ಬ್ರೆಸಿಲಿಯಾದಲ್ಲಿ ನಡೆದ 11ನೇ ಬ್ರಿಕ್ಸ್ ಶೃಂಗಸಭೆ
ಬ್ರೆಸಿಲಿಯಾದಲ್ಲಿ ನಡೆದ 11ನೇ ಬ್ರಿಕ್ಸ್ ಶೃಂಗಸಭೆಯ ಯಶಸ್ವಿ ಸಮಾರೋಪವು ತಂಡವಾಗಿರುವುದರ ಪ್ರಖರತೆ ಮತ್ತು ನಿರಂತರವಾಗಿ ಬೆಳೆಯುತ್ತಿರುವ ವಾಸ್ತವದ ಮಾನದಂಡವಾಗಿದೆ. ಶೃಂಗಸಭೆ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಪ್ರಕಾರ ಬ್ರಿಕ್ಸ್ ದೇಶಗಳು "ಕಳೆದ ಒಂದು ದಶಕದಲ್ಲಿ ಜಾಗತಿಕ ಬೆಳವಣಿಗೆಯ ಪ್ರಮುಖ ಭಾಗಿದಾರಿ ದೇಶಗಳು" ಎಂಬುದು ಗಮನಾರ್ಹ ಅಂಶವಾಗಿದೆ. ಬ್ರಿಕ್ಸ್ ದೇಶಗಳ ಆಗಮನ ಹೊಸ ಉದಯೋನ್ಮುಖ ಜಾಗತಿಕ ಆರ್ಥಿಕ ಕ್ರಮದ ಬದಲಾವಣೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಬ್ರಿಕ್ಸ್ ತಂಡವೆಂಬುದು ಕೇವಲ ಪಶ್ಚಿಮದ ಜಾಗತಿಕ ಪ್ರಾಬಲ್ಯವನ್ನು ಪ್ರಶ್ನೆ ಮಾಡಿಲ್ಲ. ಅದು ಹೊಸ ಆಲೋಚನಾ ಕ್ರಮ ಮತ್ತು ಹೊಸ ವಿಶ್ವದ ದೃಷ್ಟಿಕೋನವನ್ನು ರೂಪಿಸಲು ಪ್ರಯತ್ನಿಸುತ್ತಿದೆ. 11ನೇ ಬ್ರಿಕ್ಸ್ ಶೃಂಗಸಭೆಯ ದೇಹವಾಕ್ಯವೇ ಅಥವಾ ಅಜೆಂಡಾವೇ "ನವೀನ ಭವಿಷ್ಯಕ್ಕಾಗಿ ಆರ್ಥಿಕ ಬೆಳವಣಿಗೆ" ಎಂಬುದಾಗಿದೆ. ಈ ಅನ್ವೇಷಣೆ ಎಂಬುದು ನಿಜಕ್ಕೂ ಭವಿಷ್ಯಕ್ಕೆ ಬರೆದ ಮುನ್ನುಡಿಯಾಗಿದೆ. ಅನ್ವೇಷಣೆಯ ಇತಿಹಾಸ ಹೊಸ ಯೋಜನೆಗಳ ವಿಚಾರವಾಗಿದೆ. ನಾವು ಹೊಸತನವನ್ನು ಅನ್ವೇಷಣೆ ಮಾಡದಿದ್ದರೆ ಅಪ್ರಸ್ತುತವಾಗುವ ಅಪಾಯವಿದೆ.
