ಶ್ರೀಲಂಕಾದ ಏಳನೇ ಅಧ್ಯಕ್ಷರಾಗಿ ಆಯ್ಕೆಯಾದ ಗೋತಬಯ ರಾಜಪಕ್ಸೆ
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಶನಿವಾರ ಅಧ್ಯಕ್ಷೀಯ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಶೇಕಡ 52.25% ಮತಗಳನ್ನು ಪಡೆದ ಶ್ರೀಲಂಕಾದ ಪೊಡುಜಾನ ಪೆರಮುನಾ (ಎಸ್‌ಎಲ್‌ಪಿಪಿ) ಪಕ್ಷದ ಗೋತಬಯ ರಾಜಪಕ್ಸೆ ಶ್ರೀಲಂಕಾದ 7ನೇ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಗೆಲುವಿನ ಬಳಿಕ ಮಾತನಾಡಿರುವ ಅವರು, ತಾವು ಇಲ್ಲಿನ ಅನುರಾಧಪುರದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಘೋಷಿಸಿದರು. ಗೋತಬಯ ರಾಜಪಕ್ಸೆ ಅವರ ಗೆಲುವಿಗೆ ಭಾರತೀಯ ಪ್ರಧಾನಿ ಸೇರಿದಂತೆ ವಿಶ್ವದ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾದ ಗೋತಬಯ ರಾಜಪಕ್ಸೆ ಅವರಿಗೆ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯವನ್ನು ವೃದ್ದಿಗೊಳಿಸಲು ಹೊಸದಾಗಿ ಚುನಾಯಿತರಾದ ಶ್ರೀಲಂಕಾದ ಅಧ್ಯಕ್ಷರೊಂದಿಗೆ ನಿಕಟವಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಭಾರತದ ದೇಶವಾಸಿಗಳ ಪರವಾಗಿ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದಿರುವ ಪ್ರಧಾನಿ ಮೋದಿ, ಗೋತಬಯ ರಾಜಪಕ್ಸೆ ಅವರ ಸಮರ್ಥ ನಾಯಕತ್ವದಲ್ಲಿ ಶ್ರೀಲಂಕಾದ ಜನರು ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಮತ್ತಷ್ಟು ಪ್ರಗತಿ ಹೊಂದುತ್ತಾರೆ. ಭ್ರಾತೃತ್ವದ ವಿಷಯದಲ್ಲಿ ಹಾಗೂ ಸಾಂಸ್ಕೃತಿಕ ವಿಚಾರವಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಾಗುವುದು. ಇದೇ ಉದ್ದೇಶಗಳೊಂದಿಗೆ ಶ್ರೀಲಂಕಾದ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತವು ಸದಾ ಬದ್ಧವಾಗಿರುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದೇ ವೇಳೆ ಗೋತಬಯ ರಾಜಪಕ್ಸೆ ಅವರು ಕೂಡ ಅಭಿವೃದ್ಧಿ ಮತ್ತು ಸುರಕ್ಷತೆಗಳ ವಿಷಯದಲ್ಲಿ ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿದ್ದ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ವಿಷಯದಲ್ಲಿ ಹಾಗೂ ಭದ್ರತಾ ನೆರವು ಒದಗಿಸುವ ವಿಚಾರದಲ್ಲಿ ಭಾರತವು ಶ್ರೀಲಂಕಾ ದೇಶದ ಬಹಳ ನಿರ್ಣಾಯಕವಾದ ಮಿತ್ರರಾಷ್ಟ್ರವಾಗಿ ಹೊರಹೊಮ್ಮಿದೆ. ಇಂತಹ ಸಂಗತಿಯ ನಡುವೆಯೂ ಹಿಂದಿನ ಮಹಿಂದಾ ರಾಜಪಕ್ಸೆ ಆಡಳಿತದ ಎರಡನೇ ಅವಧಿಯಲ್ಲಿ ಇಂಡೋ-ಲಂಕಾ ಸಂಬಂಧಗಳಲ್ಲಿ ಬಿರುಕುಗಳು ಗೋಚರಿಸಿದ್ದವು. ದ್ವೀಪ ರಾಷ್ಟ್ರದ ರಾಷ್ಟ್ರೀಯ ಏಕತೆ ಸರ್ಕಾರ ಇದ್ದ (2015-19) ಅವಧಿಯಲ್ಲಿ ಎರಡು ದೇಶಗಳ ನಡುವಿನ ಪರಸ್ಪರ ಸಂಬಂಧವನ್ನು ಮರು ಸ್ಥಾಪನೆ ಮಾಡುವ ಕೆಲಸ ನಡೆದಿತ್ತು. ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಿ ಅವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುವಂತೆ ಅನುವಾಗಲು ಭಾರತ ಮತ್ತು ಶ್ರೀಲಂಕಾ ಹಲವಾರು ಒಪ್ಪಂದಗಳಿಗೆ ಸಹಿ ಮಾಡಲಾಗಿತ್ತು. ಆದರೆ ಶ್ರೀಲಂಕಾ ದೇಶದೊಳಗೆ ಅಡಗಿದ್ದ ದೇಶೀಯ ವಿರೋಧ ಮತ್ತು ಉದ್ಭವಿಸಿದ್ದ ಆಡಳಿತಾತ್ಮಕ ಅಡಚಣೆಗಳಿಂದಾಗಿ ಎರಡೂ ದೇಶಗಳ ನಡುವಿನ ಈ ಹಲವು ಒಪ್ಪಂದಗಳನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಒಪ್ಪಂದಗಳು ಭವಿಷ್ಯದಲ್ಲಿ ಏನಾಗಲಿವೆ ಎಂಬುದು ಗೋತಬಯಾ ರಾಜಪಕ್ಸೆ ಮತ್ತು ಅವರ ಆಡಳಿತದ ಕಾರ್ಯವಿಧಾನ ಹಾಗೂ ವರ್ತನೆ ಮೇಲೆ ಅವಲಂಬಿತವಾಗಿರುತ್ತದೆ.
