ಗಲ್ಫ್ ದೇಶಗಳಿಂದ ಪಾಕಿಸ್ತಾನಕ್ಕೆ ಚಾಟಿ
ಸ್ತಾನವು ಕೊಲ್ಲಿ ಅರಬ್ ರಾಷ್ಟ್ರಗಳಿಂದ ನಿರೀಕ್ಷಿಸಿದ ರೀತಿಯಬೆಂಬಲವನ್ನು ಪಡೆದಿಲ್ಲ. ಭಾರತವು ತನ್ನ ಸಂವಿಧಾನದ 370ನೇ ವಿಧಿಯನ್ನು ಹಿಂತೆಗೆದುಕೊಂಡಿದ್ದರಿಂದ ಮತ್ತು ಜಮ್ಮುಮತ್ತು ಕಾಶ್ಮೀರ ಹಾಗು ಲಡಾಖ್‌ಗೆ ಕೇಂದ್ರಾಡಳಿತದಸ್ಥಾನಮಾನವನ್ನು ನೀಡಿದ್ದರ ಬಗ್ಗೆ ಗಲ್ಫ್ ರಾಷ್ಟ್ರಗಳು ಭಾರತದ ಕಡೆಗಿನ ತಮ್ಮ ನಿಲುವಿನಲ್ಲಿ ಬದಲಾವಣೆ ತಂದುಕೊಂಡಿಲ್ಲ. ಈ ಪ್ರತಿಕ್ರಿಯೆಯು ಸ್ಥಿರ ಮತ್ತು ಪ್ರಬುದ್ಧ ದೇಶವಾಗಿ ಭಾರತದ ವರ್ಚಸ್ಸು ಏರುತ್ತಿರುವ ಪ್ರತೀಕವಾಗಿದೆ. ಇದಲ್ಲದೆ, ಭಾರತವುಬಹುತೇಕ ಎಲ್ಲಾ ಕೊಲ್ಲಿ ರಾಷ್ಟ್ರಗಳೊಂದಿಗೆ ನಿಕಟಕಾರ್ಯತಂತ್ರದ ಸಂಬಂಧವನ್ನು ಹೊಂದಿದೆ. ಭಾರತವುವಾರ್ಷಿಕ $ 100 ಶತಕೋಟಿಗಿಂತ ಹೆಚ್ಚಿನ ಮೌಲ್ಯದವ್ಯಾಪಾರವನ್ನು ಈ ದೇಶಗಳೊಂದಿಗೆ ನಡೆಸುತ್ತದೆ, ಇದುಅರೇಬಿಯನ್ ಪೆನಿನ್ಸುಲಾದ ಅತ್ಯಮೂಲ್ಯ ಆರ್ಥಿಕಪಾಲುದಾರರಲ್ಲಿ ಒಂದಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿಇಸ್ಲಾಮಿಕ್ ದೇಶವಾದ ಸೌದಿ ಅರೇಬಿಯಾವು ಭಾರತದನಡೆಯನ್ನು ಸಂಯಮಿಸುವಂತೆ ಒತ್ತಾಯಿಸಿದೆ. ಇತರ ಪ್ರಮುಖದೇಶಗಳಾದ ಕುವೈತ್, ಕತಾರ್, ಬಹ್ರೇನ್ ಮತ್ತು ಒಮಾನ್ ಈಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಯುನೈಟೆಡ್ ಅರಬ್ಎಮಿರೇಟ್ಸ್ ಈ ನಿರ್ಧಾರವನ್ನು "ಭಾರತದ ಆಂತರಿಕ ವಿಷಯ"ಎಂದು ಹೇಳಿದೆ. ಇದು ಅತ್ಯಂತ ಮಹತ್ವದ್ದಾಗಿದೆ. ಆದಾಗ್ಯೂ,ಯುಎಇ ಇತ್ತೀಚಿನ ದಿನಗಳಲ್ಲಿ 3 ಬಿಲಿಯನ್ ಯುಎಸ್ ಡಾಲರ್"ಸಾಫ್ಟ್ ಸಾಲ" ವನ್ನು ಒದಗಿಸಿದೆ ಮತ್ತು ಪಾಕಿಸ್ತಾನಕ್ಕೆ ರಫ್ತುಮಾಡುವ ತೈಲಕ್ಕಾಗಿ ಪಾವತಿಗಳನ್ನು ಮುಂದೂಡಿದೆ, ಕಾಶ್ಮೀರವಿಷಯದ ಬಗ್ಗೆ ಎಮಿರೇಟ್ಸ್ ಅಸಡ್ಡೆ ಇಸ್ಲಾಮಾಬಾದ್ ಗೆ ಸ್ಪಷ್ಟಸಂದೇಶವನ್ನು ಕಳುಹಿಸಿದೆ. ಭಾರತದೊಂದಿಗಿನ ಸಂಬಂಧಗಳುಹೆಚ್ಚು ಮೌಲ್ಯಯುತವಾದದ್ದು ಎಂದು ಇದು ಸಾರಿದೆ.
