ಬ್ರಿಟೈನ್‌ನಲ್ಲಿ ಸ್ನ್ಯಾಪ್ ಚುನಾವಣೆ: ಒಂದು ಅವಲೋಕನ
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಬ್ರೆಕ್ಸಿಟ್ ಯೋಜನೆಯನ್ನು ಜಾರಿಗೆ ತರಲು ಸಂಸತ್ತಿನಲ್ಲಿ ಬಹುಮತ ಪಡೆಯುವ ಪ್ರಯತ್ನವಾಗಿ ಅವಧಿಗೂ ಮುನ್ನವೇ ಡಿಸೆಂಬರ್ 12 ರಂದು ಚುನಾವಣೆ ಘೋಷಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಡೆಯುತ್ತಿರುವ ನಾಲ್ಕು ಬಾರಿ ಚುನಾವಣೆಗಳು ನಡೆದಿವೆ. ಇದು 2016ರಲ್ಲಿ ಬ್ರೆಕ್ಸಿಟ್ ಯೋಜನೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಬ್ರಿಟನ್ ಎದುರಿಸುತ್ತಿರುವ ರಾಜಕೀಯ ನಿಲುವಿನ ಒಂದು ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ. 2017 ರಲ್ಲಿ ಅಂದಿನ ಪ್ರಧಾನಿ ಥೆರೆಸಾ ಮೇ ಅವರು ಬರಮಾಡಿಕೊಂಡಿದ್ದ ಕೊನೆಯ ಕ್ಷಿಪ್ರ ಚುನಾವಣೆಯಲ್ಲಿ ಅವರ ಕನ್ಸರ್ವೇಟೀವ್ ಪಕ್ಷ ಬಹುಮತವನ್ನು ಕಳೆದುಕೊಂಡಿತ್ತು. ಡೆಮಾಕ್ರಟಿಕ್ ಯೂನಿಯನಿಸ್ಟ್ ಪಕ್ಷ (ಡಿಯುಪಿ)ವು ಬ್ರಿಟಿಷ್ ಸಂಸತ್ತಿನಲ್ಲಿ ಅಧಿಕಾರಹೊಂದಲು ಬೇಕಾದ ಬೆಂಬಲವನ್ನು ಗಳಿಸಿಕೊಂಡಿತ್ತು.
ಸಾರ್ವತ್ರಿಕ ಚುನಾವಣಾ ಪ್ರಚಾರವು ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಸಮೀಕ್ಷೆಗಳು ಹೊರಬರುತ್ತಿದ್ದು ಕನ್ಸರ್ವೇಟೀವ್ ಪಕ್ಷವು ಲೇಬರ್ ಪಕ್ಷಕ್ಕಿಂತ 19 ಅಂಕಗಳ ಮುನ್ನಡೆ ಸಾಧಿಸುತ್ತಿದೆ ಎಂದು ಹೇಳುತ್ತಿವೆ. ಒಟ್ಟು ಮತಗಳ ಪ್ರಮಾಣದಲ್ಲಿ ಕನ್ಸರ್ವೇಟೀವ್ ಪಕ್ಷವು ಪ್ರಸ್ತುತ ಶೇಕಡಾ 47 ರಷ್ಟನ್ನು ಗಳಿಸಲಿದೆ. ಲೇಬರ್ ಪಕ್ಷವು ಶೇಕಡಾ 28ರಷ್ಟು, ಲಿಬರಲ್ ಡೆಮೋಕ್ರಾಟ್ ಪಕ್ಷವು ಶೇಕಡಾ 12 ರಷ್ಟು ಹಾಗೂ ಬ್ರೆಕ್ಸಿಟ್ ಪಕ್ಷವು ಕೇವಲ ಶೇಕಡಾ 3ರಷ್ಟು ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಪ್ರಮುಖ ವಿಷಯದ ಬಗ್ಗೆ ಪ್ರಮುಖ ಪಕ್ಷಗಳು ತಮ್ಮ ನಿಲುವನ್ನು ಚುನಾವಣಾ ಪ್ರಣಾಳಿಕೆಗಳ ಮೂಲಕ ಹೇಳಿದ್ದು ಅವುಗಳ ಸಂಕ್ಷಿಪ್ತ ಅವಲೋಕನದ ಬಳಿಕ ಈ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಇದು ನಿಸ್ಸಂದೇಹವಾಗಿ ಬ್ರೆಕ್ಸಿಟ್ ಗೆ ಸಂಬಂಧಿಸಿದುದಾಗಿದೆ. ಕನ್ಸರ್ವೇಟೀವ್ ಪಕ್ಷದವರು ತಮ್ಮ ಅಭಿಯಾನವನ್ನು ಬ್ರೆಕ್ಸಿಟ್ ಅನ್ನು ತಲುಪಿಸುವ ಪ್ರತಿಜ್ಞೆಯ ಮೇಲೆಯೇ ಕೇಂದ್ರೀಕರಿಸಿದ್ದಾರೆ. ಜನವರಿ ಅಂತ್ಯದ ವೇಳೆಗೆ "ಹೊಸ ಬ್ರಿಟನ್‌ನ್ನು ರೂಪಿಸುತ್ತೇವೆ" ಎಂದು ಹೇಳುತ್ತಿದ್ದಾರೆ. "ಬ್ರೆಕ್ಸಿಟ್ ಅನ್ನು ಪೂರ್ಣಗೊಳಿಸಲು ನಾವು ಬಯಸುತ್ತೇವೆ, ಆದ್ದರಿಂದ ನಾವು ನಮ್ಮ ಎನ್ಎಚ್ಎಸ್, ಶಾಲೆಗಳು ಮತ್ತು ಪೊಲೀಸರಲ್ಲಿ ಹೂಡಿಕೆ ಮಾಡಬಹುದು" ಎಂದು ಅಭಿಯಾನ ನಡೆಸುತ್ತಿದ್ದಾರೆ.
ಲೇಬರ್ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್ ಇತ್ತೀಚೆಗೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡುತ್ತಾ ಜನ ಅಧಿಕಾರ ಕೊಟ್ಟ ಆರು ತಿಂಗಳಲ್ಲಿ ತಮ್ಮ ಪಕ್ಷವು ಬ್ರೆಕ್ಸಿಟ್ ವಿಷಯದ ಬಗೆಗಿನ ಅಡೆತಡೆಗಳೆಲ್ಲವನ್ನೂ ನಿವಾರಿಸಲಿದೆ ಎಂಬ ಭರವಸೆ ನೀಡಿದ್ದಾರೆ. ಇದರ ಹೊಸ ಒಪ್ಪಂದವು "ಶಾಶ್ವತ ಮತ್ತು ಸಮಗ್ರ ಯುಕೆ-ವ್ಯಾಪಕ ತೆರಿಗೆ ಯೂನಿಯನ್" ಮತ್ತು "ಏಕ ಮಾರುಕಟ್ಟೆಯೊಂದಿಗೆ ನಿಕಟ ಹೊಂದಾಣಿಕೆ" ಅನ್ನು ಒಳಗೊಂಡಿರುತ್ತದೆ. ಮತ್ತೊಂದು ಸಂದರ್ಭದಲ್ಲಿ ಮಾತನಾಡಿದ ಕಾರ್ಬಿನ್ ಅವರು ತಮ್ಮ ಪಕ್ಷವು ಆಧಿಕಾರವನ್ನು ಹಿಡಿಯಲು ‘ಬಿಡಿ ಅಥವಾ ಉಳಿಯಿರಿ’ ಎಂಬ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದರು. ಈ ತಟಸ್ಥ ನಿಲುವು ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಏಕೆಂದರೆ ಬ್ರಿಟಿಷ್ ಜನರು ದೇಶವನ್ನು ದುರ್ಬಲಗೊಳಿಸಿರುವ ರಾಜಕೀಯ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಮತ್ತು ಅವರ ಸಾಮಾಜಿಕ-ಆರ್ಥಿಕ ಜೀವನಕ್ಕೆ ನಿಶ್ಚಿತತೆ ತಂದುಕೊಡಬಲ್ಲ ನಾಯಕನನ್ನು ನಿರೀಕ್ಷಿಸುತ್ತಾರೆ. ಮತ್ತೊಂದೆಡೆ, ಲಿಬರಲ್ ಡೆಮೋಕ್ರಾಟ್ ಪಕ್ಷದವರು ಅಲ್ಲಿನ ಸಂವಿಧಾನದ 50ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದಾಗಿ ಮತ್ತು ಬ್ರಿಟನ್ ಅನ್ನು ಯುರೋಪಿಯನ್ ಒಕ್ಕೂಟದಲ್ಲಿ ಉಳಿಸಲು ಬದ್ದರಾಗಿರುವ ಭರವಸೆಯನ್ನು ನೀಡಿದ್ದಾರೆ. ಬ್ರೆಕ್ಸಿಟ್ ಪಕ್ಷವು ‘ಕ್ಲೀನ್ ಬ್ರೆಕ್ಸಿಟ್’ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಟೋರಿಗಳಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೂ ಮುಂದಾಗಿದೆ.
