ಹಫೀಜ್ ಸಯೀದ್ ಮೇಲಿನ ದೋಷಾರೋಪಣೆ ವ್ಯಂಗ್ಯವೋ ನಿಜವೋ?

ವಿಶ್ವಸಂಸ್ಥೆ (ಯುಎನ್)ಯೇ ಭಯೋತ್ಪಾದಕ ಎಂದು ಘೋಷಿಸಿರುವ ಜಮಾಅತ್-ಉದಾ-ದವಾ (ಜುಡಿ) ಮುಖ್ಯಸ್ಥ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮೇಲೆ ಲಾಹೋರ್ ನ್ಯಾಯಾಲಯವು ಭಯೋತ್ಪಾದಕ ಚಟುವಟಿಕೆಗೆ ಹಣಕಾಸು ಒದಗಿಸಿದ ದೋಷಾರೋಪಣೆ ಮಾಡಿದೆ. ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆಯು (ಸಿಟಿಡಿ) ಜುಲೈ ತಿಂಗಳಿನಲ್ಲಿ ಹಫೀಜ್ ಸಯೀದ್ ಮತ್ತು ಆತನ ಸಹಚರರ ವಿರುದ್ಧ 23 ಎಫ್‌ಐಆರ್ ಗಳನ್ನು ದಾಖಲಿಸಿ ನ್ಯಾಯಾಂಗ ರಿಮಾಂಡ್‌ ಮೂಲಕ ಲಾಹೋರಿನ ಕೋಟ್ ಲಖಪತ್ ಜೈಲಿಗೆ ಕಳುಹಿಸಿಕೊಟ್ಟಿತ್ತು. ಪ್ರಕರಣದ ಬಗ್ಗೆ ಶಿಕ್ಷೆ ಪ್ರಕಟಿಸಿದಾಗ ಸಯೀದ್ ನ್ಯಾಯಾಲಯದಲ್ಲೇ ಇದ್ದರು ಎನ್ನಲಾಗಿದೆ. ಪಾಕಿಸ್ತಾನದ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಡಿಸೆಂಬರ್ 11 ಅನ್ನು ಸಯೀದ್ ವಿರುದ್ಧದ ಆರೋಪಗಳನ್ನು ರೂಪಿಸುವ ದಿನಾಂಕವೆಂದು ಹೇಳಿದೆ. ಈಗ ಪ್ರಶ್ನೆ ಇರುವುದು ಪ್ರಕರಣ ಈಗೇಕೆ? ನ್ಯಾಯಾಲಯವು ಈಗ ಸಯೀದ್ ವಿರುದ್ಧದ ಪ್ರಕರಣವನ್ನು ಗಂಭೀರವಾಗಿ ಮುಂದುವರಿಸುತ್ತದೆಯೇ? ಎಂದು. ಪಾಕಿಸ್ತಾನದ ವ್ಯವಸ್ಥೆಗಳು ಕಾರ್ಯನಿರ್ವಹಿಸುವ ವಿಧಾನವನ್ನು ಬಲ್ಲ ಪ್ರತಿಯೊಬ್ಬರೂ ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಜಾಗತಿಕ ಭಯೋತ್ಪಾದನಾ-ವಿರೋಧಿ ಹಣಕಾಸು ವಾಚ್‌ಡಾಗ್ ಎಂದೇ ಹೇಳಲಾಗುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಭಯೋತ್ಪಾದಕ ಹಣಕಾಸನ್ನು ಭೇದಿಸಬೇಕೆಂದು ಅಂತರರಾಷ್ಟ್ರೀಯ ಸಮೂಹಗಳ ಮೂಲಕ ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯ ಒತ್ತಡ ಬಂದ ಬಳಿಕ ಪಾಕಿಸ್ತಾನವು ಸಯೀದ್ ಅವರ ಬ್ಯಾಂಕ್ ಖಾತೆಗಳನ್ನು ಒಳಗೊಂಡಂತೆ ಹಣಕಾಸಿನ ಸ್ವತ್ತುಗಳನ್ನು ಸ್ಥಗಿತಗೊಳಿಸಬೇಕಾಯಿತು. ನಿರ್ಬಂಧಗಳ ಹೊರತಾಗಿಯೂ ಸಹೀದ್ ಗೆ ಕುಟುಂಬದ ಖರ್ಚುವೆಚ್ಛಗಳನ್ನು ಪೂರೈಸಿಕೊಳ್ಳಲು ತನ್ನ ಖಾತೆಗಳಿಂದ ಹಣವನ್ನು ಹಿಂಪಡೆಯಲು ಅವಕಾಶ ನೀಡಬೇಕೆಂದು ಪಾಕಿಸ್ತಾನವು ಯುಎನ್‌ಎಸ್‌ಸಿಗೆ ವಿನಂತಿ ಮಾಡಿಕೊಂಡಿದೆ. ಒಂದು ಕಡೆ ಎಫ್‌ಎಟಿಎಫ್‌ ಒತ್ತಡ ಹೇರುತ್ತಿದೆ. ಇನ್ನೊಂದೆಡೆ ಭಾರತವನ್ನು ಗುರಿಯಾಗಿಸಲು ಬಳಸಲಾಗುತ್ತಿರುವ ಭಯೋತ್ಪಾದಕ ನಿಧಿ ಸಂಗ್ರಹಿಸಲು ಧಾರ್ಮಿಕ ಸಂಘಟನೆಗಳನ್ನು ನಡೆಸುತ್ತಿರುವ ಹಫೀಜ್ ಸಯೀದ್ ನ ಎಲ್‌ಇಟಿ ಮುಖ್ಯಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಭಾರತ ನಿರಂತರವಾಗಿ ಅಗ್ರಹಿಸುತ್ತಿದೆ. ಹಫೀಜ್ ಸಯೀದ್ ಸೆರೆಹಿಡಿಯಲು ಯುಎಸ್ $ 10 ಮಿಲಿಯನ್ ಹಣವನ್ನು ಸಹ ನೀಡಿದೆ.