ಯುಎಇ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶಗಳಲ್ಲಿ ಒಂದು. ವ್ಯಾಪಾರದ ಪ್ರಮಾಣವು ಸುಮಾರು 50ಬಿಲಿಯನ್ ಯುಎಸ್ ಡಾಲರ್ ಮೌಲ್ಯದ್ದಾಗಿದೆ. ಭಾರತದಿಂದರಫ್ತು 28 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ್ದು ಮತ್ತುಭಾರತಕ್ಕೆ ಆಮದು 22 ಬಿಲಿಯನ್ ಯುಎಸ್ ಅಮೆರಿಕನ್ ಡಾಲರ್ ಮೌಲ್ಯವನ್ನು ಹೊಂದಿದೆ. ಇದು ಭಾರತವನ್ನುಯುಎಇಯ ಎರಡನೇ ಅತಿದೊಡ್ಡ ವ್ಯಾಪಾರಪಾಲುದಾರನನ್ನಾಗಿ ಮಾಡುತ್ತದೆ, ಯುಎಇ ಭಾರತದ ಮೂರನೇಅತಿದೊಡ್ಡ ವ್ಯಾಪಾರ ಪಾಲುದಾರ (ಚೀನಾ ಮತ್ತು ಯುಎಸ್ನಂತರ) .
ಯುಎಇಯಲ್ಲಿ ಭಾರತೀಯ ಹೂಡಿಕೆ 55 ಬಿಲಿಯನ್ ಯುಎಸ್ ಡಾಲರ್ ನಷ್ಟಿದೆ. ದುಬೈನ ರಿಯಲ್ ಎಸ್ಟೇಟ್ಮಾರುಕಟ್ಟೆಯಲ್ಲಿ ಭಾರತೀಯರು ಅತಿದೊಡ್ಡ ವಿದೇಶಿಹೂಡಿಕೆದಾರರು. ಔಪಚಾರಿಕತೆಗಳು ಪೂರ್ಣಗೊಂಡ ನಂತರದುಬೈನ ಪ್ರಮುಖ ಜಾಗತಿಕ ಬಂದರು ಆಯೋಜಕರುಕಾಶ್ಮೀರದಲ್ಲಿ ಲಾಜಿಸ್ಟಿಕ್ಸ್ ಹಬ್ ಅನ್ನು ಅಭಿವೃದ್ಧಿಪಡಿಸಲುಯೋಜಿಸುತ್ತಿದ್ದಾರೆ. ಕಾಶ್ಮೀರದಲ್ಲಿನ ಬದಲಾವಣೆಗಳು"ಸಾಮಾಜಿಕ ನ್ಯಾಯ ಮತ್ತು ಸುರಕ್ಷತೆಯನ್ನುಸುಧಾರಿಸುತ್ತದೆ ಮತ್ತು ಮತ್ತಷ್ಟು ಸ್ಥಿರತೆ ಮತ್ತುಶಾಂತಿಯನ್ನು ಹೆಚ್ಚಿಸುತ್ತದೆ" ಎಂದು ಯುಎಇಯ ಭಾರತದರಾಯಭಾರಿ ಅಹ್ಮದ್ ಅಲ್-ಬನ್ನಾ ಹೇಳಿದ್ದಾರೆ ಎಂದುವರದಿಯಾಗಿದೆ.
