ಇಂಡೋ-ಪೆಸಿಫಿಕ್ ಟ್ರ್ಯಾಕ್ 1.5 ಸಂವಾದಗಳು

ಸ್ಕ್ರಿಪ್ಟ್: ಡಾ. ಟಿಟ್ಲಿ ಬಸು, ಪೂರ್ವ ಮತ್ತು ಆಗ್ನೇಯ ಏಷ್ಯಾದ ಕಾರ್ಯತಂತ್ರದ ವಿಶ್ಲೇಷಕ

ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪರಿಕಲ್ಪನೆಯೊಂದಿಗೆ ಭೌಗೋಳಿಕ ರಾಜಕೀಯ ಮಂಥನ ನಡೆಯುತ್ತಿರುವ ಸಂದರ್ಭದಲ್ಲಿಯೇ ನವದೆಹಲಿಯಲ್ಲಿ 6ನೇ ಭಾರತೀಯ ಹಿಂದೂ ಮಹಾಸಾಗರೋತ್ತರ ಮತ್ತು ದೆಹಲಿ XI ಎಂಬ ಎರಡು ರೀತಿಯ ಸಂವಾದಗಳನ್ನು ಆಯೋಜಿಸಲಾಗಿತ್ತು. ಇಂಡೋ-ಪೆಸಿಫಿಕ್ ವಿಷಯಗಳನ್ನಾಧರಿಸಿ 2019ರ ಜೂನ್ ತಿಂಗಳಲ್ಲಿ ನಡೆದ ಆಸಿಯಾನ್ ಔಟ್‌ಲುಕ್ ನಲ್ಲಿ ಘೋಷಿಸಿದಂತೆ ಭಾರತವು ಉಚಿತ, ಮುಕ್ತ, ಅಂತರ್ಗತ ಹಾಗೂ ನಿಯಮ ಆಧಾರಿತ ಇಂಡೋ-ಪೆಸಿಫಿಕ್‌ನ ಕಾರ್ಯತಂತ್ರದ ಪರಿಕಲ್ಪನೆ ಕುರಿತಾದ ತನ್ನ ದೃಷ್ಟಿಕೋನದ ಬಗ್ಗೆ ಚರ್ಚಿಸುವುದು ಈ ಸಂವಾದಗಳ ಉದ್ದೇಶವಾಗಿತ್ತು. 2018ರ ಜೂನ್ ತಿಂಗಳಲ್ಲಿ ನಡೆದ ಶಾಂಗ್ರಿಲಾ ಸಂವಾದದಲ್ಲೂ ಇದೇ ಇಂಡೋ-ಪೆಸಿಫಿಕ್ ದೃಷ್ಟಿಕೋನದ ಬಗ್ಗೆ ಚರ್ಚಿಸಲಾಗಿತ್ತು. ಈ ರೀತಿಯ 1.5 ಎರಡು ಸಂವಾದಗಳನ್ನು ಸತತವಾಗಿ ಆಯೋಜಿಸಿದ ನಿದರ್ಶನ ಇದೇ ಮೊದಲಾಗಿದೆ.

ಇಂಡೋ-ಪೆಸಿಫಿಕ್ ಸಂವಾದ ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು, ಭಾರತವು ಗಲ್ಫ್, ಆಫ್ರಿಕನ್ ರಾಷ್ಟ್ರಗಳು ಮತ್ತು ಪೂರ್ವ ಹಿಂದೂ ಮಹಾಸಾಗರ ಸೇರಿದಂತೆ ಪಶ್ಚಿಮ ಸಾಗರವನ್ನೂ ಒಳಗೊಂಡ ಭೌಗೋಳಿಕ ಅಕ್ಷಾಂಶಗಳಿಗೂ ಸೇರಿದ ದೃಷ್ಟಿಕೋನವನ್ನು ಇಟ್ಟುಕೊಂಡಿದೆ ಎಂದು ಹೇಳಿದರು. ಇಂಡೋ-ಪೆಸಿಫಿಕ್ ಪರಿಕಲ್ಪನೆಗೆ ಸಂಬಂಧಿಸಿದಂತೆ ಎಲ್ಲಾ ವಿಷಯ ತಜ್ಞರು ವ್ಯಾಖ್ಯಾನಿಸಿರುವ ರೀತಿಯಲ್ಲಿ ಹಲವು ಸೂಕ್ಷ್ಮ ಸಂಗತಿಗಳು ಅಡಕವಾಗಿದ್ದರೂ ಆ ಎಲ್ಲಾ ವ್ಯತ್ಯಾಸಗಳ ಹೊರತಾಗಿಯೂ ಸಹಕಾರಿ ಉಪಕ್ರಮಕ್ಕಾಗಿ ಸ್ಪಷ್ಟವಾದ ಅಂಶಗಳನ್ನು ಗುರುತಿಸುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇದಕ್ಕೆ ಸಂಬಂಧಿಸಿದಂತೆ ಭಾರತವು 2019ರ ನವೆಂಬರ್ ನಲ್ಲಿ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮವನ್ನು ಪ್ರಾರಂಭಿಸಿದೆ. ಕಡಲ ಪರಿಸರವನ್ನು ನಿರ್ವಹಿಸುವುದು, ವಿಪತ್ತು ಅಪಾಯವನ್ನು ತಗ್ಗಿಸುವುದು ಮತ್ತು ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆ ಸೇರಿದಂತೆ ಕಡಲ ಸುರಕ್ಷತೆಯ ವಿವಿಧ ಬಾಹ್ಯರೇಖೆಗಳ ಮೇಲೆ ಒಟ್ಟಾಗಿ ಕೆಲಸ ಮಾಡಲು ಸಹಕಾರಿ ವೇದಿಕೆಯನ್ನು ರಚಿಸುವುದು ಇಂಡೋ-ಪೆಸಿಫಿಕ್ ಸಂವಾದದ ಉದ್ದೇಶವಾಗಿದೆ.