ಇವೆಲ್ಲದರ ನಡುವೆ ಲೇಬರ್ ಪಕ್ಷವು ಸಂಪೂರ್ಣವಾಗಿ ವಿಭಿನ್ನವಾದ ಟಿಪ್ಪಣಿ ಮಾಡಿದೆ. ಬ್ರಿಟಿಷ್ ಚುನಾವಣೆ ವೇಳೆ ಅನಗತ್ಯವಾಗಿ ಭಾರತವನ್ನು ಎಳೆದುತಂದಿದೆ. ಸೆಪ್ಟೆಂಬರ್‌ನಲ್ಲಿ ನಡೆದ ಪಕ್ಷದ ಸಮ್ಮೇಳನದಲ್ಲಿ "ಕಾಶ್ಮೀರದಲ್ಲಿ ಮಾನವೀಯ ಬಿಕ್ಕಟ್ಟು ಇದೆ ಮತ್ತು ಕಾಶ್ಮೀರದ ಜನರಿಗೆ ಸ್ವ-ನಿರ್ಣಯ ತೆಗೆದುಕೊಳ್ಳುವ ಹಕ್ಕನ್ನು ನೀಡಬೇಕು" ಎಂದು ಪಕ್ಷದ ಕಾರ್ಮಿಕ ಸದಸ್ಯರು ನಿರ್ಣಯವೊಂದನ್ನು ಅಂಗೀಕರಿಸಿದ್ದಾರೆ. ಇದು ಉಲ್ಲೇಖಿಸಬೇಕಾದ ಸಂಗತಿಯಾಗಿದೆ. ಜೊತೆಗಿದು ಸತ್ಯಕ್ಕೆ ದೂರವಾದ ವಿಷಯ ಮತ್ತು ಕನಿಷ್ಠ ಭಾವನೆಯಿಂದ ಹೇಳಿದ ವಿಷಯವಾಗಿದೆ. ಭಾರತವು ಸಾರ್ವಭೌಮ ರಾಷ್ಟ್ರವಾಗಿ ಆಂತರಿಕ ಬದಲಾವಣೆಗಳನ್ನು ಮಾಡುವ ಹಕ್ಕನ್ನು ಹೊಂದಿರುತ್ತದೆ. ಸಂವಿಧಾನದ 370ನೇ ವಿಧಿ ಹಿಂತೆಗೆದುಕೊಳ್ಳುವಿಕೆ ಬಗ್ಗೆ ಭಾರತದ ಒಳಗೆ ಮತ್ತು ಹೊರಗೆ ವ್ಯಾಪಕವಾದ ಅನುಮೋದನೆ ವ್ಯಕ್ತವಾಗಿದೆ.
ಬ್ರಿಟನ್ ಮತದಾನದಲ್ಲಿ ಕಾಶ್ಮೀರದ ವಿಷಯವು ನಿರ್ಣಾಯಕ ಅಂಶವಾಗಿದೆ ಎಂಬಂತಹ ವಿಷಯವು ಚುನಾವಣೆಗೆ ಮುಂಚಿತವಾಗಿ ಅನಗತ್ಯ ಉದ್ವಿಗ್ನತೆಯನ್ನು ಸೃಷ್ಟಿಸಬಹುದು.
