆ.

ಬಿಯರಿಟ್ಸ್ ನಲ್ಲಿ ನಡೆದ ಜಿ -7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾಲ್ಗೊಳ್ಳುವಿಕೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತರ ವಿಶ್ವ ನಾಯಕರೊಂದಿಗಿನ ಅವರ ಗಣನೀಯ ದ್ವಿಪಕ್ಷೀಯ ಸಭೆಗಳು ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಆವೇಗವನ್ನು ನೀಡಲಿವೆ. 2022 ರಲ್ಲಿ ಜಿ -20 ಪ್ರೆಸಿಡೆನ್ಸಿ ಜವಾಬ್ದಾರಿ ವಹಿಸಿಕೊಳ‍್ಳಲಿರುವ ಹಿನ್ನೆಲೆಯಲ್ಲಿ ಭಾರತದ ಬೆಳೆಯುತ್ತಿರುವ ಜಾಗತಿಕ ನಾಯಕತ್ವದ ಪಾತ್ರದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ

ಲೇಖನ : ಅಶೋಕ್ ಮುಖರ್ಜಿ, ವಿಶ್ವಸಂಸ್ಥೆಯ ಭಾರತದ ಮಾಜಿ ಖಾಯಂ ಪ್ರತಿನಿಧಿ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