ಸೆರ್ಬಿಯಾ ಜೊತೆ ಭಾರತ ಮರುಹೊಂದಾಣಿಕೆ
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ಸರ್ಬಿಯಾಕ್ಕೆ ನೀಡಿದ್ದ ಭೇಟಿ ಯಶಸ್ವಿಯಾಗಿದೆ. ಡಾ. ಜೈಶಂಕರ್ ಅವರು ಸರ್ಬಿಯಾದ ಐವಿಕಾ ಡಾಸಿಕ್ ನಿಯೋಗವನ್ನು ಮಾತ್ರವಲ್ಲದೆ ಸರ್ಬಿಯಾದ ಅಧ್ಯಕ್ಷ ಅಲೆಕ್ಸಂಡರ್ ವುಸಿಕ್ ಮತ್ತು ಬೆಲ್ಗ್ರೇಡ್ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅವರನ್ನು ಭೇಟಿಯಾದರು. ಜೈಶಂಕರ್ ಮತ್ತು ಸೆರ್ಬಿಯನ್ ಪ್ರತಿನಿಧಿಗಳ ನಡುವೆ ನಡೆದ ಪರಸ್ಪರ ಕ್ರಿಯೆಗಳು ದ್ವಿಪಕ್ಷೀಯ ಪಾಲುದಾರಿಕೆಯನ್ನು 21ನೇ ಶತಮಾನದ ಅಗತ್ಯತೆಗಳೊಂದಿಗೆ ಸೇರಿಸಿ ಪರಿವರ್ತಿಸುವುದರ ಮೇಲೆ ಕೇಂದ್ರೀಕರಿಸಿದೆ. ಈ ಭೇಟಿಯ ಪ್ರಮುಖ ಉದ್ದೇಶ ಭವಿಷ್ಯದಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬೆಸೆಯುವ ಸಾಧ್ಯತೆಯಿರುವ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಮಾಡುವುದಾಗಿದೆ.
ಇಂಡೋ-ಸರ್ಬಿಯನ್ ನಡುವಿನ ಸಂಬಂಧಗಳಿಗೆ ಆಳವಾದ ಇತಿಹಾಸವಿದೆ. ಸೆರ್ಬಿಯಾ ದೇಶವು ಹಿಂದಿನ ಯುಗೊಸ್ಲಾವಿಯಾದ ಭಾಗವಾಗಿದ್ದರಿಂದ ಭಾರತ ಮತ್ತು ಸೆರ್ಬಿಯಾ ದೇಶಗಳು ಅಲಿಪ್ತ ಚಳವಳಿಯ (ಎನ್‌ಎಎಂ) ಸ್ಥಾಪಕ ಸದಸ್ಯರಾಗಿದ್ದವು. ಅಲಿಪ್ತ ಚಳವಳಿಗೆ ಭಾರತದಿಂದ ಪಂಡಿತ್ ನೆಹರೂ ಮತ್ತು ಸೆರ್ಬಿಯಾದಿಂದ ಜೋಸೆಫ್ ಟಿಟೊ ಅವರ ಹೆಸರುಗಳನ್ನು ಪರಸ್ಪರರ ರಾಷ್ಟ್ರೀಯ ಪ್ರಜ್ಞೆ ಹೆಸರಿನಲ್ಲಿ ಪ್ರಸ್ತುತಪಡಿಸಲಾಗಿತ್ತು. ಇದಲ್ಲದೆ ಸರ್ಬಿಯಾ ದೇಶದ ಬುದ್ಧಿಜೀವಿಗಳೊಂದಿಗೆ ಭಾರತದ ಸ್ವಾಮಿವಿವೇಕಾನಂದ ಮತ್ತು ರವೀಂದ್ರನಾಥ ಟ್ಯಾಗೋರ್ ಅವರು ನಡೆಸಿದ ಸಂವಾದದಲ್ಲೂ ಪರಸ್ಪರ ಹಂಚಿಕೆಯ ವಿಷಯ ಪ್ರತಿಬಿಂಬಿತವಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಭಾರತ ಮತ್ತು ಸೆರ್ಬಿಯಾ ನಡುವೆ ಭಾವನಾತ್ಮಕ ಸ್ನೇಹವಿದೆ. ಎರಡೂ ದೇಶಗಳ ನಡುವೆ ನಡೆದ ಶೀತಲ ಸಮರದ ಕೊನೆಯಲ್ಲಿ ಗಟ್ಟಿಗೊಂಡ ಪಾಲುದಾರಿಕೆ ಬಗ್ಗೆ ಸರಿಯಾದ ರೀತಿಯಲ್ಲಿ ದಾಖಲಾಗಿಲ್ಲ. ಎರಡೂ ದೇಶಗಳೂ ಈಗ ಸಂಕೀರ್ಣ ಕಾರ್ಯತಂತ್ರದ ಭೂದೃಶ್ಯವನ್ನು ನ್ಯಾವಿಗೇಟ್ ಮಾಡುವ ಬಗ್ಗೆ ಎದುರು ನೋಡುತ್ತಿವೆ. ಇಂಥದೊಂದು ಬೆಳವಣಿಗೆಯಿಂದಾಗಿ ಉಭಯ ದೇಶಗಳ ವಿದೇಶಾಂಗ ನೀತಿಯ ಆದ್ಯತೆಗಳನ್ನು ಸಮೀಪದ ನೆರೆಹೊರೆ ದೇಶಗಳೆಡೆಗೂ ತಿರುಗಿಸಲು ಸಾಧ್ಯವಾಗಿದೆ. ಅಲ್ಲಿ ಕೂಡ ಉದಾತ್ತವಾದ ಸಂಬಂಧಗಳನ್ನು ನಿರ್ವಹಿಸಲಾಗುತ್ತಿದೆ. ಈ ಪ್ರಯತ್ನವು ದ್ವಿಪಕ್ಷೀಯ ಸಂಬಂಧಗಳ ಮುಂದಿನ ಕಾಲು ಶತಮಾನದ ರೂಪುರೇಷೆಯನ್ನು ನಿರ್ಧರಿಸಿದೆ.ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರ ಸೆರ್ಬಿಯಾ ಭೇಟಿಯನ್ನು ದ್ವಿಪಕ್ಷೀಯ ರಾಜಕೀಯ ಸಂಪರ್ಕಗಳು ಇತ್ತೀಚಿಗೆ ಸುಧಾರಣೆ ಕಂಡ ಭಾಗವಾಗಿ ಮತ್ತು ಭಾರತ-ಸೆರ್ಬಿಯಾ ದೇಶಗಳು ಶೀಘ್ರವಾಗಿ ರಾಷ್ಟ್ರೀಯ ಪರಿವರ್ತನೆಗೆ ಒಳಗಾಗುತ್ತಿರುವ ಸಮಯದಲ್ಲಿ ಹಳೆಯ ಸ್ನೇಹಿತರ ನಡುವೆ ಮರುಸಂಪರ್ಕ ಸಾಧಿಸಿದ್ದನ್ನು ಕನ್ನಡಿಯಲ್ಲಿ ಕಂಡಂತೆ ಭಾವಿಸಬಹುದು. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಮತ್ತು ಅದು ಜಾಗತಿಕ ಫಲಿತಾಂಶಗಳನ್ನು ರೂಪಿಸಲು ಹೆಚ್ಚು ಪ್ರಯತ್ನಿಸುತ್ತಿದೆ. ಅದೇ ರೀತಿ ಸೆರ್ಬಿಯಾ ದೇಶವು ಯುಗೊಸ್ಲಾವಿಯಾ ವಿಭಜನೆ ಮತ್ತು ಕೊಸೊವೊ ಪ್ರತ್ಯೇಕಗೊಂಡ ಬಳಿಕ ಉದ್ಭಿವಿಸಿದ ಅಡ್ಡಿ ಮತ್ತು ಆಂತರಿಕ ಗೊಂದಲಗಳನ್ನು ನಿವಾರಿಸಿಕೊಂಡಿದೆ. ಇದು ಒಂದು ರೀತಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಯುರೋಪಿಯನ್ ಖಂಡದ ಪ್ರಭಾವಶಾಲಿ ಬೆಳವಣಿಗೆಯಾಗಿ ದಾಖಲಾಗಿದೆ. ಅಲ್ಲದೆ 2025ರ ವೇಳೆಗೆ ಸೆರ್ಬಿಯಾವು ಯುರೋಪಿಯನ್ ಯೂನಿಯನ್ (ಇಯು)ಗೆ ಸೇರ್ಪಡೆಗೊಳ್ಳುವ ದಾರಿಯಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಜಾಗತಿಕ ಕ್ರಾಂತಿಗಳನ್ನು ನಿಭಾಯಿಸಲು ಹೊಸ ಭಾರತ ಮತ್ತು ಹೊಸ ಸೆರ್ಬಿಯಾ ನಡುವೆ ಆಸಕ್ತಿದಾಯಕ ಒಮ್ಮತವೇರ್ಪಟ್ಟಿದೆ. 21ನೇ ಶತಮಾನದ ಆಧಾರಸ್ತಂಭವಾಗಿರುವ ಜಾಗತೀಕರಣವು ಇನ್ನೊಂದು ಬಗೆಯಲ್ಲಿ ತಲೆನೋವು ಕೂಡ ಆಗಿ ಪರಿಣಮಿಸಿದೆ. ಹೆಚ್ಚು ರಕ್ಷಣೆ ಬೇಡುವ, ಹೆಚ್ಚು ಷರತ್ತುಗಳನ್ನು ಹೊಂದಿರುವ ಬಂಡವಾಳ ಮತ್ತು ತಂತ್ರಜ್ಞಾನ ಪ್ರೇರಿತ ಅಡೆತಡೆಗಳು ಜಾಗತಿಕ ಕಾರ್ಯತಂತ್ರದ ವಾತಾವರಣವನ್ನು ಕದಡಿವೆ. ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಭದ್ರತಾ ಬೆದರಿಕೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿವೆ. ಹೊಸ ಕಾರ್ಯತಂತ್ರ ಸಮತೋಲನ ಹೊರಹೊಮ್ಮುವ ಮುಂಚೆಯೇ ಹಳೆಯ ಕಾರ್ಯತಂತ್ರಗಳಲ್ಲಿದ್ದ ಸಮತೋಲನವನ್ನು ಏರುಪೇರುಮಾಡಲಾಗಿದೆ.