ಅಕ್ಟೋಬರ್‌ನಲ್ಲಿ ನಡೆದ ಎಫ್‌ಎಟಿಎಫ್‌ನ ಕೊನೆಯ ಪರಿಶೀಲನಾ ಸಭೆಯಲ್ಲಿ "ಭಯೋತ್ಪಾದಕ ಹಣಕಾಸು" ಮತ್ತು "ಮನಿ ಲಾಂಡರಿಂಗ್" ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಾಕಿಸ್ತಾನವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಎಫ್‌ಎಟಿಎಫ್ ಪಾಕಿಸ್ತಾನಕ್ಕೆ 2020ರ ಫೆಬ್ರವರಿವರೆಗೆ ಸಮಯಾವಕಾಶವನ್ನು ನೀಡಿದೆ. ಅಲ್ಲಿಯವರೆಗೆ ಪಾಕಿಸ್ತಾನವು ಕಾರ್ಯಪಡೆಯ ಬೂದು ಪಟ್ಟಿಯಲ್ಲೇ ಉಳಿದುಕೊಂಡಿರುತ್ತದೆ. ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಲಾಹೋರ್‌ನ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಹಫೀಜ್ ಸಯೀದ್‌ನನ್ನು ದೋಷಾರೋಪಣೆ ಮಾಡಿರುವುದು ಮುಂದಿನ ಎಫ್‌ಎಟಿಎಫ್ ಪರಿಶೀಲನಾ ಸಭೆಯಲ್ಲಿ ಕಪ್ಪುಪಟ್ಟಿ ಸೇರುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಮಾಡಿರುವ ತಂತ್ರವಾಗಿದೆ.