ಹೆಚ್ಚುವರಿಯಾಗಿ, ಆಸಿಯಾನ್ ಬೆಸೆಯುವಿಕೆ ಎಂಬ ಮಾಸ್ಟರ್ ಪ್ಲ್ಯಾನ್‌ ಮೂಲಕ ಸಂಬಂಧಪಟ್ಟ ಎಲ್ಲಾ ರಾಷ್ಟ್ರಗಳ ಹೊಂದಾಣಿಕೆಯೊಂದಿಗೆ ದೊಡ್ಡ ಮಟ್ಟದ ಹಣಕಾಸು ಬೆಂಬಲದಿಂದ ಸುಸ್ಥಿರ ಮೂಲಸೌಕರ್ಯ ಮತ್ತು ಪ್ರಾದೇಶಿಕ ಸಂಪರ್ಕವನ್ನು ನಿರ್ಮಿಸಲು ಸಾಧ್ಯವಾಗಿದೆ. ಇದಲ್ಲದೆ, ಕಡಿಮೆ-ವೆಚ್ಚ, ಇಂಧನ-ಸಮರ್ಥ ಡಸಲೀಕರಣ ಸೌಲಭ್ಯಗಳನ್ನು ಉತ್ತೇಜಿಸಲು ತಂತ್ರಜ್ಞಾನ ಹಂಚಿಕೆ ಮಾಡಿಕೊಳ್ಳಲಾಗುತ್ತಿದೆ. ಅಥವಾ ಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ ​​(ಐಒಆರ್ ಎ)ನ 'ಗ್ರ್ಯಾಂಡ್ ಚಾಲೆಂಜಸ್' ಯೋಜನೆಯಡಿ ಡಾಕ್ಟರೇಟ್ ನಂತರದ ಅಧ್ಯಯನಕ್ಕಾಗಿ ಫೆಲೋಶಿಪ್ ಯೋಜನೆ ಸೇರಿದಂತೆ ಪಾಲುದಾರಿಕೆ-ನಿರ್ಮಾಣ ಯೋಜನೆಗಳನ್ನು ಉತ್ತೇಜಿಸಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪರಿಕಲ್ಪನಾ ಚರ್ಚೆಯನ್ನೂ ಮೀರಿದ ಸಹಕಾರ ದೊರೆತಿದೆ. ದೆಹಲಿ ಸಂವಾದದಲ್ಲಿ ಇಂಡೋ-ಪೆಸಿಫಿಕ್ ಸಂವಾದದಲ್ಲಿ ಉದಯೋನ್ಮುಖ ವಾಸ್ತುಶಿಲ್ಪ, ಸೇತುವೆಗಳು ಹಾಗೂ ಕೈಗಾರಿಕಾ ಕ್ರಾಂತಿ 4.0 ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿದ ಚರ್ಚೆಗಳು ನಡೆದಿವೆ.

ಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ ​​(ಐಒಆರ್ ಎ) ಪ್ರಧಾನ ಕಾರ್ಯದರ್ಶಿ ಡಾ. ನೋಮ್ವುಯೊ ನೋಕ್ವೆ ಅವರು ಪ್ರಾದೇಶಿಕ ಚೌಕಟ್ಟುಗಳಾದ ಐಒಆರ್ ಎ, ಏಷಿಯಾನ್ ಮತ್ತು ಬೇ ಆಫ್ ಬಂಗಾಳ ಇನಿಶಿಯೇಟಿವ್ ಫಾರ್ ಮಲ್ಟಿ-ಸೆಕ್ಟರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋಆಪರೇಷನ್ (ಬಿಮೆಸ್ಟಿಕ್) ನಡುವೆ ಸಂಭಾವನೀಯ ಸಮಾರ್ಥ್ಯಪೂರ್ಣ ದಾರಿಗಳನ್ನೂ ಅನ್ವೇಷಿಸಬೇಕಾಗಿದೆ ಎಂದು ಹೇಳಿದರು. ಇಂಡೋ-ಪೆಸಿಫಿಕ್ ಸಂವಾದದಲ್ಲಿ ಒಳಗೊಳ್ಳುವಿಕೆ ಮತ್ತು ಒಮ್ಮತ ಎಂಬ ಅಂಶಗಳೂ ಸೇರಿದಂತೆ ಐಒಆರ್ ಎ ಚಾರ್ಟರ್ ನ ಮೂರು ತತ್ವಗಳಾದ ಸಾರ್ವಭೌಮ ಸಮಾನತೆ, ನಿಯಮ-ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆ ಮತ್ತು ಪಾಲುದಾರಿಕೆಯಲ್ಲಿ ಪರಸ್ಪರ ಲಾಭಕ್ಕಾಗಿ ಶಾಂತಿಯುತ ಸಹಕಾರ ನೀಡುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ಇಂಡೋನೇಷ್ಯಾದ ವಿದೇಶಾಂಗ ಸಚಿವೆ ಶ್ರೀಮತಿ ರೆಟ್ನೊ ಎಲ್.ಪಿ. ಮಾರ್ಸುಡಿ ಅವರು ಇಂಡೋ-ಪೆಸಿಫಿಕ್ ಮೇಲೆ ಆಸಿಯಾನ್ ಔಟ್‌ಲುಕ್‌ ಬೀರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಒತ್ತಿ ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಉತ್ಕೃಷ್ಟ ಕಡಲ ತೀರಹೊಂದಿರುವ ದೇಶಗಳ ಪ್ರಬಲ ಶಕ್ತಿಗಳ ನಡುವೆ ರಕ್ಷಣಾ‌ ಕ್ಷೇತ್ರದ ಕುರಿತು ಮತ್ತು ಬಹುಪಕ್ಷೀಯತೆ ಬಗೆಗೆ ದ್ವೇಷ ಹೆಚ್ಚಾಗುತ್ತಿದೆ. ಪರಸ್ಪರ ನಂಬಿಕೆಗಳನ್ನು ಕಡಿಮೆ ಮಾಡುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಈಗ ಉಚಿತ, ಮುಕ್ತ ಮತ್ತು ನ್ಯಾಯೋಚಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯೇ ಉಳಿದಿರುವ ದಾರಿಯಾಗಿದೆ. ಇಂಡೋ-ಪೆಸಿಫಿಕ್‌ ಸಂವಾದದಲ್ಲಿ ನಿರ್ಣಾಯಕವಾದ ಸಮುದ್ರ-ಹಾದಿಗಳ ಕಾರ್ಯತಂತ್ರದ ಬಗ್ಗೆ ನಡೆದ ಚರ್ಚೆ ಕೂಡ ಮಹತ್ವವಾದುದು. ಆದುದರಿಂದ ಇಂಡೋ-ಪೆಸಿಫಿಕ್ ಸಂವಾದವನ್ನು ಒಳಗೊಳ್ಳುವಿಕೆ, ಪಾರದರ್ಶಕತೆ ಮತ್ತು ಮುಕ್ತತೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದಂತೆ ವ್ಯಾಖ್ಯಾನಿಸಬೇಕು ಎಂದು ಅವರು ಹೇಳಿದರು. ಜಾಗತಿಕ ವ್ಯಾಪಾರ ಮೌಲ್ಯದ 40 ಪ್ರತಿಶತಕ್ಕಿಂತಲೂ ಹೆಚ್ಚಿನವು ಸಾಗರದ ಮೂಲಕ ಹಾದುಹೋಗುವುದರಿಂದ ಸಾಗರ ಸಾಮಾನ್ಯ ಭವಿಷ್ಯ ಮತ್ತು ಸಮೃದ್ಧಿಯನ್ನು ವ್ಯಾಖ್ಯಾನಿಸುತ್ತದೆ. ವಿಶ್ವ ಕಚ್ಚಾ ತೈಲ ಉತ್ಪಾದನೆಯ ಪ್ರತಿಶತ 61ರಷ್ಟನ್ನು ಸಾಗರದ ಮೂಲಕ ವಿತರಿಸಲಾಗುತ್ತದೆ ಹಾಗೂ ವಿಶ್ವ ಕಡಲ ಸಂಪನ್ಮೂಲಗಳ ಮೌಲ್ಯವು 24 ಅಮೆರಿಕನ್ ಟ್ರಿಲಿಯನ್ ಆಗಿದೆ. ಹೀಗಾಗಿ ಪರಸ್ಪರರ ಸಹಕಾರದ ಮೂಲಕವೇ ಸಮುದ್ರಗಳು ಒಂದಾಗಬೇಕೇ ಹೊರತು ಸಂಘರ್ಷದ ಮಾರ್ಗದಿಂದಲ್ಲ.

