ಭಾರತ-ಅಮೆರಿಕ ಆರ್ಥಿಕ ದೂರದೃಷ್ಟಿ

ಭಾರತ-ಯುಎಸ್ ಕಾರ್ಯತಂತ್ರದ ವೇದಿಕೆಯ ಎರಡನೇ ಸಭೆ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಾಢವಾಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸಂಕಲ್ಪವನ್ನು ವಿವರಿಸಿದ್ದರು. ಭಾರತ-ಯುಎಸ್ ಕಾರ್ಯತಂತ್ರದ ವೇದಿಕೆ ನಿಯೋಗವು ತನ್ನ ಆರ್ಥಿಕತೆಯ ಗಾತ್ರವನ್ನು ದ್ವಿಗುಣಗೊಳಿಸುವ ಭಾರತದ ಸಂಕಲ್ಪದ ಬಗ್ಗೆ ತಮ್ಮ ನಂಬಿಕೆಯನ್ನು ದೃಢಪಡಿಸಿತು.

ಉನ್ನತ ಕಾರ್ಪೊರೇಟ್ ಸಿಇಒಗಳು ಮತ್ತು ರಾಜತಾಂತ್ರಿಕರನ್ನು ಒಳಗೊಂಡಿರುವ ವೇದಿಕೆಯು ಭಾರತದ ಮುಂದಿನ ಐದು ವರ್ಷಗಳು ವಿಶ್ವದ ಮುಂದಿನ 25 ವರ್ಷಗಳನ್ನು ವ್ಯಾಖ್ಯಾನಿಸುತ್ತದೆ ಎಂದು ಒಪ್ಪಿಕೊಂಡಿತು. ಭಾರತದ ಪ್ರಧಾನ ಮಂತ್ರಿಯನ್ನು ಕರೆದ ನಿಯೋಗವು ಪ್ರಧಾನಿ ಮೋದಿಯವರ ಉದ್ದೇಶಕ್ಕೆ ಸೂಕ್ತವಾಗಿ ಅನುಮೋದನೆ ನೀಡಿತು. ವೇದಿಕೆಯ ನೇತೃತ್ವವನ್ನು ಜಾನ್ ಚೇಂಬರ್ಸ್ ವಹಿಸಿದ್ದಾರೆ. ನಿಯೋಗವು ಅಮೆರಿಕಾದ ಶೀತಲ ಸಮರದ ಯುಗದ ರಾಜತಾಂತ್ರಿಕ ಹೆನ್ರಿ ಕಿಸ್ಸಿಂಜರ್, ಮಾಜಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಕೊಂಡೋಲೀಜಾ ರೈಸ್ ಮತ್ತು ಉನ್ನತ ಶ್ರೇಣಿಯ ಕಾರ್ಪೊರೇಟ್‌ಗಳ 300 ಕ್ಕೂ ಹೆಚ್ಚು ಸಿಇಒಗಳನ್ನು ಒಳಗೊಂಡಿತ್ತು.

ಕಳೆದ ಕೆಲವು ದಶಕಗಳಲ್ಲಿ ಭಾರತ ಮತ್ತು ಅಮೆರಿಕ ಸಂಬಂಧಗಳು ಗುಣಾತ್ಮಕವಾಗಿ ವಿಕಸನಗೊಂಡಿವೆ. ಇದನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅನುಮೋದಿಸಿದರು. ದ್ವಿಪಕ್ಷೀಯ ಸಂಬಂಧಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಉತ್ತಮವಾಗಿವೆ ಎಂದು ಅವರು ಹೇಳಿದರು. ತಜ್ಞರು 2025ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 8238 ಶತಕೋಟಿಗೆ ಏರಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಸಮಯದಲ್ಲಿ, ವ್ಯಾಪಾರದ ವಿಷಯಗಳು ಅಮೆರಿಕಾದ ರಾಜತಾಂತ್ರಿಕ ಕ್ಷೇಥ್ರದಲ್ಲಿ ಕೇಂದ್ರೀಕರಣವನ್ನು ಪಡೆದಿವೆ ಎಂದು ಭಾರತಕ್ಕೆ ಚೆನ್ನಾಗಿ ತಿಳಿದಿದೆ. ಪರಸ್ಪರ ಒಪ್ಪಿಗೆಯನ್ನು ಪಡೆಯಲು, ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೊಂದಿಸಲು ಭಾರತವು ಕ್ರಮಗಳನ್ನು ತೆಗೆದುಕೊಂಡಿದೆ. ಗೋಯಲ್ ಅವರು ಯುಎಸ್ ಜೊತೆಗಿನ ಹೊಸ ವ್ಯಾಪಾರ ಒಪ್ಪಂದದ ಬಗ್ಗೆ ವೇದಿಕೆಗೆ ತಿಳಿಸಿದರು.

