ಭಾರತ-ಯುಎಸ್ 2019ರ ತ್ರಿಸೇವಾ ಕಾರ್ಯಾಚರಣೆ
ಯುನೈಟೆಡ್ ಸ್ಟೇಟ್ಸ್ (ಯುಎಸ್) ಜೊತೆಗೆ 'ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ'ವನ್ನು ನಿರ್ಮಿಸುವುದು ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ಪರಿವರ್ತನೆಯಲ್ಲಿ ಅನಿವಾರ್ಯ ಪಾಲುದಾರನಾಗಿ ಹೊರಹೊಮ್ಮಿರುವ ರಾಷ್ಟ್ರ. ಮತ್ತು ಜಾಗತಿಕ ವೇದಿಕೆಯಲ್ಲಿ ದೊಡ್ಡದನ್ನು ಮಾಡುವ ಭಾರತದ ಮಹಾತ್ವಾಕಾಂಕ್ಷೆಯನ್ನು ಯುನೈಟೆಡ್ ಸ್ಟೇಟ್ಸ್ ಸಾಕಾರಗೊಳಿಸಿದೆ. ರಕ್ಷಣಾ ಸಹಭಾಗಿತ್ವ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ದ್ವಿಪಕ್ಷೀಯ ಸಂಬಂಧದ ಪ್ರಮುಖ ಆಧಾರಸ್ತಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ದ್ವಿಪಕ್ಷೀಯ ಸಂಬಂಧ ವೃದ್ಧಿಸುತ್ತಿದೆ.
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ತನ್ನ ಚೊಚ್ಚಲ ತ್ರಿ-ಸೇವೆಗಳ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಕಾರ್ಯಾಚರಣೆಗಳನ್ನು ಇದೇ ನವೆಂಬರ್ 13ರಿಂದ 21ರವರೆಗೆ 'ಟೈಗರ್ ಟ್ರೈಂಫ್' ಎಂಬ ಹೆಸರಿನಲ್ಲಿ ಆಂಧ್ರಪ್ರದೇಶದ ಕರಾವಳಿಯಲ್ಲಿ ನಡೆಸಲಾಗುತ್ತಿದೆ. ಯುಎಸ್ ನ ಮೆರೈನ್ ಕಾರ್ಪ್ಸ್ ಮತ್ತು ವಿಶೇಷ ಪಡೆಗಳ ವಿಚಕ್ಷಣ ತಂಡ, ಭಾರತೀಯ ನೌಕಾಪಡೆಯ ಪಿ 8 ಐ ದೀರ್ಘಶ್ರೇಣಿಯ ಕಡಲ ವಿಚಕ್ಷಣ ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನಗಳು, ಟೈಗರ್ ಟ್ರೈಂಫ್ ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ. ಮೊದಲ ಹಂತದಲ್ಲಿ ನವೆಂಬರ್ 13 ರಿಂದ 16 ರವರೆಗೆ ವಿಶಾಖಪಟ್ಟಣಂನಲ್ಲಿ ಹಾಗೂ ಎರಡನೇ ಹಂತದಲ್ಲಿ ನವೆಂಬರ್ 17 ರಿಂದ 21 ರವರೆಗೆ ಕಾಕಿನಾಡದಲ್ಲಿ ನಡೆಯಲಿದೆ. ಭಾರತೀಯ ಸೇನೆಯ ಸಿಗ್ನಲ್, ವೈದ್ಯಕೀಯ ಮತ್ತು ಸಂವಹನ ಶಸ್ತ್ರಾಸ್ತ್ರ ಸೇರಿದಂತೆ ಸುಮಾರು 400 ಸೈನಿಕರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಭಾರತದ ಜೊತೆ ಇದೇ ರೀತಿಯ ಕಾರ್ಯಾಚರಣೆ ನಡೆಸಿದ ಇನ್ನೊಂದು ದೇಶವೆಂದರೆ ಅದು ರಷ್ಯಾ.
