ಮೂಲಸೌಕರ್ಯ ಬೆಳವಣಿಗೆಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಭಾರತ ನಿರ್ಧಾರ

ಆರ್ಥಿಕ ಹಿಂಜರಿತವನ್ನು ತೆಹಬದಿಗೆ ತರುವ ಮತ್ತು ಉದ್ಯಮ-ಬೆಂಬಲ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಮುಂದುವರಿಯುವ ಮಹತ್ವದ ಪ್ರಯತ್ನವಾಗಿ ಕೇಂದ್ರ ಸರ್ಕಾರವು ಬುಧವಾರ ಜಂಬೋ ಯೋಜನೆಗೆ ಚಾಲನೆ ನೀಡಿರುವುದು ಮುಂದಿನ ಐದು ವರ್ಷಗಳಲ್ಲಿ ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ನೂರು ಲಕ್ಷ ಕೋಟಿ ರೂಪಾಯಿಗಳ ಬಂಡವಾಳ‌ ಹೂಡಿಕೆಯಾಗುವ ನಿರೀಕ್ಷೆಯನ್ನು ಹುಟ್ಟುಹಾಕಿದೆ‌. ಈ ಅಪಾರ ಪ್ರಮಾಣದ ಬಂಡವಾಳ ಹೂಡಿಕೆಯಿಂದಾಗಿ ಮೂಲಸೌಕರ್ಯಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಸುಧಾರಿಸುವಲ್ಲಿ ಗಣನೀಯ ಮತ್ತು ಪರಿಣಾಮಕಾರಿ ಕೆಲಸ ಆಗಲಿದೆ ಎಂದು ಹೇಳಿದ ಕೇಂದ್ರ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ಬಂಡವಾಳ‌ ಹೂಡಿಕೆಯು ವಿಮಾನಯಾನ, ಹಡಗು ಸಾಗಣೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿರಲಿದೆ. ಈ ಬೆಳವಣಿಗೆಯು ರಸ್ತೆಗಳು, ಹೆದ್ದಾರಿಗಳು, ರೈಲ್ವೆಗಳು ಮತ್ತು ಬಂದರುಗಳು, ವಿದ್ಯುತ್, ತೈಲ ಮತ್ತು ಅನಿಲದ ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ದೇಶೀಯ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಲು ಹೊಸ ಸಾಮರ್ಥ್ಯವನ್ನು ನೀಡುತ್ತದೆ ಎಂದು ಪ್ರತಿಪಾದಿಸಿದರು.

ವಿಶಾಲವಾದ ರೈಲು ಜಾಲಗಳ ಮುಖ್ಯಸ್ಥರಾಗಿರುವ ಗೋಯಲ್, ಭಾರತೀಯ ರೈಲ್ವೆ 50 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ಒಳಗೊಂಡ 12 ವರ್ಷಗಳ ಯೋಜನೆಯೊಂದನ್ನು ರೂಪಿಸಿದೆ, ಇದು ಮಧ್ಯಮ ಅವಧಿಗೆ ಸಂಬಂಧಿಸಿದಂತಹ ಮೊತ್ತದ ಅಭೂತಪೂರ್ವ ಯೋಜನೆಯಾಗಿದೆ. ಸರ್ಕಾರವೊಂದರಿಂದಲೇ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯವಿಲ್ಲವಾದುದರಿಂದ ಖಾಸಗಿ ಹೂಡಿಕೆಯ ಹರಿವನ್ನು ಪೂರೈಸಲು ಸರ್ಕಾರವು ಅಗತ್ಯವಾದ ಪ್ರೋತ್ಸಾಹಕಗಳನ್ನು ವಿಸ್ತರಿಸುವ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು. ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕೂಡ ಹೇಳಿದರು.