‘ವ್ಯಾಪಾರ ಮಾಡುವ ಸುಲಭತೆಯನ್ನು’ ಮತ್ತಷ್ಟು ಸುಧಾರಿಸಲು ಭಾರತ ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಅವರು ಪರಿಚಯಿಸಿದರು. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಭಾರತವು ಕಾರ್ಪೊರೇಟ್ ತೆರಿಗೆಯನ್ನು ಸಮಯೋಚಿತವಾಗಿ ಕಡಿತಗೊಳಿಸುತ್ತದೆ. ಅಲ್ಲದೆ, ಉದ್ಯಮಿಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಿ ಸುದೀರ್ಘವಾಗಿ ಮಾತನಾಡಿದರು. ವಾಸ್ತವವಾಗಿ, ಭಾರತವು ಇತ್ತೀಚಿನ ಕೆಲವು ವರ್ಷಗಳಲ್ಲಿ ಶಾಲೆಗಳಲ್ಲಿನ ‘ಅಟಲ್’ ಟಿಂಕಿಂಗ್ ಪ್ರಯೋಗಾಲಯಗಳ ಮೂಲಕ ಹೊಸತನವನ್ನು ಸಾಂಸ್ಥಿಕಗೊಳಿಸಲು ಗಂಭೀರ ಪ್ರಯತ್ನಗಳನ್ನು ಮಾಡಿದೆ. ಭಾರತದ ಶಕ್ತಿ 3D ಗಳು - ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ‘ದಿಮಾಗ್’ (ಮೆದುಳು) ನಲ್ಲಿದೆ ಎಂದು ಪ್ರಧಾನಿ ಮೋದಿ ವೇದಿಕೆಗೆ ತಿಳಿಸಿದರು. ಯುಎಸ್ ಗೆ ಇತರಿರಿಗಿಂತ ’ಭಾರತೀಯರ ಮೆದುಳಿನ ಶಕ್ತಿಯ ಬಗ್ಗೆ ಚೆನ್ನಾಗಿ ತಿಳಿದಿದೆ. ಅಮೆರಿಕದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಭಾರತೀಯ ಪ್ರತಿಭೆಗಳಿಗೆ ಸಿಲಿಕಾನ್ ವ್ಯಾಲಿ ಜೀವಂತ ಸಾಕ್ಷಿಯಾಗಿದೆ.

ಭಾರತ-ಯುಎಸ್ ವ್ಯವಹಾರ ಸಂಬಂಧಗಳು ಇತ್ತೀಚಿನ ದಶಕಗಳಲ್ಲಿ ಹೆಚ್ಚಿದೆ. ಶೇ 100 ರಷ್ಟು ವಿದೇಶಿ ನೇರ ಹೂಡಿಕೆಯೊಂದಿಗೆ ಭಾರತವು ಗುತ್ತಿಗೆ ಉತ್ಪಾದನೆಗೆ ಸೂಕ್ತವಾಗಿ ದೇಶವನ್ನು ತೆರೆಯಿಸಿದೆ. ಅಮೆರಿಕದ ದೊಡ್ಡ ಉತ್ಪಾದನಾ ದೈತ್ಯರು ತಮ್ಮ ಚೀನಾ ನೆಲೆಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂಬುದು ನಿಜ. ಪೂರ್ವ ಏಷ್ಯಾದ ಕೆಲವು ದೇಶಗಳು ಇದರ ಲಾಭ ಪಡೆಯಲು ಪ್ರಯತ್ನಿಸಿವೆ. ಆದರೂ, ಭಾರತದ ಸ್ವತ್ತುಗಳು ಮತ್ತು ವ್ಯಾಪಾರ ಮನೋಭಾವವನ್ನು ಸುಧಾರಿಸುವುದರೊಂದಿಗೆ ಸದಾ ಬೆಳೆಯುತ್ತಿರುವ ನುರಿತ ಮಾನವಶಕ್ತಿ ದೇಶವನ್ನು ಆಕರ್ಷಕ ಹೂಡಿಕೆ ತಾಣವಾಗಿ ಇರಿಸಿದೆ.