ವಿಶೇಷವೆಂದರೆ ಸಯೀದ್ ವಿರುದ್ಧ ಮಾಡಿರುವ ದೋಷಾರೋಪಣೆಯು ಪ್ರಧಾನಿ ಇಮ್ರಾನ್ ಖಾನ್ ಅವರು ಯುಎಸ್ ಭೇಟಿ ನೀಡುವ ಒಂದು ವಾರ ಮುಂಚಿತವಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ನಡೆಸಿದ ಸಿದ್ಧತೆಯಾಗಿದೆ‌. ಪಾಕಿಸ್ತಾನ ದೇಶದಿಂದ ಹೊರಹೊಮ್ಮುವ ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕಿಸ್ತಾನದ ಮೇಲೆ ಯುಎಸ್ ಹೇರುತ್ತಿರುವ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಮತ್ತು ಒಂದೆರಡು ವರ್ಷಗಳಲ್ಲಿ ಭಯೋತ್ಪಾದನೆ ಕುರಿತು ವಾಷಿಂಗ್ಟನ್‌ ಕಠಿಣ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಹಫೀಜ್ ಸಯೀದ್‌ ನನ್ನು ತ್ವರಿತಗತಿಯಲ್ಲಿ ದೋಷಾರೋಪಣೆಗೆ ಒಳಪಡಿಸಲಾಗಿದೆ ಎಂಬುದು ಮತ್ತೊಂದು ಅಂಶವಾಗಿರಬಹುದಾಗಿದೆ‌.

ಕುತೂಹಲಕಾರಿಯಾದ ಮತ್ತೊಂದು ವಿಷಯವೇನೆಂದರೆ ಒಂದು ಕಡೆ, ಹಫೀಜ್ ಸಯೀದ್ ಮೇಲೆ ದೋಷಾರೋಪಣೆ ಮಾಡಲು ತಯಾರಾಗುತ್ತಿತ್ತು; ಇನ್ನೊಂದೆಡೆ ಅವನ ಮಗ ತಲ್ಹಾ ಸಯೀದ್ ಕಳೆದ ವಾರ ಬಾಂಬ್ ಸ್ಫೋಟದಲ್ಲಿ ಹತ್ಯೆ ಯತ್ನಯಾಗುವುದರಿಂದ ಪಾರಾಗಿದ್ದಾನೆ. ಈ ಹತ್ಯೆಯ ಪ್ರಯತ್ನ ನಡೆದಾಗ ತಲ್ಹಾ ಸಯೀದ್ ಲಾಹೋರ್‌ ಹೊರವಲಯದಲ್ಲಿರುವ ಅಂಗಡಿಯಲ್ಲಿ ನಡೆದ ಕಮ್ಮಟವೊಂದರಲ್ಲಿ ಭಾಷಣ ಮಾಡುತ್ತಿದ್ದ. ತಲ್ಹಾ ಸಯೀದ್ ಹತ್ಯೆ ಮಾಡಲೆಂದೇ ನಡೆಸಿದ ಈ ದಾಳಿಯಲ್ಲಿ ಓರ್ವ ಹತನಾಗಿದ್ದು ಏಳು ಮಂದಿ ಲಷ್ಕರೆ ಸಂಘಟನೆಯ ಸಹಚರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಷ್ಕರ್ ಸಂಘಟನೆಯ ಮುಖ್ಯಸ್ಥನಾಗಿದ್ದ ತನ್ನ ತಂದೆಯ ಜಾಗ ತುಂಬುವುದರಲ್ಲಿ ತಲ್ಹಾ ಸಯೀದ್ ಯಶಸ್ವಿಯಾಗಿದ್ದಾನೆ ಎಂಬುದು ಗಮನಿಸಬೇಕಾದ ಸಂಗತಿ. ಕೆಲವು ಬೆಂಬಲಿಗರ ಪ್ರಕಾರ ಲಷ್ಕರ್ ಹಣಕಾಸಿನ ಮೇಲೆ ತಲ್ಹಾ ನಿಯಂತ್ರಣ ಸಾಧಿಸಿರುವುದು ಭಯೋತ್ಪಾದಕ ಸಂಘಟನೆಯ ಕೆಲವು ಹಿರಿಯ ನಾಯಕರ ಕೋಪಕ್ಕೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ. ತಲ್ಹಾ ಸಯೀದ್ ಮೇಲೆ ನಡೆದಿರುವ ದಾಳಿಯು ಲಷ್ಕರ್‌ ಸಂಘಟನೆಯೊಳಗಿನ ಆಂತರಿಕ ಹೋರಾಟದ ಪರಿಣಾಮವಾಗಿ ಕೂಡ ಆಗಿರಬಹುದು.