ಕಾಶ್ಮೀರ ಸಮಸ್ಯೆಗೆ ಸೌದಿ ಅರೇಬಿಯಾದ ಪ್ರತಿಕ್ರಿಯೆ ಮೌನವೆ ಆಗಿದೆ. ಭಾರತ ಮತ್ತು ಪಾಕಿಸ್ತಾನಗಳೊಂದಿಗೆ ಸಾಮ್ರಾಜ್ಯವುನಿಕಟ ಸಂಬಂಧವನ್ನು ಹೊಂದಿದೆ. ಬದಲಾಗುತ್ತಿರುವಪ್ರಾದೇಶಿಕ ಭೂ-ರಾಜಕೀಯದಿಂದಾಗಿ, ರಿಯಾದ್ ಇಸ್ಲಾಮಿಕ್ಜಗತ್ತಿನಲ್ಲಿ ಪ್ರಾಬಲ್ಯಕ್ಕಾಗಿ ಟರ್ಕಿ ಮತ್ತು ಇರಾನ್‌ನೊಂದಿಗೆಸೈದ್ಧಾಂತಿಕ ಪೈಪೋಟಿಯಲ್ಲಿದೆ. ಕಾಶ್ಮೀರದ ಕುರಿತಾದ ಸೌದಿಹೇಳಿಕೆಯು ರಾಜ್ಯವು "ಪ್ರಸ್ತುತ ಪರಿಸ್ಥಿತಿಯನ್ನುಅನುಸರಿಸುತ್ತಿದೆ" ಮತ್ತು "ಶಾಂತಿಯುತ ಇತ್ಯರ್ಥಕ್ಕೆ" ಕರೆನೀಡಿದೆ ಎಂದು ಹೇಳಿದರು.
ಸೌದಿ ಅರೇಬಿಯಾದ ಇಸ್ಲಾಮಿಕ್ ಕಿಂಗ್ಡಮ್ 2.7ಮಿಲಿಯನ್ ಭಾರತೀಯರಿಗೆ ನೆಲೆಯಾಗಿದೆ ಮತ್ತು ಇರಾಕ್ನಂತರ ಭಾರತದ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ದೇಶವಾಗಿದೆ. ಭಾರತಕ್ಕೆ ಸೌದಿ ತೈಲ ರಫ್ತು ಕಳೆದ ವರ್ಷಯುಎಸ್ ಡಾಲರ್ 27.5 ಬಿಲಿಯನ್ ಆಗಿತ್ತು
ಈ ವಾರ, ಭಾರತವು ದೇಶದ ಅತಿದೊಡ್ಡ ವಿದೇಶಿ ಹೂಡಿಕೆಗಳಲ್ಲಿಒಂದನ್ನು ಘೋಷಿಸಿತು - ಭಾರತದ ರಿಲಯನ್ಸ್ ತೈಲ ಮತ್ತುರಾಸಾಯನಿಕಗಳ ವ್ಯವಹಾರದಲ್ಲಿ ಸೌದಿ ಅರೇಬಿಯಾದ ಸರ್ಕಾರಿಸ್ವಾಮ್ಯದ ಅರಾಮ್ಕೊ 15 ಬಿಲಿಯನ್ ಯುಎಸ್ ಡಾಲರ್ಖರೀದಿಸಿದೆ. ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್2021 ರ ವೇಳೆಗೆ ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ಸೌದಿ ಹೂಡಿಕೆಗಳನ್ನು ಪ್ರತಿಜ್ಞೆ ಮಾಡಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರದಲ್ಲಿ ಭಾರತದ ಕ್ರಮ ಕುರಿತು ಚರ್ಚಿಸಲು ಸೌದಿ ಅರೇಬಿಯಾ ಮತ್ತು ಬಹ್ರೇನ್‌ನ ನಾಯಕರನ್ನು ತಲುಪಿದ್ದಾರೆ. ಆದರೆ, ಅವರು ಅವರಿಂದ ಯಾವುದೇ ಬೆಂಬಲವನ್ನು ಕಂಡುಕೊಂಡಿಲ್ಲ. ಕಾಶ್ಮೀರ ವಿಷಯದ ಬಗ್ಗೆ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ ನಂತರ ಬಹ್ರೇನ್ ದಕ್ಷಿಣ ಏಷ್ಯಾದ ಅನೇಕ ನಿವಾಸಿಗಳನ್ನು ಬಂಧಿಸಿತು. ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮತ್ತು ದೇಶದ ವಿದೇಶಾಂಗ ಸಚಿವಾಲಯವು ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ಮತ್ತು ಶಾಂತಿಗಾಗಿ ಕರೆ ನೀಡಿದೆ.
