ಜಪಾನ್-ದಕ್ಷಿಣ ಕೊರಿಯಾ ಮಧ್ಯೆ ವ್ಯಾಪಾರ ಉದ್ವಿಗ್ನತೆ
ಪೂರ್ವ ಏಷ್ಯಾದ ಎರಡು ಪ್ರಮುಖ ಆರ್ಥಿಕತೆಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾ ವ್ಯಾಪಾರದ ಉದ್ವಿಗ್ನತೆಗೆ ಸಿಲುಕಿಕೊಂಡಿವೆ. ಜಪಾನ್ ದಕ್ಷಿಣ ಕೊರಿಯಾದ ಮೇಲೆ ನಿರ್ಬಂಧಿತ ವ್ಯಾಪಾರ ಕ್ರಮಗಳನ್ನು ಹೇರಿದೆ, ಇದರಲ್ಲಿ ಹೈಡ್ರೋಜನ್ ಫ್ಲೋರೈಡ್ ಗ್ಯಾಸ್, ಫ್ಲೋರೈನೇಟೆಡ್ ಪಾಲಿಮೈಡ್ ಮತ್ತು ಹೈಟೆಕ್ ಉದ್ಯಮದಲ್ಲಿ ಬಳಸಲಾಗುವ ಫೋಟೋ-ರೆಸಿಸ್ಟ್‌ಗಳು ಸೇರಿದಂತೆ ಮೂರು ರಾಸಾಯನಿಕಗಳ ರಫ್ತುಗಳು ರಾಷ್ಟ್ರೀಯ ಭದ್ರತಾ ಕಾಳಜಿಗಳ ವಿಷಯಗಳು ಎಂದು ಹೇಳಿದೆ.
ಆ ರಾಸಾಯನಿಕಗಳ ಬಳಕೆಯ ಬಗ್ಗೆ ಜಪಾನ್ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಅದು ಮಿಲಿಟರಿ ಅನ್ವಯಿಕೆಗಳನ್ನು ಸಹ ಹೊಂದಿರಬಹುದು. ಟೋಕಿಯೊ ದಕ್ಷಿಣ ಕೊರಿಯಾದ ಯುಎನ್‌ಎಸ್‌ಸಿ ನಿರ್ಬಂಧಗಳ ಅನುಷ್ಠಾನ ಮತ್ತು ಸೂಕ್ಷ್ಮ ವಸ್ತುಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ರಫ್ತು ನಿಯಂತ್ರಣ ಆಡಳಿತದ ಅನುಸರಣೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಇದಲ್ಲದೆ, ಜಪಾನ್ ವಿಶ್ವಾಸಾರ್ಹ ವ್ಯಾಪಾರ ಪಾಲುದಾರರ ಆದ್ಯತೆಯ ‘ಬಿಳಿ ಪಟ್ಟಿಯಿಂದ’ ದಕ್ಷಿಣ ಕೊರಿಯಾವನ್ನು ತೆಗೆದುಹಾಕಿದೆ, ಇದು 1,100 ಕ್ಕೂ ಹೆಚ್ಚು ನಿರ್ಣಾಯಕ ವಸ್ತುಗಳ ಮೇಲೆ ಕಠಿಣ ರಫ್ತು ಸ್ಕ್ರೀನಿಂಗ್ ಮಾಡಬೇಕೆಂಬುದನ್ನು ಸೂಚಿಸುತ್ತದೆ. ನಿರ್ಬಂಧಿತ ವ್ಯಾಪಾರ ಕ್ರಮಗಳು ಉಲ್ಬಣಗೊಳ್ಳುತ್ತಿದ್ದರೆ, ಅದು ಜಾಗತಿಕ ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ದಕ್ಷಿಣ ಕೊರಿಯಾದ ಪ್ರಮುಖ ಕಂಪನಿಗಳು ಜಪಾನ್ ಅನ್ನು ರಾಸಾಯನಿಕಗಳ ಪ್ರಮುಖ ಪೂರೈಕೆದಾರರಾಗಿ ಅವಲಂಬಿಸಿವೆ, ಅವು ಚಿಪ್ಸ್ ಮತ್ತು ಅತ್ಯಾಧುನಿಕ ಪರದೆಗಳ ಉತ್ಪಾದನೆಯಲ್ಲಿ ಪ್ರಮುಖವಾಗಿವೆ. ಆದಾಗ್ಯೂ, ಪ್ರಸ್ತುತ ನಿರ್ಬಂಧಗಳ ಪ್ರಕಾರ, ದಕ್ಷಿಣ ಕೊರಿಯಾಕ್ಕೆ ವಸ್ತುಗಳನ್ನು ಕಳುಹಿಸುವ ಮೊದಲು ಜಪಾನಿನ ರಫ್ತುದಾರರಿಗೆ ಅನುಮತಿ ಬೇಕು. ಇದಕ್ಕಾಗಿ ತೊಂಬತ್ತು ದಿನಗಳ ಅವಕಾಶವಿದೆ. ದಕ್ಷಿಣ ಕೊರಿಯಾದ ಕಂಪನಿಗಳು ಉತ್ಪಾದನೆಯನ್ನು ಉಳಿಸಿಕೊಳ್ಳಲು ದಾಸ್ತಾನು ಮಾಡಿದ ರಾಸಾಯನಿಕಗಳನ್ನು ಅವಲಂಬಿಸಿವೆ. ಆದಾಗ್ಯೂ, ಪ್ರಸ್ತುತ ವ್ಯಾಪಾರದ ಒತ್ತಡವು ಬಗೆಹರಿಯದೆ ಉಳಿದರೆ ಇದು ಸ್ಮಾರ್ಟ್ ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು. ಏತನ್ಮಧ್ಯೆ, ದಕ್ಷಿಣ ಕೊರಿಯಾವು ಜಪಾನ್ ಅನ್ನು ತನ್ನ ‘ಶ್ವೇತ ಪಟ್ಟಿಯಿಂದ’ ತ್ವರಿತಗತಿಯ ವ್ಯಾಪಾರ ಸ್ಥಾನಮಾನಕ್ಕೆ ಇಳಿಸಿದೆ ಮತ್ತು ಟೋಕಿಯೊವನ್ನು ಅಂತರರಾಷ್ಟ್ರೀಯ ತತ್ವಗಳಿಗೆ ಅನುಸಾರವಾಗಿ ರಫ್ತು ನಿಯಂತ್ರಣ ವ್ಯವಸ್ಥೆಯನ್ನು ನಡೆಸದ ರಾಷ್ಟ್ರಗಳಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ವ್ಯಾಪಾರ ವರ್ಗದಲ್ಲಿ ಇರಿಸಲಾಗುವುದು ಎಂದು ಹೇಳಿದೆ. ಹೆಚ್ಚುವರಿಯಾಗಿ, ಸಿಯೋಲ್ ತನ್ನ ಪ್ರಕರಣವನ್ನು ಡಬ್ಲ್ಯುಟಿಒ ಜನರಲ್ ಕೌನ್ಸಿಲ್ನಲ್ಲಿ ಮುಂದುವರಿಸಲು ಪ್ರಯತ್ನಿಸಿದೆ. ಅದಕ್ಕೆ ಅಂತರರಾಷ್ಟ್ರೀಯ ಬೆಂಬಲವನ್ನು ಗಳಿಸುವ ಆಶಯವನ್ನೂ ಹೊಂದಿದೆ.