ಸೆಪ್ಟೆಂಬರ್ 2018ರಲ್ಲಿ ನಡೆದ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ನಡುವಿನ '2 + 2' ಸಂವಾದದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎರಡೂ ದೇಶಗಳ ನಡುವಿನ ತ್ರಿ-ಸೇವಾ ಕಾರ್ಯಾಚರಣೆ ಪ್ರಾರಂಭಿಸುವ ಬಗ್ಗೆ ಪ್ರಸ್ತಾಪವಾಯಿತು. ಆ ಸಂದರ್ಭದಲ್ಲಿ ಎರಡು ದೇಶಗಳ ನಡುವೆ ಸೇನೆಯಿಂದ ಸೇನೆಗೆ ಪ್ರಕರವಾಗಿ ಬೆಳೆಯುತ್ತಿರುವ ಒಪ್ಪಂದಗಳನ್ನು ಗುರುತಿಸಿ ಎರಡೂ ಕಡೆಯವರು ಹೊಸದಾಗಿ ಪರಿಚಿತವಾಗುತ್ತಿರುವ ತ್ರಿ-ಸೇವಾ ಕಾರ್ಯಾಚರಣೆಯ ರಚನೆಗೆ ಹಾಗೂ ಎರಡು ದೇಶಗಳ ನಡುವಿನ ಸೇನಾ ಮತ್ತು ರಕ್ಷಣಾ ಸಂಸ್ಥೆಗಳ ನಡುವಿನ ವೈಯಕ್ತಿಕ ವಿನಿಮಯವನ್ನು ಇನ್ನಷ್ಟು ಹೆಚ್ಚಿಸಲು ಬದ್ದರಾಗಿರುವಂತೆ ನಿರ್ಧರಿಸಲಾಯಿತು. ಆಮೇಲೆ 2019ರ ಸೆಪ್ಟೆಂಬರ್ ನಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುನೈಟೆಡ್ ಸ್ಟೆಟ್ಸ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟೆಕ್ಸಾಸ್‌ನಲ್ಲಿ ಆಯೋಜಿಸಲಾಗಿದ್ದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ-ಯುಎಸ್ ನಡುವಿನ ತ್ರಿಸೇವಾ ಕಾರ್ಯಾಚರಣೆಯನ್ನು ಅಧಿಕೃತವಾಗಿ ಘೋಷಿಸಿದರು.
ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಭಾರತ-ಯುಎಸ್ ರಾಷ್ಟ್ರಗಳು ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿವೆ. ಪರಸ್ಪರ ರಾಜಕೀಯ ಇಚ್ಛಾಶಕ್ತಿಯ ಒಗ್ಗೂಡಿಸುವಿಕೆಯಿಂದಾಗಿ ಎರಡೂ ರಾಷ್ಟ್ರಗಳ ನಡುವಿನ ಅಂತರ-ಕಾರ್ಯಾಚರಣೆಯ ಭಾಗವಾಗಿ 'ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೋರಾಂಡಮ್ ಆಫ್ ಅಗ್ರಿಮೆಂಟ್' (ಲೆಮೋಎ) ಮತ್ತು 'ಸಂವಹನ ಹೊಂದಾಣಿಕೆ ಹಾಗೂ ಭದ್ರತಾ ಒಪ್ಪಂದ' (ಸಿಸಿಎಸ್ಎ) ಎಂಬ ಎರಡು ಒಪ್ಪಂದಗಳಿಗೆ ಸಹಿ ಹಾಕಲು ಅವಕಾಶ ಮಾಡಿಕೊಟ್ಟಿವೆ. ಜಿಯೋಸ್ಪೇಷಿಯಲ್ ನಕ್ಷೆಗಳಿಗೆ ಜಂಟಿ ಪ್ರವೇಶ ಮಾಡುವಂತಹ ಮೂರನೇ ಒಪ್ಪಂದವಾದ 'ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ (ಬಿಇಸಿಎ)'ದ ಕುರಿತು ಚರ್ಚಿಸುವ ಪ್ರಕ್ರಿಯೆಯಲ್ಲೂ ತೊಡಗಿವೆ. ಭಾರತ ಮತ್ತು ಯುಎಸ್ ದೇಶಗಳು ಒಂದು ವರ್ಷದಲ್ಲಿ ಐವತ್ತಕ್ಕೂ ಹೆಚ್ಚು ಸಹಕಾರಿ ಕಾರ್ಯಕ್ರಮಗಳನ್ನು ಪರಸ್ಪರರ ಸೇವೆಗಳೊಂದಿಗೆ ನಡೆಸುತ್ತಿವೆ. ಇದಲ್ಲದೆ ಭಾರತ ಮತ್ತು ಯುಎಸ್ ಒಟ್ಟಾಗಿ ತಮ್ಮ ಸೇನೆಗಳಲ್ಲಿ ಪ್ರತಿವರ್ಷ ಹಲವಾರು ಸಂಯುಕ್ತ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಉನ್ನತ ದರ್ಜೆಯ ನೌಕಾಪಡೆಗಳು ತಮ್ಮ ಸೈನ್ಯಗಳ ನಡುವೆ (ಜಪಾನ್‌ನೊಂದಿಗೆ ಮೂರನೇ ಪಾಲುದಾರ ಜಪಾನ್ ಜೊತೆ ಸೇರಿಕೊಂಡು) ಭಯೋತ್ಪಾದನಾ ನಿಗ್ರಹ ವಜ್ರಾ ಪ್ರಹಾರ್ ಮತ್ತು ಯುದ್ದ್ ಅಭ್ಯಾಸ್ ಪೆರೆಡ್ ಗಳನ್ನು ನಡೆಸುತ್ತದೆ. ಒಟ್ಟಿನಲ್ಲಿ ಈ ರೀತಿಯ ಕಾರ್ಯಾಚರಣೆಗಳು ಎರಡೂ ದೇಶಗಳ ಸೇನೆಗಳು ವಿವಿಧ ರೀತಿಯ ಸನ್ನಿವೇಶಗಳನ್ನು ಎದುರಿಸಲು ಮತ್ತು ಇತರರ ಕಾರ್ಯಾಚರಣೆಯ ರಚನೆಯನ್ನು ಅರ್ಥಮಾಡಿಕೊಳ್ಳಲು ಪೂರ್ವಾಭ್ಯಾಸ ನಡೆಸುವುದಕ್ಕೆ ಅವಕಾಶವನ್ನು ಒದಗಿಸುತ್ತವೆ. ಈಗ ಭಾರತ-ಯುಎಸ್ ಜಂಟಿ ಕಾರ್ಯಾಚರಣೆಯಲ್ಲಿ ಯುಎಸ್ ಪಡೆಗಳ ಅನುಭವವನ್ನು ಭಾರತದೊಂದಿಗೆ ಹಂಚಿಕೊಳ್ಳಲು ಅನುಮತಿ ಸಿಕ್ಕಿದೆ. ಇದು ಭವಿಷ್ಯದ ಕಾರ್ಯಾಚರಣೆಗಳಿಗೆ ಎರಡು ಪಡೆಗಳ ಜಂಟಿ ಸಿದ್ಧತೆಯನ್ನು ಹೆಚ್ಚಿಸುತ್ತದೆ. ಭಾರತ ಮತ್ತು ಯುಎಸ್ ತಮ್ಮ ರಕ್ಷಣಾ ಸಂಬಂಧಗಳನ್ನು ವೃದ್ಧಿಸಲು ಅನುವು ಮಾಡಿಕೊಡುವುದರಿಂದ ಜಂಟಿ ಕಾರ್ಯಾಚರಣೆ ಪ್ರಾಮುಖ್ಯವಾಗುತ್ತದೆ.