ಭಾರತ-ಆಸಿಯಾನ್ ಕಡಲ ಸಹಕಾರವನ್ನು ಉತ್ತೇಜಿಸುವುದು ಸಾಂಪ್ರದಾಯಿಕವಾದ ಮತ್ತು ಸಾಂಪ್ರದಾಯಿಕವಲ್ಲದ ಭದ್ರತಾ ಸವಾಲುಗಳನ್ನು ನಿರ್ವಹಿಸುವ ದೃಷ್ಟಿಯಿಂದ ಅವಶ್ಯಕವಾದುದಾಗಿದೆ ಎಂಬ ಅಂಶಗಳು ಇಂಡೋ-ಪೆಸಿಫಿಕ್‌ ಸಂವಾದದ ಚರ್ಚೆಗಳಲ್ಲಿ ಪ್ರತಿಬಿಂಬಿತವಾದವು. ಇದಲ್ಲದೆ ಭಾರತ-ಆಸಿಯಾನ್ ಕಡಲ ಆರ್ಥಿಕ ಸಹಕಾರವು ಕಡಲ ಮೂಲಸೌಕರ್ಯ ಮತ್ತು ಸಂಪರ್ಕ ಯೋಜನೆಗಳನ್ನು ಒಳಗೊಂಡಂತೆ ಹಲವು ಸಹಕಾರಿ ಅವಕಾಶಗಳನ್ನು ನೀಡುತ್ತದೆ. ಇಂಡೋನೇಷ್ಯಾವು 2020ರಲ್ಲಿ ಇಂಡೋ-ಪೆಸಿಫಿಕ್ ಮೂಲಸೌಕರ್ಯ ಮತ್ತು ಸಂಪರ್ಕ ವೇದಿಕೆಯಲ್ಲಿ ಭಾಗವಹಿಸಲು ಭಾರತವನ್ನು ಆಹ್ವಾನಿಸಿತ್ತು. ಒಂದನ್ನೊಂದು ಬೆಸೆಯುವ ಯೋಜನೆಗಳನ್ನು ನಿಯಂತ್ರಿಸುವುದರಿಂದ ಉಂಟಾಗಬಹುದಾದ ಆತಂಕಗಳ ಬಗ್ಗೆ ತೆಗೆದುಕೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಚರ್ಚಿಸುವುದು ಕೂಡ ಮುಖ್ಯವಾದುದಾಗಿದೆ.

ಇಂಡೋ-ಪೆಸಿಫಿಕ್ ಸಮುದಾಯವನ್ನು ನಿರ್ಮಿಸುವ ಸವಾಲುಗಳು ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕಗಳನ್ನು ಮೀರಿದುದಾಗಿದೆ. ಇವುಗಳನ್ನು ನಿಭಾಯಿಸಲು ದೃಢವಾದ ಕಾರ್ಯತಂತ್ರ ಅಗತ್ಯವಾಗಿ ಬೇಕಾಗುತ್ತದೆ. ಐಒಆರ್ ಎ ಮತ್ತು ಆಸಿಯಾನ್ ಪಾಲುದಾರರೊಂದಿಗಿನ ಈ 1.5 ಟ್ರ್ಯಾಕ್ ಸಂವಾದಗಳಲ್ಲಿನ ಚರ್ಚೆಗಳು ಇಂಡೋ-ಪೆಸಿಫಿಕ್ ಪರಿಕಲ್ಪನೆಯು ಸ್ವಾತಂತ್ರ್ಯ, ಸೇರ್ಪಡೆ, ನಿಯಮ-ಆಧಾರಿತ, ವಾಸ್ತುಶಿಲ್ಪ ಮತ್ತು ಎಲ್ಲಾ ರಾಷ್ಟ್ರಗಳ ಸಮಾನತೆಯ ಅಂಶಗಳನ್ನು ಒಳಗೊಂಡಿದೆ ಜೊತೆಗೆ ಮುಕ್ತವಾಗಿದೆ.

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