ನಿರೀಕ್ಷೆಯಂತೆ ಬ್ರಿಕ್ಸ್ ನಾಯಕರು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯು ಪಯುಎನ್ ಹಾಗೂ ಡಬ್ಲ್ಯುಟಿಒ ಮತ್ತು ಐಎಂಎಫ್ ಸೇರಿದಂತೆ ಇತರೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಸುಧಾರಿಸುವ ತುರ್ತು ಅಗತ್ಯ ಹೆಚ್ಚಾಗಿದೆ ಎಂಬುದನ್ನು ಒತ್ತಿ ಹೇಳಿದೆ. ಬಹುಪಕ್ಷೀಯತೆಯ ಮೇಲೆ ವಿವಿಧ ಅಂತರರಾಷ್ಟ್ರೀಯ ಸಮುದಾಯಗಳಿಂದ ಆಕ್ರಮಣ ಆಗುತ್ತಿರುವ ಸಂದರ್ಭದಲ್ಲಿ ಬ್ರಿಕ್ಸ್ ತಂಡ ಅಥವಾ ದೇಶಗಳು ಬಹುಪಕ್ಷೀಯತೆಗೆ ಒಲವು ತೋರಿದ ಬದ್ಧತೆ ಅಸಾಧಾರಣವಾದುದಾಗಿದೆ. ‘ಬ್ರೆಟನ್ ವುಡ್ಸ್’ ಕಲ್ಪನೆಯಡಿಯಲ್ಲಿ ಬಹುಪಕ್ಷೀಯತೆಯು ಎಂದಿಗೂ ತನ್ನ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಬಹುಪಕ್ಷೀಯತೆಯ ಮೇಲೆ ಆಕ್ರಮಣ ಮಾಡುತ್ತಿರುವವರು ಅದೇ ಸಂಸ್ಥೆಗಳನ್ನು ಹುಟ್ಟುಹಾಕಿದವರು ಎಂಬುದು ನಿಜಕ್ಕೂ ದೊಡ್ಡ ವಿಪರ್ಯಾಸ. ಇದು ಬಹಳ ಹಿಂದಿನ ವಿಷಯವೇನಲ್ಲ. ಮಾರುಕಟ್ಟೆಯ ವೈಭವಕ್ಕಾಗಿ ಗ್ಲೋಬಲ್ ಸೌತ್ ಜಾಗತೀಕರಣವನ್ನು ಹೆಮ್ಲಾಕ್ ಕುಡಿಯಲು ಪ್ರೇರೆಪಿಸಿತು. ಅಂದು ಒಂದು ಸಣ್ಣ ಮಜಲಾಗಿ ಜಾಗತೀಕರಣ ಪರಿಚಯವಾಗಿತ್ತು. ಈಗ, ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತೀಕರಣವನ್ನು ಸ್ವೀಕರಿಸಿದ ನಂತರ ಅವುಗಳನ್ನು ಜಾಗತೀಕರಣಗೊಳಿಸಲು ಪ್ರೇರೇಪಿಸಲಾಗುತ್ತಿದೆ.
ಬ್ರಿಕ್ಸ್ ದೇಶಗಳು ಮಾಡಿರುವ ಹೊಸ ಬಹುಪಕ್ಷೀಯತೆಯನ್ನು ಹಂಚಿಕೆಯ ಸಮೃದ್ಧಿಯಾಗಿ ಕಾಣಬಹುದಾಗಿದೆ. "ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು, ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವುದು ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ಉತ್ತೇಜನ ಮತ್ತು ರಕ್ಷಣೆಯನ್ನು ಖಾತರಿಪಡಿಸುವುದು" ಮುಖ್ಯವಾದುದರಿಂದ ಬ್ರಿಕ್ಸ್ ಶೃಂಗಸಭೆಯ ಹೇಳಿಕೆಯು ಬಹುಪಕ್ಷೀಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.