ಇಯುನಲ್ಲಿ ನಡೆಯುತ್ತಿರುವ ಚುನಾವಣೆ ಅಲ್ಲಿ ಉದ್ಭವಿಸಿರುವ ಅಸ್ತವ್ಯಸ್ತತೆಯನ್ನು ಪರಿಹರಿಸುವಲ್ಲಿ ಸಫಲವಾಗದೆ ಮುಗಿದಿದ್ದೇಯಾದರೆ ಬ್ರಿಟನ್‌ನ ಭವಿಷ್ಯವು ನಿಶ್ಚಿತತೆಯಿಂದ ದೂರ ಇರಬೇಕಾಗುತ್ತದೆ. ದಿನದಿಂದ ದಿನಕ್ಕೆ ಅನಿಶ್ಚಿತತೆ ಹೆಚ್ಚಾಗಿ ಮುಂಬರುವ ವರ್ಷದಲ್ಲಿ ಬ್ರೆಕ್ಸಿಟ್ ಪ್ರಯತ್ನವೇ ಕೊನೆಗೊಳ್ಳುವ ಸಮಯ ಬಂದು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉಸಿರುಗಟ್ಟಿಸುವ ಸಾಧ್ಯತೆಯೂ ಇದೆ. ಕನ್ಸರ್ವೇಟೀವ್ ಪಕ್ಷಗಳು ಚುನಾವಣೆಯಲ್ಲಿ ಗೆದ್ದರೆ ಯಾವುದೇ ಒಪ್ಪಂದವಿಲ್ಲದ ಬ್ರೆಕ್ಸಿಟ್ ಸಿದ್ಧತೆಗಳು ಮುಂದುವರಿಯಲಿವೆ ಎಂದು ಹಣಕಾಸು ಸಚಿವ ರಿಷಿ ಸುನಾಕ್ ಅವರು ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ಜಾನ್ಸನ್ ಅವರು ಶೀಘ್ರ ಚುನಾವಣೆ ನಡೆಸುವ ಮೂಲಕ ಅಪಾಯವನ್ನು ಅಹ್ವಾನಿಸಿಕೊಂಡಿದ್ದಾರೆ. ಇದಲ್ಲದೆ ಬ್ರಿಟಿಷ್ ಪ್ರಧಾನ ಮಂತ್ರಿಯ ನಿರ್ಧಾರವು ಡಿಸೆಂಬರ್ 31, 2020ರ ನಂತರ ಅವರ ಸರ್ಕಾರ ಮುಂದುವರೆಯುವ ಸಾಧ್ಯತೆಯನ್ನೂ ಉಳಿಸಿಲ್ಲ. ಇಯು ನೀಡುವ ಯಾವುದೇ ನಿರ್ಧಾರವನ್ನು ಸ್ವೀಕರಿಸಲು ಅಥವಾ ಯಾವುದೇ ಒಪ್ಪಂದವಿಲ್ಲದೆ ಯುಕೆ ಯಿಂದ ನಿರ್ಗಮಿಸಲು ಅವರು ಸಿದ್ದರಿರಬೇಕೆಂಬ ಸುಳಿವನ್ನೂ ನೀಡುತ್ತಿದೆ. ಬಹಳ ಮುಖ್ಯವಾದ ವಿಷಯವೆಂದರೆ ಬ್ರಿಟಿಷ್ ಸಂಸತ್ತಿನಲ್ಲಿ ಬ್ರೆಕ್ಸಿಟ್ ಅನ್ನು ಬೆಂಬಲಿಸುವವರಿಗೆ ಬಹುಮತ ಸಿಗದೇ ಇದ್ದರೆ ಆ ಕೊರತೆಯನ್ನು ನೀಗಿಸಿಕೊಳ್ಳುವುದು ಮತ್ಯಾವ ಒಮ್ಮತದ ನಿರ್ಧಾರ ಮೂಲಕ ಎಂಬುದನ್ನು ಕಾದು ನೋಡಬೇಕಾಗಿದೆ.
ಸ್ಕ್ರಿಪ್ಟ್: ಡಾ. ಸಂಗಮಿತ್ರಾ ಶರ್ಮಾ, ಯುರೋಪಿಯನ್ ವ್ಯವಹಾರಗಳ ಕಾರ್ಯತಂತ್ರದ ವಿಶ್ಲೇಷಕ
Comments
Post a Comment