2024-25ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದುವ ಗುರಿ ಇಟ್ಟುಕೊಂಡು ಅದಕ್ಕೆ ಪೂರಕವಾದ ಬಂಡವಾಳ ಹೂಡಿಕೆ ಪ್ರಾರಂಭಿಸುವ ವಾತಾವರಣವನ್ನು ನಿರ್ಮಿಸಲು ಕಳೆದ ಐದು ವರ್ಷಗಳಲ್ಲಿ ಸರ್ಕಾರವು ತನ್ನ ಆರ್ಥಿಕತೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದಿದೆ. ಸರ್ಕಾರವು ಕೈಗೊಂಡಿರುವ ವಿವಿಧ ಪೂರ್ವಭಾವಿ ಹೂಡಿಕೆ ಕ್ರಮಗಳ ಪೈಕಿ 2016ರಲ್ಲಿ ದಿವಾಳಿತನ ಮತ್ತು ದಿವಾಳಿತನ ಮಸೂದೆಯನ್ನು ಪರಿಚಯಿಸಿದ್ದು ಕೂಡ ಒಂದಾಗಿದ್ದು, ಇದು ಹಣಕಾಸು ವ್ಯವಸ್ಥೆಯನ್ನು ಸ್ವಚ್ಛಗೊಳಿಸಿ ಮಧ್ಯಸ್ಥಗಾರರ ಬೇಡಿಕೆಗಳನ್ನು ಪೂರೈಸುವಂತಹ ವ್ಯವಸ್ಥೆ ನಿರ್ಮಾಣ ಮಾಡಲು ಸಹಕಾರಿ ಆಗಲಿದೆ.‌ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತಂದಿರುವುದು ಅನೇಕ ತೆರಿಗೆಗಳನ್ನು ಕೆಲವು ದರಗಳ ವ್ಯವಸ್ಥೆಯಲ್ಲಿ ಕಡಿತಗೊಳಿಸಿ ದೇಶದಲ್ಲಿ ವ್ಯವಹಾರವನ್ನು ಸುಲಭಗೊಳಿಸುವಂತಹ ಮಹತ್ವದ ಸುಧಾರಣಾ ಕ್ರಮವಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯು ದೇಶದ ಸರಕು ಮತ್ತು ಸೇವೆಗಳ ಸ್ಥಳೀಯ ಸಾಮರ್ಥ್ಯವನ್ನು ಹೆಚ್ಚಿಸಿ ವಿಶ್ವದರ್ಜೆಗೆ ಏರಿಸಲು ಒಂದು ಪ್ರಮುಖ ಮೈಲಿಗಲ್ಲಾಗಿದೆ.

ಬಂಡವಾಳ ಹೂಡಿಕೆ ಚಟುವಟಿಕೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ತೀರಾ ಇತ್ತೀಚೆಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡ 30ರಿಂದ 22ಕ್ಕೆ ಇಳಿಸುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಹೊಸ ದೇಶೀಯ ಉತ್ಪಾದನಾ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 15ಕ್ಕೆ ಇಳಿಸಲಾಗಿದೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2019ರ ಅವಧಿಯ ರೆಪೊ ದರ 135 ಬೇಸಿಸ್ ಪಾಯಿಂಟ್‌ಗಳ ಕಡಿತಗೊಂಡಿದ್ದಕ್ಕೆ ಪೂರಕವಾಗಿದೆ ಮತ್ತು ಹೂಡಿಕೆದಾರರಿಗೆ ಬಂಡವಾಳದ ವೆಚ್ಚವನ್ನು ಕಡಿತಗೊಳಿಸುವುದಕ್ಕಾಗಿ ಬ್ಯಾಂಕುಗಳು ತಮ್ಮ ಸಾಲದ ದರಗಳನ್ನು ಬಾಹ್ಯ ಮಾನದಂಡಗಳೊಂದಿಗೆ ಬೆಸೆಯುವುದಕ್ಕೂ ಪೂರಕವಾಗಿದೆ. ಇದರಿಂದಾಗಿ ಹೂಡಿಕೆದಾರರು ಸಾಂಪ್ರದಾಯಿಕ ಬ್ಯಾಂಕಿಂಗ್ ಜಾಲಗಳಿಂದ ಉತ್ಪಾದಕ ಉದ್ದೇಶಗಳಿಗಾಗಿ ದೊಡ್ಡ ಪ್ರಮಾಣದ ಸಾಲದ ಒಪ್ಪಂದ ಮಾಡಿಕೊಳ್ಳುವಾಗ ಸುಲಭವಾಗಿ ವ್ಯವಹರಿಸಬಹುದಾಗಿದೆ.