ಭಾರತವು ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಭಯೋತ್ಪಾದನೆಯ ವಿರುದ್ಧ ಜಾಗತಿಕವಾಗಿ ಒಮ್ಮತ ಮೂಡಿಸಲು ಬಹಳಷ್ಟು ಕೆಲಸ ಮಾಡಿದೆ. ಬ್ರಿಕ್ಸ್ ದೇಶಗಳಾದ ಭಾರತ, ರಷ್ಯಾ ಮತ್ತು ಚೀನಾಗಳು ಭಯೋತ್ಪಾದನೆಗೆ ಬಲಿಯಾಗಿರುವ ರಾಷ್ಟ್ರಗಳಾಗಿವೆ. ಆದುದರಿಂದ ಬ್ರೆಸಿಲಿಯಾದಲ್ಲಿ ನಡೆದ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳೆಲ್ಲವೂ ಒಟ್ಟಾಗಿ ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ನೀಡುವ ದೇಶ ಮತ್ತು ಶಕ್ತಿಗಳ ವಿರುದ್ಧ ಒಂದೇ ರೀತಿಯ ಅಭಿವ್ಯಕ್ತಿಯ ಮೂಲಕ ಭಯೋತ್ಪಾದಕ ದಾಳಿಯನ್ನು ಖಂಡಿಸುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಬ್ರಿಕ್ಸ್ ಶೃಂಗಸಭೆಯ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ಭಾಷಣದ ವೇಳೆ ಭಯೋತ್ಪಾದನೆಯನ್ನು ಬಹಳ ಸ್ಪಷ್ಟವಾಗಿ ಖಂಡಿಸಿದರು. ಭಯೋತ್ಪಾದನೆ ಎಂಬುದು "ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಗೆ ದೊಡ್ಡ ಅಡಚಣೆ" ಎಂದು ಅವರು ವ್ಯಾಖ್ಯಾನಿಸಿದರು. ಭಯೋತ್ಪಾದನೆಯಿಂದಾಗಿ ವಿಶ್ವ ಆರ್ಥಿಕತೆಯಿಂದ ಉಂಟಾದ ನಷ್ಟವು $1 ಟ್ರಿಲಿಯನ್ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಆರ್ಥಿಕ ಬೆಳವಣಿಗೆ 1.5% ರಷ್ಟು ಕಡಿಮೆಯಾಗಿದೆ ಎಂದು ಅವರು ವಿವರಿಸಿದರು. ವಿಶ್ವ ವ್ಯಾಪಾರದ ಕೇವಲ 15% ರಷ್ಟಿರುವ ಬ್ರಿಕ್ಸ್ ದೇಶಗಳಲ್ಲಿ ಅಂತರ-ವ್ಯಾಪಾರದ ಮಹತ್ವವನ್ನು ನರೇಂದ್ರ ಮೋದಿ ಒತ್ತಿಹೇಳಿದ್ದಾರೆ. ಜಂಟಿ ಹೇಳಿಕೆಯು ಆರ್ಥಿಕ ಮತ್ತು ವ್ಯಾಪಾರ ಉತ್ತೇಜನವನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿರುವುದರಿಂದ ಬ್ರಿಕ್ಸ್ ಬಿಸಿನೆಸ್ ಫೋರಂ ಅನ್ನು ಹಿಡಿದಿಟ್ಟುಕೊಂಡಿದೆ. ನಿರ್ಣಾಯಕ ಹವಾಮಾನ ಬಿಕ್ಕಟ್ಟಿನ ಸಮಯದಲ್ಲಿ ಬ್ರಿಕ್ಸ್ ಜಂಟಿ ಹೇಳಿಕೆಯು ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ಬ್ರಿಕ್ಸ್ ಬದ್ಧತೆಯನ್ನು ಪುನರುಚ್ಚರಿಸಿದೆ. ಹವಾಮಾನ ಬದಲಾವಣೆಯ ಕುರಿತ ಯುಎನ್ ಫ್ರೇಮ್‌ವರ್ಕ್ ಕನ್ವೆನ್ಷನ್‌ನ ತತ್ವಗಳ ಅಡಿಯಲ್ಲಿ ಅಂಗೀಕರಿಸಲ್ಪಟ್ಟ ಪ್ಯಾರಿಸ್ ಒಪ್ಪಂದದ ಅನುಷ್ಠಾನಗೊಳ್ಳುವುದಕ್ಕೂ ಇದು ಬೆಂಬಲ ಸೂಚಿಸುತ್ತದೆ.
ಭಾರತದ ಪ್ರಧಾನಿ ಮೋದಿ, ಬ್ರೆಜಿಲ್, ರಷ್ಯಾ ಮತ್ತು ಚೀನಾದ ಅಧ್ಯಕ್ಷರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಗಳು ಕೂಡ ಅಷ್ಟೇ ಯಶಸ್ವಿಯಾಗಿವೆ. ಮುಂದಿನ ವರ್ಷ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಬೇಕೆಂದು ಭಾರತ ನೀಡಿದ ಆಹ್ವಾನವನ್ನು ಅಧ್ಯಕ್ಷ ಜೈರ್ ಬೋಲ್ಸನಾರೊ ಒಪ್ಪಿಕೊಂವರ್ಣರ ಇದು ಲ್ಯಾಟಿನ್ ಅಮೆರಿಕದೊಂದಿಗಿನ ಭಾರತದ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಸ್ವಾಗತಾರ್ಹ ಹೆಜ್ಜೆಯಾಗಿದೆ.
