ಸಂಸತ್ತಿನ ವಾರದ ವಿವರ
ಪೌರತ್ವ (ತಿದ್ದುಪಡಿ) ಮಸೂದೆ, 2019ರ ಅಂಗೀಕಾರ ಆಗಿರುವುದು ಸಂಸತ್ತಿನ ಚಳಿಗಾಲದ ಅಧಿವೇಶನದ ಪ್ರಮುಖ ಅಂಶವಾಗಿತ್ತು. ಸಂಸತ್ತಿನ ಉಭಯ ಸದನಗಳು ಬುಧವಾರ ಮಸೂದೆಗೆ ಅನುಮೋದನೆ ನೀಡಿವೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸುವುದು ಐತಿಹಾಸಿಕ ಅವಶ್ಯಕತೆಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಧಾರ್ಮಿಕ ಮಾರ್ಗಗಳ ವಿಭಜನೆಯ ನಂತರ ಆ ದೇಶಗಳಲ್ಲಿನ ಅಲ್ಪಸಂಖ್ಯಾತರು ನಿರಂತರ ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ಅವರು ಹೇಳಿದರು. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಆರು ಸಮುದಾಯಗಳ ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಲು 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಯತ್ನಿಸಿದೆ. ಆ ಸಮುದಾಯಗಳೆಂದರೆ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು.
ಸಾಂವಿಧಾನಿಕತೆ ಬಗ್ಗೆ ಉತ್ತರಿಸಿದ ಅಮಿತ್ ಶಾ, ಷರತ್ತುಗಳನ್ನು ಪೂರೈಸಲು ಮಸೂದೆಯು ಸಮಂಜಸವಾದ ವರ್ಗೀಕರಣವನ್ನು ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ಆ ದೇಶಗಳಿಂದ ಬಂದ 566 ಮುಸ್ಲಿಮರಿಗೆ ಪೌರತ್ವ ನೀಡಲು ಭಾರತವು ಚಿಂತನೆ ನಡೆಸಿದೆ ಎಂದು ಹೇಳಿದರು. ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆ ಸಮಸ್ಯೆಗಳಿಂದ ದೂರವಿರಲು ಮಸೂದೆಯನ್ನು ತರಾತುರಿಯಲ್ಲಿ ಅಥವಾ ಯಾವುದೇ ವಿಷಯಗಳನ್ನು ಕತ್ತಲಲ್ಲಿ ಇಟ್ಟು ಪ್ರಸ್ತುತಪಡಿಸಲಾಗುತ್ತಿಲ್ಲ ಎಂದು ಅವರು ಹೇಳಿದರು. ಶ್ರೀಲಂಕಾ ಮತ್ತು ಉಗಾಂಡಾದ ಜನರಿಗೆ ಈ ಹಿಂದೆ ಪೌರತ್ವ ನೀಡಲಾಗಿದೆ ಎಂದು ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಈ ಮಸೂದೆ ಪಾಸಾಗಿರುವುದು ಭಾರತದಲ್ಲಿ ಹೆಗ್ಗುರುತು ಮೂಡಿಸಿದ ದಿನ ಮತ್ತು ರಾಷ್ಟ್ರದ ಸಹಾನುಭೂತಿ ಮತ್ತು ಸಹೋದರತ್ವದ ನೀತಿ ಎಂದು ಹೇಳಿದರು. ಈ ಮಸೂದೆ ವರ್ಷಗಟ್ಟಲೆ ಕಿರುಕುಳವನ್ನು ಎದುರಿಸುತ್ತಿದ್ದ ಅನೇಕರ ನೋವುಗಳನ್ನು ನಿವಾರಿಸುತ್ತದೆ ಎಂದು ಕೂಡ ಹೇಳಿದರು.
ಸಂವಿಧಾನದ ನೂರ ಇಪ್ಪತ್ತಾರನೇ ತಿದ್ದುಪಡಿ ಮಸೂದೆ 2019 ಅನ್ನು ರಾಜ್ಯಸಭೆ (ಮೇಲ್ಮನೆ) ಗುರುವಾರ ಅಂಗೀಕರಿಸಿತು. ಇನ್ನು ಲೋಕಸಭೆ (ಕೆಳಮನೆ) ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 2030ರ ಜನವರಿ 25ರವರೆಗೆ ಅಂದರೆ ಇನ್ನೂ ಹತ್ತು ವರ್ಷಗಳವರೆಗೆ ವಿಸ್ತರಿಸುವ ಮಸೂದೆ ಅಂಗೀಕಾರವಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧಿಸಿದ ಚರ್ಚೆಗೆ ಉತ್ತರಿಸಿದ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್, ಸರ್ಕಾರ ಎಸ್‌ಸಿ-ಎಸ್‌ಟಿ ಮೀಸಲಾತಿಯಲ್ಲಿ ಕೆನೆ ಪದರದ ಮಾನದಂಡಗಳನ್ನು ರೂಪಿಸಲು ಹೋಗುವುದಿಲ್ಲ. ರಾಷ್ಟ್ರೀಯ ಸಮುದಾಯಗಳ ಮೈತ್ರಿ (ಎನ್‌ಡಿಎ) ಸರ್ಕಾರವು ಎರಡು ಸಮುದಾಯಗಳ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು. ಶಿಕ್ಷಣ ಮತ್ತು ಸಶಸ್ತ್ರ ಪಡೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಗಳ ಕೊಡುಗೆಯನ್ನು ಸರ್ಕಾರ ಅಂಗೀಕರಿಸಿದೆ ಎಂದು ತಿಳಿಸಿದರು.
