ಭಾರತ‑ರಷ್ಯಾ ವ್ಯೂಹಾತ್ಮಕ ಪಾಲುದಾರಿಕೆ

ಭಾರತ ಮತ್ತು ರಷ್ಯಾ ನಡುವಿನ 20 ನೇ ವಾರ್ಷಿಕ ಶೃಂಗಸಭೆಯು ಜಾಗತಿಕ ಬದಲಾವಣೆಯ ಸಂದರ್ಭದಲ್ಲಿ ‘ವಿಶೇಷ, ಕಾರ್ಯತಂತ್ರದ ಸಹಭಾಗಿತ್ವಕ್ಕೆ ಸಾಕ್ಷಿಯಾಗಿದೆ.

ದೂರದ ಪೂರ್ವದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 5 ನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಭೇಟಿಯಲ್ಲಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವಾರ್ಷಿಕ ಶೃಂಗಸಭೆಯನ್ನು ನಡೆಸಿದರು.

ಆರ್ಥಿಕ ವೇದಿಕೆಯಲ್ಲಿ ಭಾರತವು ತನ್ನ ‘ಆಕ್ಟ್ ಫಾರ್ ಈಸ್ಟ್’ ನೀತಿಯನ್ನು ಅನಾವರಣಗೊಳಿಸಿತು. ಅದು ತನ್ನ ಆರ್ಥಿಕ ರಾಜತಾಂತ್ರಿಕತೆಯ ಮುಂದುವರಿಕೆಯಾಗಿ ಕಂಡುಬರುತ್ತದೆ. ಸಂಪನ್ಮೂಲ-ಸಮೃದ್ಧ ಪ್ರದೇಶದ ಅಭಿವೃದ್ಧಿಗೆ ಪ್ರಧಾನ ಮಂತ್ರಿ 1 ಬಿಲಿಯನ್ ಸಾಲವನ್ನು ಘೋಷಿಸಿದರು. ಈ ನೀತಿಯು ನವದೆಹಲಿಗೆ ಈ ಪ್ರದೇಶದೊಂದಿಗೆ ಹೆಚ್ಚು ಹೂಡಿಕೆ ಮಾಡಲು ಮತ್ತು ಸಹಕರಿಸಲು ಸಹಾಯ ಮಾಡುತ್ತದೆ. ಭಾರತ ವಜ್ರ, ಕಲ್ಲಿದ್ದಲು ಮತ್ತು ಚಿನ್ನದ ಗಣಿಗಾರಿಕೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿದೆ.

ಉಭಯ ದೇಶಗಳ ನಡುವಿನ ಸಂಬಂಧವನ್ನು ‘ಅನನ್ಯ, ವಿಶ್ವಾಸಾರ್ಹ ಮತ್ತು ಪರಸ್ಪರ ಪ್ರಯೋಜನಕಾರಿ, ಸಹಕಾರದ ಎಲ್ಲ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ’ ಎಂದು ಪ್ರಶಂಸಿಸಲಾಗಿದೆ. ಇದಲ್ಲದೆ, ‘ಇದೇ ರೀತಿಯ ನಾಗರಿಕ ಮೌಲ್ಯಗಳು, ಸಮಯೋಚಿತ ಸ್ನೇಹ, ಪರಸ್ಪರ ತಿಳುವಳಿಕೆ, ನಂಬಿಕೆ, ಸಾಮಾನ್ಯ ಹಿತಾಸಕ್ತಿಗಳು ಮತ್ತು ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯ ಮೂಲಭೂತ ಸಮಸ್ಯೆಗಳ ಪರಿಹರಿಸುವಿಕೆಗೆ ನೆರವಾಗಿದೆ. ಭಾರತ ಮತ್ತು ರಷ್ಯಾ ಜಾಗತಿಕ ಮತ್ತು ಪ್ರಾದೇಶಿಕ ಮಟ್ಟಗಳಲ್ಲಿ ಮತ್ತಷ್ಟು ಹತ್ತಿರವಾಗಲು ಸಹಾಯ ಮಾಡಿದೆ. ಉಭಯ ನಾಯಕರ ನಡುವಿನ ಚರ್ಚೆಯ ಸಮಯದಲ್ಲಿ ಶಾಂಘೈ ಸಹಕಾರ ಮಂಡಳಿಯು ಪ್ರಮುಖ ಗಮನವನ್ನು ಸೆಳೆಯಿತು.

