ಜಮ್ಮು ಕಾಶ್ಮೀರ ಮತ್ತು ಲಡಾಖ್ ಅಭಿವೃದ್ಧಿಗೆ ಮೋದಿ ಮಾರ್ಗಸೂಚಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಹಿಂದಿನಕಾರಣಗಳನ್ನು ವಿವರವಾಗಿ ತಿಳಿಸಿದ್ದಾರೆ. ಇದು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ಈ ವಾರ ಭಾರತೀಯ ಸಂಸತ್ತಿನಉಭಯ ಸದನಗಳು 370ನೇ ವಿಧಿಯನ್ನು ರದ್ದುಗೊಳಿಸಲು ಮತ ಚಲಾಯಿಸಿದವು. ಜಮ್ಮು ಕಾಶ್ಮೀರ ಮತ್ತು ಲಡಾಖ್ ಈಗ ಎರಡು ಹೊಸ ಕೇಂದ್ರಾಡಳಿತಪ್ರದೇಶಗಳಾಗಿ ಬದಲಾಗಿವೆ.

ದಶಕಗಳ ಉಗ್ರಗಾಮಿತ್ವ, ಪ್ರತ್ಯೇಕತಾವಾದ, ರಾಜವಂಶದ ರಾಜಕೀಯ ಮತ್ತು ಭ್ರಷ್ಟಾಚಾರವು ಕೇಂದ್ರ ಸರ್ಕಾರದ ತೀರ್ಮಾನದಿಂದ ಹಾನಿಗೊಳಗಾಗಿದೆ ಎಂದುಭಾರತದ ಪ್ರಧಾನಿ ಹೇಳಿದ್ದಾರೆ. "370 ನೇ ವಿಧಿಯಿಂದ ಶಾಪ ವಿಮೋಚಣೆಯಾಗಿದೆ. ಇದು ವಾಸ್ತವ " ಎಂದು ಮೋದಿ ಹೇಳಿದರು. ಗಡಿಯಲ್ಲಿದ್ದ ದುಷ್ಕರ್ಮಿಗಳು ಭಾರತವನ್ನು ಗುರಿಯಾಗಿಸಲು ಮತ್ತು ‘ಭೂಮಿಯ ಮೇಲಿನ ಸ್ವರ್ಗ’ದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ವಿಧಿಯನ್ನು ಬಳಸಿಕೊಂಡಿದ್ದರು. ಕಳೆದ ಮೂರುದಶಕಗಳಲ್ಲಿ 42,000 ಕ್ಕೂ ಹೆಚ್ಚು ಭಾರತೀಯರ ಸಾವಿಗೆ ಪಾಕಿಸ್ತಾನವೇ ಕಾರಣ. 370 ನೇ ವಿಧಿ ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ ಕಾನೂನುಗಳನ್ನುಪರಿಣಾಮಕಾರಿಯಾಗಿ ಅನ್ವಯಿಸಲು ಅನುಮತಿಸಲಿಲ್ಲ. ಸಮಾಜದ ಯುವಕರು, ಮಹಿಳೆಯರು ಮತ್ತು ವಂಚಿತ ವರ್ಗಗಳು ಹಿಂದಿನ ರಾಜ್ಯದಲ್ಲಿ ಅತಿ ಹೆಚ್ಚುಸೋತವರು. ಹಿಂದಿನ ರಾಜ್ಯದ ಯುವಕರು ಅವಕಾಶಗಳಿಂದ ವಂಚಿತರಾಗಿದ್ದರು ಮತ್ತು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಾಗಲಿಲ್ಲ. 370 ನೇವಿಧಿಯನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಡಾ.ಭೀಮರಾವ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಮತ್ತು ಶ್ರೀಅಟಲ್ ಬಿಹಾರಿ ವಾಜಪೇಯಿ ಅವರ ಕನಸುಗಳು ಶೀಘ್ರದಲ್ಲೇ ನನಸಾಗಲಿವೆ ಎಂದು ಪ್ರಧಾನಿ ತಿಳಿಸಿದರು. ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಭಾರತದಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಭವಿಸುವ ಎಲ್ಲಾ ಸವಲತ್ತುಗಳು ಮತ್ತು ಪ್ರಯೋಜನಗಳನ್ನು ಪಡೆಯಲಿವೆ.

ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಯ ಮಾರ್ಗಸೂಚಿಯನ್ನು ಪ್ರಧಾನಿ ವಿವರಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯಬೆಳವಣಿಗೆಗೆ 370 ನೇ ವಿಧಿ ಕಾರಣವಾಗಿದೆ ಎಂದು ಹೇಳಿದರು. 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದರೊಂದಿಗೆ, ಎರಡು ಹೊಸ ಕೇಂದ್ರಾಡಳಿತಪ್ರದೇಶಗಳು ಹೊಸ ಯುಗದ ಉದಯವನ್ನು ನೋಡಲಿವೆ ಎಂದು ಅವರು ಹೇಳಿದರು. ಉತ್ತಮ ಮತ್ತು ಪಾರದರ್ಶಕ ಆಡಳಿತವು ಎರಡೂ ಈ ಪ್ರದೇಶಗಳಆಡಳಿತದ ವಿಶಿಷ್ಟ ಲಕ್ಷಣವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಎರಡು ಕೇಂದ್ರಾಡಳಿತ ಪ್ರದೇಶಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೊಸ ಕ್ರಮಗಳನ್ನು ಪ್ರಧಾನಿ ಘೋಷಿಸಿದರು. ರಾಜ್ಯದ 1.5 ಕೋಟಿ ಜನರು ಶೀಘ್ರದಲ್ಲೇಅಭಿವೃದ್ಧಿಯ ಫಲವನ್ನು ನೋಡಲಿದ್ದಾರೆ ಎಂದರು. ಭಾರತ ಸರ್ಕಾರವು ಎಲ್ಲ ಸಮಯದಲ್ಲೂ ಅವರೊಂದಿಗೆ ಇರುತ್ತದೆ ಎಂದರು. ಒಂದು ಕಾಲದಲ್ಲಿ ಕಾಶ್ಮೀರವನ್ನುಭಾರತದ ಚಲನಚಿತ್ರ ಶೂಟಿಂಗ್ ಕೇಂದ್ರ ಎಂದು ಕರೆಯಲಾಗುತ್ತಿತ್ತು, ದಶಕಗಳಿಂದ, ಭಾರತೀಯ ಚಲನಚಿತ್ರೋದ್ಯಮವು ಕಾಶ್ಮೀರದ ರಮಣೀಯ ಸ್ಥಳಗಳಲ್ಲಿಚಲನಚಿತ್ರಗಳನ್ನು ಚಿತ್ರೀಕರಿಸಲು ಸಾಧ್ಯವಾಗಲಿಲ್ಲ. ಕಾಶ್ಮೀರದ ಚಿತ್ರೀಕರಣಕ್ಕೆ ಚಿತ್ರೋದ್ಯಮವು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು, ಇದರಿಂದಾಗಿಕಾಶ್ಮೀರದ ಅಲೌಕಿಕ ಸೌಂದರ್ಯವನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನರು ಆನಂದಿಸಬಹುದು.