ತನ್ನ ದೇಶದೊಳಗಿನ ಭಾರತೀಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನಗೊಳಿಸಲು ಶ್ರೀಲಂಕಾ ನಿಧಾನಗತಿ ಧೋರಣೆ ಅನುಸರಿಸುತ್ತಿದೆ. ಭಾರತದ ಭದ್ರತಾ ಸೂಕ್ಷ್ಮತೆಯಂತಹ ವಿಷಯಗಳ ಮೇಲೆ ಪರಿಣಾಮ ಬೀರಬಹುದಾದ ಚೀನಾಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ದೇಶದೊಳಗಿನ ತಮಿಳರೊಂದಿಗೆ ರಾಜಕೀಯ ಸಾಮರಸ್ಯ ಕಾಪಾಡುತ್ತಿಲ್ಲ. ಇಂಥ ಹಲವಾರು ವಿಷಯಗಳು ಭಾರತ ಮತ್ತು ಶ್ರೀಲಂಕಾ ಸಂಬಂಧಗಳ ಮೇಲೆ ಪರಿಣಾಮ ಬೀರಿವೆ.
ಗೋಟಬಯಾ ರಾಜಪಕ್ಸೆ ಅವರು ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಅವರ ಕುಟುಂಬ ವರ್ಗದವರು ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ರಾಜಪಕ್ಸೆ ಅವರ ಸಹೋದರರು ನೂತನ ಸರ್ಕಾರದ ಆಡಳಿತದ ಮೇಲೆ ಹಿಡಿತ ಸಾಧಿಸುತ್ತಾರೆ. ಸರ್ಕಾರದ ಪ್ರಮುಖ ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸಮಸ್ಯೆಗಳನ್ನು ರಾಜಪಕ್ಸೆ ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಭವಿಷ್ಯದಲ್ಲಿ ನೋಡಬೇಕಾಗಿದೆ. ರಾಜಪಕ್ಸೆ ಚೀನಾದ ಬೀಜಿಂಗ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನುವುದು ಜನಜನಿತ. ಗೋತಬಯಾ ರಾಜಪಕ್ಸೆ ಅವರು ಮಹಿಂದಾ ರಾಜಪಕ್ಸೆ ಆಡಳಿತದ ಅವಧಿಯಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ ಭಾರತದ ಭದ್ರತಾ ಕಾಳಜಿಗಳನ್ನು ನಿರ್ಲಕ್ಷ ಮಾಡಿದ್ದು ಕಂಡುಬಂದಿತ್ತು. ಇದಾದ ಮೇಲೆ ರಾಜಪಕ್ಸೆಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಮತ್ತೆ ಅಧಿಕಾರಕ್ಕೆ ಬಂದರೆ ಆಗಿರುವ ಲೋಪಗಳನ್ನು ಸರಿಪಡಿಸುವ ವಾಗ್ದಾನ ನೀಡಿದ್ದರು. 2005-2009ರವರೆಗೆ ಶ‍್ರೀಲಂಕಾದ ರಕ್ಷಣಾ ಕಾರ್ಯದರ್ಶಿಯಾಗಿದ್ದ ಗೋತಬಯ ರಾಜಪಕ್ಸೆ, ಆ ಅವಧಿಯಲ್ಲಿ ಎಲ್‌ಟಿಟಿಇಯನ್ನು ಬಗ್ಗುಬಡಿಯಲು ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೂ ಅವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ, ಸಿಂಹಳೀಯ ಬೌದ್ಧ ರಾಷ್ಟ್ರೀಯವಾದಿ ಉಗ್ರಗಾಮಿ ಗುಂಪುಗಳನ್ನು ಮತ್ತು ಅವರ ಕೋಮು ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪಗಳು ಕೇಳಿ ಬರುತ್ತವೆ. ಇಂಥ ಆರೋಪ ಇರುವ ಕಾರಣಕ್ಕೆ 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಶ್ರೀಲಂಕಾದ ಅಲ್ಪಸಂಖ್ಯಾತ ಮತಗಳ ಒಂದು ದೊಡ್ಡ ಭಾಗವು ರಾಜಪಕ್ಸೆ ಅವರ ಸ್ಪರ್ಧಿ ಸಜಿತ್ ಪ್ರೇಮದಾಸ ಅವರಿಗೆ ವರ್ಗವಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ತಾವೇ ಶ್ರೀಲಂಕಾ ಅಧ್ಯಕ್ಷರಾಗುವುದೆಂದು ಗೋತಬಯ ರಾಜಪಕ್ಸೆ ಹೇಳಿದ್ದರು.ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯ ಸಾಧಿಸಿದ ಬಳಿಕ ಮೊದಲ ಬಾರಿಗೆ ಭಾಷಣ ಮಾಡಿದ ಗೋತಬಯ ರಾಜಪಕ್ಸೆ, ವಿಶೇಷವಾಗಿ ಈಸ್ಟರ್ ಸಂಡೆ ಬಾಂಬ್ ಸ್ಫೋಟದ ನಂತರ ಒತ್ತಡದಲ್ಲಿರುವ ರಾಷ್ಟ್ರದ ಆರ್ಥಿಕತೆಯನ್ನು ಸೂಕ್ತವಾಗಿ ನಿರ್ವಹಿಸುವುದರತ್ತ ಗಮನ ಹರಿಸುವುದಾಗಿ ಭರವಸೆ ನೀಡಿದರು. ಇಂಡೋ-ಲಂಕಾ ಸಂಬಂಧ ಹೇಗಿರುತ್ತದೆಂಬುದು ಪ್ರಮುಖ ವಿಷಯವಾದ ಕಾರಣ ತಮಿಳರನ್ನು ರಾಷ್ಟ್ರಪತಿಯನ್ನಾಗಿಸುವ ಪ್ರಶ್ನೆಗೆ ಗೋತಬಯ ರಾಜಪಕ್ಸೆ ಯಾವ ರೀತಿಯಲ್ಲಿ ಉತ್ತಿರಿಸುತ್ತಾರೆ ಎಂಬುದನ್ನು ಕಾದುನೋಡುಬೇಕು. ಗೋತಬಯಾ ರಾಜಪಕ್ಸೆ ಅವರ ನಾಯಕತ್ವದಲ್ಲಿ ಭದ್ರತಾ ಕ್ಷೇತ್ರದಲ್ಲಿ ನವದೆಹಲಿ ಮತ್ತು ಕೊಲಂಬೊ ನಡುವೆ ಗಟ್ಟಿಯಾದ ಸಂಬಂಧ ಏರ್ಪಡಬಹುದೆಂದು ಅಂದಾಜು ಮಾಡಲಾಗಿದೆ. ಭಾರತ-ಶ್ರೀಲಂಕಾ ಸಂಬಂಧಗಳನ್ನು ಗಟ್ಟಿಗೊಳಿಸುವುದು ಹಾಗೂ ಮತ್ತು ದ್ವಿಪಕ್ಷೀಯ ಸಂಬಂಧದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ಸರ್ಕಾರಗಳ ನಡುವೆ ಪರಸ್ಪರ ತಿಳುವಳಿಕೆ ಮತ್ತು ಸಹಕಾರ ಮೂಡಬೇಕಾದುದು ಅತ್ಯಗತ್ಯವಾದುದಾಗಿದೆ. ದೇಶೀಯ ಅಂಶಗಳು ಯಾವಾಗಲೂ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದ ಅಲ್ಪಸಂಖ್ಯಾತರ ಬಗ್ಗೆ ಗೋತಬಯ ರಾಜಪಕ್ಸೆ ಅವರ ವಿಧಾನ, ಮಾನವ ಹಕ್ಕುಗಳ ಸಮಸ್ಯೆ ಮತ್ತು ಸಾಮರಸ್ಯ ಕಾರ್ಯವಿಧಾನವು ಭಾರತ-ಶ್ರೀಲಂಕಾ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ನಿರ್ದಿಷ್ಟ ದೇಶದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಹಾಯಕ್ಕಾಗಿ ಪಕ್ಷಪಾತವನ್ನು ತೋರಿಸದೆ ಸಮತೋಲಿತ ವಿದೇಶಾಂಗ ನೀತಿಯನ್ನು ಅನುಸರಿಸುವ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಗೋತಬಯ ರಾಜಪಕ್ಸೆ ಅವರ ಆಡಳಿತದಲ್ಲಿ ಹೇಗಿರುತ್ತದೆ ಎಂಬುದರ ಮೇಲೆ ಇಂಡೋ-ಲಂಕಾ ಸಂಬಂಧಗಳ ಭವಿಷ್ಯ ಹೇಗಿರುತ್ತದೆ ಎಂಬುದು ನಿರ್ಧಾರವಾಗುತ್ತದೆ.
ಸ್ಕ್ರಿಪ್ಟ್: ಡಾ. ಗುಲ್ಬಿನ್ ಸುಲ್ತಾನಾ, ಸಂಶೋಧನಾ ವಿಶ್ಲೇಷಕ, ಐಡಿಎಸ್ಎ

Comments
Post a Comment