ಭಾರತ ದೇಶಕ್ಕೆ ತನ್ನ ಭೂ ಗಡಿಗಳು ಮತ್ತು ಕಡಲ ಪರಿಸರದಿಂದ ಬರುವ ಬೆದರಿಕೆಗಳನ್ನು ಎದುರಿಸಲು ತನ್ನ ರಕ್ಷಣಾ ಸಾಮರ್ಥ್ಯಗಳನ್ನು ತ್ವರಿತವಾಗಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ಇತ್ತೀಚಿನ ತಂತ್ರಜ್ಞಾನ ಮತ್ತು ಸಲಕರಣೆಗಳು ಬೇಕಾಗುತ್ತವೆ. ಭಾರತವು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಅಡಿ ರಕ್ಷಣಾ ಉತ್ಪಾದನೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವಿಷಯದಲ್ಲಿ ಅಗ್ರಗಣ್ಯ ರಾಷ್ಟ್ರವಾದ ಯುಎಸ್ ಜೊತೆಗಿನ ಪಾಲುದಾರಿಕೆ ಸ್ವಾಗತಾರ್ಹವಾದುದಾಗಿದೆ. ಇನ್ನೊಂದೆಡೆ ಭಾರತ-ಪೆಸಿಫಿಕ್ ಪ್ರದೇಶದಲ್ಲಿ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಅಮೆರಿಕಾಕ್ಕೆ ಭಾರತವು ಸಂಭಾವ್ಯ ಪಾಲುದಾರ ರಾಷ್ಟ್ರವಾಗಿದೆ. ಯುಎಸ್ ಗೆ ಭಾರತದ ರಕ್ಷಣಾ ಮಾರುಕಟ್ಟೆ ಮತ್ತೊಂದು ಆಕರ್ಷಣೆಯಾದುದಾಗಿದೆ.
ಹೆಚ್ಚಾಗಿರುವ ರಕ್ಷಣಾ ಸಹಭಾಗಿತ್ವ, ಸಾಮರ್ಥ್ಯದ ಕಾರ್ಯಕ್ರಮಗಳು ಮತ್ತು ಸಶಸ್ತ್ರ ಪಡೆಗಳ ಪರಸ್ಪರ ಕಾರ್ಯಸಾಧ್ಯತೆಯ ಹಿನ್ನೆಲೆಯಲ್ಲಿ ಯುಎಸ್ ಭಾರತದೊಂದಿಗಿನ ತನ್ನ ಸಂಬಂಧವನ್ನು ಎದುರುನೋಡುತ್ತಿದೆ. ತೃತೀಯ ರಾಷ್ಟ್ರಗಳಲ್ಲಿ ರಫ್ತು ಆಯ್ಕೆಗಳ್ನು ಅನ್ವೇಷಣೆ ಮಾಡಲು, ಆರಂಭಿಸಲು ಮತ್ತು ಯೋಜನೆಗಳನ್ನು ಸೇರಿಸಲು 2012ರ ಭಾರತ-ಯುಎಸ್ ರಕ್ಷಣಾ ತಂತ್ರಜ್ಞಾನ ಮತ್ತು ವ್ಯಾಪಾರ ಉಪಕ್ರಮಗಳ ಒಪ್ಪಂದವನ್ನು ಉಭಯ ರಾಷ್ಟ್ರಗಳು ಪರಿಷ್ಕರಿಸುವ ಪ್ರಕ್ರಿಯೆಯಲ್ಲಿವೆ. ಇದು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ನಡೆಯುವ ಉದ್ಯಮ ಸಂವಹನಗಳಿಗೆ ಹೆಚ್ಚಿನ ಉದ್ಯಮಗಳು ಒಳಗೊಳ್ಳುವಂತೆ ಮಾಡುತ್ತದೆ. 2018 ರ ಸೆಪ್ಟೆಂಬರ್ ನಲ್ಲಿ ನಡೆದ ಭಾರತ- ಯುನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ನಡುವಿನ '2 + 2' ಸಂವಾದದ ಬಳಿಕ ರಕ್ಷಣಾ, ಭದ್ರತೆ ಮತ್ತು ವಿದೇಶಾಂಗ ನೀತಿ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸುವ ಕಡೆ ಗಮನಹರಿಸಲಾಗುತ್ತಿದೆ.
ಸ್ಕ್ರಿಪ್ಟ್: ಡಾ. ಸ್ಟುಟಿ ಬ್ಯಾನರ್ಜಿ, ಅಮೆರಿಕನ್ ವ್ಯವಹಾರಗಳ ಕಾರ್ಯತಂತ್ರದ ವಿಶ್ಲೇಷಕ
Comments
Post a Comment