ವಾರ್ಷಿಕ ಶೃಂಗಸಭೆಯಲ್ಲಿ, ಕೆಲವು ಅತ್ಯುತ್ತಮ ರಾಜ್ಯ ಕರಕುಶಲತೆಯನ್ನು ಉಭಯ ನಾಯಕರು ಪ್ರದರ್ಶಿಸಿದರು. ಎರಡು ದೇಶಗಳು ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ದೇಶದ ಆಂತರಿಕ ಸಮಸ್ಯೆಯೊಂದರ ಬಗ್ಗೆ ನವದೆಹಲಿಯ ನೆರೆ ರಾಷ್ಟ್ರವೊಂದು ಸೃಷ್ಟಿಸಿದ ಗದ್ದಲದ ಬಗ್ಗಯೂ ಚರ್ಚೆಯಾಯಿತು. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ 370 ನೇ ವಿಧಿಯನ್ನು ರದ್ದುಪಡಿಸುವುದು ಭಾರತದ ಆಂತರಿಕ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಭಾರತಕ್ಕೆ ರಷ್ಯಾದ ಬೆಂಬಲ ಸ್ಪಷ್ಟವಾಗಿದೆ.

20 ನೇ ವಾರ್ಷಿಕ ಶೃಂಗಸಭೆಯಲ್ಲಿ, ಉಭಯ ನಾಯಕರು ವ್ಯಾಪಾರ, ರಕ್ಷಣಾ, ಬಾಹ್ಯಾಕಾಶ, ಇಂಧನ ಮತ್ತು ಕಡಲ ಸಂಪರ್ಕ ಕ್ಷೇತ್ರಗಳಂತಹ ದ್ವಿಪಕ್ಷೀಯ ಸಹಕಾರದ ಹೊಸ ದಿಗಂತವನ್ನು ಕಂಡುಕೊಳ್ಳುವತ್ತ ಗಮನಹರಿಸಿದರು.

ಆರ್ಥಿಕ ದೃಷ್ಟಿಯಿಂದ, ಅಧ್ಯಕ್ಷ ಪುಟಿನ್ ಅವರು 2018 ರಲ್ಲಿ 11 ಶತಕೋಟಿ ಬಿಲಿಯನ್ ಗೆ ತಲುಪಿದ ವಾರ್ಷಿಕ ವ್ಯಾಪಾರ ಪರಿಮಾಣದ ಶೇಕಡಾ 17 ರಷ್ಟು ಹೆಚ್ಚಳಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಆರ್ಥಿಕತೆಯ ಮತ್ತಷ್ಟು ಹೆಚ್ಚಳಕ್ಕೆ ಅಡಿಪಾಯವಾಗಿ ಉಭಯ ನಾಯಕರು ಬಲವಾದ, ಬಹುಮುಖಿ ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕೆ ಆದ್ಯತೆ ನೀಡಿದರು ಮತ್ತು ವ್ಯಾಪಾರ ತೊಡಗಿಸಿಕೊಳ್ಳುವಿಕೆಗಳ ಬಗ್ಗೆ ಬೆಳಕು ಚೆಲ್ಲಿದರು. "ಮೇಕ್ ಇನ್ ಇಂಡಿಯಾ" ಕಾರ್ಯಕ್ರಮದಲ್ಲಿ ರಷ್ಯಾ ಭಾಗವಹಿಸುವಿಕೆಯನ್ನು ವಿಸ್ತರಿಸುವ ಆಸಕ್ತಿ ಮತ್ತು ರಷ್ಯಾದಲ್ಲಿ ಹೂಡಿಕೆ ಯೋಜನೆಗಳಲ್ಲಿ ಭಾರತೀಯರ ಬಗ್ಗೆ ಚರ್ಚಿಸಲಾಯಿತು.

ಇಂಧನ ಕ್ಷೇತ್ರದಲ್ಲಿ, ಅಸ್ತಿತ್ವದಲ್ಲಿರುವ ಇಂಧನ ಸಹಕಾರಗಳನ್ನು ಶ್ಲಾಘಿಸುತ್ತಾ, ಭಾರತ ಮತ್ತು ರಷ್ಯಾ ಕಡಲಾಚೆಯ ಕ್ಷೇತ್ರಗಳು ಸೇರಿದಂತೆ ರಷ್ಯಾ ಮತ್ತು ಭಾರತದಲ್ಲಿ ಭೂವೈಜ್ಞಾನಿಕ ಪರಿಶೋಧನೆ ಮತ್ತು ತೈಲ, ಅನಿಲ ಕ್ಷೇತ್ರಗಳ ಜಂಟಿ ಅಭಿವೃದ್ಧಿಯಲ್ಲಿ ಸಹಕಾರವನ್ನು ರೂಪಿಸಲು ನಿರ್ಧರಿಸಲಾಗಿದೆ. ಆರ್ಕ್ಟಿಕ್‌ನ ಉತ್ತರ ಸಮುದ್ರ ಮಾರ್ಗದ ಮೂಲಕ ರಷ್ಯಾದಿಂದ ಭಾರತಕ್ಕೆ ದೀರ್ಘಾವಧಿಯ ಇಂಧನ ಪೂರೈಸಲು ಅವರು ಒಪ್ಪಿದರು. ಆರ್ಕ್ಟಿಕ್‌ನಲ್ಲಿ ರಷ್ಯಾದೊಂದಿಗೆ ಸಹಕರಿಸಲು ಭಾರತ ಉತ್ಸುಕವಾಗಿದೆ. 2019-24ರ ಅವಧಿಯಲ್ಲಿ ಹೈಡ್ರೋಕಾರ್ಬನ್‌ಗಳಲ್ಲಿ ಸಹಕಾರಕ್ಕಾಗಿ ಎರಡೂ ದೇಶಗಳು ಸಹಿ ಹಾಕಿದವು. ಮುಂದಿನ ಐದು ವರ್ಷಗಳಲ್ಲಿ ಇಂಧನ ಕ್ಷೇತ್ರವು ಹೊಸ ಎತ್ತರವನ್ನು ಮುಟ್ಟಲಿದೆ ಎಂದು ನಿರೀಕ್ಷಿಸಲಾಗಿದೆ. ಪರಮಾಣು ವಲಯದಲ್ಲಿ, ಮುಂದಿನ 20 ವರ್ಷಗಳಲ್ಲಿ ರಷ್ಯಾದಿಂದ ವಿನ್ಯಾಸಗೊಳಿಸಲಾದ ಇನ್ನೂ 12 ವಿದ್ಯುತ್ ಘಟಕಗಳನ್ನು ನಿರ್ಮಿಸಲಾಗುವುದು.

ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್‌ಎಸ್‌ಟಿಸಿ) ಬಗ್ಗೆಯೂ ಚರ್ಚಿಸಲಾಯಿತು. ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ವರ್ಕ್ ಫ್ಲೋಗೆ ಗಮನ ನೀಡಲಾಗಿದೆ. ಇದರಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಪರಿಚಯ ಮತ್ತು ಸಾರಿಗೆ ಪ್ರಕ್ರಿಯೆಯಲ್ಲಿ ಉಪಗ್ರಹ ಸಂಚಣ ಸೇರಿದೆ. ಚೆನ್ನೈ ಮತ್ತು ವ್ಲಾಡಿವೋಸ್ಟಾಕ್ ನಡುವೆ ಹೊಸ ಸಂಪರ್ಕ ಮಾರ್ಗವನ್ನು ಪರಿಚಯಿಸಲಾಯಿತು, ಇದು ಆರ್ಥಿಕ ಮತ್ತು ವ್ಯಾಪಾರ ಹೂಡಿಕೆಗಳಲ್ಲಿ ಭರವಸೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ರಕ್ಷಣಾ ಕ್ಷೇತ್ರದ ಪ್ರಮುಖ ಪ್ರಗತಿಯಲ್ಲಿ, ತಂತ್ರಜ್ಞಾನದ ವರ್ಗಾವಣೆ ಮತ್ತು ಜಂಟಿ ಉದ್ಯಮಗಳ ಸ್ಥಾಪನೆಯಡಿಯಲ್ಲಿ ಭಾರತವು ರಷ್ಯಾದ ಮಿಲಿಟರಿ ಉಪಕರಣಗಳಿಗೆ ಬಿಡಿಭಾಗಗಳು ಮತ್ತು ಘಟಕಗಳನ್ನು ತಯಾರಿಸಲು ಪ್ರಾರಂಭಿಸುತ್ತದೆ. ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲದ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಸಿದ್ಧಪಡಿಸಲು ಅವರು ಒಪ್ಪಿಕೊಂಡರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾನವಸಹಿತ ಕಾರ್ಯಾಚರಣೆಗೆ ಭಾರತೀಯ ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುವುದು ಎಂದು ಭಾರತ ಘೋಷಿಸಿತು.

ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ರಷ್ಯಾದಲ್ಲಿ ಸಾಂಸ್ಕೃತಿಕ ಮತ್ತು ಜನರ ಸಂಬಂಧಗಳ ಕುರಿತು ಸ್ಮರಣಾರ್ಥ ಅಂಚೆಚೀಟಿ ನೀಡಲಾಯಿತು.

ಒಟ್ಟಾರೆಯಾಗಿ, ವಾರ್ಷಿಕ ಶೃಂಗಸಭೆ ಮತ್ತು 5 ನೇ ಪೂರ್ವ ಆರ್ಥಿಕ ವೇದಿಕೆಯನ್ನು ಭಾರಿ ಯಶಸ್ಸಿನ ಸಭೆ ಎಂದು ಕರೆಯಬಹುದು, ಹೊಸ ‘ಆಕ್ಟ್ ಫಾರ್ ಈಸ್ಟ್’ ನೀತಿಯ ಪರಿಚಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿನ ಹೊಸ ಬೆಳವಣಿಗೆಗೆ ಇದು ವೇದಿಕೆಯಾಯಿತು.

ಲೇಖನ : ಡಾ. ಇಂದ್ರಾಣಿ ತಾಲೂಕ್ ದಾರ್, ರಷ್ಯಾ ಕುರಿತ ವಿಶ್ಲೇಷಕರು

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