ಬ್ರಿಟೀಷ್ ಚುನಾವಣೆ- ಬ್ರೆಕ್ಸಿಟ್ ವಿಷಯದಲ್ಲಿ ಮಾಡು ಇಲ್ಲವೇ ಮಡಿ
2016ರ ಜೂನ್ 23ರಂದು ಜನಮತ ಸಂಗ್ರಹದ ಮೂಲಕ ಬ್ರೆಕ್ಸಿಟ್ ಯುರೋಪಿಯನ್ ಯೂನಿಯನ್ (ಇಯು) ತೊರೆಯುವ ನಿರ್ಧಾರ ತಳೆದುದರಿಂದ ಬ್ರಿಟನ್ ರೋಲರ್ ಕೋಸ್ಟರ್ ಒತ್ತಡದಲ್ಲಿದೆ. ಈ ಫಲಿತಾಂಶವು ಇಬ್ಬರು ಪ್ರಧಾನ ಮಂತ್ರಿಗಳಾದ ಡೇವಿಡ್ ಕ್ಯಾಮರೂನ್ ಮತ್ತು ಥೆರೆಸಾ ಮೇ ಅವರ ಭವಿಷ್ಯಕ್ಕೆ ಪೂರಕವಾಗಿ ಬಂದಿಲ್ಲ ಮಾತ್ರವಲ್ಲ, ಇಯುನಿಂದ ಹೊರಬರಲು ಅಣಿಯಾಗುತ್ತಿದ್ದ ಯುಕೆ ಅನ್ನು ಇನ್ನಷ್ಟು ಆರ್ಥಿಕ ಅನಿಶ್ಚಿತತೆಯನ್ನು ಒಳಗೊಂಡ ಅರಾಜಕ ರಾಜಕೀಯ ಪರಿಸ್ಥಿತಿಗೆ ದೂಡಿದೆ. ಬ್ರೆಕ್ಸಿಟ್ ಗಾಗಿ ಇಯು ಜೊತೆಗೆ ಏರ್ಪಟ್ಟಿದ್ದ ಒಪ್ಪಂದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಥೆರೆಸಾ ಮೇ ಅವರು ನಡೆಸಿದ ಪುನರಾವರ್ತಿತ ಪ್ರಯತ್ನಗಳನ್ನು ಅವರ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಅಂಗೀಕರಿಸಿರಲಿಲ್ಲ, ಇದರ ಪರಿಣಾಮವಾಗಿ ಅವರು ಕೆಳಗಿಳಿಯಬೇಕಾಯಿತು ಮತ್ತು ಬೋರಿಸ್ ಜಾನ್ಸನ್ ಅವರು ಪಕ್ಷದ ಹೊಸ ನಾಯಕರಾದರು ಹಾಗೂ 2019ರ ಜುಲೈನಲ್ಲಿ ಪ್ರಧಾನಿಯಾಗುವಂತಾಯಿತು. ಅಕ್ಟೋಬರ್ 31ರೊಳಗೆ ಬ್ರಿಟಿಷ್ ಸಂಸತ್ತಿನಿಂದ ನಿರ್ಗಮನವಾಗಬೇಕು ಎಂದು ಅವರು ನಡೆಸಿದ ಪ್ರಯತ್ನಗಳು ಕಾರ್ಯರೂಪಕ್ಕೆ ಬರಲಿಲ್ಲ. ಅವರು 2020ರ ಜನವರಿವರೆಗೆ ಬ್ರಸೆಲ್ಸ್ ನಿಂದ 3 ತಿಂಗಳ ವಿಸ್ತರಣೆಯನ್ನು ಪಡೆದರು. ಆದಾಗ್ಯೂ, ಬ್ರಿಟಿಷ್ ಸಂಸತ್ತಿನಲ್ಲಿ ಬಿಸಿ ಎದುರಿಸುತ್ತಿರುವ ಬೋರಿಸ್ ಜಾನ್ಸನ್ 2019ರ ಅಕ್ಟೋಬರ್ 24ರಂದು ತ್ವರಿತ ಚುನಾವಣೆಗಳನ್ನು ಘೋಷಿಸಿದರು.