ವ್ಯಾಪಾರದ ಉದ್ವಿಗ್ನತೆಗಳು ಬಗೆಹರಿಯದೆ ಉಳಿದಿದ್ದರೆ ಮತ್ತು ಜಪಾನ್‌ನ ರಫ್ತು ನಿಯಂತ್ರಣಗಳು ಕಾರ್ಯತಂತ್ರದ ವಸ್ತುಗಳ ಸರಬರಾಜಿನ ಮೇಲೆ ತೊಂದರೆ ಉಂಟು ಮಾಡಿದಲ್ಲಿ ಅದು ಮಧ್ಯಂತರ ಸರಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಅಂತಿಮ ಬಳಕೆಯ ಕೈಗಾರಿಕೆಗಳಲ್ಲೂ ಪರಿಣಾಮವನ್ನು ಬೀರುತ್ತದೆ. ದಕ್ಷಿಣ ಕೊರಿಯಾ ಈ ವರ್ಷದ ಆರ್ಥಿಕ ಬೆಳವಣಿಗೆಯ ದೃಷ್ಟಿಕೋನವನ್ನು ಹಿಂದಿನ 2.6-2.7ಕ್ಕೆ ಹೋಲಿಸಿದರೆ 2.4-2.5 ಪ್ರತಿಶತಕ್ಕೆ ಇಳಿಸಿದೆ. ಜಪಾನಿನ ರಫ್ತು ನಿಯಂತ್ರಣವನ್ನು ನಿಭಾಯಿಸಲು ಸಹಾಯ ಮಾಡಲು ದಕ್ಷಿಣ ಕೊರಿಯಾದ ಸರ್ಕಾರವು ಸ್ಥಳೀಯ ಕೈಗಾರಿಕೆಗಳಿಗೆ ಸುಮಾರು 1.6 ಬಿಲಿಯನ್ ಯುಎಸ್ ಅನ್ನು ಒಳಸೇರಿಸಲು ಯೋಜಿಸಿದೆ. ಪೂರೈಕೆ ಸರಪಳಿಯನ್ನು ಉಳಿಸಿಕೊಳ್ಳಲು ಕಂಪನಿಗಳು ಚೀನಾದಲ್ಲಿ ತಮ್ಮ ಪೂರೈಕೆದಾರರನ್ನು ವೈವಿಧ್ಯಗೊಳಿಸಲು ಅನ್ವೇಷಿಸುತ್ತಿವೆ.
ಟೋಕಿಯೊ ದ್ವಿಪಕ್ಷೀಯ ಸಂಬಂಧಗಳಲ್ಲಿನ ದೊಡ್ಡ ಐತಿಹಾಸಿಕ ಸಮಸ್ಯೆಗಳನ್ನು ಪರಿಹರಿಸಲು ಅಸಮರ್ಥತೆಯಿಂದಾಗಿ ಜಪಾನ್ ತನ್ನ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ದಕ್ಷಿಣ ಕೊರಿಯಾ ವಾದಿಸುತ್ತದೆ. ನಿರ್ಬಂಧಿತ ವ್ಯಾಪಾರ ಕ್ರಮಗಳು ರಾಜಕೀಯ ಪ್ರೇರಿತವಾಗಿವೆ. ಈ ಹಿಂದೆ 2018 ರಲ್ಲಿ, ದಕ್ಷಿಣ ಕೊರಿಯಾದ ಸುಪ್ರೀಂ ಕೋರ್ಟ್ ಜಪಾನ್‌ನ ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಕಾರ್ಮಿಕರಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿತ್ತು, ಅದರ ನಂತರ ಅದರ ’ಆಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ, ನಿಪ್ಪಾನ್ ಸ್ಟೀಲ್ ಕಾರ್ಪ್ ಮತ್ತು ನಾಚಿ-ಫುಜಿಕೋಶಿ ಕಾರ್ಪ್ ಸೇರಿದಂತೆ ಇತರ ಎರಡು ಜಪಾನಿನ ಕಂಪೆನಿಗಳು ಸಹ ದಕ್ಷಿಣ ಕೊರಿಯಾದಲ್ಲಿ ತಮ್ಮ ಆಸ್ತಿಯನ್ನು ವಶಪಡಿಸಿಕೊಂಡವು.. ಏತನ್ಮಧ್ಯೆ, ಜಪಾನ್ ಸರ್ಕಾರವು 1965ರ ಒಪ್ಪಂದದೊಂದಿಗೆ ಉಭಯ ದೇಶಗಳ ನಡುವಿನ ಸಂಬಂಧವನ್ನು ತಿಳಿಗೊಳಿಸಿತು.