ವ್ಯವಹಾರವು ಇನ್ನು ಮುಂದೆ ದ್ವಿಪಕ್ಷೀಯ ಸಂಬಂಧಗಳ ತಳಪಾಯವಾಗಲಿದೆ ಎಂದು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ವೇದಿಕೆಗೆ ತಿಳಿಸಿದರು. ಮಾನವ ಸಂಪನ್ಮೂಲಗಳನ್ನು ಗುಣಾತ್ಮಕವಾಗಿ ಪರಿವರ್ತಿಸುವ ಭಾರತೀಯ ಸರ್ಕಾರದ ಒತ್ತಡವು ಇಂಡೋ-ಯುಎಸ್ ವ್ಯವಹಾರ ಸಂಬಂಧಗಳಲ್ಲಿ ಒಂದು ಆಸ್ತಿಯಾಗಿದೆ ಎಂದು ಡಾ.ಜೈಶಂಕರ್ ಸೂಕ್ತವಾಗಿ ಗಮನಿಸಿದರು.

ಪ್ರಧಾನ ಮಂತ್ರಿ ತಮ್ಮ ಯುಎಸ್ ಭೇಟಿಯ ಸಮಯದಲ್ಲಿ ಹೂಸ್ಟನ್ನಲ್ಲಿರುವ ಯುಎಸ್ ನ ಉನ್ನತ ಇಂಧನ ಕಂಪನಿಗಳ ಸಿಇಒಗಳನ್ನೂ ಭೇಟಿ ಮಾಡಿದ್ದರು. ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದ್ವಿಪಕ್ಷೀಯ ಸಂಬಂಧಗಳಲ್ಲಿನ ಇಂಧನ ಶಕ್ತಿಯ ಆಯಾಮವನ್ನು ಪರಿಚಯಿಸಿದರು. ಯುಎಸ್ ಜೊತೆ ಭಾರತದ ಇಂಧನ ವ್ಯಾಪಾರವು ಈ ವರ್ಷ 10 ಬಿಲಿಯನ್ ದಾಟಲಿದೆ ಎಂದು ಪ್ರಧಾನ್ ವೇದಿಕೆಗೆ ತಿಳಿಸಿದರು. ಏಷ್ಯಾದ ಭೂ-ರಾಜಕೀಯದಲ್ಲಿನ ಭವಿಷ್ಯದ ಅನಿಶ್ಚಿತತೆಗಳಿಂದ ಭಾರತ ತನ್ನ ತೈಲ ಆಮದನ್ನು ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳುವುದು ಭಾರತೀಯ ಸರ್ಕಾರದ ಆದ್ಯತೆಯಾಗಿದೆ. ಭಾರತವು ಈ ಹಿಂದೆ ಯುಎಸ್ ನಿಂದ ಶೇಲ್ ಗ್ಯಾಸ್ ಸಂಪನ್ಮೂಲಗಳನ್ನು ಟ್ಯಾಪ್ ಮಾಡಿತ್ತು.

ಟ್ರಂಪ್ ಆಡಳಿತದ ಹಿರಿಯ ಸದಸ್ಯರ ಭಾರತಕ್ಕೆ ನಿಗದಿತ ಭೇಟಿಗಿಂತ ಮುಂಚಿತವಾಗಿ ಭಾರತದ ಉನ್ನತ ರಾಜಕೀಯ ನಾಯಕತ್ವದೊಂದಿಗೆ ವೇದಿಕೆ ಸಭೆ ನಡೆಸಿದೆ. ಪರಸ್ಪರ ಲಾಭದಾಯಕ ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಅಭಿವೃದ್ಧಿ ಹೊಂದುತ್ತಿರುವ ದ್ವಿಪಕ್ಷೀಯ ಸಂಬಂಧಗಳಿಗೆ ನೆರವಾಗಲಿದೆ.



ಲೇಖನ : ಮನೀಶ್‌ ಆನಂದ್‌, ಹಿರಿಯ ಪ್ರತಿನಿಧಿ, ದ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