ಯುರೋಪಿಯನ್ ಆರ್ಥಿಕ ಸಮುದಾಯವು(ಇಇಸಿ) ಯುನೈಟೆಡ್ ಕಿಂಗ್‌ಡಂ ಪ್ರವೇಶ ಮಾಡುವ ವಿಷಯ ನಾಟಕೀಯ ರೀತಿಯಲ್ಲಿ ನಡೆಯಿತು. ಇಇಸಿಯು 1957ರಲ್ಲಿ ಅಸ್ತಿತ್ವಕ್ಕೆ ಬಂದಿತ್ತಾದರೂ ಫ್ರೆಂಚ್ ಅಧ್ಯಕ್ಷ ಚಾರ್ಲ್ಸ್ ಡಿ ಗೌಲ್ ಬ್ರಿಟಿಷ್ ಅರ್ಜಿಯನ್ನು ನಿರಾಕರಿಸಿದರು. ಹಾಗಾಗಿ ಅದು 1973ರಲ್ಲಿ ಸೇರುವಂತಾಯಿತು. ಅಂದಿನಿಂದ ಇಇಸಿಯು 1992ರಲ್ಲಿ ಇಯು ಆಗಿ ರೂಪಾಂತರಗೊಂಡಂತೆ ಯುನೈಟೆಡ್ ಕಿಂಗ್‌ಡಂ ಯಾವಾಗಲೂ ಕೆಲವು ಸಾಮಾನ್ಯ ವ್ಯವಸ್ಥೆಗಳಿಂದ ಹೊರಗುಳಿಯುವಂತೆಯೇ ಆಯಿತು. ಯುರೋ ಮತ್ತು ಷೆಂಗೆನ್ ಸಾಮಾನ್ಯ ವೀಸಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಹೀಗೆ ಇತರೆ ದೇಶಗಳು ಸಾಮಾನ್ಯ ವೀಸಾ ವ್ಯವಸ್ಥೆಗೆ ಬದಲಾದರೂ ಬ್ರಿಟನ್ ಮಾತ್ರ ತನ್ನದೇ ಕರೆನ್ಸಿ ಮತ್ತು ವೀಸಾ ವ್ಯವಸ್ಥೆಯನ್ನು ಉಳಿಸಿಕೊಂಡಿದೆ. ಇಂತಹ ಮತ್ತು ಇತರೆ ಪರಿಸ್ಥಿತಿಗಳು ಅವಾಗವಾಗ ಲಂಡನ್ ಮತ್ತು ಇತರ ಯುರೋಪಿಯನ್ ರಾಜಧಾನಿಗಳ ನಡುವೆ ಬಿರುಕನ್ನು ಸೃಷ್ಟಿಸುತ್ತಿವೆ. ಕಳೆದ ದಶಕದಲ್ಲಿ ಸ್ಥಳೀಯ ಬ್ರಿಟಿಷ್ ರಾಜಕೀಯವು ಇಯು ಮೇಲೆ ಪರಿಣಾಮ ಬೀರುವ ಹಂತವನ್ನೂ ತಲುಪಿತ್ತು.
