ಎರಡನೇ 2 + 2 ಭಾರತ -ಅಮೇರಿಕಾ ಸಭೆ

ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಮಂತ್ರಿಗಳು ಮತ್ತು ಭಾರತ ಹಾಗೂ ಅಮೆರಿಕದ ಹಿರಿಯ ಅಧಿಕಾರಿಗಳ ನಡುವಿನ ಎರಡನೇ 2 + 2 ಸಭೆ ಈ ವಾರ ವಾಷಿಂಗ್ಟನ್ ಡಿ.ಸಿ ಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈಚರ್ಚೆಯ ಸಮಯದಲ್ಲಿ ಕಾರ್ಯಸೂಚಿಯಲ್ಲಿನ ಪ್ರಮುಖ ಅಂಶಗಳು - ಪ್ರಾದೇಶಿಕ ಭದ್ರತಾ ಪರಿಸರದಲ್ಲಿನ ಪ್ರಮುಖ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ವಿನಿಮಯ, ಭಯೋತ್ಪಾದನೆಯನ್ನು ನಿಭಾಯಿಸುವುದು, ಅಫ್ಘಾನಿಸ್ತಾನವನ್ನು ಸ್ಥಿರಗೊಳಿಸುವುದು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿಯುತ ಮತ್ತು ಸ್ಥಿರವಾದ ಕ್ರಮಕ್ಕೆ ಕೆಲಸ ಮಾಡುವುದು. ಈ ಸಭೆಯ ಅತ್ಯಂತ ಮಹತ್ವದ ಫಲಿತಾಂಶವೆಂದರೆ ಕೈಗಾರಿಕಾ ಭದ್ರತೆಯಲ್ಲಿ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದು; ಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ 2 + 2 ಸಂವಾದದ ಮೊದಲ ಸುತ್ತಿನಲ್ಲಿ, ಉಭಯ ದೇಶಗಳ ಮಿಲಿಟರಿ ಪಡೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ ಅಥವಾ COMCASA ಸಹಿ ಮಾಡಿದ್ದು ಒಂದು ನಿರ್ಣಾಯಕ ನಿರ್ಧಾರ. ಎರಡನೇ ಸುತ್ತಿನ 2 + 2 ರಲ್ಲಿ ಉಭಯ ದೇಶಗಳ ನಡುವಿನ ಆಳವಾದ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಿತು.

ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆಯ ಬಗೆಗಿನ ಅಭಿಪ್ರಾಯಗಳ ಒಮ್ಮುಖವನ್ನು ದೃಢವಾಗಿ ಹೇಳುವ ಮೂಲಕ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಭಾರತ ಮತ್ತು ಅಮೇರಿಕ ನಡುವಿನ ಈ ಪ್ರಯತ್ನದ ಯಶಸ್ಸಿನ ಬಗ್ಗೆ ಆತಂಕಗಳು ಇದ್ದವು.

ಅಮೇರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ದೋಷಾರೋಪಣೆ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅವರ ಆಡಳಿತಕ್ಕೆ ದೊಡ್ಡ ಸವಾಲನ್ನು ಎದುರಿಸುತ್ತಿದ್ದರು. ಭಾರತ ಪ್ರಮುಖ ಮತ್ತು ಹೊಸ ಶಾಸಕಾಂಗ ಕ್ರಮಗಳನ್ನು ಜಾರಿಗೆ ತರುತ್ತಿದೆ. ಭಾರತ ಮತ್ತು ಅಮೇರಿಕ ಸಹ ಸುಂಕ ಮತ್ತು ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (GSP) ಸಮಸ್ಯೆಗಳ ಬಗೆಗಿನ ವ್ಯತ್ಯಾಸಗಳನ್ನು ಪರಿಹರಿಸಲು ವ್ಯಾಪಾರ ಮಾತುಕತೆಗಳ ಮಧ್ಯದಲ್ಲಿವೆ. ವಾಷಿಂಗ್ಟನ್‌ನ ಒತ್ತಡದ ಹೊರತಾಗಿಯೂ ರಷ್ಯಾದೊಂದಿಗೆ ತನ್ನ ರಕ್ಷಣಾ ಒಪ್ಪಂದಗಳನ್ನು ಮುಂದುವರಿಸಲು ಭಾರತ ನಿರ್ಧರಿಸಿತು. ಮತ್ತೊಂದೆಡೆ, ಟ್ರಂಪ್ ಆಡಳಿತವು ಇರಾನ್ ಬಗ್ಗೆ ನಿರ್ಬಂಧ ನೀತಿಯನ್ನು ಹೊಂದಿದ್ದು ಅದನ್ನು ಭಾರತವು ಒಪ್ಪಲು ಸಾಧ್ಯವಿಲ್ಲ.