ನ್ಯೂ ಡೆವೆಲಪ್ಮೆಂಟ್ ಬ್ಯಾಂಕ್‌ಗೆ ಹೊಸ ಆಯಾಮ ನೀಡುವ ಸದಸ್ಯ ರಾಷ್ಟ್ರಗಳ ನಿರಂತರ ಪ್ರಯತ್ನಗಳಿಗೆ ಬ್ರಿಕ್ಸ್ ಶೃಂಗಸಭೆ ಹೆಚ್ಚಿನ ಜಾಗತಿಕ ಮನ್ನಣೆ ನೀಡಿದೆ. ತನ್ನ ಸದಸ್ಯತ್ವವನ್ನು ವಿಸ್ತರಿಸುವ ನಿಟ್ಟಿನಲ್ಲಿ ನ್ಯೂ ಡೆವೆಲಪ್ಮೆಂಟ್ ಬ್ಯಾಂಕ್ ಮಾಡಿದ ಪ್ರಗತಿಯ ಬಗ್ಗೆ ಬ್ರೆಸಿಲಿಯಾ ಶೃಂಗಸಭೆ ಹರ್ಷವನ್ನು ವ್ಯಕ್ತಪಡಿಸಿದೆ ಮತ್ತು ಸದಸ್ಯ ರಾಷ್ಟ್ರಗಳಲ್ಲಿ ಎನ್‌ಡಿಬಿಯ ಪ್ರಾದೇಶಿಕ ಕಚೇರಿಗಳನ್ನು ತೆರೆಯುವ ಕ್ರಮವನ್ನು ಸ್ವಾಗತಿಸಿದೆ. ಈ ಸಂದರ್ಭದಲ್ಲಿ ಇನ್ನೋವೇಶನ್ ಬ್ರಿಕ್ಸ್ ನೆಟ್‌ವರ್ಕ್ ಸ್ಥಾಪನೆ ಮತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಹೊಸ ವಾಸ್ತುಶಿಲ್ಪ ಬ್ರಿಕ್ಸ್‌ಗೆ ಹೆಚ್ಚಿನ ಮನ್ನಣೆಯನ್ನು ಮತ್ತು ನ್ಯಾಯಸಮ್ಮತತೆಯನ್ನು ನೀಡುವ ಮಹತ್ವದ ಹಂತಗಳಾಗಿವೆ.
ಯಾವುದೇ ಚಲನಶೀಲ ಸಂಸ್ಥೆ ಅಥವಾ ಗುಂಪಿಗೆ ಬೇಕಿರುವು ಕೇವಲ ಕಲ್ಪನೆಯಲ್ಲ, ನಿರಂತರವಾದ ಪುನರ್ ದೃಡೀಕರಣದ ಅಗತ್ಯವಿರುತ್ತದೆ. ಸಮಾಜವು ಆರ್ಥಿಕತೆಯ ಅಧೀನದಲ್ಲಿ ಇಲ್ಲ. ಬದಲಿಗೆ ಬಹುಜನರ ಸಮಾಜಕ್ಕೆ ಸೂಕ್ತವಾದ ಆರ್ಥಿಕ ಬೇಕಿದೆ. ಅಂಥ ಅಭಿವೃದ್ಧಿಗೆ ಕೆಲಸ ಮಾಡಲು ಬ್ರಿಕ್ಸ್ ಬದ್ಧವಾಗಿರಬೇಕು ಎಂದು ಶೃಂಗಸಭೆಯ ಅತಿಥಿಗಳೆಲ್ಲರೂ ಹೇಳಿದರು.
ಸ್ಕ್ರಿಪ್ಟ್: ಡಾ. ಎ.ಎಸ್. ನಾರೈನ್ ರಾಯ್, ನಿರ್ದೇಶಕ, ಸಾಮಾಜಿಕ ವಿಜ್ಞಾನ ಸಂಸ್ಥೆ
Comments
Post a Comment