ಬಹರೇನ್ ಮತ್ತು ಯುಎಇಗೆ ಪ್ರಧಾನಿ ಮೋದಿ ಭೇಟಿ


ಪ್ರಧಾನಿ ನರೇಂದ್ರ ಮೋದಿ ವಾರಾಂತ್ಯದಲ್ಲಿ ಯುಎಇ ಮತ್ತು ಬಹ್ರೇನ್‌ಗೆ ಭೇಟಿ ನೀಡಿದರು. ಇದು ನಾಲ್ಕು ವರ್ಷಗಳಲ್ಲಿ ಯುಎಇಗೆ ಅವರ ಮೂರನೇ ಭೇಟಿ ಮತ್ತು ಭಾರತದ ಪ್ರಧಾನ ಮಂತ್ರಿಬಹ್ರೇನ್‌ಗೆ ನೀಡಿದ ಮೊದಲ ಭೇಟಿಯಾಗಿದೆ. ಈ ಭೇಟಿಗಳು ಅರೇಬಿಯನ್ ಕೊಲ್ಲಿ ರಾಷ್ಟ್ರಗಳೊಂದಿಗೆ ಭಾರತದ ಹೆಚ್ಚುತ್ತಿರುವ ಸಾಮೀಪ್ಯವನ್ನು ಒತ್ತಿಹೇಳುತ್ತವೆ. ಯುಎಇಯಲ್ಲಿ, ಪ್ರಧಾನ ಮಂತ್ರಿಅಬುಧಾಬಿಯ ರಾಜ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಅಲ್-ನಹ್ಯಾನ್ ಅವರನ್ನು ಭೇಟಿಯಾದರು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಮುಖ ದ್ವಿಪಕ್ಷೀಯ, ಪ್ರಾದೇಶಿಕ ಮತ್ತುಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಿದರು. ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಅವರ ವಿಶೇಷ ನಾಯಕತ್ವಕ್ಕಾಗಿ ಮೋದಿ ಅವರಕೊಡುಗೆಯನ್ನು ಗುರುತಿಸಿ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಆರ್ಡರ್ ಆಫ್ ಜಾಯೆದ್" ಅನ್ನು ನೀಡಿ ಗೌರವಿಸಲಾಯಿತು.

ಭಾರತದ ಪ್ರಧಾನ ಮಂತ್ರಿ ಯುಎಇಯಲ್ಲಿ ರುಪೇ ಕಾರ್ಡ್ ಅನ್ನು ಬಿಡುಗಡೆ ಮಾಡಿದರು. ಆ ಮೂಲಕ ಇದಕ್ಕೆ ಸಾಕ್ಷಿಯಾಗುತ್ತಿರುವ ಪಶ್ಚಿಮ ಏಷ್ಯಾದ ಮೊದಲ ದೇಶವೆನಿಸಿಕೊಂಡರೆ ಸಿಂಗಾಪುರಮತ್ತು ಭೂತಾನ್ ನಂತರ ಮೂರನೆಯದಾಗಿದೆ. ಸ್ಥಳೀಯ ಭಾರತೀಯ ಕಾರ್ಡ್‌ ನಿಂದ ಪಾವತಿಗಳನ್ನು ಸ್ವೀಕರಿಸುವ ಕುರಿತು ಒಡಂಬಡಿಕೆಗೆ ಸಹಿ ಹಾಕಲಾಯಿತು. ರುಪೇ ಕಾರ್ಡ್ ಸ್ವೀಕರಿಸುವಬಗ್ಗೆ ಒಂದು ಒಪ್ಪಂದಕ್ಕೆ ಯುಎಇಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮತ್ತು ಮರ್ಕ್ಯುರಿ ಪಾವತಿ ಸೇವೆಗಳ ನಡುವೆ “ಪಾವತಿ ವೇದಿಕೆಗಳ ನಡುವೆ ತಂತ್ರಜ್ಞಾನದ ಅಂತರಸಂಪರ್ಕವನ್ನುಸ್ಥಾಪಿಸಲು”ಎರಡು ದೇಶಗಳಲ್ಲಿ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು. ನಂತರ ಬಹ್ರೇನ್‌ನ ಶ್ರೀನಾಥ್ ಜೀ ದೇವಸ್ಥಾನದಲ್ಲಿ ಪ್ರಸಾದ ಪಡೆಯುವ ಮೂಲಕ ಕಾರ್ಡ್ ಬಳಕೆಅನ್ನು ಪ್ರಾರಂಭಿಸಲಾಯಿತು.

ಬಹ್ರೇನ್‌ನಲ್ಲಿ, ಭಾರತದ ಪ್ರಧಾನ ಮಂತ್ರಿಯನ್ನು ಆದರದಿಂದ ಸ್ವಾಗತಿಸಲಾಯಿತು ಮತ್ತು ಅವರಿಗೆ ಬಹ್ರೇನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸನ್ಸ್ ಅನ್ನು ನೀಡಲಾಯಿತು. ಭಾರತ ಮತ್ತು ಬಹ್ರೇನ್ ನಡುವಿನ "ಸಾವಿರಾರು ವರ್ಷಗಳ" ಹಳೆಯ "ನಿಕಟ ಮತ್ತು ಸ್ನೇಹ ಸಂಬಂಧಗಳನ್ನು" ಗುರುತಿಸಿ ಪ್ರಧಾನಿ ಮೋದಿ ತಮ್ಮ ಪುರಸ್ಕಾರ ಸ್ವೀಕಾರಭಾಷಣದಲ್ಲಿ ಪ್ರಶಸ್ತಿಯ ಮಹತ್ವವನ್ನು ಒತ್ತಿಹೇಳಿದರು. ರಾಜ ಹಮದ್ ಬಿನ್ ಇಸಾ ಅಲ್-ಖಲೀಫಾ ಅವರು ಮೋದಿಯವರಿಗೆ ಔತಣಕೂಟ ಆಯೋಜಿಸಿದರು. ಪಿಎಂ ಮೋದಿ ಬಹರೇನ್ ಪ್ರಧಾಣಿಖಲೀಫಾ ಬಿನ್ ಸಲ್ಮಾನ್ ಅಲ್-ಖಲೀಫಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳಕುರಿತು ಚರ್ಚಿಸಿದರು.

ಪ್ರಧಾನಿ ಮೋದಿ ಅವರು ಅಲ್ಲಿನ ಸಹ ರಾಜ ಹಾಗೂ ಬಹ್ರೇನ್‌ನ ರಾಜಕುಮಾರ ಸಲ್ಮಾನ್ ಬಿನ್ ಹಮದ್ ಬಿನ್ ಇಸಾ ಅಲ್-ಖಲೀಫಾ ಅವರನ್ನು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