GSPಯನ್ನು ಅಮೇರಿಕ ತೆಗೆದುಹಾಕುವ ಬಗ್ಗೆ ಭಾರತೀಯ ಕಂಪನಿಗಳು ಅಸಮಾಧಾನಗೊಂಡಿವೆ. ಏಕೆಂದರೆ ಇದು ಶತಕೋಟಿ ಡಾಲರ್ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಧಾರ್ಮಿಕ ಸ್ವಾತಂತ್ರ್ಯ ವಿಷಯಗಳು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅಮೇರಿಕದ ಕೆಲವು ಶಾಸಕರ ಅಭಿಪ್ರಾಯಗಳನ್ನು ಭಾರತ ಟೀಕಿಸಿತು.

ಆದರೆ ಈ ಸವಾಲಿನ ಬೆಳವಣಿಗೆಗಳು ಅಮೇರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಪೆಂಟಗನ್ ಹಾಗೂ ಅವರ ಭಾರತೀಯ ಸಹವರ್ತಿಗಳ ಸಂಕಲ್ಪವನ್ನು ಕಳೆದ ಎರಡು ದಶಕಗಳಲ್ಲಿ ಶ್ರಮದಾಯಕವಾಗಿ ನಿರ್ಮಿಸಲಾಗಿರುವ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪದೊಂದಿಗೆ ಮುಂದುವರಿಯುವುದನ್ನು ತಡೆಯಲಿಲ್ಲ. ಕಳೆದ ಎರಡು ದಶಕಗಳಲ್ಲಿ ಶ್ರಮದಾಯಕವಾಗಿ ನಿರ್ಮಿಸಲಾಗಿರುವ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಅವರ ಸಂಕಲ್ಪ.

ಎರಡು ರಾಜಧಾನಿಗಳಲ್ಲಿಯೂ ನಾಯಕತ್ವದ ಅನೇಕ ಬದಲಾವಣೆಗಳಾಗಿವೆ. ಹಾಗಿದ್ದರೂ ಸಹಭಾಗಿತ್ವದ ತೀವ್ರ ಬೆಳವಣಿಗೆಯ ನಿದರ್ಶನವೆಂದರೆ ರಕ್ಷಣಾ ಸ್ವಾಧೀನದಲ್ಲಿ ಭಾರತವು ಅಮೇರಿಕದ ಪ್ರಮುಖ ಪಾಲುದಾರನಾಗಿ ಮಾರ್ಪಟ್ಟಿದೆ. ಸುಮಾರು 2000 ಅಮೇರಿಕ ಕಂಪನಿಗಳು ಭಾರತದಲ್ಲಿ ವ್ಯವಹಾರ ನಡೆಸುತ್ತಿವೆ ಮತ್ತು ಸುಮಾರು 200 ಭಾರತೀಯ ಕಂಪನಿಗಳು ಅಮೇರಿಕದಲ್ಲಿ ಹಲವಾರು ಬಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡಿವೆ. ಎರಡು ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೇರಿಕದಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ಅಮೇರಿಕ ಆರ್ಥಿಕತೆಗೆ ವಾರ್ಷಿಕವಾಗಿ ಸುಮಾರು ಏಳು ಬಿಲಿಯನ್ ಕೊಡುಗೆ ನೀಡುತ್ತಿದ್ದಾರೆ.