ಜಮ್ಮು ಮತ್ತು ಕಾಶ್ಮೀರದ ಹೊಸ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಿಸಲು ಯುವಕರು ಮತ್ತು ಮಹಿಳೆಯರು ಮುಂದೆ ಬರಬೇಕೆಂದು ಪ್ರಧಾನಿ ಪ್ರಚೋದಿಸಿದರು.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಇದರಿಂದ ಅವರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲುದಾರರಾಗಬಹುದು. ಶೀಘ್ರದಲ್ಲೇಕಾಶ್ಮೀರದ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. ‘ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಒಂದು ಭಾಗ’ ಎಂದು ಹೇಳಿದಅವರು, ರಾಷ್ಟ್ರೀಯ ಹಿತಾಸಕ್ತಿಯನ್ನು ಸರ್ವೋಚ್ಚವಾಗಿಡಲು ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ನಿರ್ದೇಶನ ನೀಡುವಲ್ಲಿ ಕೈಜೋಡಿಸುವಂತೆ ಎಲ್ಲರಿಗೂ ಕರೆನೀಡಿದರು.

ಲಡಾಖ್ ಜನರಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ದೊರೆತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಲಡಾಕ್‌ನಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಕಾಳಜಿವಹಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಎರಡು ಹೊಸ ಯುಟಿಎಸ್ ರಸ್ತೆಗಳು, ವಿಮಾನ ನಿಲ್ದಾಣಗಳ ಆಧುನೀಕರಣ, ರೈಲ್ವೆ ಮಾರ್ಗಗಳು,ಆಸ್ಪತ್ರೆಗಳು, ಶಾಲೆಗಳು ಮುಂತಾದ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯಾಗಲಿದೆ ಎಂದು ಮೋದಿ ಭರವಸೆ ನೀಡಿದರು. ಪ್ರವಾಸೋದ್ಯಮ ಮತ್ತು ಇತರಪೂರಕ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ನಿರ್ಮಾಣದಿಂದಾಗಿ ಉದ್ಯೋಗಾವಕಾಶಗಳು ಉತ್ತೇಜನವನ್ನು ಪಡೆಯುತ್ತವೆ ಎಂದರು. ಜಮ್ಮು ಮತ್ತು ಕಾಶ್ಮೀರಮತ್ತು ಲಡಾಖ್ ಎರಡೂ ಅಭಿವೃದ್ಧಿ ಹೊಂದಿದ ಕೇಂದ್ರಾಡಳಿತ ಪ್ರದೇಶಗಳಾಗುವ ಸಮಯ ದೂರವಾಗಿಲ್ಲ.

ತಮ್ಮ 38 ನಿಮಿಷಗಳ ಭಾಷಣದಲ್ಲಿ, ಭಾರತೀಯ ಪ್ರಧಾನಿ ಅಭಿವೃದ್ಧಿಯ ಬಗ್ಗೆ ಮಾತ್ರ ಮಾತನಾಡಿದರು ಮತ್ತು ಪಾಕಿಸ್ತಾನದ ಕುತಂತ್ರಗಳಿಗೆ ಗಮನ ಕೊಡಲಿಲ್ಲ.ಭಾರತದ ಪಶ್ಚಿಮ ಭಾಗದ ನೆರೆಯವರು ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಕರಿಸಲು ಕೊಳಕು ತಂತ್ರಗಳನ್ನು ಮಾಡುತ್ತಿದ್ದಾರೆ. ಆದರೆ ಈ ಬಾರಿ ಜಾಗತಿಕಸಮುದಾಯವು ಇಸ್ಲಾಮಾಬಾದ್‌ನ ಕಾರ್ಯಗಳ ಬಗ್ಗೆ ಬೇಸರಗೊಂಡಿದೆ ಮತ್ತು ಪ್ರಭಾವಿತರಾಗಿಲ್ಲ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ಅಭಿವೃದ್ಧಿ ಕಾರ್ಯಸೂಚಿಯನ್ನು ಕಲಿಯುವುದು ಉತ್ತಮ. ಇದರಿಂದ ಪಾಕಿಸ್ತಾನದ ಜನರು ಖಂಡಿತವಾಗಿಯೂಪ್ರಯೋಜನ ಪಡೆಯಬಹುದು.

ಲೇಖನ : ಪದಮ್ ಸಿಂಗ್, ಆಕಾಶವಾಣಿ ವಿಶ್ಲೇಷಕರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