ಬ್ರಿಟನ್ ದೇಶವನ್ನು ತುಲನಾತ್ಮಕವಾಗಿ ಸ್ಥಿರ ಸರ್ಕಾರಗಳನ್ನು ನೀಡುತ್ತಿರುವ ಹಾಗೂ ಕನ್ಸರ್ವೇಟಿವ್ ಮತ್ತು ಲೇಬರ್ ಎಂಬ ಎರಡು ಪಕ್ಷದ ವ್ಯವಸ್ಥೆಯನ್ನು ಹೊಂದಿರುವ ಸಂಸದೀಯ ಪ್ರಜಾಪ್ರಭುತ್ವದ ‘ತಾಯಿ’ ರಾಷ್ಟ್ರ ಎಂದು ಕರೆಯಲ್ಪಡಲಾಗುತ್ತದೆ. ಇಲ್ಲಿ ಎರಡು ದೊಡ್ಡ ಪಕ್ಷಗಳು ಬಹುಮತವನ್ನು ಪಡೆಯಲು ವಿಫಲವಾದರೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಅಥವಾ ಸ್ಪಾಯ್ಲರ್ ಪಾತ್ರವನ್ನು ವಹಿಸಿರುವ ಲಿಬರಲ್ ಡೆಮೋಕ್ರಾಟ್, ಬ್ರೆಕ್ಸಿಟ್ ಪಾರ್ಟಿ, ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ ಮತ್ತು ಯುಕೆ ಇಂಡಿಪೆಂಡೆನ್ಸ್ ಪಾರ್ಟಿಯಂತಹ ಇತರೆ ಪಕ್ಷಗಳು ಕೂಡ ಜನ್ಮ ತಾಳಲು ಸಾಧ್ಯವಾಗಿದೆ. ಇದಲ್ಲದೆ ಕಳೆದ ಐದು ವರ್ಷಗಳಲ್ಲಿ ಮೂರನೇ ಸಾರ್ವತ್ರಿಕ ಚುನಾವಣೆ ನಡೆಯುವಂತಾಗಿದೆ. ಸ್ಕಾಟಿಷ್ ಸ್ವಾತಂತ್ರ್ಯದ ಬೇಡಿಕೆಯು ತೀವ್ರಗೊಂಡಿದೆ. ಬ್ರೆಕ್ಸಿಟ್ ವಿಷಯವು ದೇಶ, ರಾಜಕೀಯ ಮತ್ತು ಜನರನ್ನು ವಿಭಜಿಸಿ ರಾಜಕೀಯ ಅಸ್ಥಿರತೆಯ ಸಂಕೇತವಾಗಿ ಹೊರಹೊಮ್ಮಿದೆ. ಈ ಮೂಲಕ ಬ್ರಿಟಿಷ್ ರಾಜಕೀಯವನ್ನು ಅತ್ಯಂತ ಅನಿಶ್ಚಿತತೆಗೆ ದೂಡಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಸ್ನ್ಯಾಪ್ ಚುನಾವಣೆಯು ಬ್ರೆಕ್ಸಿಟ್ ಗೋಸ್ಕರವೇ ಸ್ಪಷ್ಟವಾದ ಜನಾದೇಶವನ್ನು ಪಡೆಯಲು ಹೆಚ್ಚು ಒತ್ತು ಕೊಡುತ್ತಿರುವ ರಾಜಕೀಯ ಜೂಜಾಗಿದೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ. ಚುನಾವಣೆ ಘೋಷಣೆಯಾದ ನಂತರದ ದಿನಗಳಲ್ಲಿ, ಬೋರಿಸ್ ಜಾನ್ಸನ್ ಅವರ ಹಾಗೂ ಲೇಬರ್ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್ ನಡುವೆ ಕಟುವಾದ ವಾಗ್ಯದ್ದ ನಡೆದಿತ್ತು. "ಗೆಟ್ ಬ್ರೆಕ್ಸಿಟ್ ಡನ್" ಎಂಬ ಸರಳ ಮತ್ತು ಆಕರ್ಷಕ ಘೋಷಣೆ ಮಾಡಿರುವ ಕನ್ಸರ್ವೇಟಿವ್ ಪಕ್ಷಕ್ಕೆ ಮತದಾರರು ಮನ್ನಣೆ ನೀಡಿರಬಹುದು ಎಂದು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಅದರ ಅರ್ಥ ಇಯು ಜೊತೆಗಿನ ಎಲ್ಲಾ ಮಾತುಕತೆಗಳು 2020ರ ಜನವರಿ 31ರೊಳಗೆ ಪೂರ್ಣಗೊಳ್ಳುತ್ತವೆ ಎಂದಲ್ಲ. ಮುಂದೆ ಒಕ್ಕೂಟದೊಂದಿಗಿನ ತನ್ನ ಸಂಬಂಧದ ಪ್ರತಿಯೊಂದು ಅಂಶಗಳ ಬಗ್ಗೆಯೂ ಯುಕೆ ಮಾತುಕತೆ ನಡೆಸಬೇಕಾಗಿದೆ. ಆದುದರಿಂದ ಇದು ಪರೀಕ್ಷಾರ್ಥ ಸಮಯವಾಗಿದೆ. ಪಕ್ಷವನ್ನು ಮುನ್ನಡೆಸಲು ಸದನದ ಹಿಂದಿನ ಬೆಂಚುಗಳಿಂದ ಬಂದ ಜಾನ್ಸನ್ ಅವರಿಗೆ ಇದು ವೈಯಕ್ತಿಕ ಜಯವಾಗಿದೆ ಮತ್ತು ಈಗ ಅವರ ಬ್ರೆಕ್ಸಿಟ್‌ನ ಆವೃತ್ತಿಗೆ ಪುಷ್ಠಿ ನೀಡಿದಂತಾಗಿದೆ.
ಭಾರತದಲ್ಲಿ 2019ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸಾಧಿಸಿದ ವಿಜಯವನ್ನು ಈ ವರ್ಷದ ಆರಂಭದಲ್ಲಿ ಬೋರಿಸ್ ಜಾನ್ಸನ್ ಅವರು ಸ್ವಾಗತಿಸಿದ್ದರು. ಜೊತೆಗೆ "ಮುಂಬರುವ ವರ್ಷಗಳಲ್ಲಿ ಯುಕೆ ಮತ್ತು ಭಾರತದ ನಡುವೆ ಇನ್ನೂ ಹೆಚ್ಚಿನ ಸಹಭಾಗಿತ್ವ ಆಗುವುದನ್ನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಜಾನ್ಸನ್ ಅವರು ಬ್ರೆಕ್ಸಿಟ್ ಅನ್ನು ನ್ಯಾವಿಗೇಟ್ ಮಾಡುತ್ತಿದ್ದಂತೆ ಯುಕೆ ವ್ಯಾಪಾರ ಸಂಬಂಧಗಳನ್ನು ನಿರ್ಮಿಸಲು ಮತ್ತು ನವೀಕರಿಸಲು ಗಮನಹರಿಸಬೇಕಾಗುತ್ತದೆ ಹಾಗೂ ಇಲ್ಲಿಯೇ ಭಾರತದೊಂದಿಗಿನ ಸಹಭಾಗಿತ್ವವು ಬಹಳ ಮುಖ್ಯವಾಗಿರುತ್ತದೆ. ಯುಕೆಯಲ್ಲಿ ಅಧ್ಯಯನ ಮಾಡಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಕಾನೂನು ವಲಸೆ ಮತ್ತು ವೀಸಾ ಸೌಲಭ್ಯಗಳ ವಿಸ್ತರಣೆಯ ಬಗ್ಗೆ ಭಾರತ ಗಮನಹರಿಸಬೇಕಾಗಿದೆ. ವ್ಯಾಪಾರವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಲು ಯುಕೆ ಮತ್ತು ಇಯು ಜೊತೆ ಮಾತುಕತೆ ನಡೆಸುವ ಒಪ್ಪಂದದ ಮೇಲೂ ಅವಲಂಬಿತವಾಗಿರುತ್ತದೆ.
ಸ್ರ್ಕಿಪ್ಟ್: ಉಮ್ಮು ಸಲ್ಮಾ ಬಾವಾ, ಜೀನ್ ಮೊನೆಟ್ ಚೇರ್ ಪ್ರೊಫೆಸರ್ ಮತ್ತು ಮುಖ್ಯಸ್ಥ, ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ಮುಖ್ಯಸ್ಥ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ

Comments
Post a Comment