ಭಯೋತ್ಪಾದನೆಯನ್ನು ಎದುರಿಸುವುದು, ಚೀನಾದ (ಪರಭಕ್ಷಕ ಆರ್ಥಿಕ ಅಭ್ಯಾಸಗಳ ಕಾರಣದಿಂದ) ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ -BRI ವಿರೋಧಿಸುವುದು, ದಕ್ಷಿಣ ಚೀನಾ ಸಮುದ್ರದಲ್ಲಿನ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವುದು, ವಿಶಾಲ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಡಲ ಕ್ರಮದ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಭಾರತ ಮತ್ತು ಅಮೇರಿಕ ಸಮಾನ ಚಿಂತನೆಯಲ್ಲಿದೆ..ಅರಾ

ಅಮೆರಿಕದಜಕಾರಣಿಗಳು ಭಾರತದ ಆಂತರಿಕ ರಾಜಕಾರಣದ ಸಮಸ್ಯೆಗಳನ್ನು ಎತ್ತಿಹಿಡಿಯುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಭಾರತವು ಎಲ್ಲಾ ಸಮಸ್ಯೆಗಳ ಬಗ್ಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಚರ್ಚಿಸುತ್ತದೆ. ಹಾಗಾಗಿ ಭಾರತೀಯ ಪ್ರಜಾಪ್ರಭುತ್ವವನ್ನು "ಗೌರವಿಸಬೇಕಾಗಿದೆ" ಎಂದು ಅವರು ಒತ್ತಿಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಕಾರ್ಯತಂತ್ರದ ಸಹಭಾಗಿತ್ವದ ಕಟ್ಟಡವು ಸಾಕಷ್ಟು ಪ್ರಬಲವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗಾಗಿ ಇತರ ರಾಜಕೀಯ, ಆರ್ಥಿಕ ಅಥವಾ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಶಮನಗೊಳಿಸುವುದು ಕಷ್ಟಕರವಲ್ಲ.
ಭಾರತವುಪರಮಾಣು ಸಾಮರ್ಥ್ಯ ಮತ್ತು ದೃಡವಾದ ಪ್ರಜಾಪ್ರಭುತ್ವವನ್ನು ಹೊಂದಿರುವ ಐದು ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದೆ. ಆದ್ಧರಿಂದ ಅಮೆರಿಕ ಭಾರತವನ್ನು ಕಾರ್ಯತಂತ್ರದ ಪಾಲುದಾರನಾಗಿ ನೋಡುತ್ತಲೇ ಇರುತ್ತದೆ ಮತ್ತು ಎದುರಾಳಿಯಾಗಿ ನೋಡುವುದಿಲ್ಲ. ಅಮೇರಿಕಾದೊಡನೆ ಸಾಗುವುದರಿಂದ ಭಾರತದ ಪಾತ್ರ ಜಾಗತಿಕ ವ್ಯವಹಾರದಲ್ಲಿ ಹಿರಿದಾಗುವುದರ ಬಗ್ಗೆ ರಾಜಕೀಯ ವಲಯದಲ್ಲಿ ಸ್ಪಷ್ತ್ರತೆಯ ಅರಿವುಮೂಡಿದೆ.

ಆ ಮಟ್ಟಿಗೆ, ವಾಷಿಂಗ್ಟನ್‌ನಲ್ಲಿ ನಡೆದ ಎರಡನೇ ಸುತ್ತಿನ 2 + 2 ಸಂವಾದ ಸರಿಯಾದ ದಿಕ್ಕಿನಲ್ಲಿ ಒಂದು ಮೈಲಿಗಲ್ಲಾಗಿದೆ.

ಲೇಖನ: ಪ್ರೊ. ಚಿಂತಾಮಣಿ ಮಹಾಪಾತ್ರ, ರೆಕ್ಟರ್ ಮತ್ತು ಪ್ರೊಫೆಸರ್. ಅಮೇರಿಕ ಅಧ್ಯಯನ ಕೇಂದ್ರ. ಜವಾಹರಲಾಲ್ ವಿಶ್ವವಿದ್ಯಾನಿಲಯ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