ಈ ಘಟನೆಗಳು ಪಾಕಿಸ್ತಾನದಲ್ಲಿ ಗಂಭೀರ ಕಳವಳವನ್ನು ಉಂಟುಮಾಡಿದೆ. ಪಾಕ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊರೆ ಹೋಗಿದೆ. ಅಲ್ಲಿ,ಇಸ್ಲಾಮಾಬಾದ್ ಅನ್ನು ಯಾರು ಬೆಂಬಲಿಸುತ್ತಾರೆ? ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಬಗ್ಗೆ ಕೊಲ್ಲಿ ರಾಷ್ಟ್ರಗಳು ಎಚ್ಚರವಹಿಸಿವೆ. ತೈಲ ಸಮೃದ್ಧ ದೇಶಗಳಿಂದ ಹಣವನ್ನು ಹೊರತೆಗೆಯಲು ಪಾಕಿಸ್ತಾನ ಕಾಶ್ಮೀರವನ್ನು ಬಳಸಿದೆ ಎಂದು ಅವರು ಭಾವಿಸುತ್ತಾರೆ. ಆದರೆ, ಹಣವು ತಪ್ಪಾದ ಕೈಗೆ ಹೋಗಿದೆ. ಕೊಲ್ಲಿ ರಾಷ್ಟ್ರಗಳು ಇಂದು ದೇಶೀಯ ಸಮಸ್ಯೆಗಳನ್ನು ಎದುರಿಸುತ್ತಿವೆ, ಉದಾಹರಣೆಗೆ ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಸಮಸ್ಯೆಯಿಂದ ತತ್ತರಿಸಿವೆ. ಅರಬ್ ಸ್ಪ್ರಿಂಗ್ ಪ್ರತಿಭಟನೆಗಳು ಈ ಪ್ರದೇಶದಲ್ಲಿ ಗಂಭೀರವಾದ ದೇಶೀಯ ಬದಲಾವಣೆಗಳಿಗೆ ಕಾರಣವಾಗಿವೆ.
ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬೆಲೆಗಳು ಮತ್ತು ಮಂದಗತಿಯಲ್ಲಿರುವ ಆರ್ಥಿಕತೆಯಂತಹ ದೇಶೀಯ ವಿಷಯಗಳ ಬಗ್ಗೆ ಪಾಕಿಸ್ತಾನ ಗಮನಹರಿಸಿದರೆ ಉತ್ತಮ. ಕಾಶ್ಮೀರ ವಿಷಯದ ಬಗ್ಗೆ ಸಹಾನುಭೂತಿ ಪಡೆಯುವುದು ಮತ್ತು ಇತರ ದೇಶಗಳಿಂದ ಶತಕೋಟಿ ಡಾಲರ್‌ಗಳನ್ನು ಪಡೆಯುವುದರಿಂದ ಪಾಕಿಸ್ತಾನವನ್ನು ಪ್ರಪಾತದಿಂದ ಹೊರಹಾಕಲು ಸಾಧ್ಯವಿಲ್ಲ.
ಬರಹ : ಕೌಶಿಕ್ ರಾಯ್, ಎಐಆರ್, ಸುದ್ದಿ ವಿಶ್ಲೇಷಕ
Comments
Post a Comment