ಬುಧವಾರ ಮಾತ್ರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕತೆಯ ಸ್ಥಿತಿಯ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಉತ್ತರ ನೀಡುತ್ತಾ, ಕನಿಷ್ಠ ಪರ್ಯಾಯ ತೆರಿಗೆ (ಮ್ಯಾಟ್) ಮತ್ತು ಲಾಭಾಂಶ ವಿತರಣಾ ತೆರಿಗೆಗಳು ಹಿಂಜರಿತಕ್ಕೆ ಕಾರಣವಾದ ಸಂಗತಿಗಳು ಎಂಬ ಸುಳಿವು ನೀಡಿದರು. ಇಂಡಿಯಾ ಇಂಕ್ (ಇನ್ಕಾರ್ಪೊರೇಟೆಡ್) ನ ಅವಳಿ ಬೇಡಿಕೆಗಳನ್ನು ಮುಂಬರುವ 2020-21ರ ಕೇಂದ್ರ ಬಜೆಟ್ ನಲ್ಲಿ ಕಾಣಬಹುದು. ದೇಶೀಯ ಉದ್ಯಮಗಳಿಗೆ ಅನುಕೂಲಕರವಾದ ಮೂಲಸೌಕರ್ಯಗಳನ್ನು ಪ್ರೋತ್ಸಾಹಿಸಲು ನಿಯತಕಾಲಿಕವಾಗಿ ಪೂರ್ವಭಾವಿ ನೀತಿ ಬೂಸ್ಟರ್ ಪ್ರಮಾಣವನ್ನು ಕೈಗೊಳ್ಳುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಘೋಷಿಸಿದರು. ಮತ್ತು ಈ ಎರಡೂ ಉಪಕ್ರಮಗಳು ಕೂಡ ನಿರ್ಣಾಯಕವಾದವಾಗಿದ್ದು ಇವುಗಳನ್ನು ಮಾಡಿಯೇ ತೀರುತ್ತೇವೆ. ಇದರಿಂದಾಗಿ ಅವು ಸ್ಪರ್ಧಾತ್ಮಕವಾಗಿರುತ್ತವೆ. ಬೆಲೆ ಮತ್ತು ಗುಣಮಟ್ಟವು ವಿಶಾಲವಾದ ಸ್ಥಳೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಛಾಪು ಮೂಡಿಸಲು ಸಹಕಾರಿಯಾಗಲಿದೆ ಎಂದರು.

ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದಂತೆ ದೇಶದಲ್ಲಿ ಮೂಲಸೌಕರ್ಯ ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಯ ನಡುವಿನ ಪರಸ್ಪರ ಸಂಬಂಧವು ತುಂಬಾ ಹೆಚ್ಚಾಗಿದೆ ಎಂಬ ಸ್ಪಷ್ಟವಾದ ಸಂಗತಿಯಿಂದ ನಿಸ್ಸಂದೇಹವಾಗಿ ಸರ್ಕಾರವು ಸಮತೋಲನದಲ್ಲಿದೆ. ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಒಳನಾಡು, ರಸ್ತೆ, ರೈಲು ಮತ್ತು ವಿಮಾನ ನಿಲ್ದಾಣ ಮೂಲಸೌಕರ್ಯಗಳಲ್ಲಿನ ಹೂಡಿಕೆಯ ಪರಸ್ಪರ ಸಂಬಂಧ 0.90ಕ್ಕಿಂತ ಹೆಚ್ಚಾಗಿದೆ. ಇದು ಜಿಡಿಪಿ ಮತ್ತು ಮೂಲಸೌಕರ್ಯದಲ್ಲಿನ ಹೂಡಿಕೆಯ ನಡುವೆ ದೃಢವಾದ ಸಂಬಂಧವಿದೆ ಎಂದು ಸೂಚಿಸುತ್ತದೆ. ಉದ್ದೇಶಿತ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಮೂಲಸೌಕರ್ಯದಲ್ಲಿ ಬೃಹತ್ ಪ್ರಮಾಣದ ಹೂಡಿಕೆಯ ಅಗತ್ಯವಿದೆ ಎಂಬುದನ್ನು ಇದು ನಿಸ್ಸಂಶಯವಾಗಿ ಪ್ರತಿಪಾದಿಸುತ್ತದೆ. ತನ್ನ ಬಳಿ ಇರುವ ಎಲ್ಲಾ ಸಾಧನಗಳ ಮೂಲಕ ಗುರಿ ತಲುಪಿಸಲು ಸರ್ಕಾರವು ಧೃಡವಾಗಿದೆ ಮತ್ತು ಬದ್ಧವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಸ್ಕ್ರಿಪ್ಟ್: ಜಿ.ಎಸ್. ಶ್ರೀನಿವಾಸನ್, ಹಿರಿಯ ಆರ್ಥಿಕ ಪತ್ರಕರ್ತ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