ಸಯೀದ್‌ ಮೇಲೆ ದೋಷಾರೋಪಣೆ ಮಾಡುವ ಕ್ರಮವನ್ನು ಅಮೆರಿಕ ಸ್ವಾಗತಿಸಿದ್ದರೂ, ಭಾರತವು ಎಚ್ಚರಿಕೆಯಿಂದ ನೋಡಬೇಕು ಮತ್ತು ಇಮ್ರಾನ್ ಖಾನ್ ಸರ್ಕಾರವು ಹಿಂದಿನ ಪಾಕಿಸ್ತಾನ ಸರ್ಕಾರಗಳಿಗಿಂತ ಭಿನ್ನವಾಗಿದೆಯೇ ಎಂಬ ಸಂಗತಿಯನ್ನೂ ಗಮನಿಸಬೇಕು. ಹಫೀಜ್ ಸಯೀದ್‌ನನ್ನು ಈ ಮೊದಲು ಕೂಡ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಅಂತಿಮವಾಗಿ ಪಾಕಿಸ್ತಾನದ ಅಧಿಕಾರಿಗಳು ಹಲವು ಬಾರಿ ಆತನನ್ನು ಬಿಡುಗಡೆ ಮಾಡಿದ್ದರು.

ದೋಷಾರೋಪಣೆ ಮಾಡುವ ಕೆಲವು ದಿನಗಳ ಹಿಂದೆ ಹಫೀಜ್ ಸಯೀದ್‌ಗೆ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಲಾಗಿತ್ತು. ಪಂಜಾಬ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆಯು (ಸಿಟಿಡಿ) ಸಯೀದ್ ನನ್ನು ಬಂಧಿಸಿತು. ಬಂಧನದ ವಿವರಗಳು ಆತನ ಅಸಹ್ಯ ಮನೋಭಾವವನ್ನು ಬಹಿರಂಗಪಡಿಸುತ್ತವೆ. ಸಯೀದ್ ವಿರುದ್ಧದ ಭಯೋತ್ಪಾದಕ ಪ್ರಕರಣವನ್ನು ಪರಿಶೀಲಿಸುತ್ತಿರುವ ಪಾಕಿಸ್ತಾನದ ಗಂಭೀರತೆ ಬಗ್ಗೆ ವಿಶ್ಲೇಷಿಸಬೇಕಾಗಿದೆ. ಎಫ್‌ಎಟಿಎಫ್‌ನ 27 ಅಂಶಗಳ ಯೋಜನೆಯನ್ನು ಅನುಸರಿಸಲು ಇಸ್ಲಾಮಾಬಾದ್ ಸಿದ್ಧವಾಗಿದೆಯೇ? ಪಾಕಿಸ್ತಾನ ನೀಡುತ್ತಿರುವ ದಾಖಲೆಗಳನ್ನು ಗಮನಿಸುವುದಾದರೆ ಯಾವುದೇ ಆರೋಪವಿಲ್ಲದೆ ಸಯೀದ್‌ನನ್ನು ಬಿಡುಗಡೆ ಮಾಡುವುದನ್ನು ಗಮನಿಸಲೇಬೇಕಾಗುತ್ತದೆ; ಭಯೋತ್ಪಾದಕ ಹಣಕಾಸನ್ನು ತಡೆಯುವಲ್ಲಿ ವಿಫಲವಾದ ಕಾರಣ ಎಫ್‌ಎಟಿಎಫ್ ಅಂತಿಮವಾಗಿ ಪಾಕಿಸ್ತಾನವನ್ನು ತನ್ನ ಕಪ್ಪುಪಟ್ಟಿಗೆ ಸೇರಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕು.


ಸ್ಕ್ರಿಪ್ಟ್; ಡಾ. ಝೈನಾಬ್ ಅಖ್ತಾರ್, ಪಾಕಿಸ್ತಾನದ ವಿಶ್ಲೇಷಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