ವ್ಯಾಪಾರ ಘರ್ಷಣೆ ಆರ್ಥಿಕ ಕ್ಷೇತ್ರವನ್ನು ಮೀರಿ ಸುತ್ತುವರೆದಿದೆ ಮತ್ತು ಪೂರ್ವ ಏಷ್ಯಾದ ಈ ಎರಡು ಸಾಂಪ್ರದಾಯಿಕ ಯುಎಸ್ ಮಿತ್ರರಾಷ್ಟ್ರಗಳ ನಡುವಿನ ಭದ್ರತೆಗೆ ಸಂಬಂಧಿಸಿದ ವಿಷಯಗಳ ಮೇಲೆ ಪರಿಣಾಮ ಬೀರಿದೆ. ದಕ್ಷಿಣ ಕೊರಿಯಾ ಜಪಾನ್‌ನೊಂದಿಗಿನ ಮಿಲಿಟರಿ ಮಾಹಿತಿ ಒಪ್ಪಂದದ ಭದ್ರತೆಯನ್ನು ಸ್ಥಗಿತಗೊಳಿಸಿದೆ. ಟೋಕಿಯೊದೊಂದಿಗೆ ಗುಪ್ತಚರತೆಯನ್ನು ಹಂಚಿಕೊಳ್ಳಲು ಸಿಯೋಲ್ ಕಷ್ಟಪಡುತ್ತಿರುವುದೇ ಇದಕ್ಕೆ ಕಾರಣ, ಸಿಯೋಲ್ ಸೂಕ್ಷ್ಮ ವಸ್ತುಗಳನ್ನು ನಿರ್ವಹಿಸುವ ಬಗ್ಗೆ ಅನುಮಾನ ಸೃಷ್ಟಿಯಾಗಿದೆ. ಎರಡು ಯುಎಸ್ ಮಿತ್ರರಾಷ್ಟ್ರಗಳ ನಡುವೆ ವೇಗವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮತ್ತು ಉತ್ತರ ಕೊರಿಯಾದ ಪರಮಾಣು ಬೆದರಿಕೆಯನ್ನು ಉತ್ತಮವಾಗಿ ನಿಭಾಯಿಸಲು ಭದ್ರತಾ ಸಹಕಾರವನ್ನು ಹೆಚ್ಚಿಸಲು ಈ ಒಪ್ಪಂದವನ್ನು ಉದ್ದೇಶಿಸಲಾಗಿದೆ. ಈ ಒಪ್ಪಂದದ ಮೊದಲು, ಜಪಾನ್ ಮತ್ತು ದಕ್ಷಿಣ ಕೊರಿಯಾ ಯುನೈಟೆಡ್ ಸ್ಟೇಟ್ಸ್ ಮೂಲಕ ಗುಪ್ತಚರ ವಿನಿಮಯ ಮಾಡಿಕೊಂಡವು.
ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ ಮತ್ತು ಪ್ರಸ್ತುತ ಜಪಾನ್-ದಕ್ಷಿಣ ಕೊರಿಯಾ ವ್ಯಾಪಾರ ಉದ್ವಿಗ್ನತೆಯು ಯುಎಸ್-ಚೀನಾ ವ್ಯಾಪಾರ ಯುದ್ಧದ ಸಮಯದಲ್ಲಿ ಉತ್ತಮ ಬೆಳವಣಿಗೆಯೇನಲ್ಲ. ನಂಬಿಕೆ-ಕೊರತೆಯನ್ನು ಪರಿಹರಿಸಲು ಮುಂದಾಗಬೇಕಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಎರಡೂ ಭಾರತದ ಪ್ರಮುಖ ಕಾರ್ಯತಂತ್ರದ ಪಾಲುದಾರರು ಮತ್ತು ಭಾರತದ ‘ಆಕ್ಟ್ ಈಸ್ಟ್’ ನೀತಿಯಲ್ಲಿ ಪ್ರಮುಖರು ಕೂಡ. ಮುಕ್ತ ವ್ಯಾಪಾರ ಮತ್ತು ಮುಕ್ತ ಮಾರುಕಟ್ಟೆಗಳ ಅನ್ವೇಷಣೆಯಲ್ಲಿ ವ್ಯಾಪಾರ ಉದ್ವಿಗ್ನತೆಯ ಕಡಿಮೆಗೊಳಿಸುವುದು ಅತಿ ಮುಖ್ಯವಾಗಿದೆ.
ಲೇಖನ : ಡಾ. ಟಿಟ್ಲಿ ಬಸು, ಪೂರ್ವ ಮತ್ತು ಆಗ್ನೇಯ ಏಷ್ಯಾಗಳ ವಿಶ್ಲೇಷಕರು
Comments
Post a Comment