ಭಾರತ ಮತ್ತು ಸೆರ್ಬಿಯಾ ದೇಶಗಳ ಪರಸ್ಪರರ ಸಾಮರ್ಥ್ಯವು ಬೇರೆ ಬೇರೆ ಸ್ವರೂಪದ ಸಂಯೋಜಿಸಲ್ಪಟ್ಟ ಉದಯೋನ್ಮುಖ ಸವಾಲುಗಳನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತವೆ. ಈ ಸಹಕಾರಿ ವಿಧಾನವು ‘ವಾಸುದೈವ ಕುತುಂಬಕಂ’ ತತ್ವಗಳೊಂದಿಗೆ ಬೆರೆತಿವೆ. ಅದರ ಅರ್ಥ ‘ಜಗತ್ತು ಒಂದು ಕುಟುಂಬ, ಮತ್ತು ವಿಶ್ವ-ಬಂಧುತ್ವ - ವಿಶ್ವದ ಸಹೋದರತ್ವ’ ಎಂಬುದಾಗಿದೆ. ಇದನ್ನು ಸಂಸ್ಕೃತದಲ್ಲಿ ಹೇಳಲಾಗಿದೆ. ಆ ಮೂಲಕ ಎಲ್ಲರೊಂದಿಗೆ ಕೆಲಸ ಮಾಡುವ ಮತ್ತು ಜಾಗತಿಕ ಸಮಸ್ಯೆಗಳನ್ನು ಸಹಕಾರಿ ರೂಪದಲ್ಲಿ ಪರಿಹರಿಸುವ ಬಯಕೆಯನ್ನು ಭಾರತ ಹೊಂದಿದೆ ಎಂಬುದನ್ನು ಬಿಂಬಿಸುವುದಾಗಿದೆ.
ಭಾರತ ಮತ್ತು ಸೆರ್ಬಿಯಾ ದೇಶಗಳ ನಡುವೆ ಪರಸ್ಪರ ಪ್ರಮುಖ ಕಾರ್ಯತಂತ್ರದ ಕಾಳಜಿಗಳನ್ನು ಬೆಂಬಲಿಸುವಂತಹ ದ್ವಿಪಕ್ಷೀಯ ಸಹಭಾಗಿತ್ವವನ್ನು ಪರಸ್ಪರ ಕಾರ್ಯತಂತ್ರದ ಪರಾನುಭೂತಿಯಿಂದ ಗುರುತಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಷಯವೆಂದು ಬೆಲ್ಗ್ರೇಡ್ ಘೋಷಿಸಿರುವುದು ಕೊಸೊವೊದ ಏಕಪಕ್ಷೀಯ ಸ್ವಾತಂತ್ರ್ಯ ಘೋಷಣೆಯ ವಿರುದ್ಧ ಸೆರ್ಬಿಯಾಕ್ಕೆ ಭಾರತ ನೀಡಿದ ಬೆಂಬಲಕ್ಕೆ ಪೂರಕವಾಗಿ ಮೂಡಿ ಬಂದ ನಿರ್ಧಾರವಾಗಿದೆ. ಸೆರ್ಬಿಯಾ ದೇಶವು ಪರಮಾಣು ಸರಬರಾಜುದಾರರ ಗುಂಪಿ(ಎನ್‌ಎಸ್‌ಜಿ)ಗಾಗಿ ಭಾರತದ ಉಮೇದುವಾರಿಕೆ ಮತ್ತು ವಿಸ್ತೃತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ಬೆಂಬಲಿಸಿದೆ. ಸೆರ್ಬಿಯಾ ದೇಶದ ಭೂ-ಕಾರ್ಯತಂತ್ರದ ಪ್ರದೇಶವು ಪ್ರಮುಖವಾಗಿ ಭಾರತದ ಸಾಮ್ಯತೆಯನ್ನು ಹೊಂದಿದೆ. ಮಧ್ಯ ಮತ್ತು ಆಗ್ನೇಯ ಯುರೋಪ್ ವ್ಯಾಪಿಸಿರುವ ಬೆಲ್ಗ್ರೇಡ್ ಪೂರ್ವ ಯುರೋಪ್ ಮತ್ತು ಬಾಲ್ಕನ್‌ಗಳಿಗೆ ಭಾರತ ಗೇಟ್‌ವೇ ಆಗುವ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರದೇಶಗಳಲ್ಲಿ ಭಾರತವು ಸಂವಹನ ಕೇಂದ್ರವಾಗುವುದು ಮಾತ್ರವಲ್ಲದೆ ಬೆಲ್‌ಗ್ರೇಡ್, ರಷ್ಯಾ ಮತ್ತು ಟರ್ಕಿಯೊಂದಿಗೆ ಅನುಕೂಲಕರ ವ್ಯಾಪಾರ ಒಪ್ಪಂದಗಳನ್ನು ಒಳಗೊಂಡಿದೆ. ಯುಎಸ್ $ 200 ಮಿಲಿಯನ್ ದ್ವಿಪಕ್ಷೀಯ ವ್ಯಾಪಾರವು ಭಾರತ ಮತ್ತು ಸೆರ್ಬಿಯಾ ನಡುವಿನ ಪೂರಕ ವಾತಾವರಣದ ನಡುವೆಯೂ ದುರ್ಬಲ ಕೊಂಡಿಯಾಗಿ ಉಳಿದಿದೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮಾತುಕತೆಗಳಿಂದ ಭಾರತ ದೇಶ ಹೊರಬಂದಿರುವಂತಹ ಸಂದರ್ಭದಲ್ಲಿ ಹೊಸ ವ್ಯಾಪಾರ ಒಪ್ಪಂದಗಳು ಮತ್ತು ಹೂಡಿಕೆಗಳ ಮೂಲವನ್ನು ಅನ್ವೇಷಿಸಬೇಕಾಗಿದೆ. ಇದಕ್ಕೆ ಬಲವಾದ ತಾರ್ಕಿಕ ಕಾರಣಗಳೂ ಇವೆ. ಭಾರತ ಮತ್ತು ಸೆರ್ಬಿಯಾ ದೇಶಗಳಿಗೆ ಫಾರ್ಮಾ, ಕೃಷಿ, ಐಟಿ, ಆಯುರ್ವೇದ ಮತ್ತು ಯೋಗ ಸೇರಿದಂತೆ ಸಮಗ್ರ ಆರೋಗ್ಯ, ರಕ್ಷಣಾ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಆರ್ಥಿಕ ಸಹಭಾಗಿತ್ವವನ್ನು ಗುಣಾತ್ಮಕವಾಗಿ ಬಲಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ವಿಶ್ವ ಬ್ಯಾಂಕಿನ ‘ಈಸ್ ಆಫ್ ಬಿಸಿನೆಸ್’ ರೇಟಿಂಗ್‌ಗಳಲ್ಲಿನ ಸುಧಾರಣೆ ಮತ್ತು ದ್ವಿಪಕ್ಷೀಯ ವೀಸಾ ಅವಶ್ಯಕತೆಗಳ ಸಡಿಲಿಕೆಗೆ ಭಾರತೀಯ ಮತ್ತು ಸರ್ಬಿಯನ್ ಕಂಪನಿಗಳು ಪರಸ್ಪರ ದನಿಗೂಡಿಸಿವೆ. ಪರಸ್ಪರ ರೂಪಾಂತರಗೊಂಡಂತೆ ವರ್ತಿಸುತ್ತಿವೆ.
ಭಾರತ ಮತ್ತು ಸೆರ್ಬಿಯಾದ ನಡುವಿನ ಈ ಪಾಲುದಾರಿಕೆ ಸಾಮರ್ಥ್ಯವು ಅಘಾದವಾದುದಾಗಿದೆ. ಆ ವೇಗವನ್ನು ಮುಂದುವರೆಸುವುದು ಮತ್ತು ರಾಜಕೀಯ ಅಭಿಮಾನವನ್ನು ದೃಢವಾದ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಹೊಂದಿಸುವುದು ಸವಾಲಿನ ಕೆಲಸವಾಗಿದೆ.
ಸ್ಕ್ರಿಪ್ಟ್: ರಾಜೋರ್ಶಿ ರೋಯ್, ಸಂಶೋಧನಾ ವಿಶ್ಲೇಷಕ, ಐಡಿಎಸ್ಎ

Comments
Post a Comment