ವಿದೇಶಿಯರ ನ್ಯಾಯಮಂಡಳಿ 2019ರ ಅಕ್ಟೋಬರ್ ವರೆಗೆ ಅಸ್ಸಾಂನ 1.29 ಲಕ್ಷಕ್ಕೂ ಹೆಚ್ಚು ಜನರನ್ನು ವಿದೇಶಿಯರು ಎಂದು ಘೋಷಿಸಲ್ಪಟ್ಟಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರೈ ಲೋಕಸಭೆಗೆ ಮಾಹಿತಿ ನೀಡಿದರು. ಬಳಿಕ ವಿದೇಶಿಯರು ಎಂಬ ಸ್ಥಾನಮಾನವನ್ನು ಪ್ರಶ್ನಿಸಿದ 1.14 ಲಕ್ಷ ಜನರನ್ನು ಮತ್ತೆ ಭಾರತೀಯರೆಂದು ಘೋಷಿಸಲಾಗಿದೆ ಎಂಬ ಸಂಗತಿಯನ್ನೂ ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ನಡೆಸಿದ ಅಧಿಕೃತ ಪ್ರವಾಸಗಳಲ್ಲಿ ಸ್ವೀಕರಿಸಲಾದ ಸ್ಮರಣಾರ್ಥಗಳನ್ನು ಹರಾಜಿಗಿಟ್ಟು 15 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ರಾಜ್ಯಸಭೆಗೆ ಮಾಹಿತಿ ನೀಡಿದರು.
ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಾದ್ಯಂತ ಭಯೋತ್ಪಾದಕರು 85 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ ಎಂದು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 1990ರಿಂದ 2019ರ ಅಕ್ಟೋಬರ್ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 22,557 ಭಯೋತ್ಪಾದಕರು ಒಳನುಸುಳುವ ಪ್ರಯತ್ನ ನಡೆಸಿದ್ದು ಅದು ಸಫಲವಾಗದೆ ಸಾವನ್ನಪ್ಪಿದ್ದಾರೆ ಎಂದು ಸಚಿವರು ಹೇಳಿದರು. 2005 ರಿಂದ 2019ರ ಅಕ್ಟೋಬರ್ 31ರವರೆಗೆ ಒಟ್ಟು 1,011 ಒಳನುಸುಳುವ ಭಯೋತ್ಪಾದಕರು ಕೊಲ್ಲಲ್ಪಟ್ಟರು. 42 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ 2,253 ಜನರನ್ನು ಒಳನುಸುಳುವುದನ್ನು ತಡೆಗಟ್ಟಿ ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಪಾಕಿಸ್ತಾನದ ವಶದಲ್ಲಿರುವ ಭಾರತೀಯ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪೈಕಿ 292 ಭಾರತೀಯರಿದ್ದಾರೆ ಎಂಬ ಮಾಹಿತಿಗಳಿವೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಲೋಕಸಭೆಗೆ ಮಾಹಿತಿ ನೀಡಿದರು. 2019ರ ಜುಲೈ 1ರಂದು ಭಾರತದ ಜೊತೆ ಹಂಚಿಕೊಂಡ ಪಟ್ಟಿಯ ಪ್ರಕಾರ ಭಾರತೀಯರು ಎಂದು ನಂಬಲಾದ 52 ನಾಗರಿಕ ಕೈದಿಗಳು ಮತ್ತು 209 ಮೀನುಗಾರರನ್ನು ಬಂಧಿಸಲಾಗಿದೆ ಎಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಪ್ರಿಸೈನರ್ಸ್ ಆಫ್ ವಾರ್ಸ್ ಸೇರಿದಂತೆ 83 ಕಾಣೆಯಾದ ಭಾರತೀಯ ರಕ್ಷಣಾ ಸಿಬ್ಬಂದಿಯ ಸಮಸ್ಯೆ ಇದೆ. ಅವರ ಬಂಧನವನ್ನು ಇಸ್ಲಾಮಾಬಾದ್ ಇದುವರೆಗೆ ಒಪ್ಪಿಕೊಂಡಿಲ್ಲ. ನವದೆಹಲಿಯ ಸತತ ಪ್ರಯತ್ನಗಳಿಂದಾಗಿ 2014ರಿಂದ ಪಾಕಿಸ್ತಾನದ ವಶದಲ್ಲಿರುವ ಮೀನುಗಾರರು ಸೇರಿದಂತೆ 2,112 ಭಾರತೀಯರನ್ನು ಬಿಡುಗಡೆ ಮತ್ತು ವಾಪಸ್ ಕಳುಹಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ವರ್ಷ ಇಲ್ಲಿಯವರೆಗೆ ವಾಪಸ್ಸಾಗಿರುವ 364 ಭಾರತೀಯರನ್ನು ಒಳಗೊಂಡಿದೆ ಎಂದು ಸಚಿವರು ಹೇಳಿದರು.
ಸ್ಕ್ರಿಪ್ಟ್: ವಿ. ಮೋಹನ್ ರಾವ್, ಪತ್ರಕರ್ತ

Comments
Post a Comment